ಚಿನ್ನದ ಬಟ್ಟಿಲು ... ಚಹಾ(ಟೀ)ದ ರುಚಿ ... ನಿಮ್ಮ ಆಯ್ಕೆ ಎನು ??

4.5

ಒಬ್ಬ ಮೇಸ್ಟ್ರು ತಮ್ಮ ಯಲ್ಲಾ ಶಿಶ್ಯಂದಿರನ್ನ ಮನೆಗೆ ಕರೆದು ಚಹಾ(ಟೀ) ಕೊಡುತ್ತಾರೆ ... ಅದರಲ್ಲಿ ಕೆಲವು ಚಿನ್ನದ ಬಟ್ಟಿಲು ಇನ್ನು ಕೆಲವು ಬೆಳ್ಳಿಯದು ಹಾಗೆ ಕೆಲವು ಸ್ಟೀಲಿನದು ಮತ್ತು ಒಂದು ಮಣ್ಣಿನದು! ... ಶಿಶ್ಯಂದಿರು ಒಬ್ಬೊಬ್ಬರಾಗೆ ಮೊದಲು ಚಿನ್ನದ ಬಟ್ಟಿಲು, ನಂತರ ಬೆಳ್ಳಿ ಹಾಗು ನಂತರ ಸ್ಟೀಲಿನ ಬಟ್ಟಿಲುಗಲನ್ನು ಆರಿಸಿಕೊಳ್ಳುತ್ತಾರೆ ... ಬಟ್ಟಿಲುಗಳು ಅಲ್ಲಿ ಇರುವ ಶಿಶ್ಯಂದರಿಗಿಂತ ಜಾಸ್ತಿ ... ಹೀಗಾಗಿ ಯಾರು ಮಣ್ಣಿನ ಬಟ್ಟಿಲನ್ನು ತೆಗೆದುಕೊಳ್ಳುವುದಿಲ್ಲಾ!

ನಾವು ಸವಿಯಬೇಕಾಗಿರುವುದು ಚಹಾದ ರುಚಿಯನ್ನೋ ಅಥವಾ ಚಿನ್ನದ ಬಟ್ಟಿಲನ್ನೋ ?

ಆದರೆ ಜೀವನದಲ್ಲಿ ಬಹಳಸ್ಟು ಜನರಿಗೆ ಚಹಾದ ರುಚಿಗಿಂತ ... ಚಿನ್ನದ ಬಟ್ಟಿಲ ಮೇಲೆ ವ್ಯಾಮೋಹ ಜಾಸ್ತಿ.

ಇಂತಹ ವ್ಯಾಮೋಹ ನಮ್ಮ ಜೀವನವನ್ನು ಭಾರವಗಿಸ್ತಾ ಇದೆ ...

ಹೀಗಾಗಿ ನಾವು ನಮ್ಮದಲ್ಲದ ಅನೇಕ ಸಮಸ್ಯೆಗಳನ್ನು ನಮ್ಮ ತಲೆಮೇಲೆ ಹೊತ್ಕೊಂಡು ಒದ್ದಾಡ್ತಾ ಇದೆವೆ ... ಎಕೆಂದರೆ ನಮಗೆ ಚಹಾದ ರುಚಿಗಿಂತ ... ಚಿನ್ನದ ಬಟ್ಟಿಲ ಮೇಲೆ ವ್ಯಾಮೋಹ ಜಾಸ್ತಿ.

