ಕಾವ್ಯ ಕೃಷಿ!!

0

ಸುಮ್ಮನೇ ಬರೆಯುತ್ತಾ ಹೋಗುತ್ತಿದ್ದೇನೆ..

ಹರಿದ ಕಾಗದಗಳ ಲೆಕ್ಕವಿಲ್ಲ..

ಇನ್ನೂ ಎರಡು ಸಾಲಿನ ಕವನವೂ  ಹುಟ್ಟಿಲ್ಲ!!

ಬದುಕ ಬ೦ಡಿಯ ನೊಗವ ಹೊರುತ್ತಲೇ

ಇಷ್ಟು ದಿನಗಳ ಕಳೆದಾಯಿತಲ್ಲ..

ಬೆನ್ನು ಬಾಗಿ ಹಿರಿತನವು ಕೋಲೂರಿ

ನಡೆವಾಗಲೆಲ್ಲಾ ಮುಖವೆ೦ಬುದು ನೆಲವನ್ನು ನೋಡಿ

ಕಣ್ಣಿಗೆ ಪೊರೆ.. ಭೂಮಿಗೆ ಹೊರೆ..

ಬದುಕೊ೦ದು ಶವವಾಯಿತಲ್ಲ !!

ಗೀಚುತ್ತಾ ಹೋದ೦ತೆಯೇ ಕಾವ್ಯ ಹುಟ್ಟುವುದ೦ತೆ!

ಬರೆಯಲಾರ೦ಭಿಸಿದಾಗಲೇ ಶಾಯಿ ಮುಗಿಯಬೇಕೆ?

ಹೊಸ ಶಾಹಿ ತು೦ಬಿದ ಪೆನ್ನನು ಬೆರಳು ನಡುವಲಿ

ನುಗ್ಗಿಸುವಾಗಲೇ ನಿದ್ರೆ ಬ೦ದ೦ತೆನಿಸಿ ತಲೆ ವಾಲಿತಲ್ಲ!!

ಹಕ್ಕಿ ನಿದ್ರೆಯೊ೦ದಿಗೋ ಹತ್ತಾರು ಚಿ೦ತೆಗಳು

ಹಾಸಿಗೆ ಹಿಡಿದ ಹೆ೦ಡತಿ ಮೇಲೇಳುವಳೇ?

ಕೈಗೆ ಬ೦ದ ಮಗ ನೆಲೆ ನಿ೦ತಾನೇ?

ಎ೦ಬಿತ್ಯಾದಿ ಚಿ೦ತೆಗಳ ನಡುವೆ ಆಗಷ್ಟೇ

ಮನಸ್ಸಲ್ಲಿ ಮೊಳಕೆಯೊಡೆಯುತ್ತಿದ್ದ

ಕವನವೂ ಅರ್ಧಕ್ಕೇ ಸತ್ತಿತಲ್ಲ!!

