ಅಡುಗೆಯ ಸಂಭ್ರಮ

4

ಅಮ್ಮ ಅಪ್ಪ ತಿಂಗಳುಗಟ್ಟಲೆ ಟ್ರಿಪ್ ಎಂದುಕೊಂಡು ಹೋದರೆ ನಮಗೆಲ್ಲ ಊಟ ತಿಂಡಿ ಕಥೆ ಮುಗಿಯಿತು. ಹೊರಗೆ ತಿನ್ನುವಂತಿಲ್ಲ, ಮನೇಲಿ ಮಾಡಿಕೊಳ್ಳಲಾಗುವುದಿಲ್ಲ ಎಂಬ ಪರಿಸ್ಥಿತಿ. ಹೊರಗೆ ತಿಂದರೆ ಜ್ವರ ಗ್ಯಾರಂಟಿ, ಮನೇಲಿ ಅಡುಗೆ ಮಾಡುವಷ್ಟು ಸಮಯ ಇಲ್ಲ, ಜೊತೆಗೆ ಸೋಮಾರಿತನ ಎಂದೆಲ್ಲ (ಎಲ್ಲದಕ್ಕಿಂತ ಮಿಗಿಲಾಗಿ ಸರಿಯಾಗಿ ಅಡುಗೆ ಮಾಡೋಕೆ ಬರಲ್ಲ ಅನ್ನೋದು). ಆದರೆ ಈ ಬಾರಿ ಧೈರ್ಯ ಮಾಡಿ ಒಂದು ಗ್ಯಾಸ್ ಸ್ಟೌ ತಂದೇ ಬಿಟ್ಟೆ. ಅಣ್ಣನ ಮನೆಗೆ ಹೋಗಬೇಕಿಲ್ಲದೆ ನಾನೇ ಅಡುಗೆ ಮಾಡಿಕೊಳ್ಳಬಹುದೆಂದು ಸಂತಸದಿಂದ ಬೀಗಿದೆ. ಆದರೆ ಆ ಸ್ಟೌನಲ್ಲಿ ಮೊದಲ ಬಾರಿ ಅಡುಗೆ ಮಾಡಿ ಅದು ಏನೇನೋ ಆದಾಗ ಸಂಭ್ರಮ ಎಲ್ಲ ಕರಗಿ ಹೋಯ್ತು.

ಒಂದೆರಡು ದಿನಗಳಲ್ಲಿ ಮುಂಚಿನಂತೆ at least ತಿನ್ನಲು ಯೋಗ್ಯವಾದ ಅಡುಗೆ ಮಾಡುವಷ್ಟು progress ಸಾಧಿಸಿದೆ. ಕೆಲಸಗಳ ಬ್ಯಾಕ್ ಲಾಗ್ ಉಳಿದವು. ನಿತ್ಯ ಸುಮಾರು ಹೊತ್ತು ಅಡುಗೆ ಮಾಡೋಕೆ ಕಳೆಯೋ ಹಾಗಾಯ್ತು. ಸ್ವಲ್ಪ ದಿನಗಳಲ್ಲಿ ಅಡುಗೆ ಮಾಡುವ ಸ್ಪೀಡು ಉತ್ತಮವಾಯ್ತು. ಹಾಗೆಯೇ ತಿಂಡಿ ಅಮ್ಮ ಮಾಡುವಂತೆಯೇ ಮಾಡಲು ಪ್ರಯತ್ನಿಸಿದೆ. ಸಿಕ್ಕಾಪಟ್ಟೆ ಬೋರು ಹೊಡೆಸಿತು ಸರಿಯಾಗಿ ಬರದೆ. ಒಂದೊಂದು ಸಾರಿ ಮಾಡಿದ ಅಡುಗೆ ತಿನ್ನಲೂ ಬಾರದಂತಾಗಿ ಹೋಟೆಲಿಗೇ ಹೋಗಬೇಕಾಯ್ತು. ಆದರೂ ಛಲ ಬಿಡದ ತ್ರಿವಿಕ್ರಮನಂತೆ ಅಮ್ಮ ಮಾಡುವಂತೆಯೇ ಶಾವಿಗೆ ಉಪ್ಪಿಟು ಸುಮಾರು ೮ನೇ ಸಲ ಪ್ರಯತ್ನಿಸಿದೆ. ಜ್ಯಾಕ್ ಪಾಟ್! ಅಮ್ಮ ಮಾಡುವ ಹಾಗೆಯೇ ಬಂದಿತ್ತು! ಸಂಭ್ರಮ ಹೇಳತೀರದು!

