ಎಲ್ಲೆಲ್ಲಿ ನೋಡಲೂ...

0

ಬಸವನಗುಡೀಲಿ ಒಮ್ಮೆ ಮೆಣಸಿನಕಾಯಿ ಬಜ್ಜಿ ಜಡಿದು ಜೊತೆಗೆ ಕೊಟ್ಟ ಪೇಪರ್ರು, ಕವರ್ರು ಎಸೆಯೋಕೆ ಬುಟ್ಟಿ ಹುಡುಕುತ್ತಿದ್ದೆವು. "ಕಸದ ಬುಟ್ಟಿ ಎಲ್ಲಿದೆ?" ಎಂದು ಎದುರಿಗಿದ್ದ ಅಂಗಡಿಯವನಿಗೆ ಕೇಳಿದರೆ ಕಿಸಕ್ಕೆಂದು ನಕ್ಕುಬಿಟ್ಟ. "ಏನ್ ಅಮೇರಿಕಾದಿಂದ ಬಂದ್ರಾ? ಅಲ್ಲೇ ಹಾಕಿ ಮೂಲೇಲಿ!".

ರಸ್ತೆ ಬದೀಲಿ, ಖಾಲಿ ಸೈಟುಗಳಲ್ಲಿ ಪಾರ್ಥೇನಿಯಮ್ ಗಿಡ ಬಿಟ್ಟರೆ ರಾರಾಜಿಸೋದು ಪ್ಲಾಸ್ಟಿಕ್ ಕವರ್ರುಗಳೇ. ಮುಂದೊಂದು ಪೀಳಿಗೆಯಲ್ಲಿ ಆರ್ಕಿಯಾಲಜಿ ಎಂದುಕೊಂಡು ಬೆಂಗಳೂರನ್ನು ಅಗೆದರೆ ಅದೆಷ್ಟು ಸವಾಲುಗಳು ಎದುರಾಗಬಹುದೋ! ಅವರುಗಳಿಗೆ ಇಷ್ಟೊಂದು ಕವರ್ರುಗಳು ಸಿಕ್ಕು ಇದರಿಂದ ಏನರ್ಥ ಮಾಡಿಕೊಳ್ಳಬೇಕೆಂದು ತೋಚದ ಪರಮ ಸಮಸ್ಯೆಯಾಗಿಬಿಡಬಹುದು. ಅಥವ ಪ್ಲಾಸ್ಟಿಕ್ ಕವರ್ರು ಎಂಬುದೊಂದಿತ್ತು ಎಂದು ಆ ಪೀಳಿಗೆಯವರಿಗೆ ಗೊತ್ತಾದರೆ ಅವರು ಹಿಗ್ಗಾಮುಗ್ಗಿ ಯಾರನ್ನೂ ಬಿಡದೇ ಈ ಪೀಳಿಗೆಯ ಎಲ್ಲರನ್ನೂ ಬೈದುಕೊಳ್ಳುವಂತಾಗಬಹುದು.

ಹಿಂದಿದ್ದ ಅಪಾರ್ಟ್ಮೆಂಟಿನ ಸೆಕ್ಯೂರಿಟಿ "ಕಳ್ ನನ್ ಮಕ್ಳು, ಬಿ ಬಿ ಎಂ ಪಿ ಬಂದು ಇವರ ಕಸಾನ ಹಾಕ್ಕೊಂಡ್ ಓಗ್ದೇ ಇದ್ರೆ ಆಯ್ತು ಸಾಮಿ, ಓದು ಬರಹ ಬಂದ್ರೂ ಉಪ್ಯೋಗಿಲ್ಲಾ ಇಲ್ಲೇ ವಟ್ಕತಾರೆ" ಎಂದು 'ಓದು ಬರಹ ಬಲ್ಲ' ಎಲ್ಲರನ್ನೂ ಸೇರಿಸಿ ಬಯ್ಯುತ್ತಿದ್ದುದು ನೆನಪಾಗುತ್ತದೆ.

