hemashree ರವರ ಬ್ಲಾಗ್

ಪತ ಪತ ಗುಡ್ಡೆ ಮತ್ತು ಅದರ ಜತೆಗೆ ನೆನಪಾದದ್ದು.

ಹೆಸರು ಕೇಳ್ದಾಗ್ಲೇ ನಂಗೆ ನಗು ಬರುತ್ತೆ. ಯಾಕಂದ್ರೆ ಅದ್ರ ಹಿಂದಿರೋ ಕತೆ ನಂಗೆ ಗೊತ್ತಲ್ವಾ. ನಿಮ್ಗೂ ಹೇಳ್ತೀನಿ.

ನಾನು ಒಂದು-ಎರಡು ವರ್ಷದ ಚಿಕ್ಕ - ಪುಟ್ಟ - ತುಂಟ ಹುಡುಗಿಯಾಗಿದ್ದಾಗಿನ ಕತೆ. ನಂಗೆ ಇದು ನಿಜಾನಾ ಅಂತ ನೆನಪಿಲ್ಲ. ಆದ್ರೆ ಅಮ್ಮ ಕೆಲವೊಮ್ಮೆ ನೆನಪಿಸ್ತಾರೆ.

1979-80ರ ಹೊತ್ತಿಗೆ ನಾವಿದ್ದದ್ದು ಮಂಗಳೂರಿನ ಕೊಟ್ಟಾರ ಕ್ರಾಸ್ ಬಳಿ. ಅದು ನನ್ನ ದೊಡ್ಡಮ್ಮನ ಮನೆಗೂ ಹತ್ರ. ದೊಡ್ಡಮ್ಮ ಅಂದ್ರೆ ನನ್ನ ಅಜ್ಜಿ. ಯಾಕೆ ಅಜ್ಜಿಯನ್ನು ದೊಡ್ಡಮ್ಮ ಅಂತ ಕರೀತಿದ್ನೋ ಗೊತ್ತಿಲ್ಲ. ಬಹುಶಃ, ಆಕೆ ಆಗ ಅಜ್ಜಿ ತರಹ ಕಾಣಿಸ್ತಾ ಇರ್ಲಿಲ್ವೇನೋ. ದೊಡ್ಡಮ್ಮನ ಮನೆ ಕತೆಗಳೂ ಚೆನ್ನಾಗಿವೆ. ಇನ್ನೊಂದ್ಸಲ ಹೇಳ್ತೀನಿ. ಈಗ ಪತ ಪತ ಗುಡ್ಡೆ ಹತ್ತೋಣ.

ನಮ್ಮ ಹಳೇ ಮನೆ ಇದ್ದ ಜಾಗದಿಂದ ಸ್ವಲ್ಪವೇ ದೂರದಲ್ಲಿ ಈ ಪತ ಪತ ಗುಡ್ಡೆ ಇದ್ದದ್ದು. ಗುಡ್ಡ ಅಂದ್ರೆ ಅಂಥ ದೊಡ್ಡ ಗುಡ್ಡೆ ಏನಲ್ಲ. ಈಗ ಏನಾದ್ರೂ ಈ ಗುಡ್ಡೆ ನೋಡಿದ್ರೆ.... ಇದಾ.... ಗುಡ್ಡೆ ಅಂತ ಅನ್ನಿಸುತ್ತೆ. 25-30 ವರ್ಷಗಳ ಹಿಂದೆ ಅಲ್ಲಿ ಮನೇನೂ ಇರ್ಲಿಲ್ಲ. ರಸ್ತೆ ಕೂಡಾ ಇರ್ಲಿಲ್ಲ. ಖಾಲಿ ಜಾಗ ಇತ್ತು. ಈಗ ರಾಷ್ಟ್ರೀಯ ಹೆದ್ದಾರಿ 17 ಪಕ್ಕದಲ್ಲೇ ಇದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

- ಚೌಕಟ್ಟು -

ನನ್ನ ಕವಿತೆಗಳು ಅಡಿಗೆ ಮನೆಯಿಂದ ಹೊರ ಬರುವುದೇ ಇಲ್ಲ.

ಪಾತ್ರೆ ತೊಳೆಯುವಾಗ ಅಕ್ಕಿ ಬೇಯಿಸುವಾಗ
ಚಪಾತಿ ಲಟ್ಟಿಸುವಾಗ ಹಪ್ಪಳ ಕಾಯಿಸುವಾಗ
ಪದಗಳು ಜೋಡುತ್ತವೆ.

ತೊಳೆದ ಪಾತ್ರೆಯಲ್ಲಿ
ಬೇಯಿಸಿದ ಅನ್ನದಲ್ಲಿ
ಕಾಯ್ದ ಹಪ್ಪಳದಲ್ಲಿ
ನನ್ನ ಕವಿತೆಗಳು ಹುಟ್ಟಿಕೊಳ್ಳುತ್ತವೆ.
ಚಪ್ಪರಿಸಿದವರ ಬಾಯಿಗಳಲ್ಲಿ ನಲಿಯುತ್ತವೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.