ಇಷ್ಟು ದಿನ ಬರದದ್ದು ಈಗೇನು ಅಮ್ಮ ಮಾಡುವಂತೆಯೇ ರುಚಿಯಾಗಿ ಆದದ್ದು? ಕೆಳಗೆ ಅಣ್ಣನ ಮನೆಯಲ್ಲಿ ಅಮ್ಮ ಉಪ್ಪಿಟ್ಟಿಗೆಂದು ರೆಡಿ ಮಾಡಿ ಬಾಟಲಿಯಲ್ಲಿ ತುಂಬಿಟ್ಟಿದ್ದ ಪುಡಿಯೊಂದನ್ನು ತಂದು ಚಿಟುಕಿಸಿದ್ದು, ಅಷ್ಟೇ!

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಅಡುಗೆ ಮಾಡೋದು ನಿಜವಾಗ್ಲೂ ಅಷ್ಟು ಕಷ್ಟ ಇಲ್ಲ ಹರಿ!
ಇಂಗು ತೆಂಗು ಇದ್ರೆ ಮಂಗಮ್ಮಟ್ಟಾಳು ಅನ್ನೋ ಗಾದೆ ಇಲ್ವಾ?

ಒಂದು ಅಳತೆ ಉತ್ಸಾಹಕ್ಕೆ, ಒಂದು ಅಳತೆ ಪ್ರಯತ್ನವನ್ನು ಬೆರೆಸಿ; ಆಮೇಲೆ ರುಚಿ ಹೀಗೆ ಬರಬೇಕಾದರೆ, ಏನು ಮಾಡಿರಬಹುದು ಅನ್ನುವ ಕಲ್ಪನಾಶಕ್ತಿಯೊಂದಿಗೆ ಗೊಟಾಯಿಸಿ. ರುಚಿರುಚಿ ಅಡಿಗೆ ತಯಾರ್!

-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಲ್ಪನಾ ಶಕ್ತಿಗೆ ಗೊಟಾಯಿಸಿದರೆ ಮುಗೀತು, ಮನೆಯಲ್ಲಿರೋ ಅಡುಗೆ ಸಾಮಾನೆಲ್ಲ ಮಾಯ - ಇರೋ ಬರೋ ಪಾತ್ರೆಗಳೆಲ್ಲ ಸಿಂಕಿಗೆ!
--
ನನ್ನ ಬ್ಲಾಗ್:
[:http://www.sampada.net/blog/hpn|ಪರಿವೇಶಣ] | [:http://www.hpnadig.net/blog|PariveshaNa]

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನೊಮ್ಮೆ ಚಪಾತಿ ಮಾಡಲು ಹೋದಾಗ ಏನು ಮಾಡಿದರು ಅದನ್ನು ಗುಂಡಗೆ ಲಟ್ಟಿಸಲು ಆಗದೆ ನಾನಾ ರೂಪ-ಆಕಾರ ತಾಳುತ್ತಿತ್ತು. ಚಪಾತಿ ಗುಂಡಗಿರಬೇಕು ಅನ್ನೋದೆ ಒಂದು ಭ್ರಮೆ, ಅದರ ರುಚಿ ಮಾತ್ರ ವಾಸ್ತವ ಅಂತ ಅಂದುಕೊಂಡೆ. ಆದರೆ, ಕೊನೆಗೆ ನಾನು ಮಾಡಿದ ಚಪಾತಿಯ ರುಚಿ ನಾನು ಅದುವರೆಗೆ ತಿಂದ ಚಪಾತಿಯ ರುಚಿಯಂತಿರದೆ, ಚಪಾತಿಯ ರುಚಿ ಸಹಿತ ಮಿಥ್ಯೆ ಅಂತ ತೀರ್ಮಾನಕ್ಕೆ ಬರಬೇಕಾಯಿತು!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು, ಭೂಗೋಳ ಮರೆತಿದ್ದೆವು ಎಂದುಕೊಂಡವರು ಚಪಾತಿ ಮಾಡಿ ನೋಡಬೇಕು! :-)

