ಮೂರ್ತಿ ಅನಾವರಣ, ಅಸೂಯೆ ಅನಂತ !

0

ಮೂರ್ತಿ ಅನಾವರಣ, ಅಸೂಯೆ ಅನಂತ

                                                                                                          - ವಾಙ್ಮಯಿ, ಬಿಜಾಪುರ.

[ಸಣ್ಣ ಟಿಪ್ಪಣಿ: ನನ್ನ ಆತ್ಮೀಯರೊಬ್ಬರು ಬರೆದ ಈ ಲೇಖನ ಮೊದಲು ವಿಕ್ರಮ ವಾರಪತ್ರಿಕೆಯಲ್ಲಿ ಎರಡು ವಾರಗಳ ಹಿಂದೆ ಮುಖಪುಟ ಲೇಖನವಾಗಿ ಪ್ರಕಟವಾಗಿದೆ. ಆಗಲೇ ಇದನ್ನು ಪೊಸ್ಟ್ ಮಾಡೋಣವೆಂದುಕೊಂಡೆ. ಆದರೆ ಭೈರಪ್ಪ - ಅನಂತಮೂರ್ತಿ ಸುತ್ತಮುತ್ತ ಸಾಕಷ್ಟು ಚರ್ಚೆ ಸಂಪದದಲ್ಲಿ ನಡೆದದ್ದರಿಂದ ಸುಮ್ಮನಾದೆ. ಮತ್ತೆ ಈಗೇಕೆ? ಡಿ. ಎಸ್. ನಾಗಭೂಷಣರ ಪಕ್ಕಾ ಸಮಾಜವಾದಿ ಧಾಟಿಯ ಲೇಖನ 'ಇಂದು ಕಡಿದಾಳು..'ವಿನಲ್ಲಿ ಹೆಸರಿಸುವ ಕೆಲವು 'ಪ್ರಖರ ಬುದ್ಧಿಜೀವಿ' ವ್ಯಕ್ತಿಗಳು ಹಾಗೂ ಘಟನೆ ಈ ಲೇಖನದಲ್ಲಿಯೂ ಬರುವದರಿಂದ ಒಟ್ಟಾರೆ ಚರ್ಚೆಗೆ ಹೊಸ ಆಯಾಮ ದೊರೆತರೆ ಅನುಕೂಲವೆಂಬ ಹಂಬಲ. - ಜೈಗುರುಜಿ]

ಮನೇಕಾ ಗಾಂಧಿ ಪ್ರಾಣಿಗಳನ್ನು ಪಳಗಿಸಿ ಸರ್ಕಸ್ ನಲ್ಲಿ ಅವುಗಳಿಂದ ಕಸರತ್ತು ಮಾಡಿಸಿರುವದಕ್ಕೆ ತಡೆ ಹಾಕಿಸಿದರು. ನಿಜ, ಆದರೆ ಆ ಪ್ರಾಣಿಗಳ ತಿಪ್ಪರಲಾಗ ಹೊಡೆಯುವ ಗುಣ ಇಂದು ಚಿಂತಕರು, ಬುದ್ಧಿಜೀವಿಗಳು ಕಲಿತಿರುವದರಿಂದ ಸರ್ಕಸ್‌ನಂತಹ ಮನರಂಜನೆಗೇನೂ ಕೊರತೆ ಇಲ್ಲ. ಆದೂ ಪುಕ್ಕಟೆ ಶಿವಾ !

ಕಳೆದ ಕೆಲವು ತಿಂಗಳುಗಳಲ್ಲಿಯೇ ನಮ್ಮಲ್ಲಿಯ ಜ್ಞಾನಪೀಠಿಗಳಿಬ್ಬರಿಂದ ಅಂಗೈ ತೋರಿಸಿ ಅವಲಕ್ಷಣಗೇಡಿಯಾಗಿರುವಂತಹ ಕನಿಷ್ಟ ಮೂರು ಪ್ರಸಂಗಗಳನ್ನು ನೆನಪಿಸಬಹುದು. ಸಣ್ಣ ಪುಟ್ಟ ಪ್ರಸಂಗಗಳಂತೂ ಸಾಕಷ್ಟಿವೆ. ಎಡಪಂಥಿಯರಿಗೆ ಅತ್ಯಂತ ಪ್ರಿಯವಾದ ಗುದ್ದೋಡು (hit and run) ತಂತ್ರವನ್ನು ಜ್ಞಾನಪೀಠಿಗಳಿಬ್ಬರೂ ಉಪಯೋಗಿಸಿದರು. ಆದರೆ ಅಮೇಲಿನ ಸಾಹಿತಿಗಳ ಆಕ್ರೋಶ ಮತ್ತು ಸಾಮಾನ್ಯ ಓದುಗರ ಒಟ್ಟಾಭಿಪ್ರಾಯಕ್ಕೆ ಮಣಿದು, ಬಾಯಿಗೆ ಬೀಗ ಜಡಿದುಕೊಂಡು ತಮ್ಮ ವಿಚಾರಧಾರೆಗೆ ತಿಪ್ಪರಲಾಗ ಹೊಡೆಸಿದರು. ಈ ಪ್ರಸಂಗಗಳನ್ನು ನೆನೆಯುವದು, ಭವಿಷ್ಯದ ದೃಷ್ಟಿಯಿಂದ ಅವರ ಕುಟಿಲತೆಯನ್ನು ಅರ್ಥಮಾಡಿಕೊಳ್ಲಲು ಸಹಾಯಕರ.

ಅನಂತಮೂರ್ತಿ ಮತ್ತು ಬೆತ್ತಲೆ ಜಗತ್ತು :

ವಿಜಯ ಕರ್ನಾಟಕದ ಅಂಕಣಕಾರ ಪ್ರತಾಪಸಿಂಹ ತಮ್ಮ ಅಂಕಣದಲ್ಲಿ ಹದಗೆಟ್ಟಿರುವ ವಿಶ್ವವಿದ್ಯಾನಿಲಯಗಳು, ಅಲ್ಲಿನ ರಾಜಕೀಯ, ಹಗರಣಗಳು ಇತ್ಯಾದಿಗಳ ಬಗ್ಗೆ ಬರೆದರು. ಅದರಲ್ಲಿ ಮುಖ್ಯವಾಗಿ ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ಪಾಠ ಮಾಡುತ್ತಿರುವ 'ಮಹಾನ್ ಚಿಂತಕರು ಮತ್ತು ಪ್ರಖರ ಬುದ್ಧಿಜೀವಿಗಳಾದ' ಪ್ರೊ.ರಾಜೆಂದ್ರ ಚೆನ್ನಿ, ಪ್ರೊ. ವಿ ಎಸ್ ಶ್ರೀಧರ್, ನಗರಿ ಬಾಬಯ್ಯ, ಎಸ್ ಪಟ್ಟಾಭಿ ಸೋಮಯಾಜಿ ಇತ್ಯಾದಿಗಳು ಟೀಚ್ ಮಾಡುವ ಬದಲು ಬರೇ ಸವಕಲು ಸಿದ್ಧಾಂತಗಳ್ನ್ನು ಪ್ರೀಚ್ ಮಾಡುತ್ತಿದ್ದಾರೆ ಎಂದು ಜರೆದರು ( ಪೂರ್ಣ ಲೇಖನ ನೋಡಿ : ಬೆತ್ತಲೆ ಜಗತ್ತು ಭಾಗ ೪, ಪುಟ ೧೯೭). ತತಕ್ಷಣವೇ ಮೂರ್ತಿಗಳಿಂದ ಪ್ರತಿಕ್ರಿಯೆ ಬಂತು ಪತ್ರಿಕೆಗೆ "ನಿಮ್ಮ ಅಂಕಣಕಾರ ಪ್ರತಾಪಸಿಂಹರ ಲೇಖನದ ತುಂಬಾ ಸುಳ್ಳುಗಳು ತುಂಬಿವೆ, ಇದು ರಾಜಕೀಯ ಪ್ರೇರಿತವಾಗಿದೆ. ನನ್ನ ಹಳೆಯ ವಿದ್ಯಾರ್ಥಿಗಳಾದ ಪಟ್ಟಾಭಿ ಸೋಮಯಾಜಿ ಮತ್ತು ಶ್ರೀಧರ್ ಹಾಗೂ ಕನ್ನಡ ನಾಡಿನ ಒಂದು ಉತ್ತಮ ಮನಸ್ಸಾದ ರಾಜೆಂದ್ರ ಚೆನ್ನಿಯವರ ಬಗ್ಗೆಯೂ ಸುಳ್ಳುಗಳೆ ತುಂಬಿಕೊಂಡಿವೆ. ಇಂತಹ ಕ್ರಿಯಾಶಾಲಿಗಳು ಮತ್ತು ಚಿಂತಕರ ಬಗ್ಗೆ ಸುಳ್ಳು ಬರೆಯುವದನ್ನು ಕಂಡು ಸುಮ್ಮನಿರುವದು ಅನೈತಿಕ, ಆ ಕಾರಣ ಬರೆಯುತ್ತಿದ್ದೇನೆ" ಎಂದರು.

