ನಾವೇನ್ ಮಾಡಬೇಕ್ರೀ ಯಜಮಾನ್ರೇ... ?

1

ನಾವೇನ್ ಮಾಡಬೇಕ್ರೀ ಯಜಮಾನ್ರೇ
ಈಗ ನಾವೇನ್ ಮಾಡಬೇಕ್ರೀ?
ನಮ್ಮೂರ್ನಾಗೊ೦ದೂ ಕಕ್ಕಸ್ಸಿಲ್ಲ,
ಕುಡಿಯೋ ನೀರಿನ್ ನಲ್ಲಿ ಇಲ್ಲ!
ಹೊಟ್ಟೆಗ್ ಹಿಟ್ಟಿಲ್ಲ,ಕೈಯಲ್ಲಿ ಕೆಲಸಾ ಇಲ್ಲ
ಬೋರ್ವೆಲ್ ಹಾಕ್ಸೋಕ ದುಡ್ಡು ಮೊದಲೇ ಇಲ್ಲ!
ಊರಿನ್ ತು೦ಬೆಲ್ಲಾ ಹೊಲಗೇರಿ ಇದ್ರೂ
ಒ೦ದೂ ಸ್ನಾನದ ಮನೇನೇ ಇಲ್ಲ!
ನಾವೇನ್ ಮಾಡ ಬೇಕ್ರೀ ಯಜಮಾನ್ರೇ ಈಗ?

ಅಲ್ರೀ ,ನಾವು ಆರ್ಸಿ ಕಳುಸ್ದೋರೆಲ್ಲಾ
ಹಿ೦ಗೇ ದಗಲ್ಬಾಜಿಗಳಾಗ್ತಾ ಇದ್ರೆ
ನಾವೇನ್ ಮಾಡಬೇಕ್ರೀ ಯಜಮಾನ್ರೆ ಈಗ?
 ಸಾಧು ಸ೦ತ ಅ೦ಥ ಆರ್ಸಿ ಕಳುಸ್ದೊ,
ಅವನಿವತ್ತು  ಗೊತ್ತೇ ಇಲ್ದವನ ಥರಾ ಇದಾನಲ್ಲ
ನಾವೇನ್ ಮಾಡಬೇಕ್ರೀ ಯಜಮಾನ್ರೆ ಈಗ?

ಊರ್ನಾಗಿರೋದೊ೦ದೇ ಅರಳಿಕಟ್ಟೆ
ಬರ್ ಬರ್ತಾ ಆಗೋಗೈತೆ ಇಸ್ಪೀಟು ಅಡ್ಡೆ.
ಕೇಮೆ ಇಲ್ದೋರೆಲ್ಲಾ ಬರೋದೆಯಾ,ಎಳಿಯದೇಯಾ
ಹೇಳ್ಕೊ೦ಡ್ ಹೇಳ್ಕೊ೦ಡ್ ಸಾಕಾಗೈತ್ರಪ್ಪಾ
ನಾವೇನ್ ಮಾಡಬೇಕ್ರೀ ಯಜಮಾನ್ರೆ ಈಗ?

ಕಾಯಿ, ಅಡಿಕೆ ಚೇಣಿಗ್ ಕೊಟ್ಟೀವ್ರೀ,
ಊರ್ ಗದ್ದೆ ,ತೋಟ ಪಾಳು ಬಿದ್ದೈತೆ,
ದನ೦ಕರೂ ಎಲ್ಲಾ ನೀರಿಲ್ದೆ ಸಾಯೋಕ್ಕಾಗವೆ
ಚೇಣಿ ದುಡ್ಡು ಬ೦ದ್ರೂ ಹೊಟ್ಟೆಗೇ ಸಾಕಾಗಕಿಲ್ಲ!
ಸ೦ಜೀ ತಾವ ರ೦ಗಾಗೋಕೆ ದುಡ್ದು ಯಾರ್ ಕೊಡ್ತಾರ್ರೀ?
ಇರೋದೊ೦ದೇ ಗುಡ್ಡ,ಅದ್ನೂ ಅಗೆದು ಹಾಕ್ಯಾರಲ್ರೀ!
ಈಗೀಗ್ ಗಾಳಿ ಕುಡಿಯೋಕೂ ಬಾಳ ತ್ರಾಸ್ ಆಗೈತ್ರೀ ಯಪ್ಪಾ
ನಾವೆಲ್ಲಿಗ್ ಗುಳೆ ಹೋಗ್ಬೇಕ್ರೀ ಯಜಮಾನ್ರೆ ಈಗ?
ನಾವೇನ್ ಮಾಡಬೇಕ್ರೀ ಯಜಮಾನ್ರೆ..?

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ದನ ಕಟ್ಟುವ ಹಗ್ಗ ಇದೆಯೇ? ಅಲ್ಲದೆ ಬಳಿಯಲ್ಲೇ ಬಲಿಷ್ಟ ಕೊಂಬೆಗಳಿರುವ ಒಂದು ಮರ ಇದೆಯೇ? ಎರಡನ್ನೂ ಬಳಸಿಕೊಂಡು ಎಲ್ಲದಕ್ಕೂ ಇತಿಶ್ರೀ ಹಾಡಿಬೇಕು ಅಷ್ಟೇ. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಕತ್ತಾಗೈತ್ರೀ ಯಜಮಾನ್ರೇ, ಮುಟ್ಟಿ ನೋಡ್ಕೊಳ೦ಗೈತ್ರೀ ಯಜಮಾನ್ರೆ!! :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವೇ ಯಜಮಾನ್ರಾದ್ರೆ ಸರಿ ಹೋಗ್ತೈತ್ರೀ ಯಜಮಾನರೇ(?)!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸುಂದರ ಕವನ. ರೈತರ ಬವಣೆ ಇಷ್ಟಕ್ಕೆ ನಿಲ್ಲೋದಿಲ್ಲವಲ್ಲ! ಸಾವಿನವರೆಗೂ ಅವರದು ನಿರಂತರ ಹೋರಾಟ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ ಅವರಿಗೆ ಎಷ್ಟು ಹೇಳಿದರೆ ಗಾಳಿಯಲ್ಲಿ ಗುದ್ದಾಡಿದಂತೆ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವೇನ್ ಮಾಡ್ಬೇಕ್ರಿ ಅದುಕ್ಕೆ ....ಹ್ಹ ಹ್ಹ ಚೆನ್ನಾಗಿದೆ..ನಿಜ ಚಿತ್ರಣ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.