ಇದು ಒಂದು ಬ್ಲಾಗು.

0

ಅಥವಾ ಇದೂ ಒಂದು ಬ್ಲಾಗು. ನನ್ನ ಬ್ಲಾಗು ಬೇರೊಂದು ಇದೆ. ಅಲ್ಲಿ ನಾನೂ ನನ್ನವಳೂ ಇಬ್ಬರೂ ಬ್ಲಾಗಿಸುತ್ತೇವೆ. ಆದ್ದರಿಂದ ಇಲ್ಲಿ ಹೆಚ್ಚಾಗಿ ಬರೆಯುಲಾರೆ. ಆದರೆ ಆಗಾಗ ಅಲ್ಲಿಂದ ಇಲ್ಲಿಗೆ ತಂದು ಹಾಕಿಯೇನು. ಅದು ಕೃತಿಚೌರ್ಯವೆನಿಸುವುದಿಲ್ಲವಷ್ಟೆ. ಆದರೆ ಸಂಪದವನ್ನು ದಿನಕ್ಕೊಮ್ಮೆಯಾದರೂ ಓದುತ್ತೇನೆ. ಆಗಾಗ ಪ್ರತಿಕ್ರಯಿಸುತ್ತೇನೆ.

ಸಂಪದದಂಥ ತಾಣದಲ್ಲಿ ಬ್ಲಾಗ್‌ಗಳು ಇರಬೇಕೆ? ನಾನು ಕಂಡ ಹಾಗೆ ಬ್ಲಾಗುಗಳಲ್ಲಿ ಎರಡು ಬಗೆ: "ನಾನು ಈಹೊತ್ತು ಇಲ್ಲಿಗೆ ಹೋದೆ; ಅದು ಮಾಡಿದೆ/ಮಾಡಲಿಲ್ಲ; ಹೀಗಾಯಿತು/ಇಲ್ಲ" "ನನಗೆ ಬದುಕಿನಲ್ಲಿ ಬೇಸರ ಹುಟ್ಟಿದೆ/ನಲಿವುಂಟಾಗಿದೆ" ಇಂತಹ ದಿನಚರಿಯವು ಒಂದು (ಸಾವಿರಕ್ಕೆ ಒಂಭೈನೂರ ತೊಂಭತ್ತು ಇಂತಹವು. ನಾನೇನು ಇದರ ಬಗ್ಗೆ ಮೂಗು ಮುರಿಯುತ್ತಿಲ್ಲ; ನಾನು ಮಾಡಿರುವುದು, ಮಾಡುವುದೂ ಇದನ್ನೆ). ಯಾವುದೊ ವಿಷಯದ, ಕಲೆಯ, ಆಸಕ್ತಿಯ, ಕಾರ್ಯಕ್ಷೇತ್ರದ, ನಂಬಿಕೆಯ ಬಗ್ಗೆ, ಬರೆದು ವಿಚಾರವಿನಿಮಯ ನಡೆಸುವ, ತಿಳಿವಳಿಕೆ ಬೆಳೆಸಿಕೊಳ್ಳುವ/ಬೆಳೆಸುವ ಬಗೆಯವು ಇನ್ನೊಂದು. ಇವು ಬಹಳ ವಿರಳ. ಸಂಪದ ಬೆಳೆದು ಆಗಬೇಕಾದ್ದು ಎರಡನೆಯದರ ಹಾಗೆ. ಬ್ಲಾಗುಗಳಿಗೆ ಅವಕಾಶವಿದ್ದರೆ ಆಗಬಹುದಾದ್ದು ಮೊದಲನೆಯದರ ಹಾಗೆ (ಈಗ ಆಗಿಲ್ಲ; ಆಗಿಯೇ ತೀರಬೇಕಾಗಿಲ್ಲ; ಆಗುವ ಸಾಧ್ಯತೆ ಇದೆ, ಅಷ್ಟೆ). ಸಂಪದದ ಸದಸ್ಯರು ಬೇಕಾದಹಾಗೆ ಬ್ಲಾಗಿಸಲಿ; ಹೀಗೆ ಬೇಕು ಹಾಗೆ ಬೇಡವೆನ್ನುವ ಹಕ್ಕು ಯಾರಿಗೂ ಇಲ್ಲ. ಆದರೆ ಸಂಪದದಲ್ಲಿ ಕಾಣಿಸಿಕೊಳ್ಳುವ ಬರಹಗಳು ಹೇಗಿರಬೇಕು ಎನ್ನುವುದರ ಸಂಪಾದಕರ ಕಲ್ಪನೆಗೆ ವಿಪರೀತವಾಗಿ ಸಂಪದದಲ್ಲಿ ಬ್ಲಾಗು ಕಾಣಿಸಿಕೊಂಡರೆ ಏನು ಮಾಡಬೇಕು? ಏನು ಮಾಡಬಹುದು? ಸಂಪಾದಕರಿಗೆ ಬೇಸರವಾಗದ ಹಾಗೆ ಬ್ಲಾಗಿಸಬೇಕಾದ ಕಷ್ಟದ ಪರಿಸ್ಥಿತಿ ಸದಸ್ಯರಿಗಾದರೂ ಏಕೆ? ಸದಸ್ಯರಿಗೆ ಬ್ಲಾಗಿಸುವ ಅವಕಾಶ ಕೊಡದೆಯೆ ಇದ್ದರೆ ಒಳಿತೇನೊ ಎನಿಸುತ್ತದೆ.