ಪ್ರತಾಪಸಿಂಹ ಕೂಡ ಅಂಕಣಕಾರನ ಜವಾಬ್ದಾರಿಯಂತೆ ಸರಿಯಾದ ಪ್ರತ್ಯುತ್ತರ ಕೊಟ್ಟರು. "ಚಿಂತಕ ಅನಂತಮೂರ್ತಿಯವರು ಬರಿ ಸುಳ್ಳು ಅಂತ ಬರೆದಿದ್ದಾರೆ. ಯಾವುದು ಸುಳ್ಳು ಅಂತ ನಿಖರವಾಗಿ ಹೇಳಿಲ್ಲ. ಅವರ ಶಿಷ್ಯೋತ್ತಮರ ಪ್ರತ್ಯಕ್ಷ ದರ್ಶನ ನನಗಿದೆ ಹಾಗೂ 'ಕನ್ನಡ ನಾಡಿನ ಒಂದು ಉತ್ತಮ ಮನಸ್ಸಿನ' ಇನ್ನೊಂದು ರೂಪದ ಚೆನ್ನಾದ ಪರಿಚಯವಿದೆ. ನಾನು ಹೇಳುವದಿಷ್ಟೆ. ಯಾವುದೇ ವೇದಿಕೆಯಲ್ಲಿ ಮುಖಾಮುಖಿಯಾಗಿ, ಅಂಕಣದಲ್ಲಿ ಬರೆದಿರುವ ಅಭಿಪ್ರಾಯ, ವ್ಯಕ್ತಿ ಮತ್ತು ವಿಚಾರಗಳ ಬಗ್ಗೆ ಚರ್ಚಿಸಲು ಸಿದ್ಧನಿದ್ದೇನೆ" ಎಂದು ಉತ್ತರ ಬರೆದಾಗ ಅನಂತಮೂರ್ತಿಯವರು ನಿರುತ್ತರ ಕುಮಾರರಾದರು. ಹೆಚ್ಚಿಗಿನ್ನೇನು ಮಾದಲು ಸಾಧ್ಯ. ಪಂಥಾಹ್ವಾನ ಒಪ್ಪಿ ಚಿಕ್ಕವರೆದುರು ಸೋತರೇ? ಛೇ..ಛೇ ಎಂತಹ ಅವಮಾನವಲ್ಲವೇ? ಅದಕ್ಕೆ ಮೌನಕ್ಕೆ ಶರಣಾದರು. ಅವರಿಗೆ ಇನ್ನೂ ಸ್ವಲ್ಪ ಪೌರುಷ ತುಂಬುವಂತೆ, ರೋಷ ಉಕ್ಕುವಂತೆ ಮಾಡಲು ಶತಾವಧಾನಿ ಡಾ. ಆರ್. ಗಣೇಶರವರೂ ಮತ್ತು ಇನ್ನಿತರ ಓದುಗರು ಪಂಥಾಹ್ವಾನ ಒಪ್ಪಿ ಎಂದು ಪರಿ ಪರಿಯಾಗಿ ಬೇಡಿಕೊಂಡರು. ಆದರೆ ಮೂರ್ತಿಗಳು ಮಾತ್ರ 'ಮೌನ ವೃತ'ಕ್ಕೆ ಭಂಗ ತರಲಿಲ್ಲ. ಬೆತ್ತಲೆ ಜಗತ್ತಿನ ಮುಖಾಂತರ ನಗ್ನ ಸತ್ಯ ಹೊರಬಿತ್ತು ಅರ್ಥಾತ್ ನಿರುತ್ತರ ಕುಮಾರರು ತಿಪ್ಪರಲಾಗ ಹಾಕಿದರು !

ಶೇರ್-ಎ-ಕಾರ್ನಾಡ್ :

ಕರ್ನಾಟಕದ ಸಚಿವರಾದ ಶಂಕರಮೂರ್ತಿಯವರು ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ "ಟಿಪ್ಪು ಕನ್ನಡ ಪ್ರೇಮಿಯಾಗಿರಲಿಲ್ಲ, ಅವನು ಆಡಳಿತ ಭಾಷೆಯನ್ನಾಗಿ ಕನ್ನಡದ ಬದಲು ಪರ್ಷಿಯನ್ ಜಾರಿಗೆ ತಂದ" ಎಂದುಸುರಿದರು. ಇಷ್ಟೆ ಸಾಕಾಗಿತ್ತು ನಮ್ಮ ಎಡಬಿಡಂಗಿ ಫಂಡಮೆಂಟಲಿಸ್ಟ್ ಸೆಕ್ಯುಲರವಾದಿಗಳಿಗೆ, ಶಂಕರಮೂರ್ತಿಯವರನ್ನು ಹರಿದು ತಿನ್ನುವ ಸೀಳು ನಾಯಿಗಳಂತೆ ಮುಗಿಬಿದ್ದರು. ಬೇಕಾದ್ರೆ ಶಿವಾಜಿ, ರಾಣಾ ಪ್ರತಾಪ, ರಾಜಾ ಶ್ರೀ ಕೃಷ್ಣದೇವರಾಯರ ಬಗ್ಗೆ ಏನಾದರೂ ಅನ್ನಲಿ, ಆಡಲಿ, ಬಯ್ಯಲಿ ಆದರೆ ಅದೇ ಟಿಪ್ಪು ಬಗ್ಗೆ ಅನ್ನುವದೆಂದರೆ? ಛೇ ಛೇ ..ಅದೆಂತಹ ಘೋರ ಅಪರಾಧ? ಯಥಾ ಪ್ರಕಾರ ಇನ್ನೊಬ್ಬ ಜ್ಞಾನಪೀಠಿ ಗಿರೀಶ ಕಾರ್ನಾಡ್ ಮತ್ತವರ ಒಡ್ಡೋಲಗ "ಶಂಕರಮೂರ್ತಿಯ ತಲೆ ಸರಿಯಿಲ್ಲ, ಅವರು ಕೋಮುವಾದಿ, ದೇಶದ್ರೋಹಿ, ಅವರನ್ನು ಸಂಪುಟದಿಂದ ಕೈ ಬಿಡಬೇಕು" ಇತ್ಯಾದಿ ಎಲ್ಲಾ ಆರೋಪ ಹೊರಿಸಿ, ಶೇರ್-ಎ-ಕಾರ್ನಾಡ್ ಉಗ್ರ ಚಳುವಳಿಯ ಬೆದರಿಕೆಯನ್ನೂ ಹಾಕಿದರು. ಬಹುಷಃ ವಿಜಯ ಕರ್ನಾಟಕ ಮತ್ತು ಭೈರಪ್ಪನವರ ಸಕಾಲಿಕ ಮಧ್ಯ ಪ್ರವೇಶವಾಗದಿದ್ದರೆ ಶಂಕರಮೂರ್ತಿ ಪರಿಸ್ಥಿತಿ ಏನಾಗುತ್ತಿತ್ತೋ ಆ ಮಹಾದೇವನೇ ಬಲ್ಲ!

ಈ ಎಡಬಿಡಂಗಿಗಳು ತಮ್ಮ ಮಹಾನ ನಾಯಕರಾದ ಶೇರ್-ಎ-ಕಾರ್ನಾಡ್‌ರ ದಾಳಿ ನಡೆಸುತ್ತಿರುವಾಗಲೇ ಭೈರಪ್ಪನವರು ದಾಖಲೆಗಳ ಸಮೇತ ಟಿಪ್ಪುವಿನ ನಿಜ ಸ್ವರೂಪವನ್ನು ಬಯಲಿಗೆಳೆದರು ಹಾಗೂ ಶಂಕರಮೂರ್ತಿ ಹೇಳಿದ್ದು ಸರಿ ಎಂದು ಸಾರಿ ನುಡಿದರು. ಅಕಟಾಕಟಾ ಈ ಭೈರಪ್ಪಗೆಷ್ಟು ಧೈರ್ಯ ನಮ್ಮನ್ನು ಎದುರು ಹಾಕಿಕೊಳ್ಳಲು? ಅದೂ ಒಬ್ಬಂಟಿಯಾಗಿ ಎಂದು ಕಾರ್ನಾಡ್ ಪಡೆ ಭೈರಪ್ಪನವರ ಮೇಲೆಯೇ ಯುದ್ಧ ಸಾರಿದರು. ಭೈರಪ್ಪನವರು ಬರದದೆಲಾ ಕಳಪೆ ಸಾಹಿತ್ಯ, ಅವರ ವಂಶ ವೃಕ್ಷ ಅತ್ಯಂತ ಸಾಮಾನ್ಯ ಕೃತಿ ಇನ್ನು ಏನೇನೂ ಟಿಪ್ಪು ವಿಷಯಕ್ಕೆ ಸಂಬಂಧವಿಲ್ಲದ ಪ್ರಲಾಪ ಶುರುವಿಟ್ಟುಕೊಂಡರು. ಕಾರ್ನಾಡ್ ಪಡೆಯ ಅಟಾಟೋಪಕ್ಕೆ, ಹುಚ್ಚು ವರ್ತನೆಗೆ ಸುಮ್ಮನಿರದ ಭೈರಪ್ಪ ಕೂಡ ಟಿಪ್ಪುವಿನ ಜೊತೆಗೆ ಟಿಪ್ಪುವನ್ನು ವೈಭವಿಕರಿಸಿ ಸುಳ್ಳು ಇತಿಹಾಸವನ್ನೇ ನಾಟಕವೆಂದು ಬರೆದಿರುವವರ ಹೂರಣವನ್ನು ಬಯಲಿಗೆಳೆದರು. ಖ್ಯಾತ ಸಂಶೋಧಕ ಎಂ ಚಿದಾನಂದಮೂರ್ತಿ, ಇತಿಹಾಸಕಾರ ಸೂರ್ಯನಾಥ್ ಕಾಮತ್ ಮತ್ತು ಅನೇಕರು ಭೈರಪ್ಪನವರಿಗೆ ಧನಿಗೂಡಿಸಿದಲ್ಲದೇ, ಭೈರಪ್ಪ ಹೇಳಿದ್ದು ನಿಜವೆಂದು ನಿಜವೆಂದು ಒತ್ತಿ ಹೇಳಿದರು. ಇದೇ ಸಂದರ್ಭದಲ್ಲಿ ವಿ. ಕ ಕೂಡ ಓದುಗರ ಪ್ರತಿಕ್ರಿಯೆಯನ್ನು ಕೇಳಿತು. ಅಸಂಖ್ಯ ಓದುಗರು "ಕಾರ್ನಾಡ್ ನಿಜ ಬಣ್ನ ಬಯಲಾಗಿದೆ, ಅವರಿನ್ನು ಸುಮ್ಮನಿರುವದು ಲೇಸು" ಎಂದು ಪ್ರತಿಕ್ರಿಯಿಸಿದಾಗ ಬಹುಷಃ ಜ್ಞಾನಪೀಠಿ ಗಿರೀಶ ಕಾರ್ನಾಡ್ ದಂಗಾಗಿ ಹೋದರೆನಿಸುತ್ತೆ. ಪಾಪ ಇನ್ನೂವರೆಗೂ ಅವರ ಬಾಯಿಂದ ಆ ವಿಷಯವಾಗಿ ಮಾತೇ ಹೊರಟಿಲ್ಲ! ವಿಚಾರಿಸಿ, ಈ ಕಾರ್ನಾಡ್ ಪಡೆಯ ವಿಚಾರವಾದ ಮತ್ತು ನೈತಿಕ ಶಕ್ತಿ ಎಷ್ಟು ಟೊಳ್ಳಾಗಿರುತ್ತೆ ಅಂತ. ಶೇರ್-ಎ-ಮೈಸೂರ್ ಬಗ್ಗೆ ಹುಲಿಯಂತೆ ಗರ್ಜಿಸಿದ್ದ ಜ್ಞಾನಪೀಠಿ ಇಲಿಯಂತೆ ಸುಮ್ಮನಾಗಿ ತಮ್ಮ ಬಿಲವನ್ನು ಸೇರಿದರು.

