ಎನಗೀಗ ಬಂತು ಭಾವ, ನಿನ್ನೊಲವಿಗೊಲವ ಬೆಸೆವ

5

 ಎನಗೀಗ ಬಂತು ಭಾವ, ನಿನ್ನೊಲವಿಗೊಲವ ಬೆಸೆವ
ನಂಗೆ ದೊರಕಿತೊಂದು ಮರ್ಮ ನನ್ನ ಬದುಕಿಗೊಂದು ಗಮ್ಯ

ನನ್ನರಿಯರಾರು ಚಿನ್ನ, ನಿನ್ನೊಲವಿಗಿಂತ ಮುನ್ನ
ನಿನ್ನ ಸ್ನೇಹದಿಂದ ನನ್ನ, ಬದುಕಾಯ್ತು ಚೊಕ್ಕ ಚಿನ್ನ

ನನ್ನ ಹ್ರದಯ ದೀಪವೆಂದೂ, ನಿನ್ನ ಮೂರ್ತರೂಪವೊಂದೂ
ನಾನಾದೆ ಮರುಳನಿಂದೂ, ನಿನ್ನ ಜಪಿಸಿ ಜಪಿಸಿನಿಂದೂ

ನಿನ್ನೊಲವಿನಿಂದ ಚಿನ್ನ, ಮರೆತಾಯ್ತು ಎಲ್ಲ ನನ್ನ
ನನ್ನೊಲವಿನೂರುಬಣ್ಣ, ನೀ ಮರೆಯಬೇಡ ನನ್ನ

ಈ ಬಾಳಿಗಿನ್ನು ಗುರಿಯು, ನಮ್ಮೊಲವು ನಗುವು ಗೆಲುವು.
ಈ ಪ್ರೀತಿಯೊಂದೇ ಬದುಕು,ಈ  ಪ್ರೀತಿಯಿಂದೆ ಬೆಳಕು

ಬ್ಲಾಗ್ ವರ್ಗಗಳು: 
ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

{{ಈ ಪ್ರೀತಿಯೊಂದೇ ಬದುಕು,ಈ ಪ್ರೀತಿಯಿಂದೆ ಬೆಳಕು}} ಸತ್ಯವಾದ ಮಾತು. ಕವನ ಮನ ಮುಟ್ಟುವಂತಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ಮಂಜು, ಬದುಕು ಹಸನಾಗಲು ಪ್ರೀತಿ ಅತ್ಯಗತ್ಯ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಈ ಬಾಳಿಗಿನ್ನು ಗುರಿಯು, ನಮ್ಮೊಲವು ನಗುವು ಗೆಲುವು. ಈ ಪ್ರೀತಿಯೊಂದೇ ಬದುಕು,ಈ ಪ್ರೀತಿಯಿಂದೆ ಬೆಳಕು>> Tumba ishtavaada saalugaLu..Yendinante mattondu sundar kavana. - namskaaragaLondige siddu..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಿದ್ದಪ್ಪನವರೇ ನಿಮ್ಮ ಪ್ರತಿಕ್ರಿಯೆಗೆ ತುಂಬಾ ಅಬಾರಿ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅನುಪಮಾ ನಿರಂಜನ್ ಅವರ ಮಕ್ಕಳಿಗಾಗಿ 'ದಿನಕ್ಕೊಂದು ಕಥೆ' ಯ ಹಾಗೆ ಗೋಪಿನಾಥರವರ ಸಂಪದಿಗರಿಗೆ 'ದಿನಕ್ಕೊಂದು (ಪ್ರೇಮ)ಕವನ' ಬರ್ತಾ ಇವೆ .. ನನಗೂ "ಈ ಪ್ರೀತಿಯೊಂದೇ ಬದುಕು,ಈ ಪ್ರೀತಿಯಿಂದೆ ಬೆಳಕು" ಈ ಸಾಲು ಸೇರಿದ್ವು.. ಚೆನ್ನಾಗಿದೆ ಗೋಪಿಯವರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರಿಕಾಂತರೇ ನಿಮ್ಮ ಸಂತಸದ ಪ್ರತಿಕ್ರಿಯೆಗೆ ತುಂಬಾ ಅಬಾರಿ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗೊಪಿನಾಥರೇ, ಚೆನ್ನಾಗಿದೆ......"ಈ ಪ್ರೀತಿಯೊಂದೇ ಬದುಕು,ಈ ಪ್ರೀತಿಯಿಂದೆ ಬೆಳಕು" ಸಾಲುಗಳು ಇಷ್ಟವಾಯ್ತು.. ನನ್ನಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೂರ್ತಿಯವರೇ ನಿಮ್ಮ ಪ್ರತಿಕ್ರಿಯೆಗೆ ಅಭಾರಿ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗೋಪಿ, ಎಂದಿನಂತೆ ಟಾಪ್ ಕ್ಲಾಸ್! ಯಾವ ಸಮಯದಲ್ಲೂ ಓದಿದರೆ ಮುದ ನೀಡಬಲ್ಲ ಸುಲಲಿತ ಸಾಲುಗಳು...ಎಂಭತ್ತರ ದಶಕದ ಕೆಲವು ಮಧುರ ಚಿತ್ರಗೀತೆಗಳ ಮೆಲುಕನ್ನು ತರುವಂತಿದೆ... ಇದನ್ನ ಓದಿದ ಮೇಲೆ ಯಾಕೋ 'ಆಸೆಯ ಭಾವ ಒಲವಿನ ಜೀವ' ಹಾಡು ಕೇಳಲೇಬೇಕೆಂದೆನಿಸಿ ಈವಾಗ ಕೇಳುತ್ತ ಕುಳಿತಿದ್ದೇನೆ!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿನಾಯಕ್ ನಿಮ್ಮ ಆತ್ಮೀಯ ಪ್ರತಿಕ್ರಿಯೆಗೆ ಅಭಾರಿ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೊಟ್ಟಷ್ಟೂ ಹೆಚ್ಚುವುದು ಪ್ರೀತಿಯೊಂದೇ! ಪ್ರಿಯ ಗೋಪಿನಾಥ್, ಹೆಚ್ಚು ಕೊಡಿ, ಹೆಚ್ಚು ಪಡೆಯಿರಿ! ;)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವಿಗಳೇ, ಮಾಲತಿಯವರೇ ನಿಮ್ಮ ಆತ್ಮೀಯ ನೆನಕೆಗೆ ಅಭಾರಿ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎನಗೀಗ ಬಂತು ಭಾವ, ನಿನ್ನೊಲವಿಗೊಲವ ಬೆಸೆವ ನಂಗೆ ದೊರಕಿತೊಂದು ಮರ್ಮ ನನ್ನ ಬದುಕಿಗೊಂದು ಗಮ್ಯ ಇಷ್ಟವಾದ ಸಾಲುಗಳು..ಸಿಕ್ಕ ಗಮ್ಯ ನಿರಂತರವಾಗಿರಲಿ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಲವು ಸುಂದರವಂತೆ. ಆದರೆ ನನ್ನಂಥ ಬ್ಯಾಚುಲರ್ಗೆ ಅದು ದುರ್ಲಭ. ಗೋಪಿನಾಥರೆ ಸುಂದರವಾಗಿದೆ ನಿಮ್ಮ ಕವನ .
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತೇಜೂ ಮೆಚ್ಚುಗೆಗೆ ಧನ್ಯ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.