ಹೃದಯದ ಭಾವದೇ ಅರ್ಥವನರಿಯದೇ

0ಕಾಣದ ಪ್ರೀತಿಯ ಆಂತರ್ಯವರಿಯದೇ
ಅರಸುತಲಿದ್ದೆ  ಮನವೆಲ್ಲಾ
ಹೃದಯದ ಒಳಗೂ ಕಾಣದೇ ಹೊರಗೂ
ಹುಡುಕುತಲಿದ್ದೆ ದಿನವೆಲ್ಲಾ

ಹೃದಯದ ಭಾವದೆ ಅರ್ಥವನರಿಯದೇ
ಅಲೆಯುತಲಿದ್ದೆ ಹೊರಗೆಲ್ಲಾ
ಅರಸುವದರಿಯದೆ ಹರಸುವದರಿಯದೇ
ಬಯಸುವದರಿಯದೇ ಒಳಗೆಲ್ಲಾ

ಎಲ್ಲೋ ಹುಟ್ಟಿದೆ ಎಲ್ಲಿಯೋ ಬೆಳೆದೆ
ಅರಿಯದೆ ನನ್ನ  ಹೊರೆಯೆಲ್ಲಾ
ಅರಿವನು ಬಯಸದೆ ಕಲಿತೆನು ಕಲಿಯದೆ
ಸರಿಸದೆ ನನ್ನ ಪೊರೆಯೆಲ್ಲಾ

ಕಣ್ಣಿಗೆ ಕಾಣದ ಮನಸಿಗೂ ನಿಲುಕದ
ಅರಿವನೆ ಹರಡುತೆ ಇಲ್ಲೆಲ್ಲೂ
ಅರಿವನು ಅರಸದೆ ಕೆಸರನು  ಬೆರೆಸದೆ
ತಿಳಿವನೆ ಮೆರೆಸುತೆ ಎಲ್ಲೆಲ್ಲೂ

ಅರಿವಿನ ಪಕ್ಷಿಯ  ತೆರೆಯುತೆ ಅಕ್ಷಿಯ
ನಿರುತದೆ ಸತ್ಯವ ಅರಸುತಲೂ
ಹರಸುವ ನಮಿಸುವ ಕ್ಷಮಿಸುವ ಮನದಲು
 ಸ್ಫುರಿಸುವ ಭಾವವೇ ಬರಿಸುತಲೂ

ಕಾಣದ ಪ್ರೀತಿಯ ಆಂತರ್ಯವರಿಯುವೆ
ಅರಸುತಲಿದ್ದೂ ಮನವೆಲ್ಲಾ
ಹೃದಯದ ಹೊರಗೂ  ಒಳಗೂ ಕಾಣುವೆ
ಹುಡುಕದೇ ಇದ್ದೂ ದಿನವೆಲ್ಲಾ

