ಆಗಬೇಕಿದೆ....ನನ್ನ.. ರೂಪಾಂತರ

4

ಬೆಳೆಯಬೇಕಿದೆ ನಾನು
ಪ್ರತಿ ಕಣದ ಅವಸ್ಥೆಯ ಮೀರಿ
ಸಂಭಂಧಗಳ ಕ್ಷಿತಿಜವ ಹಾರಿ
ಸಾಗಬೇಕಿದೆ
ಬಹು ದೂರದ ದಾರಿ

ಯಾರದೋ ಕಾಳಜಿಯ ಕಕ್ಕುಲತೆಯ ಭಾವದ
ಸನಿಹದಲ್ಲಿಯೇ ತಾಕುವ ಸುಗಂಧ
ಹಸೀ ಅವಸ್ಥೆಗೆ ಬಸಿವ ಅನುಭವ
ನಿರ್ಲಿಪ್ತತೆಯ ತಲ್ಲಣದ ಪ್ರತಿ ಕ್ಷಣ,
ನಾಳೆಯ ನಿನ್ನೆಯ ನೆನಪೆಲ್ಲವ
ಆವರಿಸೋ ಭಯ

ರಸಾನುಭೂತಿಯೇ ತಾಕದೇ
ಸಂಬಂಧ ಘಾಸಿ ಮಾಡದೇ
ನನ್ನನ್ನೇ ದಹಿಸ ಬೇಕಿದೆ
ಮೌನ, ಶ್ಶಬ್ದ, ನಿರ್ವಾತ
ಬದಲಾವಣೆ ಆಗಬೇಕಿದೆ
ನಿಕ್ಷಿಪ್ತ, ನಿರ್ಲಿಪ್ತ ,ನಿಗೂಢ,  
ಜಯಿಸಿ
ರೂಪಾಂತರ

ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಭಾವಜೀವಿಗೆ ನಿರ್ಭಾವಕತೆಯ ಚಿಂತೆ! ಚೆನ್ನಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮನದ ಬಯಕೆಗಳಿಗೆ ಪ್ರಯತ್ನಗಳು ಸಹಕಾರಿಯಾದಾಗ ಸಾಧ್ಯವಿದೆ ರೂಪಾಂತರ ಬಯಕೆಗಳ ಅದುಮಿಟ್ಟು, ನಡೆಯದಿರೆ ಮುಂದಡಿಯಿಟ್ಟು, ಸದಾ ಬರಿದೇ ಹಾಹಾಕಾರ - ಆತ್ರಾಡಿ ಸುರೇಶ ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರೂಪಂತರ ಮತ್ತು ನಿಗೂಢ ಒಟ್ಟಿಗೆ ಸಾಧ್ಯವಿಲ್ಲ ಎನಿಸುತ್ತದೆ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗೋಪಿನಾಥರೇ, ನಿಮ್ಮ ಕವನವನ್ನು ಓದಿದಾಗ, ಅದು ವಾನಪ್ರಸ್ಥಾಶ್ರಮವನ್ನು ಸ್ವೀಕರಿಸುವ ಮುನ್ನದ ವ್ಯಕ್ತಿಯೋರ್ವನ ಮನಸ್ಸಿನ ತಳಮಳಗಳನ್ನು ಬಿ೦ಬಿಸಿದ ಹಾಗೆ ಅನ್ನಿಸಿತು. ಸು೦ದರ ಕವನ. ನಮಸ್ಕಾರಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಾಲತಿಯವರಿಗೆ, ಹೆಗ್ಡೆಯವರಿಗೆ, ಕವಿವರ್ಯರಿಗೆ ಮತ್ತು ರಾಯರಿಗೆ ನಿಮ್ಮೆಲ್ಲರ ಅತ್ಮೀಯ ಪ್ರತಿಕ್ರಿಯೆಗಳಿಗೆ ನಾನು ತುಂಬಾ ಅಬಾರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.