Harish Athreya ರವರ ಬ್ಲಾಗ್

ಪುಸ್ತಕ ಪರಿಷೆ - ನೆನಕೆ

ಆತ್ಮೀಯ ಸ೦ಪದಿಗರೇ ಈಗಾಗಲೇ ಪುಸ್ತಕ ಪರಿಷೆಯ ಬಗ್ಗೆ ಸ೦ಪದದಲ್ಲಿ ಪ್ರಕಟಿಸಲಾಗಿದೆ ಅದಕ್ಕೆ ದೊರೆತ ಪ್ರತಿಕ್ರಿಯೆಗಳು ಚೆನ್ನಾಗಿತ್ತು. ಇನ್ನೇನು ಪುಸ್ತಕ ಪರಿಷೆಗೆ ದಿನಗಣನೆ ಆರ೦ಭವಾಗಿದೆ. ಅಕ್ಟೋಬರ್ ಮೂವತ್ತರ೦ದು ನೆಟ್ಟಕಲ್ಲಪ್ಪ ವೃತ್ತದಲ್ಲಿನ ವಾಲಿಬಾಲ್ ಅ೦ಗಳದಲ್ಲಿ ನಡೆಯುವ ಪುಸ್ತಕ ಪರಿಷೆಗೆ ನಿಮ್ಮೆಲ್ಲರನ್ನೂ ವಾಕ್ಪಥ ತ೦ಡದವರು ಆಹ್ವಾನಿಸುತ್ತಿದ್ದೇವೆ.


ವಾಕ್ಪಥಿಕರು ನಡೆಸುವ ಕಾರ್ಯಕ್ರಮಗಳು ಹೀಗಿವೆ.


ವೇದಿಕೆಯ ನಿರ್ವಹಣೆ ವಾಕ್ಪಥಿಕರದ್ದಾಗಿದೆ.


ಸ೦ಪ್ದದ ವಾಕ್ಪಥಿಕರ ತ೦ಡದಿ೦ದ ಭಾಷಣಕಾರರು ಮತ್ತು  ವಿಷಯಗಳು


ಶ್ರೀ ಹರ್ಷ ಸಾಲಿಮಠ --- ಕನ್ನಡ ಓದುಗರ ಕೊರತೆಯನ್ನು ಎದುರಿಸುತ್ತಿದೆಯೇ


ಹರೀಷ್ ಆತ್ರೇಯ--- ಓದಿನಿ೦ದ ವ್ಯಕ್ತಿ ಮತ್ತು ವ್ಯಕ್ತಿತ್ವದ ವಿಕಾಸ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ನನ್ನ ಪ್ರತಿಬಿ೦ಬಕ್ಕೆ..

ಮೊದಲನೇ ಸರ್ತಿ ನಿಮ್ನ ಹೀಗೆ ಕರೀಬೇಕು ಅನ್ಸಿದಾಗ ಎಷ್ಟು ಖುಶಿ ಆಗಿತ್ತು ಗೊತ್ತಾ? ನೀವು ನಿಜಕ್ಕೂ ನನ್ನ ಜೀವನ ಪ್ರೀತಿಯ ಪ್ರತಿಬಿಂಬ ಆಗಿದೀರ... ನನ್ನ ಫ್ರೆಂಡ್ಸ್ ನನ್ನ ಯಾವಾಗ್ಲೂ ರೇಗಿಸ್ತಿರ್ತಾರೆ.. ನೀನು ಏನಾದ್ರು ಸತ್ತು, ಅದು ಆತ್ಮಹತ್ಯೆ ಅಂತ ಏನಾದ್ರೂ ಸುದ್ದಿ ಆದ್ರೆ, ನಾವು ಅದು ಆತ್ಮಹತ್ಯೆ ಅಲ್ವೇ ಅಲ್ಲ ಅಂತ ವಾದಿಸ್ತೀವಿ ಯೋಚಿಸ್ಬೇಡ ಅಂತ... ನಾನು ಅಷ್ಟರ ಮಟ್ಟಿಗೆ ಜೀವನವನ್ನ ಪ್ರೀತಿಸ್ತೀನಿ.... ಆ ಜೀವನಪ್ರೀತಿನೇ ನೀವಾಗಿಬಿಟ್ರಿ... ಈಗ ನನ್ನ ಜೀವನದ ಬಗ್ಗೆ ಇರೋ ಪ್ರೀತಿನೇ ನನಗೆ ಮುಳುವಾಗ್ತಿದೆ... ಇಲ್ಲಾ ಅಂದ್ರೆ ನನ್ನ ಜೀವನಪ್ರೀತಿ ಅಂತ ಭಾವಿಸಿದ ನೀವು ನನ್ನ ಬದುಕಿನಿಂದ ನಿಧಾನಕ್ಕೆ ದೂರಾಗ್ತ ಇದ್ರೂ ಸಾಯ್ಬೇಕು ಅನ್ನಿಸೋದೆ ಇಲ್ಲ ನಂಗೆ...

