ಇದೇ ಮಹಾ ಸುದಿನ...

0

ನನ್ನ ಮಟ್ಟಿಗೆ :-) ಕಣ್ಣು ಬಿಟ್ಟೊಡನೆ ಗಂಡನಿಂದ ಹುಟ್ಟುಹಬ್ಬದ ಶುಭಾಶಯ ಮತ್ತು ಮುತ್ತು ಸಿಕ್ತು. ಕಂಬಳಿಯೊಳಗೆ ನುಸುಳಿದ ಪುಟ್ಟ ಮಗನ ಗುಂಗುರು ಕೂದಲಿನ ಎಣ್ಣೆ ವಾಸನೆ ಕುಡಿಯುತ್ತ, ಅವನ ಸೊಂಟದ ಸುತ್ತ ಕೈ ಬಳಸಿ ಅಪ್ಪಿಕೊಂಡು ಮಲಗುವ ಮಜ ಸಿಕ್ತು. ಆಮೇಲೆ, ಅಪ್ಪ ಜ್ಞಾಪಿಸಿದ ಮೇಲೆ ದೊಡ್ಡವನಿಂದಲೂ ಒಂದು ಹ್ಯಾಪಿ ಬರ್ತ್ಡೇ ಅಮ್ಮ ಅನ್ನುವ ಸಂದೇಶ ಸಿಕ್ತು. ಅದನ್ನು ನಾನು ಒಂದು ಅಪ್ಪುಗೆಯಾಗಿ ಕನ್ವರ್ಟ್ ಮಾಡಿದೆ. ಬೆಂಗಳೂರಿನಿಂದ ಮನೆಯವರ ಮತ್ತು ಗೆಳತಿಯರ ಫೋನು, ಇಲ್ಲಿನ ಗೆಳತಿಯರ ಜೊತೆ ಊಟ. ಸಂಜೆ ಗಂಡ, ಮಕ್ಕಳೊಡನೆ ಹೊರಗೆ ಊಟ. ಇಷ್ಟು ಸಾಕು ಈ ಜೀವಕ್ಕೆ ತೃಪ್ತಿ ನೀಡಲು. ನೆನ್ನೆ ನನ್ನ ಮಕ್ಕಳಿಗೆ ನಾನು ಹೇಳಿದೆ, "ನನಗೆ ವಯಸ್ಸಾಗುತ್ತಿರುವ ದುಃಖ ನೀವು ಜೊತೆಯಲ್ಲಿರದಿದ್ದರೆ ಇಮ್ಮಡಿಯಾಗುತ್ತಿತ್ತು." ಅದಕ್ಕವರ ಉತ್ತರ, "ನೀನೆಷ್ಟು ದೊಡ್ಡವಳಾದರೂ ನಾವು ನಿನ್ನನ್ನು ಇಷ್ಟಪಡುತ್ತೇವೆ", ಮನಸ್ಸಿಗೆ ಹಿತ ತಂದಿತು.

ನಾನು, ಗತಿಸಿದ ನಿರರ್ಥಕ ದಿವಸಗಳನ್ನು, ಸಾಧಿಸದ ಮೈಲಿಗಲ್ಲುಗಳನ್ನು ನೆನೆಸಿಕೊಂಡು ಈ ದಿನವನ್ನು ಹಾಳು ಮಾಡಿಕೊಳ್ಳಲಾರೆ. ಅಲ್ಪ ತೃಪ್ತೆ ಇರಬಹುದು, ಆದ್ರೆ ಈ ತನಕ ಸಿಕ್ಕಿರುವ ಸಂಪತ್ತಿಗೆ ಸಂತೋಷಿಸದೆ ಕೃತಘ್ನೆ ಆಗಲಾರೆ. ನನ್ನ ಜೀವನದಲ್ಲಿ ಖುಷಿ ತುಂಬಿದ ಈವರೆಗಿನ ದಿನಗಳಿಗೆ ಒಂದು ತುಂಬು ಹೃದಯದ ನಮಸ್ಕಾರ. ಮುಂಬರುವ ನಿಗೂಢತೆಗೆ ಒಂದು ಬಿಸಿಗುಂಡಿಗೆಯ ಸವಾಲು.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಕಲ್ಪನಾ ಅವರೇ,

