ಕನ್ನಡಿಗರ ಅತಿದೊಡ್ಡ ಸಮಸ್ಯೆ

3

ನ್ನಡಿಗರ ಅತಿದೊಡ್ಡ ಸಮಸ್ಯೆ ಎಂದರೆ ತಮ್ಮೊಳಗೇ ಮಾತನಾಡಿಕೊಳ್ಳಲು ಕಷ್ಟಪಡುವುದು. ಇ-ಕನ್ನಡಿಗರು ಈ ದೌರ್ಬಲ್ಯವನ್ನು ಮೀರಿದ್ದಾರೆ ಎಂಬುದು ನನ್ನ ನಂಬಿಕೆಯಾಗಿತ್ತು. ಈಗ ಅವರನ್ನೂ ಸಾಮಾನ್ಯ ಕನ್ನಡಿಗರ ರೋಗ ಬಾಧಿಸುತ್ತಿದೆ. ಪತ್ರಿಕೆಗಳಲ್ಲಿ ಓದುಗರ ಕಾಲಂ ತುಂಬಿಸಲು ಉಪ ಸಂಪಾದಕರು ಪಡುವ ಪಾಡು ಅರಿತವರಿಗೆ ಕನ್ನಡಿಗರ ಪ್ರತಿಕ್ರಿಯಿಸುವ ಗುಣದ ಬಗ್ಗೆ ತಿಳಿದಿರುತ್ತದೆ.

ಸಂಪದದಲ್ಲಿ ಲೇಖನ ಬರೆಯುವವರು ಮತ್ತು ಪ್ರತಿಕ್ರಿಯಿಸುವವರನ್ನು ನೋಡಿದರೇ ಇದು ಅರ್ಥವಾಗುತ್ತದೆ. ಈ ಎಲ್ಲರ ಹೆಸರುಗಳನ್ನೂ ಪಟ್ಟಿ ಮಾಡಿದರೆ ಇಪ್ಪತ್ತು ಮೀರುವುದಿಲ್ಲ ಎನಿಸುತ್ತದೆ. ಆದರೆ ಸಂಪದದ ಸದಸ್ಯರ ಸಂಖ್ಯೆ ಇದರ ಹತ್ತು ಪಟ್ಟಿಗೂ ಹೆಚ್ಚಿದೆಯಲ್ಲಾ?

ಪ್ರತೀ ಬರೆಹಗಾರನಲ್ಲೊಬ್ಬ ಓದುಗ, ಪ್ರತೀ ಓದುಗನಲ್ಲೊಬ್ಬ ಬರೆಹಗಾರನಿರುತ್ತಾನೆ. ಬರೆಹಗಾರನೊಳಗಿರುವ ಓದುಗ ಕ್ರಿಯಾಶೀಲನಾಗಿದ್ದಾನೆ. ಆದರೆ ಓದುಗನ ಒಳಗಿರುವ ಬರೆಹಗಾರ ಮಾತ್ರ ಚಿಪ್ಪಿನಿಂದ ಹೊರಬರಲು ಒಪ್ಪುತ್ತಿಲ್ಲವೇಕೆ?

ನಾನು ಕಳೆದ ಆರೇಳು ವರ್ಷಗಳಿಂದ ಬರೆಯುವ ಮತ್ತು ಬರೆಯಿಸುವ ವೃತ್ತಿಯಲ್ಲಿ ಇರುವುದರಿಂದ ಕೆಲವು ಕಾರಣಗಳು ತಿಳಿದಿವೆ. ಅನೇಕ ವಿಷಯಗಳ ಅರಿವಿರುವವರು, ನಾವು ಓದುವ ಸಾಮಾನ್ಯ ಬರೆಹಗಳಲ್ಲಿ ಕಾಣುವದಕ್ಕಿಂತ ಎಷ್ಟೋ ಪಟ್ಟು ಉತ್ತಮ ಗುಣಮಟ್ಟದ ವಿಶ್ಲೇಷಣೆ ಮಾಡಬಲ್ಲವರೂ 'ಬರೆವಣಿಗೆ ನಮ್ಮಂಥವರಿಗಲ್ಲ' ಎಂದು ಕೊಂಡಿರುತ್ತಾರೆ. ಬರೆಯುವುದೆಂದರೆ ಮಿಂದು ಮಡಿಯುಟ್ಟು ಅದರ ತೇವಾಂಶ ಆರುವ ಮೊದಲು ಮುಗಿಸಬೇಕಾದ ಕ್ರಿಯೆಯೇನೂ ಅಲ್ಲ. ಮಾತಿನಲ್ಲಿ ಹೇಳುವುದನ್ನು ಅಕ್ಷರಗಳಲ್ಲಿ ಬರೆಯುವುದು ಎಂದು ಅವರಿಗೆ ಹೇಳಿದರೂ ಅರ್ಥವಾಗುವುದಿಲ್ಲ. ಆದರೆ ಒಮ್ಮೆ ಅವರು ಬರೆಯಲು ಆರಂಭಿಸಿದರೆ ಅದು ಓತ ಪ್ರೋತವಾಗಿ ಹರಿಯತೊಡಗುತ್ತದೆ.

ಸಂಪದದ ಓದುಗರಲ್ಲಿ ಅನೇಕರಿಗೆ ಪ್ರತಿಕ್ರಿಯಿಸುವ ಆಸೆ ಇದೆ. ಆದರೆ ಈ ಪ್ರತಿಕ್ರಿಯೆ ಹಾಸ್ಯಾಸ್ಪದವಾಗಿಬಿಡಬಹುದೇ? ಎಂಬಂಥ ಅರ್ಥಹೀನ ಭಯಗಳು ಅವರನ್ನು ಕಾಡುತ್ತಿರುವಂತಿದೆ. ಇನ್ನು ಕೆಲವರಿಗೆ ತಂತ್ರಜ್ಞಾನದ ತೊಂದರೆಗಳು ಕಾಡುತ್ತಿರಬಹುದು. ಈ ತೊಂದರೆಗಳಿಗೆಲ್ಲಾ ಪರಿಹಾರವಿದೆ. ಹಲವು ಸಾಮಾನ್ಯ ತೊಂದರೆಗಳಿಗೆ [:FAQ|ಸಂಪದ FAQ ] ಪರಿಹಾರಗಳನ್ನು ನೀಡುತ್ತದೆ. ತುಂಬಾ ಸಂಕೀರ್ಣವಾಗಿರುವವಕ್ಕೆ [:user/1|WEB MASTER] ಇದ್ದಾರೆ. ಸಂಪದದ ಸದಸ್ಯರಲ್ಲಿ ತಂತ್ರಜ್ಞಾನಿಗಳ ಸಂಖ್ಯೆಯೇನೂ ಸಣ್ಣದಲ್ಲ.

ಈ ಬಗೆಯ ಎಲ್ಲಾ ಸಂಪನ್ಮೂಲಗಳನ್ನು ಬಳಸಿಕೊಂಡು ನಾವು ಪ್ರತಿಕ್ರಿಯಿಸೋಣ. ಏನಂತೀರಿ?

ಇಸ್ಮಾಯ್ಲ್

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ismail avare neevu heeluvudhu noorakke nooru sathya.. baravanige annodhu ellarigu baruvudilla,.. nammali oodhuva janariddare.. aadre barevanigegaarr\aru kadime.. nooduvaru hechchu maaduvaru kadime.. nija heelabekendare naanu saha tumba odhuve aadare bareyuvudhu kadime.. nimma abhipraya .. maathu noodi naanu saha bareyuva chintane maadidini..

nimma

vasista www.funmessage.tk 9886491025

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗರ್..ರ್ರ್ ಕನ್ನಡದಲ್ಲಿ ಬರೆಯಿರಿ! > _ < [:fonthelp|ಸಹಾಯ ಪುಟ ಓದಿಕೊಳ್ಳಿ] -- "ಹೊಸ ಚಿಗುರು, ಹಳೆ ಬೇರು"
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕನ್ನಡಿಗರು ಎಂದು ನಿಮ್ಮ ಹಾಗೆ ಕನ್ನಡಕ್ಕಾಗಿ ಕೈಯನ್ನು ಎತ್ತುವರೋ , ಗರ್..ರ್ರ್ ಎನ್ನಲು ಕಲಿಯವರೋ ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನು ಬೆಂಗಳೂರಿನಲ್ಲಿ ಹುಟ್ಟು ಬೆಳೆದಿದ್ದು. ನಾನು ಇಲ್ಲಿ ಕಂಡಿರುವುದೇನೆಂದರೆ ಇಲ್ಲಿನ ಮಾತಿನಲ್ಲಿ ಕನ್ನಡಕ್ಕಿಂತ ಆಂಗ್ಲ ಭಾಷೆ ಉಪಯೋಗ ಹೆಚ್ಚು. ಇಲ್ಲಿನ ಹೆಚ್ಚುಪಟ್ಟಿನ ಶಾಲೆಗಳಲ್ಲಿ ಕನ್ನಡ ಭಾಷೆಗೆ ಮಾನ್ಯತೆ ನೀಡಲಾಗುವುದಿಲ್ಲ. ಆದರೆ ಅದಕ್ಕಿಂತ ಹೆಚ್ಚಿನ ಪರಿಣಾಮ t.v. ಮತ್ತು ಚಲನಚಿತ್ರಗಳಿಂದ ಅಂಥ ನನಗೆ ಅನ್ನಿಸುವುದು. 'ಡೆಡ್ಲಿ ಸೋಮ' ಎತ್ಯಾದಿ ಹೆಸರುಗಳನ್ನಿಟ್ಟು ನಮ್ಮ ಚಲನಚಿತ್ರದ ಉದ್ಯಮೆ ಕನ್ನಡ ಭಾಷೆಗೆ ಯೇನು ಉಪಕಾರ ಮಾಡ್ತಿಲ್ಲ‌! ತಂತ್ರಜ್ಞಾನದ ಸೌಲಭ್ಯ ಕೆಲವರಿಗೆ ಮಾತ್ರ ಸೀಮಿತವಾಗಿದ್ದರೆ ಯೇನು ಪ್ರಯೊಜನವಿಲ್ಲ.. ಯಾವಗ ಇದು ಸಾಮಾನ್ಯ ಜನಗಳಿಗೆ ತಲುಪುವುದೋ, ಆಗಲೇ ಇದರ ಫಲವನ್ನು ಸಂಪೂರ್ಣವಾಗಿ ಅನುಭವಿಸಬಹುದು ! ನಮ್ಮ ಕಡೆಯಿಂದಾಗುವುದು ಇಷ್ಟುಮಾತ್ರ - ಕನ್ನಡ ಬಳಸಿ, ಕನ್ನಡ ಉಳಿಸಿ ! ~ ನಾಗು. (ಯೆನಾದರು ತಪ್ಪಿದ್ದರೆ ತಿಳಿಸಿ)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನ ಅಭಿಪ್ರಾಯದಲ್ಲಿ ವಿ.ವಿ ಅವರ ಮಾತು ನಿಜ. ನಾನು ಕಂಡಂತೆ ಈ ಹಿಂಜರಿಕೆ ಎಲ್ಲಾ ಭಾಷೆಯಲ್ಲೂ ಇದ್ದಾರೆ. ಕೆಲವರಿಗೆ ತಾವು ಬರೆದದ್ದು ಅಪಹಾಸ್ಯಕ್ಕೆ ಗುರಿಯಾಗುತ್ತದೆ ಎಂಬ ಅಭಿಪ್ರಾಯ ಇದ್ದರೆ ಮತ್ತೆ ಕೆಲವರಿಗೆ ಸೋಂಬೇರಿತನ. ಆದರೆ ಬರಹ ಅಥವ ಬೇರೆ ಕೀಲಿಮಣೆ ಕಲಿಯಲು ಕಷ್ಟ ಎಂಬ ಮಾತು ಸರಿಯಲ್ಲ. ಸ್ವಲ್ಪ ಅಭ್ಯಾಸ ಬೇಕು ಅಷ್ಟೆ. ಇಂಗ್ಲೀಷ್ ಕೀಲಿಮಣೆ ಕಲಿಯುವ ಮೊದಲು ಕನ್ನಡ ಕೀಲಿಮಣೆ ಕಲಿತಿದ್ದರೆ ಇಂಗ್ಲಿಷ್ ಹೊಡಿಯೋದೂ ಕಷ್ಟ ಆಗುತ್ತಿತ್ತು.

