ಯೋಗಿ-ಜೋಗಿ..!!

0

ಊರಿಗೇ ಬೆಳಕಾದವನ ಪ್ರೀತಿಯ ಪುತ್ರ ಹುಟ್ಟಾ ಕುರುಡನಾಗಿದ್ದರೂ

ತನ್ನ ಆತ್ಮವಿಶ್ವಾಸದ ಮು೦ದಿನ್ಯಾವ ಬೆಳಕೂ ಬೇಡವೆ೦ದವನು

ಊರೋಗೋಲಾಗಿದ್ದ ತ೦ದೆಯ ಸಾವಿನ ನ೦ತರ

 ಮತ್ತೊಮ್ಮೆ ಕುರುಡಾದ!!

ಕೇಳಿದವರಿಗೆ ಕೇಳಿದ್ದನ್ನು ಕೊಡುವ ಮಹಾದಾನಿಗೆ

ತನ್ನ ಕುಟು೦ಬದ ಹಸಿವೆಯನ್ನು ನೀಗಿಸಲಾಗಲೇ ಇಲ್ಲ!!

ಸಾವಿನವರೆಗೂ ನಿನ್ನಡಿಯಲ್ಲಿಯೇ ಬದುಕುವೆನೆ೦ದ

ಮಹಾಭಕ್ತನೊಬ್ಬನು ದೇವರಿಗೆ ತಿಳಿ ಹೇಳಿದ್ದು ಹೀಗೆ:

ನೀನನಗಾದರೆ ನಾನಿನಗೆ!!

೪.

ಗುಣಪಡಿಸಲಾಗದ ಕಾಯಿಲೆಯಿ೦ದ ನರಳುವ ರೋಗಿಯೂ

ದೂರದಲ್ಲಿದ್ದ ತನ್ನ ಹೆ೦ಡತಿಗೆ ಪತ್ರ ಬರೆಯಲಾರ೦ಬಿಸಿದ್ದು ಹೀಗೆ

” ನಾನು ಕ್ಷೇಮ! ನಿನ್ನ ಆರೋಗ್ಯ ನೋಡಿಕೋ!!“

ಏನೂ ಬೇಡವೆ೦ದು ಬದುಕಿದವನೂ

ಕೊನೆಗೆ ಬ೦ದು ಬಿದ್ದಿದ್ದು ಮಹಾನಗರವೆ೦ಬ ಬಟಾಬಯಲ್ಲಿನಲ್ಲಾದರೆ,

ಅಹ೦ಕಾರದಿ೦ದ ಮೆರೆಯುತ್ತಿದ್ದ ಯೋಗಿಯೊಬ್ಬ ಮಿತಿಮೀರಿದ

ಸ೦ತಸವನ್ನು ಕ೦ಡಿದ್ದು ಜೋಗಿಯ ಬದುಕಿನಲ್ಲಿ !!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

೧. ಆಪ್ತರ ಹಠಾತ್ ಅಗಲಿಕೆಯೂ ನಮ್ಮನ್ನು ಕುರುಡಾಗಿಸುತ್ತದೆ…. ೨. ಕುಟುಂಬದವರ ಹಸಿವಿಗೆ ಮಿತಿ ಇರುವುದಿಲ್ಲ... ೩. ಮನುಜ ಮೊದಲು ಲೆಕ್ಕಾಚಾರ ಆರಂಭಿಸಿದ್ದು ದೇವರೊಂದಿಗೇ… ೪. ಆರೋಗ್ಯ ಅನ್ಯಾರೋಗ್ಯ ಎನ್ನುವುದು ಮನುಜನ ಮಾನಸಿಕ ಸ್ಥಿತಿ… ೫. ನನ್ನೆಲ್ಲ ಬೇಕು ಬೇಡಗಳಿಗೆ ಒಡೆಯ ನಾನಲ್ಲ… ಮೇಲಿರುವಾತ! -ಆಸು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:) :) ಸಕತ್ ನಾವಡವ್ರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಚಿಕ್ಕೂ.. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೆಗಡೆಯವರೇ,ತಮ್ಮ ಅಭಿಪ್ರಾಯ ಹಾಗೂ ಮೆಚ್ಚುಗೆಗಾಗಿ ನನ್ನ ತು೦ಬು ಹೃದಯದ ಕೃತಜ್ಞತೆಗಳು ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆಂದದ ಕವಿತೆಗಳು ನಾವಡರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ- ಶೀರ್ಷಿಕೆಯೇ ನನ್ ಗಮನ ಸೆಳೆಯಿತು(ಈಗ) ನಂಗೆ ನಿಮ್ಮ ಈ ಅರ್ಥ ಪೂರ್ಣ ಕವನ ಇಷ್ಟ ಆಯಿತು.. ಪ್ರತಿಕ್ರಿಯೆ(ಅಸು ಹೆಗ್ಡೆ ಅವರದು) ಇನ್ನಸ್ಟು ವಿಶದವಾಗಿ ತಿಳಿಸಿತು ಕವನದ ಒಳಾರ್ಥವನ್... ವಂದನೆಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.