ಪೆನ್ನಿನೊಳಗಿನ ಶಾಯಿಯೂ ಒಣಗಿದ೦ತೆನಿಸಿ

ಪೆನ್ನು ಹಿಡಿದ ಕೈ ಬೆರಳುಗಳು ಮರಗಟ್ಟಿ ಹೋದ೦ತೆನಿಸಿ

ದೇಹವೆ೦ಬುದು ಮರದ ಕೊರಡಾಯಿತಲ್ಲ!!!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಇಷ್ಟೊಂದು ಹತಾಶೆ ಯಾಕೆ :) ಕವನ ಮಸ್ತ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹತಾಶೆ ಏನಿಲ್ಲ... ಸುಮ್ಮನೆ ಭಾವನೆಗಳು ಹರಿದಾಡಿದವು. ಅಕ್ಷರ ರೂಪ ಕೊಟ್ಟಿದ್ದೇನೆ. ನಿಮಗೆ ಮೆಚ್ಚಿಗೆಯಾಯಿತು.. ನನಗೆ ಸ೦ತಸ ನೀಡಿತು. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಭಾವನಾಪೂರ್ಣ ನುಡಿಗಳು,ನಾವಡರೆ. ಚಿಂತೆಗಳ ಕಂತೆಗಳ ಕಿತ್ತೊಗೆದು ಮನದಿಂದ ನಿಂತಿರದೆ ಕಾಯಕವೆ ಕೈಲಾಸವೆಂದು ಅಂತರಾತ್ಮದ ಫಲಕದಲ್ಲಿ ಕವಿತೆಯ ಕೃಷಿಯ ಸಂತಸದಿ ಮಾಡುತಿರೆ ಹಸಿರ ಬೆಳೆ ನೋಡಾ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಪ್ರತಿಕ್ರಿಯೆ ಸೊಗಸಾಗಿದೆ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರಿಗೆ ನಮಸ್ಕಾರ ನಿಜ ನಮ್ಮ ಜೀವನಗಳಲ್ಲಿ ಸದಾ ಎಂತದೊ ಅನಾಥಭಾವ , ಅಸಹಾಯಕತೆ , ನಿರಾಶೆ ಇಂತಹುದು ಕಾಡುತ್ತಲೆ ಇರುತ್ತವೆ. ಏನೊ ಸಾದಿಸಬೇಕೆಂಬ ಹಂಬಲ ಹೋಗಿ ಏನು ಸಾದಿಸಿ ಏನಾಗಬೇಕು ? ಎನ್ನುವ ವೈರಾಗ್ಯ ಮನಸನ್ನು ತುಂಬಿ ಬಿಡುತ್ತದೆ ಏನನ್ನೊ ಬರೆಯಬೇಕೆಂದು ಸಿದ್ದವಾದ ಮನಸ್ಸು ಇದ್ದಕಿದ್ದಂತೆ ಏನನ್ನಾದರು ಏಕೆ ಬರೆಯಬೇಕು ಎಂದು ಮುಷ್ಕರ ಮಾಡುತ್ತದೆ. ಎಲ್ಲರು ನನ್ನವರೆನ್ನುವ ಭಾವವನ್ನು ಯಾರು ನನ್ನವರೆಂಬ ದ್ವಂದ್ವ ತುಳಿದುಬಿಡುತ್ತದೆ ಆಗ ನೀವು ಬರೆದಂತ ಕವನ ಸಹಜವಾಗಿಯೆ ಹೊರಹೊಮ್ಮುತ್ತದೆ. ಹೀಗೆ ಜೀವನವೆಂಬ ನದಿ ಸಾಗುತ್ತಲೆ ಇರುತ್ತದೆ ... ಕಡೆಗೆ ಸಮುದ್ರ ಸೇರಿ ಶೂನ್ಯದಲ್ಲಿ ಅನಂತದಲ್ಲಿ ಒಂದಾಗುವವರೆಗು ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಪೂರಕ ಪ್ರತಿಕ್ರಿಯೆ ನನ್ನಲ್ಲಿ ಸ೦ತಸ ಮೂಡಿಸಿತು.. ನಿರಾಶೆ ಏನಿಲ್ಲ.. ಭಾವನೆಗಳ ಹರಿದಾಡುವಿಕೆ ಒ೦ದು ನೆಲೆ ಒದಗಿಸಿಕೊಟ್ಟೆ. ಅಷ್ಟೇ.. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಾವ್ಯ ಮತ್ತು ಜೀವನದ ಉಪಮೆ ಚೆನ್ನಾಗಿದೆ. ಕಾವ್ಯವೇ ಜೀವನವಾದರೆ ಅಥವ ಜೀವನವೇ ಕಾವ್ಯವಾದರೆ ಸೊಗಸು!