ಈ ಹಿಂಜರಿಕೆ ಯಾವುದೇ ಹೊಸತನ ಮಾಡುವಾಗಲೂ ಇರುತ್ತದೆ. ಕೆಲವರು ಮುಂದೆ ನುಗ್ಗುತ್ತಾರೆ ಕೆಲವರು ಸುಮ್ಮನಿರುತ್ತಾರೆ ಅಷ್ಟೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಜಗತ್ತಿನಲ್ಲಿರುವ ಕೆಲವು ಪ್ರಮುಖ ಜಡವಸ್ತುಗಳಲ್ಲಿ "ಕನ್ನಡಿಗ" ಕೂಡ ಇದೆ! ಬೇಕಿದ್ದರೆ ಈ [http://www.vishvakan...|ಪರಿಷ್ಕೃತ ಆವರ್ತ ಕೋಷ್ಟಕ] (periodic table) ನೋಡಿ. ಸಿಗೋಣ, ಪವನಜ ----------- Think globally, Act locally
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಜಡ ವಸ್ತು ಅ೦ದರೆ ಏನು ? ಹೆಣ ಜಡ ವಸ್ತು ಆದರೆ ಚೈತನ್ಯ್ ಜಡವಲ್ಲಾ , ಹೊನ್ನು ಜಡ ವಸ್ತು ಆದರೆ Economy ಜಡ ಆಲ್ಲಾ, ನಾಲಗೆ ಜಡ ವಸ್ತು ಆದರೆ ಭಾಷ-ಶಬ್ದ ಧನಿ ಜಡವಲ್ಲಾ ಅದಕ್ಕೆ ಜೀವ ಭಾವ ವಿರುತ್ತದೆ. ಆದರೆ ಒ೦ದು ಜನಾ೦ಗದಲ್ಲಿ ಬದುಕೋ ಆಸೆ, ಬದುಕೋ ಕಲೆ ಮರೆತಾಗ ಈ ಸಮಾಜ ಜಡವಾಗಿ ಜಿಡ್ಡಾಗಿ -- ಅವನತಿಯನ್ನು ಹೊ೦ದುತ್ತದೆ. ಜನ ಯಾವುದೋ ಗುರು ನಮ್ಮ್ ಬಾಳಿಗೆ ಬದುಕೋ ಕಲೆ ಕಲಿಸುತ್ತಾನೆ ಅನ್ನೋ ನ೦ಬಿಕೆ. ಹೆಣ್ಣಕ್ಕೆ ಯಾರು ಬೈದರೂ, ಯಾರು ಹೊಗಳುದರು ಪ್ರತಿಕ್ರಿಯೆ ಇರುವುದಿಲ್ಲಾ. ಕನ್ನಡದ ಹೆಚ್ಹು ಮ೦ದಿ ಜಡತೆಯಲ್ಲಿಯೇ ಬದುಕುತ್ತಿದ್ದಾರೆ. ಹೆಣವಾಗಿ ಹುಟ್ಟಿ. ಹೆಣವಾಗಿ ಬಾಳೂ. ಹೆಣವಾಗಿ ಮಲಗು. ಪ್ರಶ್ನೆ ಈ ಜಡತೆಯ ನಿರ್ಣಾಮ ಹೆ೦ಗೆ ?? ಇದಕ್ಕೆ ಒ೦ದೇ ಉಪಾಯ -- ಒಳ್ಳೆ ಸಾಹಿತ್ಯ ರಚನೆ ಆಗಬೇಕು- ಇದು ಮನಸ್ಸಿನ ಜಡತೆಯನ್ನು ತೆಗೆಯುತ್ತದೆ ಒಳ್ಳೆ ಕಾವ್ಯ ನಾಲಿಗೆಗೆ ಬೀಳಬೇಕು - ಇದು ನಾಲಿಗೆಯ ಜಡತೆಯನ್ನು ತೆಗೆಯುತ್ತದೆ ಒಳ್ಳೆ ಸ೦ಗೀತ ನೄತ್ಯ ---- ಇದು ಕಾಲಿನ ಜಡತೆಯನ್ನು ತೆಗೆಯುತ್ತದೆ. ಈ ಹಾಡನ್ನು ನಾನು ಕೆಲಸ ಮಾಡ ಬೇಕಾದರೆ ಬರೆದೆ. ರಾಗವಿಲ್ಲದ ಗೀತೆ ರಾಗವಿಲ್ಲದ ಗೀತೆ. ಸಾರವಿಲ್ಲದ ಮಾತು. ಭಾವವಿಲ್ಲದ ಭಕ್ತಿ, ಎನ್ನ ಗಾಯನ, ಎನ್ನ ಚೇತನ. ಜೀವವಿಲ್ಲದ ದೇಹ. ಹೂವೇ ಇಲ್ಲದ ಗಿಡವು. ನೋವಾಗಿ ಕಾಡುವ ಮನವು, ಎನ್ನ ಯೌವನ, ಎನ್ನ ಮೈಮನ. ನೀರೆ ಇಲ್ಲದ ನದಿಯು. ಸೀರೆ ಇಲ್ಲದ ಹೆಣ್ಣು. ಬರೇ ಬೆವರಾಯ್ತು, ಹೆದರಿದ ಜೀವನ. ಬತ್ತಿ ಹೋದಾ ಶಕ್ತಿ. ಎತ್ತಲೋ ಮಾರಿದ ಯುಕ್ತಿ. ಸತ್ತ ಹೆಣವಾಯ್ತು, ಇಲ್ಲಿಲ್ಲಾ ಭಕ್ತಿ, ಇನ್ನಿಲ್ಲಾ ಮುಕ್ತಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪರಿಷ್ಕೃತ ಆವರ್ತ ಕೋಷ್ಟಕ ಆ ಕೊಂಡಿಯಲ್ಲಿ ಸಿಗುತ್ತಿಲ್ಲ. "page not found" ಎಂದು ಬರುತ್ತಿದೆ (404 error ಅಲ್ಲ)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

