jayaprakash M.G ರವರ ಬ್ಲಾಗ್

ಮೌನರೋದನ

ಮಿಂಚಾಗಿ ಬಂದಿಳಿದು ಸುಖದ ಸಿಂಚನವಾದೆ

ಬರಡಾದ ಜೀವನದಿ ಸಿರಿಹಸಿರ ಕೊನರಿಸಿದೆ

ಏರುಪೇರಿನ ದಾರಿಯಲಿ ಬಸವಳಿದು ಬೀಳುತಿರೆ

ಸಂತೈಸಿ ಜೊತೆಯಾದೆ ಸಿಹಿನೀರ ತೊರೆಯಂತೆ

ಪಯಣಮುಗಿಯುವ ಮುನ್ನ ಮರೆಯಾದೆ ಮಿಂಚಂತೆ

ಕರಗಿ ಹೋದುದು ಬೆಳಕು ಕಾರಿರುಳೆ ದಾರಿಯಲಿ

ನಿನ್ನ ನೆನೆಪಿನ ನೋವು ನಮ್ಮ ಕಣ್ಣ ಕಂಬನಿಗಳಲಿ

ನಿನ್ನ ನೆನೆಪಿನ ರೂಪ ನಮ್ಮ ಕಣ್ಣ ಕನ್ನಡಿಯಲಿ

ಚರಮ ಸೀಮೆಯಲಿನ್ನು ಚಿರಶಾಂತಿ ನಿನಗಿರಲಿ

ನಿನ್ನ ನೆನೆಪಿನ ನೋವಿನಲೆಗಳ ಹೊಡೆತ

ಎನ್ನೆದೆಯಾಳದ ಮೌನರೋದನದ ಮೊರೆತ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (4 votes)
To prevent automated spam submissions leave this field empty.
ಸರಣಿ: 

ಜೊಳ್ಳುಗನ್ನಡಿ

ಕೂಳುಗಳಿಪ ಕಾಳಕೌಶಲದೆಳೆಯಬಲೆಯೊಳು

ಸಿಲುಕಿ ನಿಂದಿಹ ನೀರಹನಿಗಳ ಗೋಳಗನ್ನಡಿ

ಸಾಲುಸಾಲಲಿ ಬಿಂಬ ರೂಪದಿ ಬಾಲಭಾಸ್ಕರ ಬಂದಿ ಬಲೆಯಲಿ

ಮಂದಮಾರುತ ಮುತ್ತನಿಕ್ಕಲು ಬಿಂಬ ಭಾಸ್ಕರ ಭಯದಿ ನಡುಗಲು

ಭಾರಿಬೇಟೆಯ ಕವಳದಾಸೆಗೆ  ಜೇಡನಿಳಿದನು ಎಳೆಯ ಜಾಡಲಿ

ಹಿಡಿಯಲೇನಿದೆ ಕಾಳಗೋಳಿನ ನೀರಹನಿಗಳಜೊಳ್ಳುಗನ್ನಡಿ

ಕಾಳಕೌಶಲ ಗೋಳಗನ್ನಡಿ ಬಿಂಬಭಾಸ್ಕರ ಮಂದಮಾರುತ

ಶಬ್ದ ಬಿಂಬಿತ ಭಾವಚುಂಬಿತ ಅರ್ಥಗರ್ಭಿತ ಸ್ವಛ್ಛಂದ ಸರಳಗಬ್ಬಂ.

 

ಚಿತ್ರಸ್ಫೂರ್ತಿ-ಪದ್ಯಪಾನ 129

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಸರಣಿ: 

ನಿಸರ್ಗನರ್ತನ.

ಜೇಡನಿಳಿಸಿದ  ಬಯಲಿನೆಳೆಯೊಳು

ಸಿಲುಕಿನಿಂತಿಹ ನೀರಹನಿಯೊಳು

ಬಾಲಭಾಸ್ಕರ ಬಿಂಬ ತುಂಬಿಹ

ಸಾಲುಹನಿಗಳ ತುಂಬು ಹೊಳಪಿನ

ಸೌರಬಿಂಬದ ಇಂದ್ರಚಾಪದ

ಸುಪ್ತವಾಗಿಹ ಸಪ್ತವರ್ಣದ

ಬಳುಕುತೇಳುವ ಎಳೆಯ ಬೆಳಕಿನ

ಬಣ್ಣದಾಟದ ನೀರಹನಿಗಳ

ಸಾಲುಮಣಿಗಳ ನಿಸರ್ಗನರ್ತನ.

