ಮುತ್ತಿನಸರ..

0

ಸುಮಾರು ಒ೦ದು ಗ೦ಟೆಯಿ೦ದ ಅದನ್ನೇ ಮಾಡುತ್ತಿರೋದು


ನೆಲದ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ


ಒ೦ದೊ೦ದೇ ಮುತ್ತುಗಳನ್ನು ಆರಿಸುತ್ತಿದ್ದೇನೆ.


ಇವತ್ತಿನವರೆಗೂ ಎಷ್ಟು ಜತನವಾಗಿ ಕಾಪಾಡಿಕೊ೦ಡು ಬ೦ದಿದ್ದೆ!


ಗಟ್ಟಿಯಾಗಿ ಅದನ್ನೇ ಹಿಡಿದೆಳೆದರೂ ಕಿತ್ತು ಬ೦ದಿರಲಿಲ್ಲ 


ಗಟ್ಟಿ ಇದೆಯಲ್ಲ ಬಿಡು ಅ೦ತಲೇ ಸುಮ್ಮನಿದ್ದೆ!


ಆದರೆ ಅದನ್ನು ಹೆಣೆದ ದಾರ


ಶಿಥಿಲಗೊಳುತ್ತಿರುವುದನ್ನು ನಾನು ಗಮನಿಸಲೇ ಇಲ್ಲ!


ಛೇ, ಇವತ್ತು ಬೆಳಿಗ್ಗೆ  ನನ್ನ ಪ್ರೀತಿಯ  


ಮುತ್ತಿನಸರ ತು೦ಡಾಗಿಯೇ ಹೋಯ್ತು,


ಎಲ್ಲೋ ದಾರಿಯಲ್ಲಿದ್ದ ಅ೦ಗಡಿಯಲ್ಲಿ ಕೊ೦ಡಿದ್ದಲ್ಲ ಅದು!


ನಾನೇ ಮುತ್ತುಗಳನ್ನು, ಅದನ್ನು ಹೆಣೆಯಲು ದಾರವನ್ನೂ ಆರಿಸಿದ್ದು,


ದಾರದೊ೦ದಿಗೆ ಮುತ್ತುಗಳನ್ನು ಪೋಣಿಸುವಾಗಲೂ


ನಾನೇ ವೀಕ್ಷಕನಾಗಿದ್ದು, ಆಯ್ಕೆ ಸರಿಯಾಗಿದೆ


ಎ೦ಬ ಸರ್ಟಿಫಿಕೇಟೂ ಕೊಟ್ಟಿದ್ದು!


ಇಷ್ಟಪಟ್ಟು, ಕಷ್ಟಪಟ್ಟು ಧರಿಸಿಕೊ೦ಡ ಮುತ್ತಿನಸರ


ಛೇ! ಇವತ್ತೇ ತು೦ಡಾಯ್ತೇ?


ಕೊನೇ ಪಕ್ಷ ನಾನಿರುವಲ್ಲಿವರೆಗಾದರೂ


ನನ್ನೊ೦ದಿಗೇ ಇದ್ದಿದ್ದರೆ,


ಶಿಥಿಲವಾಗಿಯಾದರೂ  ಮುತ್ತಿನ ಸರವಿದೆಯಲ್ಲ ಎ೦ಬ


ಸಮಾಧಾನವಾದರೂ ಇರುತ್ತಿತ್ತು!


ಈಗ ಮುತ್ತುಗಳನ್ನು ಆರಿಸಿ, ಮತ್ತೊಮ್ಮೆ ಗಟ್ಟಿಯಾದ ದಾರದಲ್ಲಿ


ಪೋಣಿಸಿದರೂ ಪ್ರಯೋಜನವಿಲ್ಲ!


ಹೋ! ಮುತ್ತುಗಳು ಅಲ್ಲಲ್ಲಿ ಬಣ್ಣ ಕಳೆದುಕೊ೦ಡಿವೆ!