ಜನ್ಮ ದಿನದ ಹಾರ್ದಿಕ ಶುಭಾಶಯಗಳು... :-)

ಇಂತಿ ನಿಮ್ಮ,
ಅನಿಲ್ ರಮೇಶ್.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಅನಿಲ್ ಅವರೆ! :-)
~ಕಲ್ಪನ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹುಟ್ಟು ಹಬ್ಬದ ಶುಭಾಶಯ ಕಲ್ಪನಾ. ನಿಮ್ಮ ಮುಂದಿನ ದಿನಗಳೂ ಸಹ ಹೀಗೇ ಹರುಷಮಯವಾಗಿರಲಿ.
ಜಯಲಕ್ಷ್ಮೀ.ಪಾಟೀಲ್.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಜಯಲಕ್ಷ್ಮಿ . ನಿಮ್ಮ ಪುಸ್ತಕ ಬಿಡುಗಡೆಯ ವಿಷಯ ಓದಿ ಬಹಳ ಸಂತೋಷವಾಯಿತು. ನಿಮಗೆ ನನ್ನ ಶುಭ ಹಾರೈಕೆಗಳು!
~ಕಲ್ಪನ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಕಲ್ಪನ.
ಜಯಲಕ್ಷ್ಮೀ.ಪಾಟೀಲ್.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈ ಸುದಿನ ಮುಂದೆಬರೋ ದಿನಗಳಿಗೆ ದಾರಿಯಾಗಿರಲಿ :)
-ಹಂಸಾನಂದಿ
ಹರಿದಾಸ ಸಂಪದ:- http://haridasa.in/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಹಂಸಾನಂದಿಗಳೆ! ಸಂಪದದಲ್ಲಿ ಕಳೆಯುವ ಸಮಯವಂತೂ ಸು-ಸಮಯವೇ :-)
~ಕಲ್ಪನ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಲ್ಪನಾವ್ರೆ,
ಹೊಸ ಹುಟ್ಟುಹಬ್ಬಗಳು ಬರಲಿ,ಬರುತ್ತಲೇ ಇರಲಿ
ವಯಸ್ಸಾದರೇನಂತೆ...ಮನಸ್ಸು ಸದಾ
ಹದಿನೆಂಟರ ಹರೆಯದ್ದಾಗಿರಲಿ :)
ಹುಟ್ಟು ಹಬ್ಬದ ಶುಭಾಶಯಗಳು
-ಸವಿತ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸವಿತ ಅವ್ರೆ,
ನಿಮ್ಮ ಕವಿತೆ ತುಂಬ ಚೆನ್ನಾಗಿದೆ. ಇನ್ನು ಮೇಲೆ ಮನಸ್ಸು ಸದಾ ಹದಿನೆಂಟರ ಹರೆಯದ್ದಾಗಿರಲೀಂತ ಮೆಲಕು ಹಾಕುತ್ತಿರುತ್ತೇನೆ :-) ಧನ್ಯವಾದಗಳು!
~ಕಲ್ಪನ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹುಟ್ಟು ಹಬ್ಬದ ಸವಿ ಹಾರೈಕೆಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀನಿವಾಸ ಅವರೆ,
ಧನ್ಯವಾದಗಳು! :-)
~ಕಲ್ಪನ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Many Many Many.... :)

