ಗ್ರಹ ಭೇದ

0

ಮೊದಲೇ ಹೇಳುವೆ. ಇದು ಆಕಾಶದ ಬಗ್ಗೆಯ ಬರಹ ಅಲ್ಲ. ಹಾಗಾಗಿ, ಮಂಗಳ ಗುರು ಶನಿ ವಿಷಯ ಯೋಚಿಸೋದನ್ನ ಬಿಡಿ. ನಾನು ಹಾಡಿದ್ದೇ ಹಾಡೋ ಕಿಸ್ಬಾಯಿದಾಸ ಅಂತಲೂ ಗೊತ್ತಿದೆ. ಹಾಗಾಗಿ ಇದು ಯಾವ ವಿಷಯದ ಬಗ್ಗೆ ಇರಬಹುದು ಅನ್ನೋ ಊಹೆ ಮಾಡೋದು ನಿಮಗೇ ಬಿಟ್ಟದ್ದು.

ನನಗೆ ಪಾಠ ಹೇಳಿಕೊಟ್ಟು ಅಭ್ಯಾಸ ಇಲ್ಲ. ಚಿಕ್ಕಂದಿನಲ್ಲಿ ಮನೆಯಲ್ಲಿ ನಾನೇ ಎಲ್ಲರಿಗಿಂತ ಚಿಕ್ಕವನಾದ್ದರಿಂದ, ತಮ್ಮ - ತಂಗಿ ಅಂತ ಯಾರಿಗೂ ಏನಾದರೂ ಹೇಳಿಕೊಡುವಂತಹ ಪ್ರಸಂಗ, ಅವಕಾಶ ಎರಡೂ ಇರಲಿಲ್ಲ. ಕಾಲೇಜು ಮುಗಿಸಿದ ಕೂಡಲೇ ನಮಗೆ ಪಾಠಮಾಡಲು ಬಂದ ಕೆಲವರು ಲೆಕ್ಚರರ್ ಗಳನ್ನು ನೋಡಿದ್ದ ಅನುಭವದ ಹಿನ್ನಲೆಯಲ್ಲಿ, ನಾನಂತೂ ಆ ಕೆಲಸ ಮಾಡೋದು ಬೇಡ ಅಂತ ನಿರ್ಧಾರ ಮಾಡಿಬಿಟ್ಟಿದ್ದೆ. ಇಲ್ಲದಿದ್ದರೆ, ಆಗೆಲ್ಲ ನನ್ನ ಜೊತೆಯವರಲ್ಲಿ ಹಲವರು ಬೇರೆ ಕೆಲಸ ಸಿಗೋ ತನಕ ಅಂತ ಒಂದೋ ಎರಡೋ ಸೆಮೆಸ್ಟರ್ ಗಳಷ್ಟಾದರೂ ಲೆಕ್ಚರರ್ ಕೆಲಸ ಮಾಡೋದಿತ್ತು.

ಅದಿರ್ಲಿ. ಮೊನ್ನೆ ಚಿಕ್ಕ ಮಕ್ಕಳಿಗೆ ಒಂದು ವಿಷಯ ಹೇಳಿಕೊಡೋ ಅವಕಾಶ ಬಂದಿತ್ತು. ನನಗೆ ಪ್ರೀತಿಯಾದ ವಿಷಯ. ಹಾಗಾಗಿ, ಹೇಳಿಕೊಡೋದೇನೂ ಕಷ್ಟ ಅನಿಸಲಿಲ್ಲ. ಮಕ್ಕಳೂ ಒಳ್ಳೇ ಚೆನ್ನಾಗಿ ಪಾಲುಗೊಂಡರು. ಅದನ್ನೇ ಹಂಚಿಕೊಳ್ಳೋಣ ಅಂತ ಈ ಪೋಸ್ಟ್ ಬರೆದೆ. ’ಪಾಠ’ ಇಂಗ್ಲಿಷ್ ನಲ್ಲಿದ್ದರಿಂದ ಇಲ್ಲಿ ಸಂಪದದಲ್ಲಿ ಹಾಕಿಲ್ಲ. ಬದಲಿಗೆ ನನ್ನ ಇಂಗ್ಲಿಷ್ ಬ್ಲಾಗಿನಲ್ಲಿ ಹಾಕಿರುವ ಅದರ ವಿಡಿಯೋ ರೆಕಾರ್ಡಿಂಗ್ ಗೆ ಒಂದು ಕೊಂಡಿ ಹಾಕಿದೀನಿ.

ಆಸಕ್ತಿ ಇದ್ದೋರು ಕೆಳಗಿನ ಕೊಂಡಿ ಚಿಟಕಿಸಿ:

ಗ್ರಹಭೇದ : ಒಂದು ಕೈಪಿಡಿ

-ಹಂಸಾನಂದಿ

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಭಲೇ!!
ನನಗಿನ್ನೂ ನಿಮ್ಮ ವೀಡಿಯೋ ನೋಡಲಾಗಿಲ್ಲ. ಆದರೆ ಗ್ರಹಭೇದದ ಬಗ್ಗೆ ಬಾಲಮುರಳಿಯವರ ಒಂದು ಕ್ಯಾಸೆಟ್ ಕೇಳಿದ್ದೆ. ತೋಡಿ, ಶಂಕರಾಭರಣ, ಖರಹರಪ್ರಿಯ, ಕಲ್ಯಾಣಿ, ಹರಿಕಾಂಭೋಜಿ, ಮತ್ತು ನಟಭೈರವಿಯದ್ದು ರಾಗ-ತಾನ-ಪಲ್ಲವಿ (ಪಲ್ಲವಿ ನೆನಪಿಲ್ಲ). ಮತ್ತೆ ಹುಡುಕಿ ಕೇಳಬೇಕೆನಿಸಿದೆ.
ಮತ್ಯಾರೋ ಗ್ರಹಭೇದದ ಬಗ್ಗೆ ತಿಳಿಯಿರಿ ಆದರೆ ಸಾಧನೆ ಹತ್ತುವವರೆಗೂ ಅದರ ಹುಚ್ಚು ಹಿಡಿಸಿಕೊಂಡು ಸಂಗೀತ ಹಾಳು ಮಾಡಿಕೊಳ್ಳಬೇಡಿ ಅಂತ ಬೈದಿದ್ದೂ ನೆನಪು. :)

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀನಿಧಿ ಅವರೆ,

ಅದೊಂದು ಕ್ಲಾಸಿಕ್ ಪಲ್ಲವಿ - ಸರಿಗಮಪದನೀ ಪಾಡೆದ - ನಾನು ಕೇಳಿದ್ದ ಧ್ವನಿಮುದ್ರಿಕೆಯಲ್ಲಿ ಹರಿಕಾಂಭೋಜಿಯನ್ನು ಬಿಟ್ಟು ಉಳಿದೈದು ರಾಗಗಳೂ ಬಂದಿದ್ದವು

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.