[quote=ಶ್ರೀನಿಧಿ]ಪರಿಷ್ಕೃತ ಆವರ್ತ ಕೋಷ್ಟಕ ಆ ಕೊಂಡಿಯಲ್ಲಿ ಸಿಗುತ್ತಿಲ್ಲ. "page not found" ಎಂದು ಬರುತ್ತಿದೆ (404 error ಅಲ್ಲ)[/quote]

ಕೆಲವೊಮ್ಮೆ ಜಡವಸ್ತುಗಳೂ (ಬಾಹ್ಯ ಶಕ್ತಿಯಿಂದ) ಚಲಿಸುತ್ತವೆ :-). ಅದು ಈಗ [http://vishvakannada.com/node/168|ಇಲ್ಲಿದೆ].

ಸಿಗೋಣ,
[http://vishvakannada.com/Blog|ಪವನಜ]

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

"ಹೊಸ ಜಡವಸ್ತುವಿನ ಪತ್ತೆ ಜಗತ್ತಿನ ಪ್ರಮುಖ ಜಡವಸ್ತುಗಳಲ್ಲಿ "ಕನ್ನಡಿಗ" ಕೂಡ ಇದೆ ಎಂದು ಇತ್ತೀಚೆಗೆ ನಡೆಸಿದ someಶೋಧನೆಗಳಿಂದ ಪತ್ತೆಹಚ್ಚಲಾಗಿದೆ. ವಿಜ್ಞಾನಿಗಳ ಪ್ರಕಾರ ಈ ಜಡವಸ್ತು ಬಹು ವರ್ಷಗಳಿಂದಲೇ ಇತ್ತು. ಆದರೆ ಇತ್ತೀಚೆಗಷ್ಟೆ ಅದರ ಅಸ್ತಿತ್ವ ತುಂಬ ಪ್ರಭಾವಶಾಲಿಯಾಗತೊಡಗಿದೆ. "

ನಿಜ, ಎಲ್ಲಕಾಲಕ್ಕೂ ಕನ್ನಡ/ ಕನ್ನಡನಾಡಿನ ಹಣೆಬರಹವೇ ಅದು ಅಗಿದೆ ,

೧. ಕನ್ನಡಿಗರು ಕನ್ನಡ ಇಂದಿನ ಉತ್ತರ ಕರ್ನಾಟಕದ ( ೫೦ ವರ್ಷದ ನಂತರವೂ ಮುಂಬೈ ಕರ್ನಾಟಕ ಹೆಸರು ಇನ್ನೂ ಮುಂದುವರೆದಿದೆ! ) ದಲ್ಲಿ ತಲೆ ತಗ್ಗಿಸಿ / ತಲೆಮರೆಸಿಕೊಂಡು ಅಂಧಕಾರದಲ್ಲಿ ಮುಳುಗಿದ್ದಾಗ ( southern maharashtra ಎಂದು ಕರೆಸಿಕೊಂಡು ಇದ್ದಾಗ )ಬ್ರಿಟಿಷರು ಈ ನೆಲದ ಭಾಷೆ ಕನ್ನಡ ಎಂದು ಗುರುತಿಸಬೇಕಾಯಿತು.