ಇದು ಬರೆಯ ಸೈತಾನನ ವಕೀಲಿಯಷ್ಟೆ. ಈ ವಕಾಲತ್ತು ನಡೆಸುತ್ತಿರುವುದೂ ಸದಸ್ಯನಾಗಿ ನಾನು ಪಡೆದಿರುವ ಬ್ಲಾಗಿಸುವ ಅವಕಾಶವನ್ನು ಬಳಸಿಕೊಂಡೆಯೆ. ಇದರಿಂದ ಯಾರದ್ದಾದರೂ "ಗರಿಗಳು ಕೆದರಿದ್ದರೆ" ಕ್ಷಮೆಯಿರಲಿ. ನಿಮ್ಮ ಮಾರ್ನುಡಿಗಳಿಗೆ, ಕಿಡಿಕಾರುವಿಕೆಗೆ ಕೂಡ :), ಬಾಗಿಲು ತೆರೆದೆ ಇದೆ.

ವೆಂ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ವೆಂಕಟೇಶ್ ಅವರೇ, ಸರಿಯಾಗಿ ಹೇಳಿದ್ರಿ. ಸಂಪದದಲ್ಲಿ ಹರಟೆಯ ಚಾವಡಿಯ ಅವಶ್ಯಕತೆ ಇಲ್ಲ. ಸಂಪದದ ಉದ್ದೇಶವೇ ಬೇರೆ. ಕನ್ನಡದ ವೈಭವನನ್ನು ಇಡೀ ಜಗತ್ತಿಗೆ ಸಾರುವುದೇ ಇದರ ಉದ್ದೇಶವಾಗಲಿ, ಅದಕ್ಕಾಗಿ ನಾವೆಲ್ಲರೂ ಅವಶ್ಯಕ ಕೆಲಸವನ್ನು ಮಾಡೋಣ. ಆದರೂ ಯಾವಾಗಲೂ ಒಂದೇ ರೀತಿಯ ಊಟ ಮಾಡೋಕ್ಕೆ ಬೇಜಾರಾಗತ್ತೆ ಅಲ್ವೇ? ಅದೂ ಅಲ್ಲದೇ ಸದಸ್ಯರು ಎಂದೂ ಒಂದೇ ಮನೋಸ್ಥಿತಿಯಲ್ಲಿ ಇರೋದಿಲ್ಲ ಅಲ್ಲ್ವವೇ? ಮನದ ಚಿಂತನೆಗಳನ್ನು ಬರಹ ರೂಪದಲ್ಲಿ ವ್ಯಕ್ತ ಪಡಿಸೋಕ್ಕೆ ಬ್ಲಾಗ್ ಅವಶ್ಯಕತೆ ಇದೆ. ಇದನ್ನು ಮೂಲ ಡಾಟಾಬೇಸ್ ಗೆ ಸೇರಿಸದೇ ಇದ್ರೆ ಆಯ್ತು ಅಷ್ಟೇ ಅಲ್ವೇ? --- ತವಿಶ್ರೀನಿವಾಸ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