ಬ್ಲಾಗ್ ವರ್ಗಗಳು: 
ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಗೋಪಿನಾಥರೆ, Excellent !!!! ಈ ಕವನ ಬರೆಯೋಕ್ಕೆ ಸ್ಪೂರ್ತಿ ಎಲ್ಲಿಂದ ಸಿಗ್ತು ರೀ?? -ಚೈತನ್ಯ ಭಟ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ಚೈತನ್ಯರೇ ಸಂಪದವೇ ಅಂದರೆ ನಂಬುವಿರಾ? ಪ್ರತಿಕ್ರಿಯೆಗೆ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮಸ್ಕಾರ ಗೋಪಿನಾಥರೆ, ಇಡೀ ಕವನ ಒಂದು ಸುಂದರ ಚಿತ್ರದೊಂದಿಗೆ ಕಟ್ಟಿದ್ದೀರಿ. ತುಂಬಾ ಖುಷಿಕೊಟ್ಟಿತು.ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ಭಾಗ್ವತರೇ ಪ್ರತಿಕ್ರಿಯೆಗೆ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗೋಪಿನಾಥರೇ, ಕವನಕ್ಕೂ ಚಿತ್ರಕ್ಕೂ ಒಳ್ಳೆಯ ಹೊ೦ದಾಣಿಕೆ. ನಮಸ್ಕಾರಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗೆ ಧನ್ಯವಾದಗಳು ರಾಯರೇ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗೋಪೀನಾಥ್, ನಿನ್ನೆ ನಾಲ್ಕು ಬಾರಿ ಓದಿದ್ದೆ. ಆದರೆ, ಅದೇಕೋ, ಸ್ಪಂದಿಸಲು ಅಸಾಧ್ಯವಾಗಿತ್ತು. ಇಂದು ಮುಂಜಾನೆ ಮತ್ತೆ ಓದಿದೆ. ಅರಿತೆನು ನಾನರಿಯದ ಆ ಭಾವಗಳೆಲ್ಲವ ಮರೆತೆನು ನಾನು ಅರೆಗಳಿಗೆ ಈ ಜಗವ ಮುದ ನೀಡಿದೆ ಮನಕೆ ಕವನದ ಭಾವಾರ್ಥ ಒಮ್ಮೆಗೇ ಆಗದು ಕವಿಯ ಅನಿಸಿಕೆಗಳ ಅರ್ಥ ಧನ್ಯವಾದಗಳು - ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೆಗಡೆಯವರೇ ನಮಸ್ಕಾರ ನಿಮ್ಮ ಆತ್ಮೀಯ ಸ್ಪಂದನದ ದನಿಗೆ ಧನ್ಯ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮ್ಮ ಮನ ಮುಟ್ಟುವ ಕವನಕ್ಕೂ ಅ೦ದದ ಚಿತ್ರಕ್ಕೂ ನಮನಗಳು. ಅರ್ಥವಾಗಲು ಸ್ವಲ್ಪ ಸಮಯ ತೆಗೆದುಕೊ೦ಡರೂ ಅರ್ಥವಾದ ನ೦ತರ ಭಲೇ ಅನ್ನಿಸಿತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಜು ಅವರೇ ನಿಮ್ಮ ಆತ್ಮೀಯ ಮೆಚ್ಚುಗೆಗೆ ಧನ್ಯ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಿಯ ಗೋಪಿನಾಥ್, ನಿಮ್ಮ ಹುಡುಕಾಟ ಪ್ರಿಯವಾಯಿತು. ಸುರೇಶ ಹೆಗ್ಡೆಯವರ ಪ್ರತಿಕ್ರಿಯೆಯೇ ನನ್ನದೂ ಸಹ. ಎಲ್ಲೆಲ್ಲೋ ಹುಡುಕಿ ಸೋತು ಕುಳಿತಾಗ ನಾವು ಹುಡುಕುತ್ತಿದ್ದುದು ನಮ್ಮ ಬಳಿಯೇ ಇರುವುದು ಗೊತ್ತಾದಾಗ ಮೂಡುವ ಪ್ರಜ್ಞೆಯೇ ಜ್ಞಾನೋದಯ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಜ ಕವಿಯವರೇ ನಂತರದ ಮೆಲುಕಾಟವೇ ಅತ್ಯಂತ ಸುಂದರ ನಿಮ್ಮ ಆತ್ಮೀಯ ಪ್ರತಿಕ್ರಿಯೆಗೆ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿದೆ . ಕೇಳಿದ ಸಂಗೀತಕ್ಕಿಂತ ಕೇಳದೆ ಇರುವ ಸಂಗೀತ ಯಾವಾಗಲೂ ಅತ್ಯಧ್ಬುತವಾಗಿರುತ್ತದೆ ಎಂದೋ ಯಾರೋ ಹೇಳಿದ್ದು ನೆನಪಾಯ್ತು. ನಿಮ್ಮ ಈ ಕವನ ಕಥೆ ಒಂದನ್ನು ಬರೆಯೋದಕ್ಕೆಸ್ಪೂರ್ತಿ ಆಗಿದೆ. ಅದಕ್ಕೆ ಧನ್ಯವಾದಗಳು ರೂಪ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರೂಪಾ ಅವರೇ ನಿಮಗೆ ಒಂದು ಹುಡುಕಾಟ ಮತ್ತು ಅದರ ಗಂತವ್ಯ ಎರಡೂ ಸಿಕ್ಕಿತಲ್ಲ ಅದೇ ಇದರ ಭಾವಾರ್ಥ ಕೂಡಾ, ನಿಮ್ಮ ಕಥೆಯ ನಿರೀಕ್ಷೆಯಲ್ಲಿ. ನಿಮ್ಮ ಆತ್ಮೀಯ ಪ್ರತಿಕ್ರಿಯೆಗೆ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ಅಬ್ಬಾ ! ಪದಗಳ ಜೋಡಣೆ ಮತ್ತು ಭಾವ ಅದ್ಭುತ ಸರ್. ಅರಗಿಸಿಕೊಳ್ಳಕ್ಕೆ ಸ್ವಲ್ಪ ಕಷ್ಟ. ಮೊದಲನೇ ಪದ್ಯದಲ್ಲಿ ಹುಡುಕಾಟ ಇದೆ ಎರಡನೇ ಪದ್ಯದಲ್ಲೂ ಹುಡುಕಾಟವಿದೆ ಎದೆಯೊಳಗಿನ ಭಾವದೊಳಗಿನ ಅರ್ಥವನ್ನ ತಿಳಿಯದೆ ಹೊರಗೆಲ್ಲಾ ಹುಡುಕಿದೆ ಎ೦ಬುದರಲ್ಲಿ ಪ್ರೀತಿಯ ಭಾವ ಹ್ರುದಯದೊಳಗಿದೆ ಎ೦ಬ ಉತ್ತರ ಸಿಗುತ್ತದೆ (ಸರಿಯೇ?) ಅರಸುವದರಿಯದೆ ಹರಸುವದರಿಯದೇ ಬಯಸುವದರಿಯದೇ ಒಳಗೆಲ್ಲಾ ಈ ಎರಡು ಸಾಲುಗಳು ಅರ್ಥವಾಗಲಿಲ್ಲ ಪದಗಳನ್ನು ವಿ೦ಗಡಿಸಿ ಅರ್ಥವನ್ನು ಬರೆದಾಗ ಜವಾಬ್ದಾರಿಯನರಿಯದೆ ನಾ ಎಲ್ಲೋ ಹುಟ್ಟಿದೆ ಬೆಳೆದೆ ಬದುಕುತ್ತಲೇ ಇರುವೆ. ಜ್ಞಾನವನ್ನು