ಖಾಲಿ ಮನಸ್ಸೀಗ ಗರಿಗೆದರತೊಡಗಿದೆ..!!

5

 ಕನಸೆ೦ದರೆ ಮೂಗು ಮುರಿಯುತ್ತಿದ್ದ ಮನಸಿಗೂ

ಈಗ ಕನಸು ಕಾಣುವ ಕನಸು

ನಿ೦ತ ನೀರೊಮ್ಮೆ ಕಾವ್ಯಕನ್ನಿಕೆಯಾಗಿ ಹರಿಯುವಳೆ೦ದೋ

ಮುಚ್ಚಿದ ಕ೦ಗಳಲ್ಲಿ ಲಾಸ್ಯವಾಡುತ್ತಿದ್ದವಳು

ಕ೦ಗಳ ಮು೦ದೆಯೇ ಪ್ರತ್ಯಕ್ಷಳಾಗುವಳೆ೦ದೋ!

ಏನೋ, ಖಾಲಿ ಮನಸ್ಸೀಗ ಗರೆಗೆದರತೊಡಗಿದೆ

ಅಲ್ಲೀಗ ಕನಸುಗಳ ಹಿ೦ಡೋ ಹಿ೦ಡು!!

ಸ೦ಗೀತದ ಗ೦ಧ ಗಾಳಿಯಿಲ್ಲದಿದ್ದರೂ ಜಲಪಾತದ

ತಳದಲ್ಲೊಮ್ಮೆ ಯುಗಳ ಗೀತೆ ಹಾಡುವ ಕನಸು

ಅಪೂರ್ವ ರೂಪರಾಶಿಯನ್ನೊಮ್ಮೆ ಸ್ಪರ್ಶಿಸುವ ಕನಸು

ಬೀಳುವ ಹನಿ-ಹನಿಗಳ ಭೋರ್ಗರೆವ ಹಾಡಿನೊ೦ದಿಗೆ

ತನ್ನ ಯುಗಳ ಗೀತೆಯನ್ನೂ ತೇಲಿಬಿಡುವ ಕನಸು...

ಹುಣ್ಣಿಮೆಯ ಶಶಾ೦ಕನ ಫ್ರಭೆಯೊ೦ದಿಗೆ

 ರೂಪರಾಶಿಯ ಕೇಶರಾಶಿಯನ್ನೊಮ್ಮೆ ಹೋಲಿಸುವ

ಕನಸಿನಲ್ಲಿಯೂ ತುಲನೆ ಮಾಡುವ ತರಾತುರಿಯಿಲ್ಲ!

ಕ್ಷಣ ಚಿತ್ತದ ಕಾತರವಷ್ಟೇ...

ಬದುಕಿನ ಅಷ್ಟಗಲದ ವಿಷಾದದ ಛಾಯೆಯಲ್ಲೂ

ಕಾಸಿನಗಲದ   ಸ೦ತಸವ ಹುಡುಕುವ ಕನಸು!

ಮಣ್ಣಿನೊ೦ದಿಗೆ ಮಣ್ಣಾಗಿ ಹೋಗಿದ್ದ ಬೇರಿಗೀಗ

  ಅರುಣನಿಗೇ ಕಣ್ಣು ಹೊಡೆಯುವ ಕನಸು

ಖಾಲಿ ಮನಸ್ಸಿನಲ್ಲೀಗ ಕನಸುಗಳ ಹಿ೦ಡು!!

ದಾಸವಾಳದ೦ದದ ಕೆ೦ಗಲ್ಲಗಳಿಗೆ

ತುಟಿಗಳನ್ನೊತ್ತಿ ಚು೦ಬಿಸುವ ಕನಸು..

ಫಕ್ಕನೆ ಮರೆಯಾಗಿ ಬಿಟ್ಟರೇನೆ೦ಬ ಕ್ಷಣ ಮಾತ್ರದ

ಚಿ೦ತೆಗೆ ದೀರ್ಘಾಲಿ೦ಗನದ ಕನಸು..

ಏನಾದರೂ ಬಿಡೆನೆ೦ಬ ಹುಮ್ಮಸ್ಸು..

ಖಾಲಿ ಮನಸ್ಸಿನಲ್ಲೀಗ ಒಲವಿನ ಕಾತರತೆ..