"ಕರ್ಮಣ್ಯೇವಾಧಿಕಾರಸ್ಥೇ ಮಾ ಫಲೇಷು ಕದಾಚನ" ಇದನ್ನ ಇಂದಿನ ಪರಿಸ್ಥಿತಿಗೆ ತರ್ಜುಮೆ ಮಾಡಿದರೆ, "website ಶುರು ಮಾಡುವುದಷ್ಟೇ ನಿನ್ನ ಕರ್ಮ,ಅದು ಅದರ ಪಾಡಿಗೆ ನಡೆಯುತ್ತದೆ" ಅಂತ ಆಗಬಹುದೇನೋ.. ಬ್ಲಾಗ್‍ಗಳು ಸಾಮಾನ್ಯ ಜನರ ಯೋಚನೆಗಳ ಪ್ರತಿಬಿಂಬ.. ಅದನ್ನು ಕಡಿದು ಕೇವಲ "ಉತ್ಕೃಷ್ಟ" ಬರವಣಿಗೆಯನ್ನು ಜಗತ್ತಿಗೆ ಸಾರುತ್ತೇವೆ ಅಂದರೆ, ನಮ್ಮೆಲ್ಲರ ನಿಜವಾದ ಭಾವನೆಗಳಿಗೆ (ಅದೆಷ್ಟೇ crude ಆಗಿರಲಿ) ಒಂದೋ ಬೆಲೆಯಿಲ್ಲವೆಂದೋ ಇಲ್ಲ ಕನ್ನಡ ಸಾಹಿತ್ಯದಲ್ಲಿ ನೀವು ಹೆಸರು ಮಾಡದಿದ್ದಲ್ಲಿ ನಿಮಗೆ ಇಲ್ಲಿ ಪ್ರವೇಶವಿಲ್ಲ ಎಂದಾಗುತ್ತದೆ. ಅಂತರ್ಜಾಲದಲ್ಲಿನ್ನೂ ಕನ್ನಡದ ಬಳಕೆಯೇ ಹೊಚ್ಚಹೊಸತಾಗಿರುವಾಗ ನಮ್ಮ ಭಾಷೆಯನ್ನು ಬೆಳೆಸುವುದಕ್ಕೆ, ಕನ್ನಡ ಓದಲು/ಬರೆಯಲು ಬರುತ್ತಿದ್ದರೂ ಇಂಗ್ಲೀಷಿನ ಮೊರೆ ಹೊಕ್ಕವರನ್ನು ಪುನಃ ಕನ್ನಡದಲ್ಲಿ ಸಂವಾದಿಸಲು ಪ್ರೇರಪಿಸುವುದು ಮೊದಲ ಗುರಿ. (ಸಧ್ಯದ ಕನ್ನಡದ ಪರಿಸ್ಥಿತಿಯನ್ನು ನೋಡಿದರೆ, ಇದೇ ಅತ್ಯಂತ ಪ್ರಮುಖವಾದದ್ದೂ ಎನ್ನಿ) ಅಂತಾದ್ದರಲ್ಲಿ ಕನ್ನಡಿಗರೇ ತಲೆ ಕೆಡೆಸಿಕೊಂಡು ಓದಬೇಕಾದ ಕೃತಿಗಳನ್ನು ಮಾತ್ರ ಹಾಗಬೇಕು ಮಿಕ್ಕ ಬರಹಗಳಿಗೆ ಜಾಗವಿಲ್ಲ ಎಂದರೆ ಈಗಿರುವ ಓದುಗರ ಸಂಖ್ಯೆಯೂ ಕಡಿಮೆಯಾಗುತ್ತದೆ. ನಿಮ್ಮ ಯೋಚನೆಯನ್ನು ದೂರದೃಷ್ಟಿ ಎನ್ನಬಹುದು.. ಸಧ್ಯಕ್ಕೆ ಅದರ ಭಯವಿಲ್ಲ (ಜೊತೆಗೆ hpn ಅವರು oss ನಿಷ್ಟಾವಂತರು..filtering ಅದಕ್ಕೆ ತದ್ವಿರುದ್ಧವಲ್ಲವೇ ;-) )
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.