ಅನಂತಮೂರ್ತಿಯ ಅನಾವರಣ :

ಇನ್ನೊಬ್ಬರ ತಪ್ಪುಗಳಿಂದ ಪಾಠ ಕಲಿಯುವವನು ಜಾಣನಂತೆ. ಆದರೆ ಜ್ಞಾನಪೀಠಿ ಚಿಂತಕ ವಿಮರ್ಶಕ ಬುದ್ಧಿಜೀವಿ ಸೆಕ್ಯುಲರವಾದಿ ಇತ್ಯಾದಿ ಅನೇಕ ಬಿರುದಾಂಕಿತ ಶ್ರೀಯುತ ಯು. ಆರ್. ಅನಂತಮೂರ್ತಿಯವರು ತಮ್ಮ ತಪ್ಪುಗಳಿಂದಲೇ ಪಾಠ ಕಲಿಯುತ್ತಿಲ್ಲ. ಇದಕ್ಕೇನನ್ನಬೇಕು? ಮತ್ತೊಮ್ಮೆ ಭೈರಪ್ಪನವರ ವಿಷಯಕ್ಕೆ (ಭೈರಪ್ಪನವರ ಜೊತೆಗಲ್ಲ ಮತ್ತೆ, ಅಷ್ಟು ಪಾಠ ಕಲಿತಿದ್ದಾರೆನಿಸುತ್ತೆ!) ಕುಸ್ತಿ ಬಿದ್ದು ಮಣ್ಣು ಮುಕ್ಕಿ, ಸೋತು ಸುಣ್ಣವಾಗಿ, ಸಾಹಿತ್ಯಿಕ ಸಮಾರಂಭಗಳಿಗೆ ಹಾಜರಾಗುವದಿಲ್ಲವೆಂದು ಸಂನ್ಯಾಸತ್ವ ಘೋಷಿಸಿದ್ದಾರೆ.

ತಮ್ಮ ಶಿಷ್ಯಗಣದಲ್ಲಿಯೇ ಅರೆಬೆಂದವರೊಬ್ಬರಿಂದ ತಮ್ಮ ಮೂಗಿನ ನೇರಕ್ಕೆ 'ಆವರಣ'ದ ಬಗ್ಗೆ ಪುಸ್ತಿಕೆಯೊಂದನ್ನು (ಪುಸ್ತಕವೆಂದು ಕರೆಯಲು ಮನಸ್ಸು ಒಪ್ಪುತ್ತಿಲ್ಲ) ಬರೆಸಿ ಅದರ ಬಿಡುಗಡೆಯ ಸಂದರ್ಭದಲ್ಲಿ ಭೈರಪ್ಪನವರ ಬಗ್ಗೆ ತಮ್ಮಲ್ಲಿದ್ದ ಸಿಟ್ಟು, ಅಸೂಯೆ, ಮಾತ್ಸರ್ಯವನ್ನು ಕೂಡ ಅವತ್ತು ಕಾರಿಕೊಂಡಿದ್ದಾರೆ. ಕೇವಲ ಆವರಣವನ್ನು ಕೇಂದ್ರದಲ್ಲಿಟ್ಟುಕೊಂಡು ಮಾತನಾಡಿದ್ದರೆ ಅವರನ್ನೊಬ್ಬ ಜ್ಞಾನಪೀಠಿ ಚಿಂತಕ ವಿಮರ್ಶಕ ಎಂದು ಒಪ್ಪಬಹುದ್ದಿತ್ತೇನೋ? ಆದರೆ ಅವೆಲ್ಲಾ ಸಭ್ಯತೆಗಳ ಆವರಣವನ್ನು ದಾಟಿ ಭೈರಪ್ಪನವರನ್ನು ಕೇಂದ್ರದಲ್ಲಿಟ್ಟುಕೊಂಡು ಹರಿಹಾಯುವದು, ದಾಳಿಮಾಡುವದು ಅನುಚಿತವಲ್ಲವೇ? ಆದರೆ ಅದೇಕೇ ಬುದ್ಧಿಜೀವಿಗಳಿಗೆ ಹಾಗನಿಸುವದಿಲ್ಲ ಎಂದು ಅಚ್ಚರಿಯಾಗುತ್ತದೆ. ಅಥವಾ ಅದಕ್ಕೆ ಅವರನ್ನು ಬುದ್ಧಿಜೀವಿಗಳೆನ್ನುವದೋ?

ಆವರಣದ ಮಾರಾಟ, ಜನಪ್ರಿಯತೆ ಮತ್ತು ಆ ರೀತಿ ಯೋಚಿಸುವವರ ಸಂಖ್ಯೆ ಕಂಡರೆ ಅವರಿಗೆ ದಿಗಿಲಂತೆ. ಅದಲ್ಲದೇ ಭೈರಪ್ಪ ಕನ್ನಡ ಸಾಹಿತ್ಯಲೋಕವಲ್ಲದೆ, ಭಾರತೀಯ ಇತರ ಭಾಷೆಗಳಲ್ಲಿಯೂ ಕೂಡ ಫೇಮಸ್ ಆಗಿರುವದು ಇವರಿಗೆ ಸಂತಸದ ವಿಷಯವಲ್ಲ ಬದಲು ಅದೊಂದು ಸಮಸ್ಯೆ. (ದಟ್ಸ್ ಕನ್ನಡದಲ್ಲಿರುವ ಭಾಷಣದ ಧ್ವನಿ ಸುರುಳಿ ಕೇಳಿ ನೋಡಿ, ಬಾಲಿಶ ಚಿಂತನೆ ಕಂಡು ನಗು ಬರುತ್ತೆ!). ಅವತ್ತು ಸಮಾರಂಭದಲ್ಲಿ ಅವರ 'ನೆಚ್ಚಿನ ವಿಷಯಗಳಾದ' ಕೋಮುವಾದ, ಬಿ ಜೆ ಪಿ, ಮೋದಿ, ಗುಜರಾತ್ ಮುಂತದವುಗಳ ಬಗ್ಗೆ ಅಪ್ಪಣೆ ಕೊಡಿಸಿದ್ದಾರೆ. ಅವರು ಶಿಷ್ಯ ಕೋಟಿ ಮೆಚ್ಚಿ ವಾಹ್ ವಾಹ್ ಎಂದು ಚಪ್ಪಾಳೆ ತಟ್ಟಿದ್ದಾರೆ. ಇಷ್ಟಕ್ಕೆ ಅವರು ಮಾತಿಗೆ ಬ್ರೇಕ್ ಹಾಕಿದ್ದರೆ ಅವರು ಜಾಣರಾಗುತ್ತಿದ್ದರು. ಆದರೆ ಅದೃಷ್ಟ ಸರಿಯಾಗಿಲ್ಲವೆಂದರೆ ಅವರೇನು ಮಾಡಿಯಾರು? ಅಷ್ಟಕ್ಕೇ ತಿಳಿದುಕೊಂಡು ಸುಮ್ಮನಾದರೆ ಅವರ ಬುದ್ಧಿಜೀವಿ ಪಟ್ಟ ಸಾರ್ಥಕವಾಗುವದೇ? ಖಂಡಿತಾ ಇಲ್ಲ. ಅದಕ್ಕೇ ಮತ್ತೊಂದು ಬಾಂಬ್ ಹಾಕಿದ್ದಾರೆ. ಮಾತಿನ ಓಘದಲ್ಲಿ, ನಸುನಗುತ್ತಾ "ಭೈರಪ್ಪ ಕಾದಂಬರಿಕಾರರಲ್ಲ, ಅವರೇನಿದ್ದರೂ ಒಬ್ಬ ಡಿಬೇಟರ್ (ಚರ್ಚಾಪಟು)" ಎಂದು ಫರ್ಮಾನು ಹೊರಡಿಸಿದ್ದಾರೆ! ಇದಲ್ಲವೇ ನಿಜವಾದ 'ಬುದ್ಧಿಜೀವಿ'ಯ (ಅವ)ಲಕ್ಷಣ?

