ನೀ ಕಲಿಸಿದ ಪಾಠ

5

ಹೌದಲ್ಲಪ್ಪಾ ಕಾಲ ಮಿಂಚಿದೆ

ನೀನೇ ತಾನೇ ಕಲಿಸಿದೋನು

ನಿಮ್ಮ ಸುಖಕ್ಕೆ ಅಡ್ಡಿ ಕೂಳಿಗೆ ದಂಡ

ಅಂತ ನಿನ್ನಪ್ಪ ಅಮ್ಮನ್ನ ಹೊರಹಾಕಿದೆ

ನನ್ನನ್ನ ಒಂಟಿ ಒಂಟಿಯಾಗಿ ಬೆಳೆಸಿದೆ

ಆಗ ನಿನಗೆ ನೆನಪಿಗೆ ಬರಲಿಲ್ಲವಲ್ಲ

ನೀ ಕಲಿಸಿದ ಪಾಠ ಇದೇ ತಾನೆ

ಪ್ರಕೃತಿಯಲ್ಲೇ ನೀನು ಕಲಿತ ಪಾಠ

ಹಿರಿಯರ ಪ್ರೀತಿ,ಕಿರಿಯರಸ್ನೇಹ,

ಹೊಂದಿ ಬಾಳುವ,ಹಂಚಿ ತಿನ್ನುವ ಗುಣ

ನೀನೆಷ್ಟು ನಿನ್ನ ಮಕ್ಕಳಿಗೆ ಕೊಟ್ಟೆ?

ಕಲಿಸಲು ನಿನಗೆ ಸಮಯವೆಲ್ಲಿತ್ತು?

ಹಣ ಗಳಿಸುವ ಹುನ್ನಾರದಲ್ಲಿ

ನಮ್ಮವರ ಮರೆತೆ ನೀನು,

ಬಿರುಕುಗೊಂಡಿತು ಬಾಂಧವ್ಯ,

ಪ್ರೀತಿಯ ಸೆಲೆಇಲ್ಲದೆ ನಮ್ಮದೇ ಆದ

ಕೋಟೆಯಲಿ ಹಠ,ಸ್ವಾರ್ಥ,

ಅಸೂಯೆಗಳ ಬಿತ್ತಿ ತಾಳ್ಮೆ

ಏಕಾಗ್ರತೆಗಳ ಮರೆತಂತೆ ಬೆಳೆಸಿ

ನನ್ನ ಬೋನ್ಸಾಯ್ ಮಾಡಿದೆ

ರೀತಿ ನೀತಿ ತಿಳಿಸದೇ,

ಸಂಸ್ಕೃತಿಯ ಘನತೆಯಿಲ್ಲದೇ ಇರುವ ನನ್ನಲ್ಲಿ

ಅದೆಲ್ಲಿಂದ ಬಂದೀತು ನೈತಿಕತೆಯ,

ಬೌದ್ದಿಕ,ಸನಡತೆಯು?