-Yogi

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅರ್ಥ ಆಯ್ತು, ಯೋಗೇಶರೆ, ಧನ್ಯವಾದಗಳು :-)
~ಕಲ್ಪನ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಜನ್ಮ ದಿನದ ಶುಭಾಶಯಗಳು ಕಲ್ಪನಾರವರೆ
ಈ ಸುದಿನ ಜನ್ಮದಿನದಂದು ಮಾತ್ರವಲ್ಲ ಪ್ರತಿದಿನ ಸಾಗಲಿ........ :)
ವಂದನೆಗಳೊಂದಿಗೆ ನಿಮ್ಮವ .........
ನಾಗರಾಜ್. ಜಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ಸುದಿನಗಳು ದಿನವೂ ಬರಲೀಂತ ನನಗೂ ಇಷ್ಟನೆ :-)
ನಿಮ್ಮ ಶುಭ ಹಾರೈಕೆಗಳಿಗೆ ಧನ್ಯವಾದಗಳು.
~ಕಲ್ಪನ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಲ್ಪನಾ ಅವರೆ,
:) ಯಾಪಿ ಬರ್ತ್ ಡೇ :)
"ಹುಟ್ಟು ಹಬ್ಬದ ಶುಭಾಷಯಗಳು"

ಬಶೀರ್ ಕೊಡಗು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬಶೀರರೆ,
ನಿಮ್ಮ ಪ್ರೀತಿಯ ಹಾರೈಕೆಗಳಿಗೆ ನನ್ನ ಧನ್ಯವಾದಗಳು. :-)
~ಕಲ್ಪನ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶುಭಾಶಯಗಳು... ಎಲ್ಲಾರಿಗೂ ಸಿಹಿ ಯಾವಾಗ ಕೊಡ್ತೀರ? :)

ನಿಮ್ಮವನೇ,
ಅರವಿಂದ
http://aravindavk.in

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಅರವಿಂದರೆ, ಸಿಹಿ ತಿನ್ನಲು ನೀವು ಅಮೇರಿಕೆಗೆ ಬರಬೇಕು ಅಥವ ನಾನು ಭಾರತಕ್ಕೆ :-)

ಅಂದ ಹಾಗೆ, ನಿಮ್ಮ ಪ್ರೊಫೈಲ್ ಚಿತ್ರ ತುಂಬ ಚೆನ್ನಾಗಿದೆ. ನೀವೇ ಬರೆದಿರ?

~ಕಲ್ಪನ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಲ್ಪನಾರವರೇ
ತುಂಬಾ ಲೇಟ್ ಆಗಿ ಶುಭಾಷಯ ಕೋರುತ್ತಿದ್ದೇನೆ

ಜನುಮದಿನ ಮತ್ತೆ ಮತ್ತೆ ಬರಲಿ
ಮತ್ತೊಮ್ಮೆ ನಿಮ್ಮಲ್ಲಿ ಹರುಷ ತರಲಿ

http://thereda-mana.blogspot.com/

ರೂಪ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ರೂಪ :-)
~ಕಲ್ಪನ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಲ್ಪನಾ ಅವರೇ,

ನನ್ ಕಡೆಯಿಂದಾನೂ ಹಾರೈಕೆಗಳು (ಆಹಾ ನಿಧಾನವೇ ಪ್ರಧಾನ!!)... :)
ಹಬ್ಬ ಜೋರಾ?

--ಶ್ರೀ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಶ್ರೀಯವರೆ! ಹಬ್ಬದ ಹೆಸರು ಹೇಳ್ಕೊಂಡು ತಿನ್ನೋದಂತೂ ಜೋರು :-)
~ಕಲ್ಪನ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತಡವಾಗಿ ನೋಡಿದ್ದೀನಿ. ಆದರೇನಂತೆ? ಜೀವನದ ಎಲ್ಲಾ ದಿನಗಳೂ ಖುಷಿಯಾಗಿಯೇ ಇರಿ
ಹರಿಹರಪುರ ಶ್ರೀಧರ್, ಹಾಸನ
www.hariharapurasridhar.blogspot.com

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.