೨. ಕನ್ನಡ ಕೂಡ ಒಂದು ಪುರಾತನ ಭಾಷೆ ಎಂದು ಈಗ -ಶಾಸ್ತ್ರೀಯ ಭಾಷೆ ಸ್ಥಾನಮಾನ ಬೇಡಿಕೆ ಸಂದರ್ಭದಲ್ಲಿ - ಕಂಡು ಹಿಡಿಯುತ್ತಾ ಇದ್ದೇವೆ.

೩. ಕನ್ನಡಿಗರು ಮದ್ರ್‍ಆಸಿಗಳೆಂದು ಹಿಂದೆ ಕರೆಯಲ್ಪಡುತ್ತಿದ್ದರು . ಅವರು ಮದ್ರಾಸಿಗಳಲ್ಲ ಎಂದು ಉತ್ತರ ಭಾರತದವರು ಈಗೀಗ ಕಂಡು ಹಿಡಿಯುತ್ತಿದ್ದಾರೆ. ( ಟೈಮ್ಸ್ ಆಫ಼್ ಇಂಡಿಯದವರು ಇನ್ನೂ ಒಂದು ಹೆಜ್ಜೆ ಮುಂದು ಹೋಗಿ ಕೆಲದಿನದ ಹಿಂದೆ ಕೆನಡಾ ಬಗ್ಗೆ ಬರೆಯುವಾಗ ಕನ್ನಡ ದ ಕುರಿತಾದ ತಲೆಬರಹ ಕೊಟ್ಟರು! )

ಆದರೂ ಇನ್ನೂ ಎಷ್ಟೋ ವಿಷಯಗಳು ಕಂಡು ಹಿಡಿಯುವದಕ್ಕಾಗಿ ಕಾದಿವೆ .

೪. ಮುಂಬೈನಲ್ಲಿ ಸಮಾಜವಾದಿ ಪಕ್ಷದವರು ಬಂಗಾರಪ್ಪ ಬೇರೆ , ಬಂಗಾರು ಲಕ್ಷ್ಮಣ ಬೇರೆ ಎಂದು ಕಂಡು ಹಿಡಿಯಬೇಕಿದೆ. ( ಬ್ಯಾನರ್‍ಗಳಲ್ಲಿ ಬಂಗಾರಪ್ಪ ಚಿತ್ರ ಹಾಕಿ ಕೆಳಗೆ ಬಂಗಾರು ಲಕ್ಷ್ಮಣ್ ಎಂದು ಬರೆದಿದ್ದರು!)

೫. ಕನ್ನಡ ಕೂಡ ರಾಷ್ಟ್ರಭಾಷೆ ಎಂದು ಕಂಡು ಹಿಡಿಯಬೇಕಿದೆ!

೬. ತಮ್ಮ ಊರಿನ ಹೆಸರನ್ನು ತಮಗೆ ಬೇಕಾದ ಹಾಗೆ ಇಟ್ಟುಕೊಳ್ಳುವ ಹಕ್ಕು ಕನ್ನಡಿಗರಿಗೂ ಇದೆ ಎನ್ನುವದು.

೭. ಕರ್ನಾಟಕದಲ್ಲೇ ಇರುವ ಎಷ್ಟೋ ಕನ್ನಡಿಗರು ತಾವು ಕನ್ನಡಿಗರು ಎಂಬುದನ್ನೇ ಮರೆತಿದ್ದಾರೆ . ಅದನ್ನು ಕೂಡ ಕಂದು ಹಿಡಿಯಬೇಕಾದ ವಿಷಯವೇ .

ಹೀಗೆ ಎಷ್ಟೋ ವಿಷಯ ಸಂಶೋಧಕರನ್ನು ಕಾದು ಕೂತಿವೆ !