ಆದರೂ ಮತ್ತಷ್ಟು ನವೀನ ಮುತ್ತುಗಳ ಆಯ್ಕೆಯಲ್ಲಿ ನಾನಿಲ್ಲ.


 

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಅವೇ ಮುತ್ತುಗಳ ಸರವೇ ಬೇಕೆಂದಾದರೆ ಮತ್ತೆ ಹೊಸ ದಾರದಲ್ಲಿ ಪೋಣಿಸಲೇ ಬೇಕು, "ಪ್ರಕೃತಿ " ಯಲ್ಲಿ ನಮ್ಮ ಶಿಫಾರಸು ನಡೆಯದಲ್ಲ ಏನಾಗ ಬೇಕೋ ಅದೇ.... ಕವನ ಚೆನ್ನಿದೆ ರಾಯರೇ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ, "ದೇವನು ಹೊಸೆದ ಪ್ರೇಮದ ದಾರ, ಮುಗಿಯದು ಮುತ್ತಿನ ಹಾರದ ಕವನ" ಕೊನೆಯವರೆಗೂ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಘವೇಂದ್ರರವರೇ, ತುಂಬಾ ಚೆನ್ನಾಗಿದೆ ಮುತ್ತಿನ ಹಾರದ ಕವನ....ಕಣ್ಣಲ್ಲಿ ನೋಡಿದ್ದನ್ನೇ ಕವನವಾಗಿ ಕಟ್ಟಿದ ನಿಮ್ಮ ಕಲ್ಪನೆಗೆ ಕೋಟಿ ನಮನ...... ಪ್ರತಿ...........
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗೆಳೆಯರೇ, ಹಳೆಯ ಆತ್ಮೀಯನೊಬ್ಬ ಯಾವುದೇ ಕಾರಣ ಹೇಳದೆ, ನನ್ನೊ೦ದಿಗೆ ಸ೦ಬ೦ಧ ಕಡಿದುಕೊ೦ಡ ಸನ್ನಿವೇಶವೊ೦ದು ಇತ್ತೀಚೆಗೆ ಜರುಗಿದಾಗ, ಹುಟ್ಟಿಕೊ೦ಡ ಕವನವಿದು. ಮುತ್ತು ಇಲಿ ಗೆಳೆಯನಾದರೆ ಅವನ್ನು ಪೋಣಿಸಿದ ದಾರ ನಮ್ಮ ಅತ್ಮೀಯತೆ! ಕವನವನ್ನು ಮೆಚ್ಚಿಕೊ೦ಡ ಸರ್ವರಿಗೂ ನನ್ನ ಆತ್ಮೀಯ ಅಭಿವ೦ದನೆಗಳು.ನನ್ನ ಎಲ್ಲಾ ಬರಹಗಳ ಮೇಲೆ ನಿಮ್ಮ ಪ್ರೋತ್ಸಾಹ ಎ೦ದಿನ೦ತೆ ನಿರ೦ತರವಾಗಿರಲಿಎ೦ಬ ಆಶಯಗಳೊ೦ದಿಗೆ ನಮಸ್ಕಾರಗಳೊ೦ದಿಗೆ,
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸ್ನೇಹದ ಮುತ್ತುಗಳ ಹೆಣೆಯಲು ವಿಶ್ವಾಸದ ದಾರಕ್ಕೆ ಪ್ರೀತಿಯೆಣ್ಣೆಯ ಲೇಪನವಿರಲಿ ತರಾತುರಿಯಲಿ ಸಡಿಲಾಗುಳಿಸದೇ ನಿಧಾನದಿ ಬಲವಾಗಿ ಹೆಣೆಯುವ ತಾಳ್ಮೆ ಇರಲಿ -ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಭಾವನೆ ಮುಖ್ಯ, ಸಂಕೇತಗಳಲ್ಲ, ಅಲ್ಲವೇ ನಾವಡರೇ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.