ಆಗಾಗ ನನ್ನ ನೆನಪಾದರೆ ಸಾಕು...!

5

ಆಗಾಗ ನನ್ನ ನೆನಪಾದರೆ ಸಾಕು! 

ಹುಚ್ಚಳ೦ತೆ ಪ್ರೀತಿಸಬೇಡ,

ಸದಾ ನನ್ನ ಬಯಸಲೂ ಬೇಡ,

ನಿನ್ನಲ್ಲಿ ನನ್ನ ನೆನಪಿನ ಚುಕ್ಕಿಯೊ೦ದಿದ್ದರೆ ಸಾಕು!

ನಿನ್ನ ಮ೦ದಹಾಸದ ಚ೦ದಿರನ೦ತೆ,

ಆಗಾಗ ನನ್ನ ನೆನಪಾದರೆ ಸಾಕು!

ಖುಷಿ ಕೊಡುವ ಬೆಳ್ಳಕ್ಕಿ,

ಕಣ್ಮು೦ದೆ ಹಾರುವ ಗುಬ್ಬಚ್ಚಿ,

ಫಳಫಳನೆ ಮಿ೦ಚಿ ಮರೆಯಾಗುವ

ಮಿ೦ಚುಳ್ಳಿಯ೦ತೆ,

ನಿನ್ನ ಕೆನ್ನೆಯ ಗುಳಿಗಳಲಿ ಸದಾ

ಕಚಗುಳಿಯಿಡುವ೦ತಿರಲಿ ನನ್ನ ನೆನಪು !

ಚಿತ್ತ ಚಂಚಲತೆಗೊಂದು ನೆಪವಾಗಿರಲಿ

ನಿನ್ನ ಮುಗುಳ್ನಗುವಿಗೊ೦ದು ಕಾರಣವಾಗಲಿ

ಆಗಾಗ ನನ್ನ ನೆನಪು!

ಮನದಲ್ಲಿ ಆಗಾಗ,

ಹತ್ತಿ ಬೆಳಗುವ ಹಣತೆಯ೦ತೆ,

ನನ್ನ ನೆನಪಾದರೆ ಸಾಕು!

ಪ್ರೀತಿಸುವುದರಲಿ ನಿನ್ನನ್ನು ಮೀರಲಾರದೆ,

ಗಾಳಿಯಲಿ ತೂರಿ ಹೋಗಿ,

ಚ೦ಡಮಾರುತದ೦ತೆ ಸುತ್ತಿ ಎಸೆಯುವ

ನಿನ್ನ ನೆನಪಿನಲೆಗಳ ಭಾರದಿ೦ದ,

ಸದಾ ಹುಚ್ಚನಾಗಿ ಅಲೆಯದ೦ತೆ,

ಆಗಾಗ ನಿನ್ನ ನೆನಪಾದರೆ ಸಾಕು!

ನನ್ನ ನೆನಪು ನಿನಗಾದರೆ ಸಾಕು!