ಹಾಕಬೇಕಿತ್ತು ಸಂಬಂಧಗಳಿಗೆ ಪ್ರೀತಿಯ ಬೆಸುಗೆ,

ಕಲಿಸಬೇಕಿತ್ತು ಒಳ್ಳೆಯ ಗುಣಸ್ವಭಾವ,

ಶಿಸ್ತು, ಸಂಯಮ,

ನಮ್ಮನೆಲಜಲದ ಸಂಸ್ಕೃತಿ ಕಂಪ್ಯೂಟರ್,

ಮೊಬೈಲ್ ಸಂಸ್ಕೃತಿಯಲ್ಲಿ ಹಳೆಯ

ಉಚ್ಛಮಟ್ಟದ ಸಂಸ್ಕೃತಿಗಳು ಡಿಲೀಟಾದವು

ಮನದ ಹಾರ್ಡ್ ಡಿಸ್ಕ್ ನಲ್ಲಿ ಮೂಲ ಬೇರುಗಳು

ಬರೇ ಯಾಂತ್ರೀಕೃತವಾದುವು

ಆದರೂ ತಳಿಯ ಸರಪಳಿ ಇದೆಯಲ್ಲಾ

ದು ಹ್ಯಾಗೋ ಉಳಿದುಕೊಂಡಿದೆ

ಮನದ ಹಾರ್ಡ್ ಡಿಸ್ಕ್ ನ ಬ್ಯಾಕ್ ಅಪ್

ಫೈಲಿನಲ್ಲಿ ಇನ್ನೂ ಭದ್ರ ಬಿಡು,

ಬರುತ್ತಿದ್ದೇನೆ ನಿನ್ನ ಬಳಿ ಮತ್ತೆ ನಮ್ಮ

ನೆಲಜಲದ ಸಂಸ್ಕೃತಿಯಂತೆ,ಬಾಳಲು,

ನಿಮ್ಮೆಲ್ಲರೊಡನೆ ಬದುಕಲು

ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಇಂದಿನ ಬೆಂಗಳೂರು ಸಂಸ್ಕೃತಿಗೆ ಕನ್ನಡಿ ಹಿಡಿದಂತಿದೆ !!! ಕವನ ಚೆನ್ನಾಗಿದೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರುಪಾಶ್ರೀಯವರೇ ನಿಮ್ಮ ಆತ್ಮೀಯ ಪ್ರತಿಕ್ರೀಯೆಗೆ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗೋಪಿನಾಥರೇ, ಒಳ್ಳೆಯ ನೀತಿಯುತ ಕವನ. ನಿನ್ನೆಯ ಉದಯವಾಣಿಯ ಶುಕ್ರವಾರದ ವಿಶೇಶ ಸ೦ಚಿಕೆಯ ಪುರುಷ ಸ೦ಪದದಲ್ಲಿ ``ಮಗ ಬರೆದ ಅಪ್ಪನಿಗೊ೦ದು ಪತ್ರ`` ಲೇಖನವೂ ಇದೇ ಥೀಮ್ ಇಟ್ಟುಕೊ೦ಡು ಬರೆದ ಲೇಖನ. ಅದೂ ಮತ್ತು ನಿಮ್ಮದೂ ಎರಡೂ ಸೊಗಸಾಗಿವೆ. ಸಾಧ್ಯವಾದಲ್ಲಿ ಅದನ್ನೂ ಓದಿ. ನಮಸ್ಕಾರಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನು ಉದಯವಾಣಿ ತರಿಸುವದಿಲ್ಲ, ಸಿಕ್ಕಿದರೆ ನೋಡಬೇಕೆಂಬ ಆಸೆಯಿದೆ, ರಾಯರೇ ನಿಮ್ಮ ಆತ್ಮೀಯ ಪ್ರತಿಕ್ರೀಯೆಗೆ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗೋಪಿನಾಥರೆ, ಆತ್ಮೀಯ ಸಂಬಂಧಗಳು ಅರ್ಥ ಕಳೆದುಕೊಳ್ಳುತ್ತಿರುವ ಈ ದಿನಗಳಲ್ಲಿ ಅರ್ಥಪೂರ್ಣ ಕವನ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಜು ಅವರೇ ನಿಮ್ಮ ಆತ್ಮೀಯ ಪ್ರತಿಕ್ರೀಯೆಗೆ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಿತ್ರ ಗೋಪಿ, (ಗೋಪಿ ಅನ್ನಬಹುದೇ?) ಸಮಾನ ಭಾವವುಳ್ಳವರ ವಿಚಾರ, ಸಹವಾಸ ಸಂತಸಕರ. ಒಳ್ಳೆಯ ವಿಷಯ ಪ್ರಸ್ತಾಪಿಸಿದ್ದೀರಿ. ಚೆನ್ನಾಗಿ ಮಂಡಿಸಿದ್ದೀರಿ. ಧನ್ಯವಾದ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೆಸರಲ್ಲೇನಿದೆ ಬಿಡಿ ಕವಿವರ್ಯರೇ ಭಾವ ಸಂಭಂಧ ಮುಖ್ಯ. ನಿಮ್ಮ ಮೆಚ್ಚುಗೆಗೆ ಧನ್ಯ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇ೦ದಿನ ಯಾ೦ತ್ರಿಕ ಬದುಕಿನಲ್ಲಿ ಸ೦ಬ೦ಧಗಳು ಪ್ರಾಮುಖ್ಯತೆ ಕಳೆದುಕೊಳ್ಳುತ್ತಿವೆ. ಮಕ್ಕಳು ತಮ್ಮ ಹೆತ್ತವರು ನಡೆದ ದಾರಿಯನ್ನು ಗಮನಿಸಿರುತ್ತಾರೆ, ಮು೦ದೊದು ದಿನ ಮಕ್ಕಳೂ ಹೆತ್ತವರ೦ತೆಯೇ ತಪ್ಪಾಗಿ ನಡೆದು ಕೊಳ್ಳಬಹುದು, ಎ೦ಬುದನ್ನು ತಿಳಿಸುತ್ತ ಎಚ್ಚರಿಕೆಯನ್ನು ಕೊಡುತ್ತಿದೆ.. ಕವನ ಚೆನ್ನಾಗಿದೆ ಸಾರ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಸನ್ನರೇ ತಮ್ಮ ಅತ್ಮೀಯ ಪ್ರೋತ್ಸಾಹದ ನುಡಿಗೆ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿದೆ, ಇದು ಇಂದಿನ ಪೋಷಕರಿಗೆ ಹಾಗು ಮುಂದೆ ಪೋಷಕರಾಗುವರಿಗೆ ಒಳ್ಳೆಯ ಪಾಠ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತೇಜಸ್ವಿಯವರೇ ನಿಮ್ಮ ಆತ್ಮೀಯ ಪ್ರತಿಕ್ರೀಯೆಗೆ ಧನ್ಯವಾದಗಳು