ಕೆಲವು ದಿನಗಳ ಹಿಂದೆ ಅಮೇರಿಕೆಯಿಂದ ವಾಪಸ್ ಬೆಂಗಳೂರಿಗೆ ಬಂದ ಸ್ನೇಹಿತನೊಬ್ಬನೊಂದಿಗೆ ಮಾತುಕತೆ ಹೀಗೆ ನಡೆದಿತ್ತು:
"ನನಗೆ ಬೆಂಗಳೂರೇ ಇಷ್ಟ. ಇಲ್ಲಿನ ಊಟ ತಿಂಡಿ, ಇಲ್ಲಿನವರ attitude... ಇಲ್ಲೇ ಚೆಂದ. ಬೆಂಗಳೂರಲ್ಲಿ ಎಲ್ಲಿ ನೋಡಿದರೂ ಏನು ಕಾಣಸಿಗತ್ತೆ ಗೊತ್ತ? ..."
(ನಾನು) "... ಪ್ಲಾಸ್ಟಿಕ್ ಕವರ್ರು?"
"ಲೇ ಸೀರಿಯಸ್ಸಾಗಿ ಕೇಳೋ... liveliness in people!"

ಸೀರಿಯಸ್ ಆಗಿ ಅಲ್ಲಿಂದ ಮಾತು ಎತ್ತೆತ್ತಲೋ ಹೋಗಿತ್ತು. ಮಾತುಕತೆಗೆ ಓಗೊಡುವುದಲ್ಲದೇ ತಮ್ಮದೂ ಎರಡು ಮಾತು ಸೇರಿಸುವ ಇಲ್ಲಿಯ ಜನ, ಕಳೆದು ಹೋದಾಗ route ತಿಳಿಸುವ ಆಟೋ ಡ್ರೈವರ್ರುಗಳು - ಹೀಗೆ ಬೆಂಗಳೂರಿನ ವಿಷಯಗಳೇ ಹಲವನ್ನು ಮಾತನಾಡುತ್ತ ಪ್ಲಾಸ್ಟಿಕ್ ಕವರ್ ಬಗ್ಗೆ ಮರೆತೆವು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

"ಲೇ ಸೀರಿಯಸ್ಸಾಗಿ ಕೇಳೋ... liveliness in people!"

ನಾನು ಮಯ್ಸೂರಿನವನಾದರೂ ಬೆಂಗಳೂರೇ ನಂಗು ಇಶ್ಟ. ನಿಮ್ಮ ಗೆಳೆಯ ಹೇಳಿದ್ದು ಸರಿಯಾಗಿದೆ.

ಬಸವನಗುಡಿ ಇನ್ನು ಇಶ್ಟ :)

--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಲ್ಲೇ ಚೆಂದ. ಬೆಂಗಳೂರಲ್ಲಿ ಎಲ್ಲಿ ನೋಡಿದರೂ ಏನು ಕಾಣಸಿಗತ್ತೆ ಗೊತ್ತ? ..."
(ನಾನು) "... ಪ್ಲಾಸ್ಟಿಕ್ ಕವರ್ರು?"
"ಲೇ ಸೀರಿಯಸ್ಸಾಗಿ ಕೇಳೋ...