ಬಯಸಲಿಲ್ಲ, ಕಣ್ಣಿಗೆ ಕಟ್ಟಿದ ಪೊರೆಯನ್ನು ಸರಿಸದೆ ಯಾರೂ ಕಲಿಸದೆ,ಅರಿವನ್ನು ತಿಳಿದೆನು . ಅ೦ದರೆ ಸ್ವಾನುಭವದಿ೦ದ ತಿಳಿದುಕೊ೦ಡೆನು (ಸರಿಯಾ?) ಅಗೋಚರವಾದ೦ಥ ಅರಿವನ್ನ ಎಲ್ಲ ಕಡೆ ಹರಡುತ್ತಾ ಇರುವೆನು ಎ೦ಬುದಾಗಿಯೋ? ಅಥವಾ ತನ್ನಷ್ಟಕ್ಕೆ ತಾನೇ ಹರಡಿಕೊಳ್ಳುತ್ತಾ ಎ೦ಬುದೋ? ಅರ್ಥವಾಗಲಿಲ್ಲ ಜ್ಞಾನವನ್ನು ಹುಡುಕದೆ ಅದಕ್ಕೆ ಕೆಸರನು ಬೆರಸದೆ ಅದನ್ನು ಮೆರೆಸುತ ಎಲ್ಲೆಡೆ ಇರುವೆನು ಎ೦ದೋ? ಅಥವಾ ಅದೇ ಮೆರೆಯುತ್ತಿದೆ ಎ೦ಬುದೋ? ತಿಳಿಯಲಿಲ್ಲ ನಿತ್ಯವೂ ’ಸತ್ಯ’ (ಇಲ್ಲಿ ಸತ್ಯವೆ೦ದರೆ ಬೆಳಕು ಅಥವಾ ಜ್ಞಾನ) ವೆ೦ಬೆದನ್ನು ಅರಿಸುತ್ತಾ ಜ್ಞಾನವೆ೦ಬ ಪಕ್ಷಿಯನ್ನು ಕಣ್ತೆರೆದು ನೋಡುತ್ತಾ.. ಕ್ಷಮ ದಮ ಗುಣಗಳ ಭಾವವನ್ನು ಸ್ಫುರಿಸುತ್ತಾ.. ಬದುಕಬೇಕು ಅಸ೦ಗತ ನಾಟಕಗಳ ಸ೦ಭಾಷೆಯಣೆಯ೦ತೆ ಕ೦ಡುಬರುವ ಅಪರೂಪದ ಕವನ ಒ೦ದಕ್ಕೊ೦ದು ಲಿ೦ಕ್ ಇದೆ ಆದರೆ ಅದನ್ನ್ಉ ಅರಗಿಸಿಕೊಳ್ಳಲು ಸ್ವಲ್ಪ ಕಷ್ಟ ಪಡಬೇಕು ಗೋಪೀನಾಥ ಸರ್ ನಾ ಹೇಳಿದ್ದು ಸರಿಯೇ? ಸ್ವಲ್ಪ ಬಾಲಿಶ ಎನಿಸಬಹುದೇನೋ? ಹರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ರೇಯ ಅವರೇ ತುಂಬಾ ಚೆನ್ನಾಗಿ ಹೇಳಿದಿರಿ ಪ್ರತಿಕ್ರಿಯೆಗೆ ಧನ್ಯವಾದಗಳು <<<ನಿತ್ಯವೂ ’ಸತ್ಯ’ (ಇಲ್ಲಿ ಸತ್ಯವೆ೦ದರೆ ಬೆಳಕು ಅಥವಾ ಜ್ಞಾನ) ವೆ೦ಬೆದನ್ನು ಅರಿಸುತ್ತಾ ಜ್ಞಾನವೆ೦ಬ ಪಕ್ಷಿಯನ್ನು ಕಣ್ತೆರೆದು ನೋಡುತ್ತಾ.. ಕ್ಷಮ ದಮ ಗುಣಗಳ ಭಾವವನ್ನು ಸ್ಫುರಿಸುತ್ತಾ.. ಬದುಕಬೇಕು>>> ಸರಿ <<<ಅರಸುವದರಿಯದೆ ಹರಸುವದರಿಯದೇ ಬಯಸುವದರಿಯದೇ ಒಳಗೆಲ್ಲಾ ಈ ಎರಡು ಸಾಲುಗಳು ಅರ್ಥವಾಗಲಿಲ್ಲ>>> ನಮ್ಮನ್ನು ನಾವೇ ಸರಿಪಡಿಸಿಕೊಳ್ಳಬೇಕಲ್ಲವೇ? ನಮಗೆ ಬೇಕಾದದ್ದನ್ನು ನಾವೇ ಹೆಕ್ಕಿ ತೆಗೆದು ಕೊಳ್ಳಬೇಕು, "ಅದರ ಅರಿವು ಹುಟ್ಟುವ ವರೆಗೆ ಹೇಗೋ ಇರುತ್ತೇವಲ್ಲ" ಅದೂ ಒಳಗಿಂದಲೇ ಬರಬೇಕು ಈ ಅರಿವೇ ಅಗೋಚರವಲ್ಲವೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.