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಸ್ಮಾಯ್ಲ್ ಅವರೇ, ನಿಮ್ಮ ಮಾತು ನಿಜ. ಆದರೆ ನಿಮ್ಮ ಕರೆಯಿರುವುದು ಈಗ ಬರೆಯದ ಆದರೆ ಚೆನ್ನಾಗಿ ವಿಶ್ಲೇಷಿಸಿ ಬರೆಯಬಲ್ಲವರಿಗೆ. ಆದರೆ ಬಹಳಷ್ಟು ಜನ ನೀವು ಹೇಳಿದ ಹಾಗೆ ತಮ್ಮನ್ನು ತಾವು ಒಳ್ಳೆಯ ವಿಶ್ಲೇಷಕರೆಂದು ಪರಿಗಣಿಸುವುದಿಲ್ಲವಲ್ಲ. ಇವರಲ್ಲಿ ನಾನೂ ಒಬ್ಬ. ಏನೋ ಆಗ ಅನಿಸಿದ್ದನ್ನು ಬರೆಯುತ್ತೇನೆ. ನನ್ನದೇ ಒಂದು ಬ್ಲಾಗ್ ತಾಣವಿದ್ದರೂ ಅಲ್ಲಿ ಬರೆಯುವುದಕ್ಕೆ ಸಮಯ ಈ ನಡುವೆ ಹೆಚ್ಚು ಸಿಗುತ್ತಿಲ್ಲ. ಇದರ ಜೊತೆಗೆ, ಒಳ್ಳೆಯ ಯೋಚನೆಗಳು ಬಂದಾಗ ನಮ್ಮ ಬಳಿ ಕಾಗದವಾಗಲಿ ಗಣಕವಾಗಲಿ ಇರುವುದಿಲ್ಲ. ಇವೆರಡೂ ಇದ್ದಾಗ ವಿಚಾರ ಸ್ಫುರಿಸುವುದಿಲ್ಲ. ಇವು ಮೂರೂ ಇದ್ದಾಗ ಸಮಯವಿರುವುದಿಲ್ಲ. ನನ್ನ ಕಥೆಯಂತೂ ಇದೇ ಆಗಿದೆ. ಇನ್ನೊಂದು ದೊಡ್ಡ ತೊಂದರೆ (ನನಗೆ ಇದು ಅಷ್ಟು ದೊಡ್ಡ ತೊಂದರೆಯಲ್ಲ, ಆದರೂ...) ಕನ್ನಡ ಲಿಪಿಯಲ್ಲಿ ಉಟ್ಟಂಕಿಸುವುದು. ಬರಹ ತಂತ್ರಾಂಶವಿದ್ದರೂ (ನಿಮ್ಮ ಪ್ರಕಾರ ಅದರ ಹೆಸರು ಬರೆಹ ಎಂದಿರಬೇಕಿತ್ತು ಅಲ್ಲವೇ? ನಿಮ್ಮೊಡನೆ ನಾನೂ ಇದ್ದೇನ, ಇರಲಿ...) ಆಂಗ್ಲ ಕೀಲಿಮಣೆಯಲ್ಲಿ ಕನ್ನಡವನ್ನು ಟೈಪಿಸುವುದು at best ಒಂದು ಪ್ರಯಾಸ. ಸಾಮಾನ್ಯವಾಗಿ ಆಂಗ್ಲದಲ್ಲಿ ಇದಕ್ಕಿಂತ ಐದಾರು ಪಟ್ಟು ಹೆಚ್ಚು ವೇಗದಿಂದ ಕೀಲಿಮಾಡಬಹುದಾಗಿದೆ. ಇದು ನನ್ನ ಪ್ರಕಾರ ಕನ್ನಡದಲ್ಲಿ ಅದೂ ಕನ್ನಡ ಲಿಪಿಯಲ್ಲಿ ಪ್ರತಿಕ್ರಯಿಸುವುದಕ್ಕೆ ಒಂದು ದೊಡ್ಡ ಅಡಚಣೆ. ಆದರೆ ಭಾಷಾಪ್ರೇಮವೆನ್ನುವುದೊಂದಿದೆಯಲ್ಲ! ಅದೇ ತಾನೆ ಸಂಪದಕ್ಕೆ ಕಾರಣ ? ನಮ್ಮ ಭಾಷೆಯ ಅಕ್ಷರಗಳು ಮಾನಿಟರ್ ನಲ್ಲಿ ಮೂಡುವುದನ್ನು ನೋಡುವುದೇ ಒಂದು ಆನಂದ. ಇದೇ high ನಮ್ಮನ್ನು ಕನ್ನಡ ಲಿಪಿಯಲ್ಲಿ ಬರೆಯುವುದಕ್ಕೆ ಉತ್ತೇಜನ ನೀಡುತ್ತದೆ. ಆದ್ದರಿಂದ ಇ-ಕನ್ನಡಿಗರೇ, (ಇಸ್ಮಾಯ್ಲ್ ಅವರ ಪ್ರಯೋಗ) ಕನ್ನಡದಲ್ಲಿ ಉಟ್ಟಂಕಿಸಲು ಸಿದ್ಧರಾಗಿ! ಕಷ್ಟವಾದರೂ ಸರಿ, ಕನ್ನಡ ಲಿಪಿಯಲ್ಲಿಯೇ ಬರೆಯಬೇಕು! ಆರಂಭದಲ್ಲಿ ಕಷ್ಟವಾದರೂ ಅಭ್ಯಾಸದಿಂದ ಬರೆಹದ ಉಟ್ಟಂಕನ ಸುಲಭವಾಗುತ್ತದೆ. ಇಂಗ್ಲೀಷಿನಲ್ಲಿ ಬರೆದಷ್ಟು ಸುಲಭವಲ್ಲದಿದ್ದರೂ ಬಹಳಷ್ಟು ಸುಲಭವಾಗುತ್ತದೆ. ಏನೋ ನೀವು ಹೇಳಿದ ಹಾಗೆ ಪ್ರತಿಕ್ರಯಿಸಬೇಕೆನ್ನಿಸಿತು. ನಿಮ್ಮ ಕರೆಗೆ ಓಗೊಟ್ಟು ಒಂದಷ್ಟು ಗೀಚಿದ್ದೇನೆ. ನನ್ನೆರಡು ಪೈಸೆ (ಅಥವಾ ರೂಪಾಯಿ ಎನ್ನಬೇಕೆ?). -ನೀಲಗ್ರೀವ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಾಮಾನ್ಯವಾಗಿ ಆಂಗ್ಲದಲ್ಲಿ ಇದಕ್ಕಿಂತ ಐದಾರು ಪಟ್ಟು ಹೆಚ್ಚು ವೇಗದಿಂದ ಕೀಲಿಮಾಡಬಹುದಾಗಿದೆ.