ಚಿತ್ರಕೃಪೆ- ಪದ್ಯಸಪ್ತಾಹ-129   ಪ್ತದ್ಯಪಾನ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಜೀವಬಿಂದು

ವಸಂತ ಸಂತಸದಿ ಮೂಡಿ ಬಂದಿಹ ನಗುಮೊಗದ ನಗೆಹೂವ ನಿಜಮೊಗ್ಗೆ

ಬಿರಿಯುವಾ ತವಕಕ್ಕೆ ತುಟಿಯಂಚುಗಳ ಸಡಿಲಿಸದ ಬಿಂಕದಾ ಸಂಚೇಕೆ

ಬಿಗಿಯದಿರು ಕೆಂದುಟಿಯಂಚುಗಳ ಬಿಚ್ಚಿಬಿಡು ಬೀರಲಿ ಸೌರಭದ ಸಿರಿನಗೆಯು

ಹಗಲಿರುಳು ಕಾಡುತಲಿ  ಪುರುಷನೆದೆಯಾಳದಲುಳಿಯಲಿ ನಿನ್ನ ಹೂನಗೆಯ ಮೋಡಿ

ಬೆಚ್ಚಿಬೀಳಲಿ ತಡವರಸಿ ಎದೆಬಡಿತದೇರುಪೇರಿನ ಪ್ರೇಮಾಂಕುರದ ಪ್ರಕೃತಿಯ ಸನ್ನಿಯಲಿ

ಮೂಡಲಿ ಜೀವಜಾಲದ ಪಯಣ ಕಂಕಣಕೆ  ಪರಿಣಯದ ಪ್ರಥಮ ಮಧುರ ಪ್ರಣಯ ಹೆಜ್ಜೆ

ಕಸಿವಿಸಿಯ ಬಿಸಿಯುಸಿರ ಹಸಿಹರೆಯ ನೆರೆಯುಕ್ಕಿ ಸರಸಮಯ  ಶಿಶಿರಶಶಿಯುದಿಸಿಬಂದಂತೆ

ಬಿಗಿದಪ್ಪಿ ಬರಸೆಳೆದು ಕಲ್ಪಕಲ್ಪಾಂತರವ ಬೆಸೆಬೆಸೆವ ಜೀವರಸಗಂಗೆಯೊಸರಿ ಬಂದಂತೆ

ಹರಿವಿರಂಚಿಗಳ ನಾಭಿನಾಳದ ಪಳೆಯುಳಿಕೆಯೊಳು ನವಜೀವ ಧರೆಯೊಳಗೆ ನಳನಳಿಸಿ  ಬಂದಂತೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಸರಣಿ: 

ವಜ್ರ ಕವಚ

ನಭದೊಡಲ ಸೀಳುತಲೆರಗುವೆನು ಬರ ಸಿಡಿಲಾಗಿ
ವಜ್ರನಖಾಘಾತೊದೆಳೆತ್ತುವೆನು ಸೆಳೆಯುತಲಿ
ಹಾರುವೆನು ನಭದೊಳಗೆ ನಖದ ಬಿಗಿ ಹಿಡಿತದಲಿ
ಕುಕ್ಕುತಲಿ ಕೊಕ್ಕಿನಲಿ ಸೀಳುವೆನು ಸೊಕ್ಕಿನಲಿ
ವಜ್ರ ಕವಚವ ಹರಿಯುವೆನು ನಿರ್ದಯದಿ
ಹೀರುತಲಿ ಜೀವರಸವ ಹನಿಹನಿಯ ಸವಿಯುತ
ಬಿಡಿಸಲಾರಿಹರಿನ್ನಿಲ್ಲ ತಡೆವಾರರೆನ್ನನೀ ನಭದೊಳು
ಗರುಡನಿವನೆರಗಿಹನು ನೆನೆ ನಿನ್ನ ದೈವವನು
ಕ್ರೂರ ಕರ್ಮವಿದೆನೆಗೆ ಜೀವನದ ಧರ್ಮ ಕೂರ್ಮಾ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

Pages

Subscribe to RSS - jayaprakash M.G ರವರ ಬ್ಲಾಗ್