ತಮ್ಮ ತಮ್ಮೊಳಗೆ ಭೈರಪ್ಪನವರನ್ನು ತೆಗಳಿ ಖುಷಿ ಪಡಬಹುದೆಂದು ಕೊಂಡಿದ್ದರೇನೋ? ಆದರೇನು ಪ್ರಚಾರಕ್ಕಾಗಿ ಪತ್ರಕರ್ತರೆಂಬ 'ಪೀಡೆ'ಗಳನ್ನು ಕರೆಸಿರುತ್ತಾರಲ್ಲ. ಅವರು ಶಬ್ದಶ: 'ಸರಿಯಾದ ಪ್ರಚಾರ'ವನ್ನೇ ಕೊಟ್ಟಿದ್ದಾರೆ. ಅವರ ಭಾಷಣದ ಮುಖ್ಯಾಂಶ ಕನ್ನಡ ಪತ್ರಿಕೆಗಳಲ್ಲಿ ವರದಿಯಾದೊಡನೆ ಸಾಹಿತಿಗಳ ಆಕ್ರೋಶ ಅನಂತಮೂರ್ತಿಯವರನ್ನು ಮೈಮ್ಮುಟ್ಟಿ ನೋಡಿಕೊಳ್ಳುವಂತೆ ಮಾಡಿದೆ. ಸಾಹಿತಿಗಳ ಸಾತ್ವಿಕ ಸಿಟ್ಟಿಗಿಂತಲೂ ಓದುಗ ದೊರೆಗಳ ಸಿಟ್ಟು ನಿಜಕ್ಕೂ ಮೂರ್ತಿಗಳಿಗೆ ದಂಗು ಬಡಿಸಿರಬೇಕು. ಜ್ಞಾನಪೀಠದ ಕುರ್ಚಿಯ ಕಾಲುಗಳು ನೆಲದಲ್ಲಿ ನಾಲ್ಕಿಂಚು ಕುಸಿದಂತಾಗಿ ಬೆಚ್ಚಿಬಿದ್ದರೆನಿಸುತ್ತದೆ. ಎಲ್ಲಾ ಕನ್ನಡ ಪತ್ರಿಕೆಗಳಲ್ಲಿಯೂ ಮತ್ತು ಕೆಲವು ಆಂಗ್ಲ ಪತ್ರಿಕೆಗಳಲ್ಲಿಯೂ ಮೂರ್ತಿಗಳ ದಿಗಿಲುಗೊಳ್ಳುವ ವಿಮರ್ಶಾ ಪಾಂಡಿತ್ಯಕ್ಕೆ, ಟೀಕೆ-ಟಿಪ್ಪಣಿಗಳಿಗೆ ಕಟುಟೀಕೆಗಳ ಸುರಿಮಳೆಯಾಯಿತು. ಈ ಟೀಕೆಗಳ ಮಧ್ಯೆ ಜನರಿಗೆ, ಸಾಹಿತ್ಯಾಸಕ್ತರಿಗೆ ಅನಂತಮೂರ್ತಿಯವರ ನಿಜವಾದ ಮುಖವಾಡದ ಅನಾವರಣವಾಯಿತು. ಪಾಪ ಮೂರ್ತಿಗಳು ಮಾತ್ರ ಹೈರಾಣಾದರು. ಏನು ಮಾಡುವದು? "ಮಾಡಿದ್ದುಣ್ಣೋ ಮಹಾರಯ"! ಗಾಜಿನ ಮನೆಯಲ್ಲಿದ್ದವರು ಇನ್ನೊಬ್ಬರ ಮನೆಯ ಮೇಲೆ ಕಲ್ಲೆಸೆಯುವ ಕೆಲಸ ಮಾಡಬಾರದೆಂಬ ಸೂಕ್ಷ್ಮ ಬುದ್ಧಿಜೀವಿಗಳಿಗೇಕೇ ತೋಚುವದಿಲ್ಲ?

ಅಂತಿಮ ಪರಿಣಾಮ :

ಈ ಸಧ್ಯಕ್ಕಂತೂ ಎಲ್ಲ ಓದುಗರ "ಪ್ರೀತ್ಯಾದರ"ಗಳಿಂದ ಗಾಬರಿಯಾಗಿ ಅನಂತಮೂರ್ತಿ ಇನ್ನು ಮೇಲೆ ಯಾವುದೇ ಸಭೆ-ಸಮಾರಂಭಗಳಲ್ಲಿ, ಮುಖ್ಯವಾಗಿ ಸಾಹಿತ್ಯಿಕ ಸಮಾರಂಭಗಳಲ್ಲಿ(ವೈಚಿತ್ರ್ಯ ನೋಡಿ!) ಭಾಗವಹಿಸುವದಿಲ್ಲವೆಂದು ಭೀಷ್ಮ ಪ್ರತಿಜ್ಞೆ ತೆಗೆದುಕೊಂಡಿದ್ದಾರೆ. ಪತ್ರಕರ್ತರಿದ್ದ ಸಮಾರಂಭದ ಕಡೆಗಂತೂ ತಲೆ ಹಾಕಿ ಮಲಗುವದಿಲ್ಲವಂತೆ! ಮಜಾ ನೋಡಿ, ಅವರಿಗೆ ಈಗಲೂ ತಾವು ಮಾಡಿದ್ದು ತಪ್ಪು ಎಂದು ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಳ್ಳಲು ಆಗುತ್ತಿಲ್ಲ. ಆದರೆ ಅದು ತಪ್ಪು ಎಂದು ಅವರಿಗೆ ಖಂಡಿತವಾಗಿ ಮನದಟ್ತಾಗಿದೆ ಅನ್ಸುತ್ತೆ. 'ಜಟ್ಟಿ ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂದನಂತೆ' ಎಂಬ ಮಾತಿನಂತೆ ಪಲಾಯನವಾದದ ಹಾದಿ ಹಿಡಿದು 'ಸಂನ್ಯಾಸತ್ವ' ಸ್ವೀಕರಿಸುತ್ತಿದ್ದಾರೆ ವಿನಃ ಸೋಲೋಪ್ಪುತ್ತಿಲ್ಲ! ಈ 'ಅರ್ಜುನ ಸಂನ್ಯಾಸತ್ವ' ಎಷ್ಟು ದಿನದ ನಾಟಕವೋ ಭವಿಷ್ಯವೇ ತೀರ್ಮಾನಿಸಬಲ್ಲುದು. ಅಂತೂ ಜ್ಞಾನಪೀಠಿಗಳೂ ತಮ್ಮ ನಿಂತ ಕಾಲ ಇನ್ನೊಮ್ಮೆ ತಿಪ್ಪರಲಗಾಟಿ ಹೊಡೆದು ಜನರಿಗೆ ಮನರಂಜನೆ ನೀಡಿದ್ದಾರೆ. ಅವರಿಗೆ 'ಅನಂತ' ಧನ್ಯವಾದಗಳು.

- ವಾಙ್ಮಯಿ, ಬಿಜಾಪುರ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಜೈ ಗುರೂಜಿಯವರಿಗೆ ಜಯವಾಗಲಿ !! ವಾಙ್ಮಯಿಯವರ ಬರಹ ಹಾಕಿದ್ದಕ್ಕೆ ಧನ್ಯವಾದಗಳು. ಚೆನ್ನಾಗಿದೆ. ಮುಂದೆಯೂ ಇಂತಹ ಬರಹಗಳನ್ನು ಹಾಕುತ್ತಿರಿ. ನೀವೂ ಬರೆಯುತ್ತಿರಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವೈಯಕ್ತಿಕವಾದ ಹಾಗೂ ಅಸಾಹಿತ್ಯಿಕವಾದ ಟೀಕೆಮಾಡಿದ ಅನಂತಮೂರ್ತಿಗಳ ವರ್ತನೆ ನಿಜಕ್ಕೂ ಬೇಸರತರಿಸುತ್ತದೆ.

ಮೂರ್ತಿಗಳ ಕುರಿತಾಗಿ ಇರುವ ನಮ್ಮ ಭಿನ್ನಾಭಿಪ್ರಾಯಗಳೆಲ್ಲ ಸಾಹಿತ್ಯಿಕವಾದವುಗಳಾದ್ದರಿಂದ ನಮ್ಮ ಪ್ರತಿಕ್ರಿಯೆ ಸಾಧ್ಯವಾದಷ್ಟೂ ವಸ್ತುನಿಷ್ಠವಾಗಿರಬೇಕು. ನಾವೂ ಕೂಡ ಮೂರ್ತಿಗಳ ಬಗ್ಗೆ ವೈಯಕ್ತಿಕ ಟೀಕೆ ಮಾಡದಿರೋಣ. ಏನಾದರೂ, ಮೂರ್ತಿಗಳು ಕನ್ನಡದ ಉತ್ತಮ ಸಾಹಿತಿಗಳೆಂಬುದರಲ್ಲಿ ಸಂಶಯವಿಲ್ಲ.