ಹಾಗೆ ಇರಲೇಬೇಕೆಂದೇನೂ ಇಲ್ಲ. ಕನ್ನಡಕ್ಕೊಂದು [:http://www.google.co.in/url?sa=t&ct=res&cd=3&url=http%3A//www.sharma-hom...|ಇನ್ಸ್ಕ್ರಿಪ್ಟ್ ಕೀಲಿ ಮಣೆ ಎಂಬುದಿದೆ]. ಇದನ್ನುಪಯೋಗಿಸಿ ನೀವು ಆಂಗ್ಲವನ್ನು ಟೈಪು ಮಾಡುವ ವೇಗದಲ್ಲೇ ಟೈಪ್ ಮಾಡಬಹುದು (ಆದರೆ ಇನ್ಸ್ಕ್ರಿಪ್ಟ್ ಪದ್ಧತಿಯ ಪರಿಚಯ ಮಾಡಿಕೊಳ್ಳಬೇಕಾಗಿ ಬರಬಹುದು).
Inscript ಲೇಔಟ್ ವಿಂಡೋಸ್ ಎಕ್ಸ್ ಪಿ ಇಂದ ಹಿಡಿದು ಎಲ್ಲ ಹೊಸ ಲಿನಕ್ಸ್ ವಿತರಣೆಗಳಲ್ಲಿ ಜೊತೆಗೇ ಬರುತ್ತದೆ. (ಮತ್ತೇನೂ‌ ಇನ್ಸ್ಟಾಲ್ ಮಾಡುವ ಪ್ರಮೇಯವೂ ಇಲ್ಲ).

ಹೆಚ್ಚಿನ ವಿವರಕ್ಕೆ [:http://kn.wikipedia.org/wiki/Wikipedia:Kannada_Support|ವಿಕಿಪೀಡಿಯದ ಕನ್ನಡ ಸಹಾಯ ಪುಟ ನೋಡಿ].

- ಹೆಚ್ ಪಿ.

--

"ಹೊಸ ಚಿಗುರು, ಹಳೆ ಬೇರು"

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Nilagriva ಅವರ ಅಭಿಪ್ರಾಯಗಳು ಸರಿಯಾಗಿಯೇ ಇವೆ. ಕೀಬೋರ್ಡ್ ಬಳಸುವುದು ಆರಂಭದಲ್ಲಿ ಮಾತ್ರ ಕಷ್ಟ. ಒಮ್ಮೆ ಇದರಲ್ಲಿ ಕೈ ಪಳಗಿದರೆ ಪೆನ್ನಿಗಿಂತ ಕೀಬೋರ್ಡೇ ಒಳ್ಲೆಯದು ಅನ್ನಿಸುತ್ತದೆ. ಈ ಕಾಲದ ಕನ್ನಡ ಪತ್ರಕರ್ತರಿಗೆಲ್ಲರಿಗೂ ಇದರ ಅನುಭವವಾಗಿರುತ್ತದೆ. ಸುಮಾರು ೧೦ ವರ್ಷಗಳ ಹಿಂದೆ ಕಂಪ್ಯೂಟರ್ ಗಳು ಡಿಟಿಪಿ ವಿಭಾಗದಿಂದ ಹೊರಬಂದು ವರದಿಗಾರರು, ಉಪ ಸಂಪಾದಕರ ಮೇಜಿನ ಮೇಲೆ ಕುಳಿತುಕೊಂಡಿತು. ಅಂದು ಈ ಯಂತ್ರವನನು ಕಂಡರೆ ಹೆದರುತ್ತಿದ್ದವರು ಈಗ ಅದಿಲ್ಲದೆ ಬರೆಯಲು ಸಾಧ್ಯವಿಲ್ಲ ಎಂಬ ಹಂತ ತಲುಪಿದ್ದಾರೆ. ಹಾಗಾಗಿ ಕೀಬೋರ್ಡನ ಕಷ್ಟವನ್ನು ದಾಟುವುದು ಸುಲಭ. ಇದಕ್ಕೆ ಸಣ್ಣ ಮಟ್ಟಿಗಿನ ಇಚ್ಛಾಶಕ್ತಿ ಬೇಕು. ಇಂಗ್ಲಿಷ್ ಚೆನ್ನಾಗಿ ಗೊತ್ತಿರುವವರಿಗೆ ಕನ್ನಡದಲ್ಲಿ ಬರೆಯಲು ಎಂದು ತರಹದ ಅಳುಕಿರುತ್ತದೆ. ಅದು ಅತಿ ದೊಡ್ಡ ಸಮಸ್ಯೆ. ಪದವಿಯವರೇಗೂ ಕನ್ನಡವನ್ನು ಒಂದು ಭಾಷೆಯನ್ನಾಗಿ ಕಲಿಯುತ್ತಾ ಬಂದಿರುವರ ಅನೇಕರು ಈಗ ಕನ್ನಡದಲ್ಲಿ ಬರೆಯುವುದು ಕಷ್ಟ ಎನ್ನುವುದನ್ನು ಕಂಡರೆ ಸಿಟ್ಟು ಬರುತ್ತದೆ. ಇನ್ನು ಯಾವುದೇ ಭಾಷೆಯನ್ನು ಶುದ್ಧವಾಗಿ ಬಳಸುವುದು ಮಾತ್ರ ಬರೆವಣಿಗೆ ಎಂಬುದು ಮತ್ತೊಂದು ಬಗೆಯ ಮೂಢನಂಬಿಕೆ. ಸಂವಹನ ಸಾಧ್ಯವಾದರೆ ಬರೆವಣಿಗೆಯ ಉದ್ದೇಶ ಪೂರ್ಣವಾದಂತೆ. ಇಸ್ಮಾಯಿಲ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವೆನ್ನುವ ಮಾತು, ಕನ್ನಡಿಗರಿಗೆ ಮಾತ್ರ ಅನ್ವಯಿಸುವುದಲ್ಲ, ಇದು ಸಾರ್ವತ್ರಿಕ ಸತ್ಯ ಎಂದು ನನ್ನ ಅಭಿಪ್ರಾಯ.