ನಾನು ೧೯೮೨ ರವರೆಗು ಬೆಂಗಳುರೀನವನಾಗಿದ್ದೆ! ೨೦೦೭ ಮಕ್ಕಳ ಬೆಸಿಗೆ ರಜದಲ್ಲಿ (ಜುನ್-ಜುಲ್ಯೆ) ಬೆಂಗಳುರಿನಲ್ಲಿ ನಾವೆಲ್ಲರು ನನ್ನ ಬಾವಮ್ಯೆದನ ಮನೆಯಲ್ಲಿ ಠಿಕಾಣಿ! ಬೆಳಿಗ್ಗೆಯಲ್ಲ ಜಯನಗರ ಕಾಂಪ್ಲೆಕ್ಸ್,ಠಿ ಬ್ಲಾಕ್ (ನಮ್ಮ ೧೯೭೨-೮೨ ರವರೆಗು ಹೆಡ್ಡ್ ಆಫ಼ೀಸು) ಸುತ್ತಾಡುವಾಗೆಲ್ಲ ಆಬ್ಬ ಏಷ್ಟು ಗಲೀಜಾಗಿ ಕಾಣುತೀದಯಲ್ಲ ಎಂದು ವ್ಯಥೆ ಪಟ್ಟೆ. ಆದರೆ ಸಂಜೆ ಹಳೆ ಸ್ನೆಹಿತರ ಬೇಟಿಯಲ್ಲಿ ಎಲ್ಲ ಮರೆತು ಬೆಂಗಳುರು ಬಿಟ್ಟರೆ ಬೇರೆ ನಗರವಿಲ್ಲ ಎಂದು ಅನ್ನಿಸುತ್ತಿತ್ತು. ಅದರಲ್ಲು ನಾವೆ ಕಾಂಪ್ಲೆಕ್ಸನ್ನು ಇನಾಗುರೇಟ್ ಮಾಡಿದ್ದು (ಕಾಂಪ್ಲೆಕ್ಸ್ ಪ್ರದಕ್ಶಿಣೇ ಶುರು ಮಾಡಿದ್ದು - ಕೆಫ಼ೆ ಡಿ ಎರಲ್ಯನ್ಸ್ ಮತ್ತು ಬಸವನಗುಡಿಯ ಹೋಟೆಲ್ಲ್ ಭಾರತಿಯಲ್ಲಿ ೧ ಬ್ಯೆ ಟು ಈಂದ ೮ ಬ್ಯೆ ೧೭ಕ್ಕೆ ಮುಕ್ತಾಯ - ಇಗ ಅ ಎರಡು ಹೋಟೆಲ್ಲ್ ಇಲ್ಲ) ಮತ್ತು ಬೇರೆ ಬುರುಡೆ ಅಚಿವಮೆಂಟ್ಸಗಳನ್ನು ಮಾತಡುವಾಗ ಗಲೀಜ್ ಮರೇತು ಕಾಫ಼ೀ ಅಥವ ಬೀಯರನ್ನು ಸವಿಯುವ ಉಲ್ಲಾಸ ಬೇರೇ ಎಲ್ಲು ಸಿಗುವುದಿಲ್ಲ! ವಿಶ್ವೆಶ್ವರಪುರದಲ್ಲು ತರಹವಾರಿ ತಿಂಡಿಗಳು (ಎಲ್ಲೇಲ್ಲು ಗಲೀಜೇ), ಆಡಿಗಾಸ್, ಬನಶಂಕರೀ ೨ನೇ ಸ್ಟೆಜ್ ಇಡ್ಲಿ,ಜಾಂಗಿರ್, ದರ್ಮರಾಯ ದೇವಸ್ತಾನ ಬಳಿಯ ಚೆಟ್ನಿಪುಡಿ ದೋಸೆ, ಮ್ಯೆಸುರಿನ ಜಿಟಿಆರ್ ದೋಸೆ,ಕೋಡಗಿನ ಅಂದ (ಮಳೆಗಾಲದಲ್ಲು) ಚೆಂದ! ಆದರೇ ಹೋರನಾಡಿನ ಅನ್ನಪೂರ್ಣೆಶ್ವರಿ ದೇವಸ್ತಾನದ ಬಳಿ ಇಗ ಹೋಟೆಲ್ಲುಗಳು, ಲಾಡ್ಜ್ಗಳು, ಪ್ಲಾಸ್ಟಿಕ್ ನೋಡಿ ಅಳು ಬಂತು. ಇಗ ಅದಕ್ಕೆ ಚಾರ್ಮೆ ಇಲ್ಲ. ಬಹಳ ದುಃಖ ಇಗಲು ಬರುತ್ತೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಾರ್ಕೆಟ್ ಗೆ ಹೋಗುವಾಗ ಕೈಚೀಲ (ಬ್ಯಾಗ್) ಹಿಡಕೊಂಡು ಹೆಚ್ಚಿನವರು ಹೋಗುವುದಿಲ್ಲ. (ಚೀಲ ಹಿಡಕೊಂಡು ಹೋಗುವವರನ್ನು ಎಲ್ಲರೂ ವಿಚಿತ್ರವಾಗಿ ನೋಡುತ್ತಾರೆ.)ಬೇಕಾದ/ಬೇಡದ ವಸ್ತುಗಳನ್ನು ಬ್ಯಾಗಲ್ಲಿ ತುರುಕಿ ಮನೆಗೆ ಬಂದು ವಿಲೇವಾರಿ ಮಾಡಿದರಾಯಿತು.
ಪ್ಲಾಸ್ಟಿಕ್ ಕವರುಗಳನ್ನು ಕಸಕ್ಕೆ ಎಸೆಯುವಾಗಲೂ,ಅದನ್ನು ಸುರುಳಿ ಸುತ್ತಿ ೨-೩ ಗಂಟು ಹಾಕಿ ಎಸೆಯಬೇಕೆಂದು ಎಲ್ಲೋ ಓದಿದ ನೆನಪು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