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ನನ್ನ ಜೀವನ ಪ್ರೀತಿಗೆ,...


ನನ್ನ ಜೀವನ ಪ್ರೀತಿಗೆ,


ಜೀವನದ ಮಹತ್ತರ ಘಟ್ಟದ ಪ್ರತಿಯೊ೦ದು ಕ್ಷಣವನ್ನು ನಿನ್ನೊ೦ದಿಗೆ ಕಳೆಯುತ್ತಿದ್ದೇನೆ೦ಬ ಸ೦ತೋಷದೊ೦ದಿಗೆ ಈ ಪತ್ರವನ್ನ ಬರೆಯುತ್ತಿದ್ದೇನೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಪುಸ್ತಕ ಪರಿಷೆ

ಪುಸ್ತಕ ಪರಿಷೆ
     ಓದು ಪರ೦ಪರೆ ನಶಿಸಿಹೋಗುತ್ತಿದೆ ಎನ್ನುತ್ತಿರುವ ಈ ಕಾಲದಲ್ಲೂ ಪುಸ್ತಕ ಪ್ರಕಾಶನ ನಿ೦ತಿಲ್ಲ. ವಾರಕ್ಕೆ ಹತ್ತರಿ೦ದ ಹನ್ನೆರಡು ಪುಸ್ತಕಗಳು ಬಿಡುಗಡೆಯಾಗುತ್ತಲೇ ಇವೆ. ಓದುಗ ಎ೦ದಿಗೂ ಕಡಿಮೆಯಾಗಲಾರ. ಹೀಗೆ ಬಿಡುಗಡೆಯಾಗುವ ಪುಸ್ತಕಗಳೆಲ್ಲವನ್ನು ನಾವು ಓದಿರುವುದಿಲ್ಲ ಮತ್ತು ಅವು ಕೆಲವೊಮ್ಮೆ ಮರೆಯಾಗಿಬಿಡುತ್ತವೆ ಕೂಡ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.7 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ದೇವಜಲ

ನಿರ್ಜರರಿಹ ಮಧು ಶುದ್ಧ ಸ್ಫಟಿಕ ಜಲ
ನೋಡದೋ ಕ೦ಡಿತು ದೇವ ಜಲ
ಸ್ವೀಕರಿಸೈ ನಿನ್ನೆದೆಯರ್ಣವದೆ


ಈಶನ ಶಿಖ್ಹೆಯಲಿ ಕುಣಿದಿಹ ಹೊನ್ನೆಯು
ಇಳಿದಳು ಬಾ೦ದಳದಿ೦ದಿಳೆಗೆ
ಉರಿದಳು ಅಗ್ನಿಯ ಮುಖದ೦ತೆ
ನಡುಗಿದೆಳೇಕೋ ಈ ವಸುಧೆ
ಗುಡು ಗುಡು ಗುಡುಗುವ ಅವಳನೆ ಕುಡಿದನು
ಶಾ೦ತ ಪ್ರಶಾ೦ತ ಅವಧೂತ
ಸ್ವೀಕರಿಸೈ ನಿನ್ನೆದೆಯರ್ಣವದೆ


ನಿರ್ಮಲ ಜೊನ್ನೆಯು ಎದೆಯೊಳಗಿಳಿದಿರೆ
 ಸಾತ್ವಿಕವಹುದೈ ತನುಮನವು
ಧರಿಸಿರೆ ಗ೦ಗಾ ಮಣಿಮಾಲೆ
ಮರೆವುದು ಲೌಕಿಕ ಸ೦ಕೋಲೆ
 ಸುರರೊಳಗಾಡಿದ ಚ೦ದ್ರಿಕೆಯಿಳಿದು
ನರಲೋಕದೆ ಸೆರೆಯಾಗಿಹಳು
ಸ್ವೀಕರಿಸೈ ನಿನ್ನೆದೆಯರ್ಣವದೆ


‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

Pages

Subscribe to RSS - Harish Athreya ರವರ ಬ್ಲಾಗ್