ಜಡತನವಾಗಲೀ, ಔದಾರ್ಯವಾಗಲೀ, ಭಾಷೆಯ ಬಗೆಗೆ ನಿರಭಿಮಾನವಾಗಲಿ ಕನ್ನಡಿಗರಲ್ಲಿಯೇ ಹೆಚ್ಚಿದೆ ಎಂಬ ಅನಿಸಿಕೆಗಳನ್ನು ಹಲವಾರು ಬಾರಿ ಓದಿ/ಕೇಳಿರುವೆನಾದರೂ, ಇಂತಹ ವಾದಕ್ಕೆ ಪೂರಕ ಅಂಕಿ-ಅಂಶಗಳಾಗಲೀ, ಸೂಕ್ತ ಆಧಾರಗಳನ್ನಾಗಲೀ ಎಂದೂ ಕಂಡಿಲ್ಲ.

ವಂದನೆಗಳೊಂದಿಗೆ,

ವಿ.ವಿ.
ನನ್ನ ಬ್ಲಾಗ್: [http://majavani.blogspot.com|ಮಜಾವಾಣಿ]

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಜ.... ನಾ ಮೊದಲೇ ಹೇಳಿಕೊಂಡಂತೆ ದಿನಂಪ್ರತಿ ಬರೆಯುವವನಲ್ಲ, ಆದ್ರೆ ಸಮಯವಿದ್ದಾಗ, ಹತ್ತಾರು ವಿಷಯಗಳನ್ನು/ಲೇಖನಗಳನ್ನು ಬರೆಯಬಲ್ಲೆ, ಕೋರಮಂಗಲದ ಆಫೀಸ್ ಒಂದರಲ್ಲಿ ಬೆಳಗ್ಗೆ ೭.೩೦ ರಿಂದ ಸಂಜೆ ೪ ಘಂಟೆವರ್ಗೆ ಕಂಪ್ಯೂಟರ್ ಮುಂದೆ ಕುಳಿತು ರೈಲ್, ಏರ್ ,ಟ್ರೈನ್ ಟಿಕೆಟ್ ಬುಕ್ ಮಾಡ್ತಾ , ಮಧ್ಯದಲ್ಲಿ ಬಿಡುವಿದ್ದಾಗ ಆಫೀಸ್ ಟೈಮಲ್ಲೇ ಬರ್ಯೋದು ಸ್ವಲ್ಪ ಕಷ್ಟ ಆದರು , ಪ್ರಯತ್ನಿಸಿ ಲೇಖನ ಬರೆಯುತ್ತಿರುತೇನೆ,.... ಆದ್ರೆ ಸಂಪದ, ವಿಸ್ಮಯನಗರಿಯಲ್ಲಿ ನಾ ಕಂಡುಕೊಂಡಂತೆ ಜನ ಓದಲು ಇಷ್ಟ ಪಡ್ತಾರೆಯೇ ಹೊರತು ಲೇಖನ ಬರೆಯಲು ಯಾರು ಅಸ್ತು ಆಸಕ್ತೀ ತೋರಿಸಲ್ಲ!.... ನನಗ್ಗೊತ್ತು ಈ ಓದುಗರಲ್ಲೇ ಎಸ್ಟೊಂದು ಜನ ಮೇಧಾವಿಗಳು, ಬುದ್ಧಿವಂತರೂ, ವಿಚಾರವನ್ತರೂ, ಪಾಂಡಿತ್ಯ ಇರುವವರು ಇರ್ತಾರೆ, ಆದ್ರೆ ಅವ್ರು ಈ ಬರವಣಿಗೆ ನಮಗ್ಯಾಕೆ ಅಂತಂದ್ಕೊಂಡ್ ಸುಮ್ನಿರ್ತಾರೆ, ದಯಮಾಡಿ ಹೆಚ್ಚು ಸಂಖ್ಯೆಯಲ್ಲಿ ವಿಚಾರ ಪ್ರಚೋದಕ ಲೇಖನ ಬರೆದು ಪುಣ್ಯ ಕಟ್ಟಿಕೊಳ್ಳಿ ಅನ್ನೋದೇ ನನ್ನ ಆಶಯ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

.....
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.