ಪ್ರೀತಿಯಿಂದ,

ವಿವೇಕಾನಂದ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಾಪ ಸಿಂಹ ಎಂಬ ತಥಾಕಥಿತ ಕಾಲಮಿಸ್ಟರ ಮತ್ತು ವಿಕ್ರಮ ಎಂಬ ಪತ್ರಿಕೆಗಳ ವಿಶ್ವಾಸಾರ್ಹತೆ ಎಷ್ಟು ಎಂಬುದರ ಬಗ್ಗೆ ನನಗೆ ಪ್ರಶ್ನೆಗಳಿವೆ. ವಿಕ್ರಮ ಎಂಬ ಆರ್ ಎಸ್ ಎಸ್ ಮುಖವಾಣಿ ತನ್ನ ಹುಟ್ಟಿನಿಂದ ಈವರೆಗೂ ಪ್ರತಿಪಾದಿಸುತ್ತಾ ಬಂದ ಮೌಲ್ಯ ಎಂಥದು ಎಂಬುದರ ಬಗ್ಗೆ ಬುದ್ಧಿ ಇರುವ ಎಲ್ಲರಿಗೂ ತಿಳಿದಿದೆ. ದಲಿತರ ಮಾರಣ ಹೋಮಕ್ಕೆ ಯಾವತ್ತೂ ಪ್ರತಿಕ್ರಿಯಿಸದ ಈ ಪತ್ರಿಕೆ ಭೈರಪ್ಪನವರು ಬರೆದ ಒಂದು ಮೂರನೇ ದರ್ಜೆ ಕಾದಂಬರಿಯನ್ನು ಇತಿಹಾಸ ಎಂದು ಹೇಳಲು ಹೊರಟಿದೆ. ಇದನ್ನು ಇತಿಹಾಸವಲ್ಲ ಎಂದವರನ್ನು ವೈಯಕ್ತಿಕವಾಗಿ ಟೀಕಿಸುತ್ತಿದೆ. ಅನಂತಮೂರ್ತಿಯವರು ಭೈರಪ್ಪನವರ ವೈಯಕ್ತಿಕವಾಗಿ ಯಾವ ಮಾತುಗಳನ್ನಾಡಿದ್ದಾರೆ ಎಂಬುದನ್ನು ಅವರ ಭಾಷಣದ ಆಡಿಯೋ ಮತ್ತು ಅದರ ಬರೆಹ ರೂಪದ ಸಾರಾಂಶವನ್ನು ಮತ್ತೆ ಮತ್ತೆ ಓದಿ ಖಚಿತ ಪಡಿಸಿಕೊಂಡೆ.
ಅನಂತಮೂರ್ತಿ ಭೈರಪ್ಪನವರ ಜತೆಗಿನ ತಮ್ಮ ಒಡನಾಟವನ್ನು ನೆನಪಿಸಿಕೊಂಡಿದ್ದಾರೆ. ಅವರದ್ದೊಂದು ಕಾದಂಬರಿ ತನಗೆ ಇಷ್ಟವಾಗಿದ್ದನ್ನೂ ಹೇಳಿದ್ದಾರೆ. ಹಾಗೆಯೇ ಅವರ ಇಷ್ಟವಾಗದ ಕಾದಂಬರಿಗಳ ಬಗ್ಗೆಯೂ ಮಾತನಾಡಿದ್ದಾರೆ. ಅನಂತಮೂರ್ತಿ ಅವರು ಹೇಳಿರುವ ಮಾತುಗಳಲ್ಲಿ ಹೊಸತೇನೂ ಇಲ್ಲ. ಅವರ ಸನ್ನಿವೇಶ ಎಂಬ ಬರೆಹಗಳ ಸಂಕಲನದಲ್ಲಿಯೇ ಭೈರಪ್ಪನವರ ಬಗ್ಗೆ ತಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಈ ಭಾಷಣದಲ್ಲಿ ಹೇಳಿರುವ ಅಭಿಪ್ರಾಯಗಳನ್ನು ಸುಮಾರು 25-30 ವರ್ಷಗಳ ಹಿಂದೆಯೇ ಹೇಳಿದ್ದರು. ಅನಂತಮೂರ್ತಿ ಭೈರಪ್ಪನವರ ವೈಯಕ್ತಿಕ ಟೀಕೆ ಮಾಡಿದ್ದಾರೆ ಎಂದು ಇಲ್ಲಿ ಅಬ್ಬರಿಸುತ್ತಿರುವ ಎಲ್ಲರೂ ಆ ಟೀಕೆಗಳು ಯಾವುದು ಎಂದು ಹೇಳುತ್ತಿಲ್ಲ. ಇದು ಪಕ್ಕಾ ಆರ್ ಎಸ್ ಎಸ್ ತಂತ್ರ.
ರಮೇಶ್ ಸಮಗಾರ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Prasad
ತಾವು ಇಲ್ಲಿ ದಲಿತ, ಅಲ್ಪಸಂಖ್ಯಾತ, ಇತ್ಯಾದಿ ಜಾತಿಗಳನ್ನು ಸೇರಿಸಬೇಕೆಂದು ಹೇಳಿ, ವಿಕ್ರಮದಂಥ ರಾಷ್ಟ್ರೀಯ ಪತ್ರಿಕೆಯನ್ನು ಜಾತಿವಾದಿಗಳನ್ನಾಗಿ ಮಾಡಲು ಹೊರಟಂತಿದೆಯಲ್ಲವೇ?

ಅಷ್ಟಾಗಿ ದಲಿತರ ಬಗ್ಗೆ, ಅಂಬೇಡ್ಕರ್ ವಾದದ ಬಗ್ಗೆ RSS ನವರಿಗೆ ತಿಳಿಸಬೇಕಾಗಿಲ್ಲ,ಅವರು ತಿಳಿಸುತ್ತಿರುವುದು ರಾಷ್ಟ್ರವಾದ.

ದಲಿತರ ಬಗ್ಗೆ ಬರೆಯುವುದರಿಂದ ಅವರ ಉದ್ಧಾರ ಹೇಗೆ ಸಾಧ್ಯ?ಅಷ್ಟಕ್ಕೂ ದಲಿತರ ಬಗ್ಗೆ ಬರೆಯಲು ಸಾಕಷ್ಟು ಪತ್ರಿಕೆಗಳಿರುವಾಗ ನಿಮಗೆ ಇನ್ನೂ ಬೇಕೆನ್ನಿಸಿತಾ?

RSS ನವರು "ದಲಿತರು" ಎಂದು ಸಂಬೋಧಿಸುವುದೂ ಇಲ್ಲ.ಅವರನ್ನು "ಶೋಷಿತ ಬಂಧುಗಳು" ಎನ್ನುತ್ತಾರೆ.
ಬ್ರಾಹ್ಮಣ ಸ್ವಾಮಿಗಳನ್ನು ತಥಾ-ಕಥಿತ "SLUM"ಗಳಿಗೆ ಕರೆದುಕೊಂಡು ಹೋಗಿ, ಆ ದಲಿತರ ಮನೆಯಲ್ಲಿಯೇ, ದಲಿತರೇ ಮಾಡಿ, ಬಡಿಸಿದ ಊಟ ಮಾಡುವಂತೆ ಮಾಡಿದ ಅನೇಕ ಉದಾಹರಣೆಗಳಿವೆ.
So RSSನವರಿಗೆ ದಲಿತರ ಬಗ್ಗೆ ಬರೆಯುವುದೇನೂ ಇರುವುದಿಲ್ಲ, ಬರೀ ಆ ಮಾರ್ಗದಲ್ಲಿ ಕೆಲಸ ಮಾಡುತ್ತಾರೆ.

ಆದರೆ ನಿಮ್ಮ U R Ananthmurty, Girish Karnad, etc ಬುದ್ಧಿಜೀವಿಗಳು, secularವಾದಿಗಳೂ ಅಂತ ತಮ್ಮನ್ನು ತಾವು ಕರೆದುಕೊಂಡವರು ಎಷ್ಟು ದಲಿತರ ಮನೆಗಳನ್ನು ಬಲ್ಲರು?
ತಿಳಿದು ಪ್ರತಿಕ್ರಿಯಿಸಿದರೆ ಉತ್ತಮ.....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆಹಾ ಆರ್ ಎಸ್ ಎಸ್ ನ ರಾಷ್ಟ್ರೀಯತೆ. ಅಂದರೆ ಸವರ್ಣೀಯತೆ. 1925ರಲ್ಲಿ ಈ ಸಂಘಟನೆ ಹುಟ್ಟಿತ್ತು. ಅಲ್ಲಿಂದ 1947ರ ತನಕ ನಡೆದ ಸ್ವಾತಂತ್ರ್ಯ ಚಳವಳಿಯಲ್ಲಿ ಈ 'ರಾಷ್ಟ್ರೀಯವಾದಿ'ಗಳಲ್ಲಿ ಒಬ್ಬರಾದರೂ ಬ್ರಿಟಿಷ್ ಸರಕಾರದಿಂದ ಬಂಧಿಸಲ್ಪಟ್ಟಿದ್ದಾರಾ? ಅದು ಬಿಡಿ ಪ್ರಧಾನಿಯೂ ಆಗಿದ್ದ ಅಟಲ್ ಬಿಹಾರಿ ವಾಜಪೇಯಿಯವರೇ ಸ್ವಾತಂತ್ರ್ಯ ಹೋರಾಟಗಾರರನ್ನು ಹಿಡಿದುಕೊಟ್ಟ ಕತೆ ಯಾರಿಗೆ ಗೊತ್ತಿಲ್ಲ. ಆರ್ ಎಸ್ ಎಸ್ ನ ಕನಸಾಗಿರುವ ಹಿಂದೂ ರಾಷ್ಟ್ರ ಎಂಥದು ಎಂಬುದು ದಲಿತರಿಗೆ ಚೆನ್ನಾಗಿ ಗೊತ್ತು. ಅದರ ಕನಸಿನಲ್ಲಿರುವುದು ಚಿಂತನೆಯ ಗೊಂಚಲಿನಲ್ಲಿ ಸಾಕಷ್ಟು ಬಾರಿ ಗೋಳ್ವಾಲ್ಕರ್ ಹೇಳಿರುವ ವರ್ಣಾಶ್ರಮ ಧರ್ಮಾಧಾರಿತ ರಾಷ್ಟ್ರ. ಅಯ್ಯೋ ಈ ರಾಷ್ಟ್ರ ನಮಗೆ ಬೇಡಪ್ಪ...