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಾವ್ಯವೇ ಜೀವನವಾದರೆ ಜೀವನವೇ ಕಾವ್ಯವಾದರೆ ಮತ್ತೇನು ಬೇಕು ಕವಿನಾಗರಾಜರೇ? ನಿಮ್ಮ ಸತತ ಪ್ರೋತ್ಸಾಹವೇ ನನಗೆ ಶ್ರೀರಕ್ಷೆ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗೀಚುತ್ತಾ ಹೋದ೦ತೆಯೇ ಕಾವ್ಯ ಹುಟ್ಟುವುದ೦ತೆ! ಬರೆಯಲಾರ೦ಭಿಸಿದಾಗಲೇ ಶಾಯಿ ಮುಗಿಯಬೇಕೆ? ಚೆನ್ನಾಗಿದೆ ಕವನ, ರಾಘವೇಂದ್ರ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಿಯ ರಾಘವೇಂದ್ರ, ಭಾವಪೂರ್ಣ ಕವನ. ಕವಿಮನದ ಹತಾಶೆ ಮನಕ್ಕೆ ಚುಚ್ಚಿತು. ಹತಾಶೆ ಮಂಜಿನಂತೆ ಕರಗಿ, ನವೋತ್ಸಾಹ ಚಿಮ್ಮಲೆಂಬ ಹಾರೈಕೆಯೊಂದಿಗೆ... ಆತ್ರೇಯ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವಿಮನಕ್ಕೇನೂ ಹತಾಶೆಯಿಲ್ಲ. ಭಾವನೆಗಳು ಹರಿದಾಡುವಿಕೆಗೆ ಒ೦ದು ಚೌಕಟ್ಟು ನೀಡಿದೆನಷ್ಟೇ... ನಿಮ್ಮ ಹಾರೈಕೆಗೆ ಧನ್ಯವಾದಗಳು. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸತ್ತ ಮರದ ಕೆಳಗೂ ಮೊಳಕೆಯೊಂದು ಮೂಡಿ ನೋವಿನ ಕನವರಿಕೆಗಳಲ್ಲೂ ಹರಿಯಲಿ ತೋಡಿ ದಂತವೋ ದುರಂತವೋ ಕಥೆಯಾಗಿ ಕವಿತೆಯಾಗಿ ಶವವಾಗುವ ತನಕ ಬದುಕಬೇಕು ನಾವು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೂ೦.. ಹೌದು.. ಬದುಕೆನ್ನು ವ ಬ೦ಡಿಯನ್ನು ಹೊರಲೇಬೇಕು.. ಬೆಳಕನ್ನು ಹುಡುಕಲೇ ಬೇಕು.. ನಿಮ್ಮ ಪ್ರತಿಕ್ರಿಯೆಯು ಸೊಗಸಾಗಿದೆ ಆಚಾರ್ಯರೇ.. ಎ೦ದಿನ೦ತೆ ಟಿಪಿಕಲ್ ಆಚಾರ್ಯ ಸ್ಟೈಲ್!! ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅತ್ಯುತ್ತಮ ಕವನ ನಾವುಡರೇ. ನಿಮ್ಮ ಕವನಗಳಲ್ಲಿ ಒಂದುಬಗೆಯ ಭಾವನಾತ್ಮಕ ತುಡಿತವಿರುತ್ತದೆ. ಅಭಿನಂದನೆಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಭಾವನೆಯೇ ಕವಿಯ ಆಸ್ತಿ! ನಾವಡ ಉವಾಚವನ್ನು ಮೆಚ್ಚಿಕೊ೦ಡ ನಾಗರತ್ನರವರಿಗೆ ಧನ್ಯವಾದಗಳು. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಉತ್ತಮ ಪ್ರಯತ್ನ ನಾವಡರೆ. ಕಾವ್ಯದ ಕೃಷಿ ಕೆಲವೊಮ್ಮೆ ಬರಡಾದರೂ ಮತ್ತೆ ಅದಕ್ಕೆ ಜೀವ ಚೈತನ್ಯ ಬಂದೆ ಬರುತ್ತದೆ. ಹೀಗೆ ಬರೆಯುತ್ತಿರಿ ಎಂಬ ಪ್ರೀತಿಪೂರ್ವಕ ಆಗ್ರಹ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೆಚ್ಚಿಕೊ೦ಡು ಪ್ರತಿಕ್ರಿಯೆ ನೀಡಿದ ರವಿ ಕು೦ಬಾರರಿಗೆ ಧನ್ಯವಾದಗಳು. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.