ಬೀಸಣಿಗೆಯ ನೆಪದಲ್ಲಿ ...

ಮೊನ್ನೆ ಒಂದು ದಿನ ವಿಪರೀತ ಸೆಖೆ ಇಲ್ಲಿ. ಬೇಸಿಗೆ ಶುರುವಾಗಿದೆ. ಪ್ರತಿ ದಿನ 10 - 12 ಡಿಗ್ರಿ ಇದ್ದ ವಾತಾವರಣ ... ಈಗ ಕೆಲವೊಮ್ಮೆ 20 ಡಿಗ್ರಿ ಆದಾಗಲೂ ಸೆಖೆ ತಡೆಯಲಾಗುವುದಿಲ್ಲ. ಅಮ್ಮ ಕೊಟ್ಟ ಲಾವಂಚದ ಬೀಸಣಿಗೆಯಿಂದ ಗಾಳಿ ಹಾಕುತ್ತಾ ಕುಳಿತವಳಿಗೆ ಜತಿನ್ ದಾಸ್ ರ ನೆನಪಾಯಿತು .

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಅದೇ ಚಂದ್ರನಡಿ ಭಾವನೆಗಳ ಭಿತ್ತಿ ...

ಇತ್ತೀಚೆಗೆ ನಾನು ನೋಡಿದ ಸ್ಪಾನಿಷ್ ಚಿತ್ರ.

LA MISMA LUNA ( Under the same moon )
- Director: Patricia Riggen .

ಒಬ್ಬ ಪುಟ್ಟ ಹುಡುಗನ ದಿಟ್ಟ ಪಯಣದ ಕತೆ.
ಒಂಭತ್ತು ವರ್ಷದ ಕಾರ್ಲಿತೋಸ್, ಅಮೇರಿಕಾದಲ್ಲಿರುವ ತನ್ನ ತಾಯಿಯನ್ನು ಸೇರಲು ಮೆಕ್ಸಿಕೋದಿಂದ ಅಮೇರಿಕಾಗೆ ಪ್ರಯಾಣ ಬೆಳೆಸುತ್ತಾನೆ. ಆತನ ತಾಯಿ ರೊಸಾರಿಯೊ ಮಗನ ಉತ್ತಮ ಭವಿಷ್ಯಕ್ಕಾಗಿ ನಾಲ್ಕು ವರ್ಷಗಳಿಂದ ಅನಧಿಕೃತವಾಗಿ ಅಮೇರಿಕಾದಲ್ಲಿ ದುಡಿಯುತ್ತಿರುತ್ತಾಳೆ. ಅನಿವಾರ್ಯ ಕಾರಣಗಳಿಂದಾಗಿ ತಾಯಿ, ಮಗ ಪರಸ್ಪರರನ್ನು ಭೇಟಿಯಾಗಲು ನಿರ್ಧರಿಸುತ್ತಾರೆ.
But, It becomes an emotional journey and a love story between a mother and a son.

ರೊಸಾರಿಯೊಗೆ , ಮಗನನ್ನೂ ಸಹ ಅಮೇರಿಕಾಗೆ ಕರೆದುಕೊಂಡು ಬರುವ ಯೋಚನೆ. ಆದರೆ ತಾನು ಅಮೇರಿಕಾಗೆ ಬಂದಿರುವುದೇ ಕಾನೂನು ಬಾಹಿರ. ಯಾವುದೇ documentಗಳೂ ಆಕೆಯಲ್ಲಿಲ್ಲ. ಇನ್ನು ಮಗನನ್ನು ಕರಕೊಂಡು ಬರುವುದಾದರೂ ಹೇಗೆ ಎಂಬ ಚಿಂತೆ ಆಕೆಯನ್ನು ಕಾಡುತ್ತಿರುತ್ತದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಕ್ಷಣ - ಬದುಕು

ಬದುಕು ಅಂದರೆ ಇಷ್ಟೇ ... ಅಂತ ಅನ್ನಿಸುವಾಗಲೂ ...

ವಾಹ್ ...
ಪ್ರತಿ ಕ್ಷಣದ ಸಂವಾದ ... ಸಂವಹನ ... ಮಾತು ... ಮೌನ !
ನಮ್ಮ ನಮ್ಮ ಜತೆಗೇ... ... ಮತ್ತೊಂದಷ್ಟು ... ಅಲ್ಲಿ ಇಲ್ಲಿ ...

ಎಷ್ಟು ಹತ್ತಿರ ... ಅಷ್ಟು ದೂರ .
ಮತ್ತೆ ಕೆಲವೊಮ್ಮೆ ... ಅಷ್ಟು ದೂರ ಅನ್ನಿಸಿದ್ದೂ ಇಲ್ಲೇ ಎದೆಬಡಿತ ಸನಿಹ .

ದಿನದ ಧಾವಂತದಲ್ಲಿ ... ಕ್ಷಣದ ಗಣನೆ ...
ಸಾಧ್ಯವೇ !

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

Pages

Subscribe to RSS - hemashree ರವರ ಬ್ಲಾಗ್