'ಶೋಷಿತ ಬಂಧುಗಳು' :) :)
ಶೋಷಕರು ಕರೆಯಬೇಕಾದದ್ದು ಹೀಗೆಯೇ ಅಲ್ಲವೇ?
ಅನಂತಮೂರ್ತಿ ಅಥವಾ ಗಿರೀಶ್ ಕಾರ್ನಾಡ್ ಗೆ ಎಷ್ಟು ಮಂದಿ ದಲಿತ ಗೆಳೆಯರಿದ್ದಾರೆ ಎಂಬುದು ಭೈರಪ್ಪನವರ ಹೊರತಾದ ಕನ್ನಡ ಲೇಖಕರಿದ್ದಾರೆ ಎಂದು ತಿಳಿದಿರುವ ಎಲ್ಲಾ ಕನ್ನಡಿಗರಿಗೂ ಗೊತ್ತಿದೆ.
ರಮೇಶ್ ಸಮಗಾರ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಮೇಶರೆ ನಮಸ್ಕಾರ,
ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಗ್ಗೆ ನಿಮ್ಮದು ಪೂರ್ವಾಗ್ರಹ ಪೀಡಿತ ಭಾವನೆ ಅನ್ನಿಸುತ್ತದೆ. "Bunch of Thoughts" ಎಂಬ ಪುಸ್ತಕವಿದೆ. ಅದನ್ನೊಮ್ಮೆ ಓದಿ ನೋಡಿ (ಕನ್ನಡ ಆವೃತ್ತಿಗೆ "ಚಿಂತನ ಗಂಗಾ" ಎಂದು ಹೆಸರು). ಗೋಳ್ವಲ್ಕರು ಅವರು ಯಾವ ತರಹದ ರಾಷ್ಟ್ರದ ಬಗ್ಗೆ ಕಲ್ಪನೆ ಇಟ್ಟುಕೊಂಡಿದ್ದರು ಎಂಬುದು ನಿಮಗೇ ತಿಳಿಯುತ್ತದೆ. ವರ್ಣ ಹಾಗೂ ಜಾತಿ ವ್ಯವಸ್ಠೆಯ ಸಮಸ್ಯೆಗಳ ಬಗ್ಗೆ RSS ನ ಉತ್ತರ ಏನು ಅಂತ ನಿಮಗೇ ತಿಳಿಯುತ್ತದೆ.
ಅರ್ಧ ತಿಳುವಳಿಕೆ ಯಾವಾಗಲೂ ಅಪಾಯಕಾರಿ.
ಕೊಂಡಿ ಇಲ್ಲಿದೆ:
http://www.hindubooks.org/bot/

ಧನ್ಯವಾದ,
ಕೇಶವ ಮುರಳಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೊ೦ಧಿ ಒದಗಿಸಿದಕ್ಕಾಗಿ ಧನ್ಯವಾದ !
ಸ್ವಲ್ಪ ಓದಿದೆ ಕೆಲವು ವಿಚಾರಗಳು ಸರಿ ಅನ್ನಿಸಿದರೂ , ಇವರ ಬರವಣಿಗೆ ಬಗ್ಗೆ
ನನಗೆ ಸಾಕಷ್ಟು ಅನುಮಾನವಿದೆ.
ಉದಾಹರಣಿಗೆ ಅವರು ಆಗಾಗ ಬಳಸುವ ಪದ "Duty" "IDeal" ಗಳನ್ನು ನೋಡಿದರೆ
ಅವರ Vision ಏನಿದೆ ಅದು ಮನುಷ್ಯನನ್ನು ಅರ್ಥ ಮಾಡಿಕೊ೦ಡಿಲ್ಲಾ ಎ೦ದೇ ನನ್ನ ಊಹೆ.
ಜಿಡ್ಡು ರವರು ಈ ರೀತಿ ಹೇಳಿದ್ದಾರೆ !(ಅನುವಾದ ಮಾಡಿಲ್ಲಾ ಕ್ಷಮಿಸಿ !)
Does love have responsibility and duty, and will it use those words? When you do something out of duty is there any love in it? In duty there is no love. The structure of duty in which the human being is caught is destroying him. So long as you are compelled to do something because it is your duty you don't love what you are doing. When there is love there is no duty and no responsibility.

ಮತ್ತೊ೦ದು Our Enemy is ENglish " ಎ೦ದು ಹೇಳಿ
ಅವರು ENglish ನಿ೦ದ ನಮಗೆ ಆದ ಲಾಭವನ್ನು ಮರೆತ೦ತಿದೆ.

ಮತ್ತೊ೦ದು "BUNCH OF THOUGHTS" ಎ೦ದು ಪುಸ್ತಕದ ಹೆಸರನ್ನು
ಇಟ್ಟಿರುವುದು. ನಮ್ಮ ಭಾರತೀಯ ಧರ್ಮದ (ಬುದ್ಧ, ರಮಣ) ಶಕ್ತಿಯಿರುವುದೇ "ಮನಸ್ಸನ್ನು ನಾಶಗೊಳಿಸಿ ಹೃದಯದಿ೦ದ ಬದುಕುವುದಕ್ಕೆ".ಇಲ್ಲಿ ಮನಸ್ಸಿನ ಆಲೋಚನೆಗಳಿಗೆ ಮತ್ತಷ್ಟೂ ಪ್ರಲೋಭನೆಯನ್ನು ಒದಗಿಸುವ ಸಾಕಷ್ಟು ವಿಚಾರಗಳು ಇವೆ.
ರಮಣ ಮಹರ್ಷಿಯ೦ತಹ ನಿಜ ಗುರುಗಳನ್ನು ಮರೆತು, ಈ ರೀತಿ ಅಲ್ಪ ಅರಿವು ಉಳ್ಳವರನ್ನು
ಗುರುವಾಗಿ ಬಿ೦ಬಿಸಿ ಪ್ರಚಾರ ಕೊಡುತ್ತಿರುವುದು ನಿಜಕ್ಕೂ ಜನರನ್ನು "ಭಾರತೀಯ ಧರ್ಮದ ಬಗ್ಗೆ"
ದಾರಿ ತಪ್ಪಿಸುತ್ತದೆ.

ಒಟ್ಟಿನಲ್ಲಿ ಯಾವುದೇ ಸ೦ಘಟನೆ (RSS, missionary, IOC)
ಸತ್ಯದ ಹತ್ತಿರ ನಮ್ಮನ್ನು ಕೊ೦ಡು ಹೋಗುವುದಕ್ಕೆ ಆಗುವುದಿಲ್ಲಾ
ಮತ್ತು ಅದು ಸತ್ಯದಿ೦ದ ನಮ್ಮನ್ನು ದೂರ ಉಳಿಯುವ೦ತೆ ಮಾಡುತ್ತದೆ ಎನ್ನುವುದಕ್ಕೆ
ಈ ಪುಸ್ತಕ ಸಾಕ್ಷಿ.

( - ಸಮಯದ ಅಭಾವದಿ೦ದ ಅನುವಾದ ಮಾಡಿಲ್ಲಾ ಕ್ಷಮಿಸಿ ! ಹಾಗೂ ಕಾಫಿ ಪೇಶ್ಟಿನ ಕೆಲಸ ಸುಲಭ :):) )

Most parents unfortunately think they are responsible for their children and their sense of responsibility takes the form of telling them what they should do and what they should not do, what they should become and what they should not become. The parents want their children to have a secure position in society. What they call responsibility is part of that respectability they worship; and it seems to me that where there is respectability there is no order; they are concerned only with becoming a perfect bourgeois. When they prepare their children to fit into society they are perpetuating war, conflict and brutality. Do you call that care and love? Really to care is to care as you would for a tree or a plant, watering it, studying its needs, the best soil for it, looking after it with gentleness and tenderness - but when you prepare your childrren to fit into society you are preparing them to be killed. If you loved your children you would have no war. When you lose someone you love you shed tears - are your tears for yourself or for the one who is dead? Are you crying for yourself or for another? Have you ever cried for another? Have you ever cried for your son who is killed on the battlefield? You have cried, but do those tears come out of self-pity or have you cried because a human being has been killed? If you cry out of self-pity your tears have no meaning because you are concerned about yourself. If you are crying because you are bereft of one in whom you have invested a great deal of affection, it was not really affection. When you cry for your brother who dies cry for him. It is very easy to cry for yourself because he is gone. Apparently you are crying because your heart is touched, but it is not touched for him, it is only touched by self- pity and self-pity makes you hard, encloses you, makes you dull and stupid.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮತ್ತೊ೦ದು ವಿಚಾರ ರಾಮ ಭಕ್ತರಿಗೂ ಶ್ರಿ ಕೃಷ್ಣ ಭಕ್ತರಿರೂ ಇರುವ ವ್ಯತ್ಯಾಸವನ್ನು ಓಶೋ ಚೆನ್ನಾಗಿ ಬಣಿಸಿದ್ದಾರೆ.

It is true that devotees of Rama, like Hanumana, seem to be strong, active and sincere people, the devotees of Krishna are not so. Meera goes about dancing and singing, but she does not seem to be as dynamic as Hanumana. She cannot be. The reason is that while Rama takes life seriously, believes life is all work, Krishna is non-serious and takes life as a dance, a celebration. And life as celebration is a different thing altogether. Life as work pales in insignificance before it. If you are asked to spend twenty-four hours in the company of Hanumana you will think twice. You would want to run away from him if you were made to live in the same room with him for a long while. But you can live with Meera joyfully for any length of time.