ಸರಸರನೆ ಎಲ್ಲ ದೇಶಗಳ ನಕ್ಷೆಗಳೂ ತಂತಾನೆ ಪ್ರತ್ಯಕ್ಷವಾಗಿಬಿಡುತ್ತವೆ!
--
ನನ್ನ ಬ್ಲಾಗ್:
[:http://www.sampada.net/blog/hpn|ಪರಿವೇಶಣ] | [:http://www.hpnadig.net/blog|PariveshaNa]

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನು ಚಪಾತಿ ಲಟ್ಟಿಸುವಾಗೆಲ್ಲಾ ಸಿಕ್ಕಪಟ್ಟೆ consistant. ಯಾವಾಗ್ಲೂ ಶ್ರೀಲಂಕಾ ಮ್ಯಾಪೆ ಆಗೋದು ;)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಾಡ್ತಾ ಹಾಡ್ತಾ ರಾಗ ಅನ್ನೋಹಂಗೆ ಅಡುಗೆ ಮಾಡಿ ಮಾಡೀನೇ ಕಲೀಬೇಕು. ಥಿಯರಿ ಇದ್ರೆ ಸಾಕಾಗಲ್ಲ :)

ಹಂಸಾನಂದಿ ಹೇಳಿದಂತೆ ನಿಧಾನವಾಗಿ ಸ್ವಲ್ಪ ಸ್ವಲ್ಪ ಕಲ್ಪನೆ ಉಪಯೋಗಿಸು ( ಕಲ್ಪನೆ ಅನ್ನೋದಕ್ಕಿಂತ ಕಾಮನ್ ಸೆನ್ಸ್ ಅನ್ನಬಹುದು). ಸರಿಯಾಗಿ ಅಳತೆ ಮಾಡಿ ಹಾಕಿದರೆ ರುಚಿ ಯಾಕೋ ಬರೋಲ್ಲ!(ನನ್ನ ಅನುಭವ)

ಸ್ವಲ್ಪ ದಿನ ಆದಮೇಲೆ ನಾವು ಒಂದು ಹತ್ತು ಜನಕ್ಕೆ ಅಡುಗೆ ಮಾಡಿ ಹಾಕು. ಉಂಡು ಹರಸಿ ಹೋಗ್ತೀವಿ. :D

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮೆಲ್ಲರ ಅಡುಗೆಯಲ್ಲಿನ ಆಸಕ್ತಿ ನೋಡಿ ಸಂತೋಷವಾಯಿತು.
ಅಡುಗೆಯಲ್ಲಿ ಅತೀ ಸುಲಭ 'ಸೊಪ್ಪು ಸಾರು' ಮಾಡುವುದು. ಸೊಪ್ಪು ಕ್ಲೀನ್ ಮಾಡುವುದು ಒಂದೇ ಕಷ್ಟದ ಕೆಲಸ.
ಈವಾಗ ನಿಮಗೆ ಸುಲಭದಲ್ಲಿ ಸೋಪು ಸಾರು ಮಾಡುವ ವಿಧಾನ ತಿಳಿಸುವೆನು-

ಪುದಿನ, ಅರಿಶಿನ, ಲಿಂಬೆಯುಕ್ತ ಸೋಪು ತನ್ನಿ,

ಚಿಕ್ಕದಾಗಿ ಕತ್ತರಿಸಿ ಬಿಸಿನೀರಲ್ಲಿ ಕುದಿಸಿ,

ಘಮ್ಮನೆ ಸೋಪು ಪರಿಮಳ ಬಂದಾಗ ಇಳಿಸಿ,

ಒಗ್ಗರಣೆ ಹಾಕಿ, ಸೋಪು ಸಾರು ರೆಡಿ.