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಹೂಂ... ನೆನಪಾದರೆ ಸಾಕು... ನಮಗೋ... ನೆನಪಿನ ಸೆಲೆಯೊಂದೇ ಸಾಕು... ಅವರಿಗೆ ಆಗದಿದ್ದರೇನಂತೆ... ನಮಗಾಗುತ್ತಿದ್ದರೆ ಸಾಕು...! :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತಮ್ಮ ಮೆಚ್ಚುಗೆಗೆ ಧನ್ಯವಾದಗಳು. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ ಚೆನ್ನಾಗಿದೆ... <<ಹುಚ್ಚಳಂತೆ>> ಇದು ಹುಚ್ಚನಂತೆ ಅಥವಾ ಹುಚ್ಚಿಯಂತಾದರೆ ಸರಿಯೆನಿಸುತ್ತದೆ ಅಲ್ಲವೆ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಲ್ಲ ಜಯ೦ತರೇ, “ಹುಚ್ಚಳ೦ತೆ“ ಪದ ಬಳಕೆ ತಪ್ಪಲ್ಲ! ಮೆಚ್ಚುಗೆಗೆ ಧನ್ಯವಾದಗಳು. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಗೋಪಾಲ್ ಜಿ, ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹುಚ್ಚಳಂತೆ ಪ್ರೀತಿಸುವವಳಿಗೆ ನೆನಪಾಗದೆ ಇದ್ದೀತೇ :) ಚಂದದ ಕವನ ! ವಂದನೆಗಳೊಂದಿಗೆ ವಾಣಿ ಶೆಟ್ಟಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವು ಹೇಳಿದ ಮೇಲೆ ಮುಗಿಯಿತು!! ಮೆಚ್ಚುಗೆಗೆ ಧನ್ಯವಾದಗಳು. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡವ್ರೆ ತುಂಬಾನೇ ಚೆನ್ನಾಗಿದೆ ನನ್ನ ಮನದ ಭಾವನೆಗಳನ್ನೇ ವ್ಯಕ್ತಪಡಿಸಿರುವ ಹಾಗಿದೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚಿಕ್ಕು... ಹ೦ಗಾದ್ರೆ ಏನೋ ಕಳ್ಳಾಟ ಆಡ್ತಾ ಇದ್ದೀರಾ..? ಧನ್ಯವಾದಗಳು ಮೆಚ್ಚುಗೆಗೆ.. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಕವಿನಾಗರಾಜರೇ... ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರೀತಿಸುವುದರಲಿ ನಿನ್ನನ್ನು ಮೀರಲಾರದೆ, ಗಾಳಿಯಲಿ ತೂರಿ ಹೋಗಿ, ಚ೦ಡಮಾರುತದ೦ತೆ ಸುತ್ತಿ ಎಸೆಯುವ ನಿನ್ನ ನೆನಪಿನಲೆಗಳ ಭಾರದಿ೦ದ, ಸದಾ ಹುಚ್ಚನಾಗಿ ಅಲೆಯದ೦ತೆ, ಆಗಾಗ ನಿನ್ನ ನೆನಪಾದರೆ ಸಾಕು! ನನ್ನ ನೆನಪು ನಿನಗಾದರೆ ಸಾಕು! ಮಹಾಕವಿ ಬೋದಿಲೈರ್ ಎಲ್ಲೋ ಹೇಳಿದಂತೆ ನೆನಪು - " ಸದಾ ಏನನ್ನಾದರೂ ಕುಡಿದ ಮತ್ತಿನಲ್ಲಿರು. ಪ್ರೀತಿ, ಕಾವ್ಯ ಅಥವಾ ರುಜುತ್ವವನ್ನು". ಏನ್ ಗುರುಗಳೇ? ಎಂಥ ಅದ್ಭುತ ಸಾಲುಗಳನ್ನು ಜೋಡಿಸಿದ್ದೀರಿ. ನಾನು ಇಲ್ಲಿ ಹೇಳ ಬೇಕಿರುವುದು ಬರವಣಿಗೆಯ ಮಾಂತ್ರಿಕ ಶಕ್ತಿ ಮತ್ತು ಅದು ನಮ್ಮ ಮೇಲೆ ಮಾಡಬಹುದಾದ ಚಮತ್ಕಾರಗಳನ್ನು. ನಿಮ್ಮ ಕವಿತೆಗಳು ಈಗೀಗ ಸೂಪರ್. ಹೀಗೆ ಮುಂದುವರೆಯಲಿ ನಿಮ್ಮ ಬಾಳಿನ ಕಾವ್ಯ ಯಾನ. ಇವತ್ತು ತುಂಬಾ ಬೇಸರದಲ್ಲಿ ಸಾವಿನ ಕಾರಣದಿಂದ ಅಗಲಿದ ಗೆಳೆಯನ ನೆನಪಿನಲ್ಲಿದ್ದೆ. ನಿಮ್ಮ ಈ ಕವಿತೆ ಅದೆಷ್ಟೋ ಸಾಂತ್ವನ ನೀಡಿದೆ. ಪ್ರೀತಿಯೊಂದಿಗೆ....ರವಿ ಕುಂಬಾರ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರವಿಯವರೇ, ನಿಮ್ಮ ಅಭಿಮಾನ, ಕಳಕಳಿ ಹಾಗೂ ಮೆಚ್ಚುಗೆಗಳು ನನ್ನ ಹೃದಯವನ್ನು ತು೦ಬಿಸಿವೆ. ನಿಮ್ಮ ನಿರ೦ತರ ಪ್ರೋತ್ಸಾಹವೇ ನನಗೆ ಶ್ರೀರಕ್ಷೆ. ನಿಮ್ಮ೦ತಹವರಿ೦ದಲೇ ಕಲಿಯುತ್ತಿದ್ದೇನೆ... ಕಲಿಕೆಯ ಹಾದಿಯಲ್ಲಿರುವ ನನಗೆ ನಿಮ್ಮ ಹಾರೈಕೆಯೆ೦ಬುದು ಸದಾ ಒ೦ದು ಇ೦ಧನದ೦ತೆ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.