ಇಲ್ಲಿ ರಾಮ ಭಕ್ತರು ಮಸೀದಿಯನ್ನು ಉರುಳಿಸಿದಾದ ನ೦ತರ ಏನು ಮಾಡ ಬೇಕು ಅನ್ನುವುದು ತೋಚದಾಯಿತು.

It will be a peaceful and happy world that will abound with Meeras. And a world full of Hanumanas will be a restless and warring world, a sorry world. If it comes into being, wrestling rings will appear all over and society will be ridden with conflict and strife. We can accommodate one or two Hanumanas; more than that would be too much.

ಎಷ್ಟು ನಿಜ !!! ನಮ್ಮ ಸಮಾಜಕ್ಕೆ "ರಾಮ ಭಕ್ತರು ಬೇಕು ಆದರೆ ಒ೦ದು ಸ೦ಘಟನೆಯಾದರೆ ತು೦ಬಾ ಕಷ್ಟ !!"

It is true that Krishna's lovers gradually withdrew themselves from the world of outer activity, from the world of extroversion. They dived deep into the interiority of life and drank at the fountain of its bliss. This is as it should be, because Krishna knows how, when you lose yourself in its outer activities, you are missing life itself.

Krishna does not take life as work, as duty; he takes it as a celebration, a festivity. Life is really a great feast, a blissful festivity. It is not homework, not a task that has to be performed willy nilly. It is not that someone will cease to work if he takes life as a celebration. He will certainly work, but his work will be a part of the festivity, it will have the flavor of celebration. Then work will happen in the company of singing and dancing. It is true there will not be too much work, it will be less in quantity, but in quality it will be superb. Quantitatively the work will be less, but qualitatively it is going to be immeasurable.

You must have noticed how people who are addicted to work, who turn everything into work, have filled life with tension and only tension. All anxieties of life are the handiwork of the workaholics; they have turned life into a workshop. Their slogan is, do or die. They say, "Do something as long as you are alive, or die if you cannot do anything." They have no other vision of life except work. And they don't have even a right perspective of work. Work for what? Why does man work?

Krishna takes life as festivity, as a play, fun. It is how flowers, birds and stars take life. Except man, the whole world takes life as play, fun. Ask a flower why it blooms. For what? It blooms without a purpose. A star moves across the sky without a purpose. And purposelessly the wind blows, and keeps blowing. Except man, everything under the sun is a play, a carnival. Only man works and toils and sheds copious tears. Except man, the whole cosmos is celebrating. Every moment of it is celebration.
Krishna brings this celebration into the life of man. He says, let man be one with this cosmic celebration.

I am in complete agreement with Krishna's vision of life, which is one of celebration. I am a celebrationist. May I ask what man has achieved by working day in and day out? It is different if he works for the love of work, but I would like to know what he has achieved so far by working meaninglessly?

For God's sake, know love directly, enter into it, and only then you will be satiated and happy. Real love alone can make life festive, entertainment won't.
Krishna is all for celebration; he takes life as a great play, a mighty drama. The work-addicts have, instead of doing any good to the world, only created confusion and complication in the life of man. They have made life so complex that living has become extremely hard and painful.

It is true that devotees of Rama, like Hanumana, seem to be strong, active and sincere people, the devotees of Krishna are not so. Meera goes about dancing and singing, but she does not seem to be as dynamic as Hanumana. She cannot be. The reason is that while Rama takes life seriously, believes life is all work, Krishna is non-serious and takes life as a dance, a celebration. And life as celebration is a different thing altogether. Life as work pales in insignificance before it. If you are asked to spend twenty-four hours in the company of Hanumana you will think twice. You would want to run away from him if you were made to live in the same room with him for a long while. But you can live with Meera joyfully for any length of time.

It is true that Krishna's lovers gradually withdrew themselves from the world of outer activity, from the world of extroversion. They dived deep into the interiority of life and drank at the fountain of its bliss. This is as it should be, because Krishna knows how, when you lose yourself in its outer activities, you are missing life itself.

It will be a peaceful and happy world that will abound with Meeras. And a world full of Hanumanas will be a restless and warring world, a sorry world. If it comes into being, wrestling rings will appear all over and society will be ridden with conflict and strife. We can accommodate one or two Hanumanas; more than that would be too much. But any number of Meeras will be welcome. Meera is in contact with life at its deeper levels; Hanumana lives at the surface. Hanumana is nothing more than a faithful servant, a volunteer; he is just serving his master. He is, of course, sincere, persevering and hard-working. Meera is a class by herself; she is rare. Her bliss, her ecstasy comes from being, not from doing. For her, just being is festive and joyous. Her song, her dance, is not a piece of work for her, it is an expression of her bliss, her ecstasy. She is so blissful that she is bursting into song and dance.

http://www.oshoworld.com/onlinemag/nov2003/htm/infocus.asp

ಸೇವಕ ರಾಗದೆ ನಾವೆಲ್ಲರೂ ಮಾಸ್ಟರ್ (ಯೋಗಿ ) ಗಲಾಗುವುದಕ್ಕೆ ತಾನೇ ಹೇಳಿದ್ದು ಕೃಷ್ಣ !
RSS ಸಮಾಜದಿ೦ದ ಅದೆಷ್ಟು ಸ೦ಗೀತಗರರು ಬ೦ದಿರುವರು ಅನ್ನುವುದನ್ನು ತಿಳಿಸಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮುರಳಿ,
ತಕ್ಷಣದ ಪ್ರತಿಕ್ರಿಯೆಗಾಗಿ ಧನ್ಯವಾದಗಳು. ನಾನು "Bunch of Thoughts" ಏನೂ ಧರ್ಮ ಗ್ರಂಥ ಎಂದು ಹೇಳಿಲ್ಲ,ನಂಬೂ ಇಲ್ಲ.
ಜಾತಿ ಪದ್ಧತಿ ಮತ್ತು ವರ್ಣಾಶ್ರಮ ವ್ಯವಸ್ಥೆ ಯ ಬಗ್ಗೆ ಗೋಳ್ವಲ್ಕರ್ ಅವರ ನಿಲುವುಗಳು ಏನಿದ್ದವು ಎಂಬುದನ್ನು ರಮೇಶರಿಗೆ ಸ್ಪಷ್ಟ ಪಡಿಸುವುದು ನನ್ನ ಉದ್ದೇಶವಾಗಿತ್ತು.
ಮೊದಲು ಆ ಹೊತ್ತಿಗೆಯನ್ನು ಪೂರ್ಣ ಓದಿ. ಆಮೇಲೆ ಚರ್ಚೆ ಮಾಡೋಣಂತೆ -:) . ಈ ಪುಸ್ತಕದ ಸಂಕಲನವಾಗಿದ್ದು ೭೦ರ ದಶಕದಲ್ಲಿ ಎಂಬುದೂ ನೆನಪಿನಲ್ಲಿರಲಿ.
ಓಶೋ ಮತ್ತು ಜೆ.ಕೆ ಮುಂತಾದವರಬಗ್ಗೆ ಹೊಸ ಚರ್ಚೆ ಶುರು ಮಾಡಿ. ಅಲ್ಲಿ ಚರ್ಚಿಸೋಣ.

ಧನ್ಯವಾದ,
ಕೇಶವ ಮುರಳಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗೋಳ್ವಾಲ್ಕರ್ ಅವರ ರಾಷ್ಟ್ರೀಯತೆ ಹಿಟ್ಲರ್ ನ ರಾಷ್ಟ್ರೀಯತೆಯನ್ನು ಹೋಲುತ್ತಿರುವುದಂತೂ ನಿಜ. ಆರ್ ಎಸ್ ಎಸ್ ನವರ ಟೋಪಿ ಬಂದದ್ದೂ ನಾಜಿಗಳ ಟೋಪಿಯಿಂದಲೇ ಅಲ್ಲವೇ?
ರಮೇಶ್ ಸಮಗಾರ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

"ಆರ್ ಎಸ್ ಎಸ್ ನವರ ಟೋಪಿ ಬಂದದ್ದೂ ನಾಜಿಗಳ ಟೋಪಿಯಿಂದಲೇ ಅಲ್ಲವೇ?"

ತು೦ಬಾ ತಿಳಿದು ಕೊ೦ಡಿದ್ದೀರಾ ನೀವು ಸ್ವದೇಶಿಯರ ಬಗ್ಗೆ !
ಹಾಗೆ ಆರ್ ಎಸ್ ಎಸ್ ನವರ ಚಡ್ಡಿ /ಲಾಠಿ ಎಲ್ಲಿ೦ದ ಬ೦ತು ? ಕೊ೦ಚ ಹೇಳಿ.
ಆಮೇಲೆ ನಾಜಿಗಳ ಟೋಪಿ/ಗನ್ ಯಾರಿ೦ದ ಬ೦ತು ?
ಒಮ್ಮೊಮ್ಮೆ ಗಾ೦ಧಿ, ನೆಹರೂ ಟೋಪಿ ಕೂಡ Dangerous ಅನ್ಸತ್ತೆ !
ಒಟ್ಟಿನಲ್ಲಿ "ಟೋಪಿ" ಹಾಕುವವರೇ ಎಲ್ಲರೂ !
ಟೋಪಿಗೆ Copy Right ಇರಬೇಕು ಏನ೦ತ್ತೀರಿ ??