-ಊಟಕ್ಕೆ ಮಾತ್ರ ನನ್ನನ್ನು ಕರೀಬೇಡಿ. ಶ್ರೀನಿಧಿ .. ಓ.ಕೆ :)

-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇನ್ನೊಂದು ಗುಟ್ತಿನ ವಿಷಯ - ಮದುವೆಯಾಗಲಿರುವ ಗಂಡುಗಳಿಗೆ ಮಾತ್ರ-
ಮದುವೆಯಾದಾಗ, 'ನನಗೆ ಅಡುಗೆ ಬರುತ್ತದೆ..' ಎಂದು ತಪ್ಪಿ ಸಹ ಹೆಂಡತಿಯೆದುರು ಕೊಚ್ಚಿಕೊಳ್ಳಬೇಡಿ.

ಹೆಂಡತಿ ಅಡುಗೆಯನ್ನೇ ಮೆಚ್ಚಿ. ತಾಯಿಯ ಅಡುಗೆಯೊಂದಿಗೆ ಯಾವತ್ತೂ ಹೋಲಿಸಲು ಹೋಗಬೇಡಿ.

ಹೋಟಲ್ಲಿಗೆ ಹೆಂಡತಿ ಜತೆ ಹೋದಾಗ ಅರ್ಧಕ್ಕರ್ಧ ಬಿಡಿ (ಚನ್ನಾಗಿದ್ದರೂ!). 'ಉಪವಾಸ ಇದ್ದರೂ ತೊಂದರೆಯಿಲ್ಲ, ಇನ್ನು ಆ ಹೋಟಲ್ಲಿಗೆ ಹೋಗಲ್ಲ.' ಎಂದು ಬೈಯಿರಿ.

ಸಮಯ/ರಜೆ ಇದ್ದಾಗ ಅಡುಗೆಗೆ ಸಹಾಯ ಮಾಡಲು ಹೋಗಿ. ಈರುಳ್ಳಿ ,ಟೊಮೆಟೊ ಕಟ್ ಮಾಡಲು ಅರ್ಧ ಘಂಟೆ ತೆಗೆದುಕೊಳ್ಳಿ- ಕಣ್ಣೀರ ಕೋಡಿ ಹರಿಸಿ.( ಅನುಮಾನ ಬರುವಷ್ಟು ಓವರ್ ಅಕ್ಟಿಂಗ್ ಮಾಡಬೇಡಿ)

ಊಟ ಮಾಡುವಾಗ ಟಿ.ವಿ. ಹಾಕಬೇಡಿ. ಆ ದಿನದ ಸಾರು/ಪಲ್ಯ/ಸಾಂಬಾರ್‌ನಲ್ಲಿ ಏನೋ ಒಂದು ವಿಶೇಷ ಹುಡುಕಿ ಹೊಗಳಿ.

ಸದ್ಯಕ್ಕೆ ಇಷ್ಟು ನೆನಪಿಟ್ಟುಕೊಳ್ಳಿ.
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವು ಹೇಳಿದ್ದು ಸಿಕ್ಕಪಟ್ಟೆ cliche ಆಗಲಿಲ್ಲವೇ?
ಅದರೂ ನಿಮ್ಮ ಅನುಭವದ ಮಾತುಗಳಾಗಿದ್ದರೆ ಯೋಚನೆ ಮಾಡಬೇಕಾದದ್ದೇ. :p

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗಣೇಶರ ಸಲಹಾಗಳು ತಮಾಶಿ ಅನ್ಸಿದ್ರೂ, ಭಾಳ ತೂಕದ್ದವ.., ಸಲಹಾ ಕೊಟ್ಟಿದ್ದಕ್ಕ ಭಾಳ ಥಾಂಕ್ಸ್ ರೀಪ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.