ಇದರ ಅರಿವು ನಮಗಾದರೆ, ಚಿನ್ನದ ಬಟ್ಟಿಲ ಮೇಲಿನ ವ್ಯಾಮೋಹ ಕಡಿಮೆಯಾದರೆ, ಜೀವನ ಹಗುರವಾಗುವುದರಲ್ಲಿ ಯಾವೂದೇ ತೊಡಕಿಲ್ಲ.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಚಿನ್ನದ ಬಟ್ಟಲು ತಗೊಂಡ್ರೆ ಮಾರಿ ಎಸ್ಟಾದ್ರೂ ಚಹಾ ಕುಡಿಬಹುದು ಅನ್ನೋ ದೂರಾಲೋಚನೆಯೇನೋ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇದ್ರು ಇರಬಹುದು ....
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಭಾವನೆಗೆ ಬಲಿಬಿದ್ದು ಒದ್ದಾಡ್ತಾ ಇದ್ದೀನಿ.ಇದರಲ್ಲೇ ಸಂತೋಷವನ್ನು ಕಾಣ್ತಾ ಇದ್ದೀನಿ. ಮಣ್ಣಿನ ಬಟ್ಟಲೇ ಇರಲಿ. ಆದರೆ ಭಾವನೆ ತುಂಬಿರಲಿ, ಚಹಾ ಇಲ್ಲದಿದ್ದರೂ ಚಿಂತೆ ಇಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನಗೆ ಮಾತ್ರ ಸ್ಟೀಲ್ ಲೋಟದಲ್ಲಿ ಟೀ ಕುಡಿಯುವುದು ತುಂಬಾ ಇಷ್ಟ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗಾಜಿನ ಲೋಟ ಇಷ್ಟ ಅಂದ ಹಾಗಿತ್ತಲ್ಲ ಮಂಜುವ್ರೆ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅದು ಬೇರೆ ಉದ್ಧೇಶಕ್ಕೆ ಚೇತನ್, ಉದ್ಧೇಶಕ್ಕೆ ತಕ್ಕ೦ತೆ ಬಳಸುವ ಉಪಕರಣಗಳೂ ಬದಲಾಗುತ್ತವಲ್ಲವೇ ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೇತನ್ ಅವರಿಗು ಕುಡ ... ನೋಡಿ ಅವರ ಚಿತ್ರದಲ್ಲಿ ಸ್ಟೀಲಿನ ಬಟ್ಟಿಲು!!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವು ಹೇಳುತ್ತಾ ಇರುವುದು ನಿಜ !!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಪ್ಪಿದೆ ನೀವು ಹೇಳಿದ್ದನ್ನ. ಆದರೆ ಕೆಲವು ಬಾರಿ ಅಂತಹ ಮಾನಸಿಕತೆಯಿಂದ ಹೊರಬರಲಾಗುವುದಿಲ್ಲ. ಉದಾಹರಣೆಗೆ ಮನೆಗಳು. ನಮಗೆ ಮನೆ ಏತಕ್ಕೆ ಬೇಕು? ನಮ್ಮ ಸಂಸಾರಕ್ಕೆ ಒಂದು ಆಸರೆ ಕೊಡಲು. ಅದಕ್ಕೆ ಈಗ ಇರುವಂಥ ಬಂಗಲೆಗಳೇ ಬೇಕೆ? ಮೂಲ ಉದ್ದೇಶವಾದ ಸುಖ ಸಂಸಾರಕ್ಕೆ ಎಷ್ಟು ಜನ ಒತ್ತು ಕೊಡುತ್ತಿದ್ದಾರೆ? ಭವ್ಯ ಬಂಗಲೆಗಳಲ್ಲಿ ಒಡಕಲು ಸಂಸಾರಗಳೇ ತುಂಬಿಲ್ಲವೆ? ಹಾಗೆಂದು ಸಣ್ಣದಾಗಿ ಮನೆ ಕಟ್ಟಿ ಸುಖಿಯಾಗಿರೋಣ ಎಂದರೆ ಈ ಸಮಾಜದಲ್ಲಿ ವಿಚಿತ್ರ ಪ್ರಾಣಿಯ ಥರ ನೋಡುವುದಿಲ್ಲವೆ ಜನರು? ಅದೇನೋ ಯಜಮಾನನ 'ಪುರುಷಾರ್ಥಕ್ಕೆ' ಚ್ಯುತಿ ಬಂದಂತೆ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸುಖ ಮತ್ತು ತೃಪ್ತಿಯ ವ್ಯಾಖ್ಯಾನ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಾ ಹೋಗುತ್ತದೆ. ಎಲ್ಲರೂ ಭಿನ್ನರಾಗಿ, ಭಿನ್ನವಾಗಿ ಯೋಚಿಸುತ್ತಾರೆ, ವ್ಯವಹರಿಸುತ್ತಾರೆ. ಬಾಹ್ಯ ಆಕರ್ಷಣೆ, ಸೆಳೆತ ಇದು ಮಾಮೂಲು. ಈ ಮನೋಭಾವನೆ ಬದಲಾಗುವುದು ಅಸಾಧ್ಯ ಅಲ್ಲದಿದ್ದರೂ ಸುಲಭ ಸಾಧ್ಯವಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.