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

(ಮಾತಿನ ಧಾಟಿ ತಪ್ಪಿಸಿದ್ದಕ್ಕೆ ಕ್ಷಮೆ ಕೇಳುತ್ತಾ..... )
ಗಾಡ್ವಿನ್ನನ ಲಾ [wikipedia] ನಿಜ ಅನ್ಸುತ್ತೆ :P
http://www.wired.com/wired/archive/2.10/godwin.if.html

ರಮೇಶಣ್ಣಾ, ನಿಮ್ಮ ಹೇಳಿಕೆಗಳಿಗೆ (ನಾಜಿಗಳ ಟೋಪಿ ಮತ್ತಿತರ ಮಾತು) ಆಧಾರ ಕೊಡಿ.

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

^^^^^^^^^^
ನಾನು ಗಾಡ್ವಿನ್ ಅಭಿಮಾನಿಯಾಗಿ ಬಹಳ ದಿನಗಳೇ ಆಗಿಹೋದವು. ;)

ಸಂದೀಪ ಐತಾಳ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಲ್ಲಿಂದ 1947ರ ತನಕ ನಡೆದ ಸ್ವಾತಂತ್ರ್ಯ ಚಳವಳಿಯಲ್ಲಿ ಈ 'ರಾಷ್ಟ್ರೀಯವಾದಿ'ಗಳಲ್ಲಿ ಒಬ್ಬರಾದರೂ ಬ್ರಿಟಿಷ್ ಸರಕಾರದಿಂದ ಬಂಧಿಸಲ್ಪಟ್ಟಿದ್ದಾರಾ?

ರಮೇಶ,

ಆರ್ ಎಸ್ ಎಸ್ ಬಗ್ಗೆ ಸ್ವಲ್ಪ ಓದಿ ತಿಳಿದುಕೊಡಿದ್ದೀರಿ, ಅದು ಉತ್ತಮ. ಆದರೆ ಅರ್ಧಮರ್ಧ ತಿಳಿದಿದ್ದೀರಿ. ಅದು ಅಪಾಯಕಾರಿ. ಕೇವಲ ಎನ್. ರಾಮರ ಫ್ರಂಟ್ ಲೈನ್ ಪತ್ರಿಕೆ ಓದಿಯೇ ನಾನು ಎಲ್ಲಾ ಇತಿಹಾಸ ತಿಳಿದುಕೊಡಿದ್ದೇನೆ ಎನ್ನುವದು ಅದು ಇನ್ನೂ ಅಪಾಯಕಾರಿ. ಫ್ರಂಟ್ ಲೈನ್ ಏಕೆ ಪ್ರಸ್ತಾಪಿಸಿದೆ ಎನ್ನುವದು ನಿಮಗೆ ಅರ್ಥವಾಗಿದೆ ಎಂದು ಭಾವಿಸುವೆ ;-)

ದಯವಿಟ್ಟು ಇನ್ನೂ ಸ್ವಲ್ಪ ಘಂಟೆಗಳನ್ನು ಇತಿಹಾಸ ಅಧ್ಯಯನಕ್ಕೆ ಮೀಸಲಿಡಿ. ಆಗ ನಿಮಗೆ ಎರಡೂ ಮಗ್ಗುಲಿನ ಅರಿವಾಗಿ ಇಂತಹ ಅಪೋಲಕಲ್ಪಿತ, ರಂಜನೀಯ ಅರ್ಧಸತ್ಯಗಳು ಖುಷಿಕೊಡುವದಿಲ್ಲ !

ನಿಮ್ಮ ಆಧಾರ ಪುಸ್ತಕಗಳ ಮಾಹಿತಿ ಬೇಕಿದ್ದರೆ ತಿಳಿಸಿ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

"ವಿಕ್ರಮ" ಕ್ಕಿಂತ ಹೆಚ್ಚಿನ ವಿಶ್ವಾಸಾರ್ಹತೆ ಖಂಡಿತವಾಗಿಯೂ ಫ್ರಂಟ್ ಲೈನ್ ಗೆ ಇದೆ. ಎರಡೂ ಮಗ್ಗುಲಿನಿಂದ ತಿಳಿದುಕೊಂಡಿರುವ ತಮಗೆ ದಲಿತರ ಮೇಲಿನ ವರ್ತಮಾನದ ದೌರ್ಜನ್ಯ ಕೂಡಾ ಅರ್ಥವಾಗಿಲ್ಲವಲ್ಲ. ವಿಕ್ರಮ, ಗೋಳ್ವಾಲ್ಕರ್, ಹೆಡಗೆವಾರ್ ಎಲ್ಲರೂ ವರ್ಣಾಶ್ರಮ ಧರ್ಮವನ್ನು ಯಾವ್ಯಾವ ಬಗೆಯಲ್ಲಿ ಪ್ರತಿಪಾದಿಸುತ್ತಾರೆ ಎಂದು ತಿಳಿಯುವುದಕ್ಕೆ ಹೆಚ್ಚು ಕಷ್ಟಪಡಬೇಕಿಲ್ಲ. ಕೇವಲ ಸಾಮಾನ್ಯ ಜ್ಞಾನವೊಂದಿದ್ದರೆ ಸಾಕಾಗುತ್ತದೆ. ರಂಜನೀಯವಾಗಿ ಬರೆಯುವುದು ತಮ್ಮವರು ಸ್ವಾಮಿ. ಭೈರಪ್ಪನವರನ್ನೇ ತೆಗೆದುಕೊಳ್ಳಿ. ತಮ್ಮ ಬ್ರಾಹ್ಮಣಿಕೆಯನ್ನು ಒಕ್ಕಲಿಗರ ಮೂಲಕ ಹೇರಲು ಇತಿಹಾಸವನ್ನು ಬಳಸಿಕೊಳ್ಳಲು ಹೊರಡುತ್ತಾರೆ. ಅವರಿಗೊಂದು ಇತಿಹಾಸ ಪುಸ್ತಕವನ್ನು ಬರೆದು ತಮ್ಮ ಸುಳ್ಳನ್ನು ಸತ್ಯವೆಂದು ಸಾಬೀತು ಮಾಡಲು ಸಾಧ್ಯವಿಲ್ಲ. ಅದಕ್ಕಾಗಿ ಅವರು ಕಾದಂಬರಿಯನ್ನು ಬರೆಯುತ್ತಾರೆ. ಅಯ್ಯೋ ಇದು ನಮಗೆ ಹೊಸತಲ್ಲ ಸ್ವಾಮಿ. 18 ಪುರಾಣಗಳ ಮೂಲಕ, ಹತ್ತು ಅವತಾರಗಳ ಮೂಲಕ ನಮ್ಮನ್ನು ಶೋಷಿಸಿದ ಕತೆ ನಮಗೆ ಚೆನ್ನಾಗಿ ನೆನಪಿದೆ. ಪಾಪ ಮುಸ್ಲಿಮರಿಗೆ ಇದು ಹೊಸತು ಅಷ್ಟೇ.
ರಮೇಶ್ ಸಮಗಾರ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

"ವಿಕ್ರಮ, ಗೋಳ್ವಾಲ್ಕರ್, ಹೆಡಗೆವಾರ್ ಎಲ್ಲರೂ ವರ್ಣಾಶ್ರಮ ಧರ್ಮವನ್ನು ಯಾವ್ಯಾವ ಬಗೆಯಲ್ಲಿ ಪ್ರತಿಪಾದಿಸುತ್ತಾರೆ ಎಂದು ತಿಳಿಯುವುದಕ್ಕೆ ಹೆಚ್ಚು ಕಷ್ಟಪಡಬೇಕಿಲ್ಲ. ಕೇವಲ ಸಾಮಾನ್ಯ ಜ್ಞಾನವೊಂದಿದ್ದರೆ ಸಾಕಾಗುತ್ತದೆ."
ಯಾವ್ಯಾವ ಬಗೆಯಲ್ಲಿ ಪ್ರತಿಪಾದಿಸುತ್ತಾರೆ ಅಂತ ತಿಳಿಸಿದ್ದರೆ ಚೆನ್ನಾಗಿರುತ್ತಿತ್ತು.
ಭೈರಪ್ಪನವರನ್ನು ಯಾಕೆ ಮಧ್ಯ ಎಳೆಯುತ್ತೀರಿ ?. ಅವರು ಬರೆದದ್ದು ಸುಳ್ಳೆಂದು ಸಾಬೀತು ಪಡಿಸುತ್ತೀರ ?.ಅವರ ಕಾದಂರಿಯಲ್ಲಿ ನೀಡಿದ ಯಾವುದಾದರೂ ರೆಫರೆನ್ಸ್ ಗಳನ್ನು ಓದಿದ್ದೀರಾ ?. ಕಾದಂಬರಿಯಾಗಲಿ,ಇತಿಹಾಸ ಪುಸ್ತಕವಾಗಲಿ ಸತ್ಯ ಯಾವಾಗಲೂ ಸತ್ಯವೇ. ಸತ್ಯಕ್ಕೆ ಯಾವತ್ತೂ ಐಡಿಯಾಲಜಿ ಇರುವುದಿಲ್ಲ.
ನನ್ನ ಸಲಹೆ ಇಷ್ಟೇ. ಅರ್ಧಮರ್ಧ ತಿಳಿದು ಮಾತನಾಡಬೇಡಿ.
ಯಾರನ್ನಾದರೂ ಬೈಯುವುದು ಬಹಳ ಸುಲಭ . ಅದನ್ನು ಸಾಬೀತು ಪಡಿಸುವಷ್ಟು ನೈತಿಕ ಜವಾಬ್ದಾರಿ ಬೈದವನಿಗೆ ಇರಬೇಕು ಅಷ್ಟೆ.

ಧನ್ಯವಾದ,
ಕೇಶವ ಮುರಳಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.