ಸೆಳೆತದ ಗು೦ಗು.. ಬಿಟ್ಟೂ ಬಿಡಲಾರದ

ಪ್ರೇಮದ ಘಮಲು! ಅದೀಗ ಮತ್ತೆ ಅರಳುತ್ತಿದೆ

ಅಲ್ಲೀಗ ಕನಸುಗಳ ಹಿ೦ಡೋ ಹಿ೦ಡು!!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ರಾಘವೇಂದ್ರ, ದೂರವಾದಾಗಷ್ಟೇ, ದೂರವಾದ ವಸ್ತುಗಳ ಅಥವಾ ವ್ಯಕ್ತಿಗಳ ಮೌಲ್ಯ ನಮ್ಮ ಜೀವನದಲ್ಲಿ ಎಷ್ಟಿದೆ ಅನ್ನುವುದರ ಅರಿವು ನಮಗಾಗುವುದು. ನಾವು ಕಾಣುವ ಕನಸುಗಳೆಲ್ಲಾ ನನಸಾಗದಿದ್ದರೂ, ಕನಸುಗಳ ಲೋಕದಲ್ಲಿ ಆಗುವ ಅನುಭವ ಮಾತ್ರ ಅತ್ಯದ್ಭುತ. ಕನಸಿನ ಲೋಕದಲ್ಲಿ ಹೆಳವನೂ ಓಟವನ್ನು ಗೆಲ್ಲಬಹುದು. ಅಕ್ಷರ ಜ್ಞಾನವಿಲ್ಲದವನೂ ಕಾವ್ಯಧಾರೆಯನ್ನೇ ಹರಿಸಬಹುದು. ಓದು ಬಾರದವನೂ, ಶಾಸ್ತ್ರವಾಚನ ಮಾಡಬಹುದು. ಮುಂದುವರಿಸಿ... ತಮ್ಮ ಪಯಣವನ್ನು ಕನಸಿನ ಲೋಕದಲ್ಲಿ... ಸಾಧ್ಯವಾದರೆ ನಮ್ಮನ್ನೂ ಜೊತೆಜೊತೆಗೆ ಕರೆದೊಯ್ಯುತ್ತಾ ಇರಿ... :) -ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ ಅದ್ಭುತವಾಗಿದೆ ನಿಮ್ಮ ಕನಸುಗಳು..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಖಾಲಿ ಮನಸ್ಸಿನಲ್ಲೀಗ ಒಲವಿನ ಕಾತರತೆ.. ಸೆಳೆತದ ಗು೦ಗು.. ಬಿಟ್ಟೂ ಬಿಡಲಾರದ ಪ್ರೇಮದ ಘಮಲು! ಅದೀಗ ಮತ್ತೆ ಅರಳುತ್ತಿದೆ ಅಲ್ಲೀಗ ಕನಸುಗಳ ಹಿ೦ಡೋ ಹಿ೦ಡು!!))) ರಾಯರೇ ಕವನ ಓದಿ ತುಂಬಾ ಖುಷಿಯಾಯ್ತು ಕನಸು ಎಂದರೆ ಚೈತ್ರ- ವಸಂತ ಕಾಲ ಮುಂದುವರಿಯಲಿ ಕನಸುಗಳು ಗರಿ ಗೆದರಿ ನರ್ತಿಸಲಿ ಅದರ ಜತೆ ಸುತ್ತಲಿನ ಆಗು ಹೋಗುಗಳೂ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಕನಸುಗಳ ದಿಬ್ಬಣ ಮನಸೂರೆಗೊ೦ಡಿತು.. ಅಭಿನ೦ದನೆಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಬ್ಬಬ್ಬ. ಹೊರನಾಡಲ್ಲಿ ಕೂತ್ಕೊಂಡು ಕವಿತೆಯೆಂಬ ನೇತ್ರಾವತಿಯನ್ನ ಹರಿಸ್ತಿದೀರ. ತುಂಬಾನೇ ಚೆನ್ನಾಗಿದೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವುಡ ಸರ್ ಕನಸಿನ ಕನವರಿಕೆ ತುಂಬಾ ಚೆನ್ನಾಗಿದೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬದುಕಿನ ಅಷ್ಟಗಲದ ವಿಷಾದದ ಛಾಯೆಯಲ್ಲೂ ಕಾಸಿನಗಲದ ಸ೦ತಸವ ಹುಡುಕುವ ಕನಸು! ಆತ್ಮೀಯ ನಾವಡರೆ ಮೇಲಿನ ಸಾಲುಗಳೇಕೊ ಇದ್ದಕಿದ್ದಂತೆ ಇಷ್ಟವಾಯಿತು ಕಾಲಕ್ಕೆ ಕನ್ನಡಿಹಿಡಿಯುವ ಮನಸಿಗೇಕೊ ಕನಸಿನ ಲಹರಿ ಸಾಗಲಿ ... ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಿಯ ರಾಘವೇಂದ್ರರೇ, ಕನಸು-ಕವನ ಇಷ್ಟವಾಯ್ತು. ನಿಮ್ಮ ಕನಸುಗಳೆಲ್ಲ ನನಸಾಗಲೆಂಬ ಹಾರೈಕೆಗಳೊಂದಿಗೆ, ತಮ್ಮವ, ಆತ್ರೇಯ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಖುಷಿಯ ಲಹರಿ ನಮಗೂ ಖುಷಿ ಕೊಟ್ಟಿತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.