[quote]ಕೆಲವು ದಿನಗಳ ಹಿಂದೆ ಅಮೇರಿಕೆಯಿಂದ ವಾಪಸ್ ಬೆಂಗಳೂರಿಗೆ ಬಂದ ಸ್ನೇಹಿತನೊಬ್ಬನೊಂದಿಗೆ ಮಾತುಕತೆ ಹೀಗೆ ನಡೆದಿತ್ತು:
"ನನಗೆ ಬೆಂಗಳೂರೇ ಇಷ್ಟ. ಇಲ್ಲಿನ ಊಟ ತಿಂಡಿ, ಇಲ್ಲಿನವರ attitude... ಇಲ್ಲೇ ಚೆಂದ. ಬೆಂಗಳೂರಲ್ಲಿ ಎಲ್ಲಿ ನೋಡಿದರೂ ಏನು ಕಾಣಸಿಗತ್ತೆ ಗೊತ್ತ? ..."
(ನಾನು) "... ಪ್ಲಾಸ್ಟಿಕ್ ಕವರ್ರು?"
"ಲೇ ಸೀರಿಯಸ್ಸಾಗಿ ಕೇಳೋ... liveliness in people![/quote]

ಲೈವ್ಲಿನೆಸ್ ಕಾಣಿಸತ್ತೋ ಬಿಡತ್ತೋ, ಪ್ಲಾಸ್ಟಿಕ್ ಚೀಲಗಳ ಜೊತೆ ಎಲ್ಲಿ ನೋಡಿದ್ರೂ ಜನ, ರಸ್ತೆಯಲ್ಲೂ ರಸ್ತೆಯ ಬದಿಗಳಲ್ಲೂ ಓಡುವ ವಾಹನ, ತಪ್ಪು ತಪ್ಪು ಕಂಗ್ಲೀಷ್ ಫಲಕಗಳು, ಕಾಲಿಡಕ್ಕಾಗದಿರುವಷ್ಟು ಗುಂಡಿ, ಗಲೀಜು, ಊರು ತುಂಬ ಹೋಟೆಲ್ಲುಗಳು, ಯಕ್ಕ ಮಕ್ಕ ತಿನ್ನೋ ಜನ ಇವಂತು ಕಾಣಿಸ್ತನೇ ಇರತ್ತೆ.

ಎಲ್ಲ ಪರಮಾತ್ಮಂಗೇ ಪ್ರಿಯ!

--

ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.