’ಸಂಪದ ಸಮ್ಮಿಲನ # 4’ ಕುರಿತು

5

’ಸಂಪದ ಸಮ್ಮಿಲನ’ದ ನೋಂದಣಿ ಪುಟಕ್ಕೆ ಭೆಟ್ಟಿಯಿತ್ತವರು ಐನೂರಕ್ಕೂ ಹೆಚ್ಚು ಮಂದಿ.
ಆ ಪೈಕಿ ಮುನ್ನೂರು ಜನರಾದರೂ ಬೆಂಗಳೂರಿಗರೇ ಇರಬಹುದಲ್ಲ?
ಆದರೆ, ನೋಂದಾಯಿಸಿಕೊಂಡವರು ಮುವ್ವತ್ತಕ್ಕೂ ಕಡಿಮೆ ಜನ!

ಓದುಗರೆಲ್ಲ ಸಮ್ಮಿಲನಕ್ಕೆ ಬರಬಾರದೆಂದೇನಿಲ್ಲ.
ಓದಿ ಸುಮ್ಮನಿರುವುದು ಉತ್ತಮ, ಹೌದು.
ಆದರೆ ಸಮ್ಮಿಲನಕ್ಕೆ ಬರುವುದು ಅತ್ಯುತ್ತಮ, ಅಲ್ಲವೆ?
ಓದು, ಬರವಣಿಗೆ, ಪ್ರತಿಕ್ರಿಯೆ ಇವೆಲ್ಲ ಭಾವ.
ಸಮ್ಮಿಲನ?
ಜೀವ.

ಇರಲಿ. ನೋಂದಾಯಿಸಿಕೊಂಡವರಾದರೂ ತಪ್ಪದೇ ಆಗಮಿಸಿದರೆ
ಸಮ್ಮಿಲನ ಸಾರ್ಥಕ.
ಮೇಲಷ್ಟು ಮಂದಿ ಬಂದರೆ
ಸಂಭ್ರಮ.   

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

<<ಮೇಲಷ್ಟು ಮಂದಿ ಬಂದರೆ ಸಂಭ್ರಮ.>> ನೀವೂ ಸಹ ತಪ್ಪದೆ ಬ೦ದರೆ ಅಲ್ಲಿ ಹಬ್ಬದ ಸ೦ಭ್ರಮ! :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಬ್ಬ! ಅಬ್ಬ! "ನಾನೆಷ್ಟು ಗ್ರೇಟ್‌!" "ಲೋ ಶಾಸ್ತ್ರೀ, ಗ್ರೇಟ್‌ನೆಸ್ ನಿಂದಲ್ಲ ಕಣೋ, ನಿನ್ನನ್ನು ಆತ್ಮೀಯತೆಯಿಂದ ಕಾಣುವ ನಿನ್ನ ಮಿತ್ರರದು." "ಹೌದು. ಒಪ್ಪಿದೆ. ಎನ್ನಂತರಾತ್ಮದ ಮಾತಿದು."
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶಾಸ್ತ್ರಿಗಳೆ, ಈಗ ನಲವತ್ತು ದಾಟಿದೆ ಗಮನಿಸಿದಿರಾ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗಮನಿಸುತ್ತಿದ್ದೇನೆ. ನೂರು ದಾಟಲಿ; ನೂರಾರು ಸಹೃದಯರು ಒಂದೆಡೆ ಸೇರಲಿ; ಎಂಬ ಮಹದಾಕಾಂಕ್ಷೆಯಿಂದ ತಾನೇ, ನಾನು ಸಣ್ಣದಾಗಿ ಕಿಡಿ(ಗೇಡಿತನ) ಎಬ್ಬಿಸಿದ್ದು? ಆ ಕಿಡಿಯಿಂದ ಬೆಳಗಲಿ ಅಕ್ಷರಸರಸ್ವತಿಯ ಪದತಲದಲ್ಲಿ ಸಂಪದಿಗರ ಇನ್ನಷ್ಟು ಮತ್ತಷ್ಟು ದೀಪಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸರ‍್.. ಸದ್ಯ ಈ ಸಮಯಕ್ಕೆ.. ೫೦ ಆಗಿದೆ.. ನಿಮ್ಮೊಲವಿನ, ಸತ್ಯ..:)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಂತಸಕರ ಬೆಳವಣಿಗೆ. ಇನ್ನೂ ಒಂದು ವಾರವಿದೆ. ನೂರು ದಾಟಲೆಂಬುದು ಆಶಯ. ಆದರೆ, ಜನ ಹೆಚ್ಚಿದಂತೆಲ್ಲ, ಸ್ಥಳಾವಕಾಶ ಇತ್ಯಾದಿಯಾಗಿ ನಾಡಿಗರಿಗೆ ತೊಂದರೆಯಾಗುತ್ತದೇನೋ, ಗೊತ್ತಿಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಂದು ಸಾರಿ ದೊಮ್ಮಲೂರಿನಲ್ಲಿ ಸಮ್ಮಿಳನವಾದಾಗ ಆ ಜಾಗದ ವಿಳಾಸ ಹುಡುಕಲು ಆಗದೆ ಹಿಂದಿರುಗಬೇಕಾಯಿತು. ಈ ಸರಿ ಹಾಗಾಗದಿರಬೇಕಾದರೆ ಹೆಚ್ಚಿನ ಮಾಹಿತಿಯನ್ನು ದಯವಿಟ್ಟು ಕೊಡಿ. (ಗೂಗಲ್ ನಕ್ಷೆಯಲ್ಲಿ ಭಾರತ್‍ ನಗರವು ಸರಿಯಾಗಿ ಸಿಗಲಿಲ್ಲ.)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಯರೆ, ನಿಮಗೆ ಗೊ೦ದಲವಾದರೆ ನನ್ನ ಚರ ದೂರವಾಣಿ(೯೬೨೦೯೩೬೫೭೬)ಗೆ ಕರೆ ಮಾಡಿ! ನೀವು ಸೀದಾ ಸು೦ಕದಕಟ್ಟೆಗೆ ಬ೦ದರೆ ಆಯಿತು, ಸ್ಥಳ ತಲುಪಿದ೦ತೆಯೇ!! :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.