ದಾರಿ..

5

ದಾರಿ, ಅದು ನಿತ್ಯ ಮೌನಿ,
 
ದಾರಿಯಲ್ಲಿ ಯಾರೂ ನಡೆಯಬಹುದು
ಜಾತಿ ಮತ ಪ೦ಥಗಳ ಬೇಧವಿಲ್ಲದೆ,
ನಾವು ನಿ೦ತಲ್ಲಿ, ಅದೂ ನಿಲ್ಲುತ್ತದೆ
ನಿ೦ತರದು ಸ್ಥಾವರ, ಆ ಕ್ಷಣಕ್ಕೆ
ನಮ್ಮ ಅನುಭವಗಳ ಅ೦ತ್ಯ;
 
ನಡೆಯುತ್ತಲೇ ಇದ್ದಲ್ಲಿ ಅದೂ
ನಮ್ಮೊ೦ದಿಗೇ ಸಾಗುತ್ತದೆ,
ಕ್ರಮಿಸುತ್ತಲೇ ಇದ್ದರೆ ಅದೊ೦ದು ಜ೦ಗಮ,
ನಮಗೋ ಅನುಭವಗಳ ಮು೦ದುವರಿಕೆ;
 
ಎಷ್ಟೊ೦ದು ಜನ ನಡೆದರು ಇಲ್ಲಿ!
ಯಾರಿಗೂ ನಡೆಯಬೇಡಿ ಎನ್ನಲಿಲ್ಲ ಅದು
ಮೆಟ್ಟದಿರಿ ನನ್ನ ನೋವಾದೀತೆ೦ದು, ಅಳಲಿಲ್ಲವದು;
 
ಬುಧ್ಧ, ಗಾ೦ಧಿ, ಅಕ್ಕ, ಬಸವ ಎಲ್ಲರೂ ನಡೆದರು
ಅವರದೇ ಆಯ್ಕೆಯ ಅವರದೇ ದಾರಿಗಳಲ್ಲಿ;
ಭಿನ್ನ ದಾರಿಗಳ ಹಿಡಿದರೂ ಮುಟ್ಟಿದರು ಸಮಾನಗಮ್ಯವ,
ನಡೆದವರು ಉಳಿದವರಿಗೆ ದಾರಿಯ ತೋರಿದರು,
ನಡೆಯಲಾಗದವರೆಲ್ಲಾ ಇದರ ಬಗ್ಗೆ ಬರೀ ಹೇಳಿದರು,
ಆದವರು ನಡೆದರು, ಉಳಿದವರು ಸುಮ್ಮನೇ ಉಳಿದರು;
 
ಒಬ್ಬೊಬ್ಬರದು ಒ೦ದೊ೦ದು ದಾರಿ,
ಸಬಲರು ದುರ್ಬಲರೆನ್ನದೆ ಸರಿ
ದಾರಿಯಲ್ಲಿ ಕ್ರಮಿಸಿದವರು ಉಳಿದರು,
ತಪ್ಪು ಹಾದಿಯ ಆರಿಸಿದವರು ಅಳಿದರು,
ಯೌವನ, ಗ್ರಹಸ್ಥ, ಸನ್ಯಾಸ, ವಾನಪ್ರಸ್ಥ
ಎಲ್ಲವೂ  ದಾರಿಗಳೇ, ಗಮ್ಯದತ್ತ ಮಾರ್ಗದರ್ಶಿಗಳೇ;
 
ರಾಜನಾದರೇನು? ಗುಲಾಮನಾದರೇನು?
ನಾಯಕನಾದರೇನು? ಹಿಂಬಾಲಕನಾದರೇನು?
ಎಲ್ಲರೂ ನಡೆದರು, ಮು೦ದೂ ನಡೆಯುವರು,
ಯಾವುದೋ ಸಾಧನೆಗಾಗಿ,
ತಡಕಾಡಿದ ಕನಸುಗಳ ಸಾಕಾರಕ್ಕಾಗಿ;
 
ಆದರೆ ದಾರಿ ಮಾತ್ರ ಸದಾ ಮೌನಿ,
ನೀವು ಮಾತನಾಡಿದರೂ ಅದು ಬಾಯ್ತೆರೆಯದು,
ಅದೊ೦ದು ವಸ್ತು!
ಅದೊ೦ದು ನಿಗೂಢ!
ಅದೊ೦ದು ಕುತೂಹಲ!
ನಡೆದಾಡುವವರ ತೂಕವನ್ನಳೆವ ಮಾಪಕ
ನಮ್ಮೊ೦ದಿಗೇ ಉಳಿದರೂ,
ನಮ್ಮೊ೦ದಿಗೇ ಅಳಿಯದಂಥಹ ದ್ಯೋತಕ!

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಆತ್ಮೀಯ ದಾರಿ ಒ೦ದು ನಿಗೂಢ. ಹೌದು ಸರ್, ನಡೆಯುವವನ ತೂಕ ಮಾಪಕ ಅವನೆಷ್ಟು ಪ್ರಬುದ್ಧ, ಪ್ರಯೋಜಕ ಎಲ್ಲವನ್ನೂ ಅರಿತದ್ದು ಆ ದಾರಿ. ಎಲ್ಲರನ್ನೂ ತನ್ನ ಹೆಗಲಿಗೇರಿಸಿಕೊಳ್ಳುತ್ತೆ ಅವನು ಏನಾದರಾಗಿರಲಿ. ದಾರಿ ಒ೦ದು ಅದ್ಭುತ. ಮತ್ತು ಮಾದರಿ. ತು೦ಬಾ ಒಳ್ಳೆಯ ಮತ್ತು ಚಿ೦ತನಾರ್ಹ ಕವನ. ಹರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ದಾರಿ ಸದಾ ಮೌನಿ ನಡೆದ ಹೆಜ್ಜೆಗಳ ಮೂಕ ಸಾಕ್ಷಿ ನಾ ನಡೆದಲ್ಲಿ ಸೃಷ್ಟಿಯಾಗುವ ದಾರಿ ಸರಿಯೋ ತಪ್ಪೋ ಹೇಳದೆ ನಿಜಕ್ಕೂ ಮೌನಿ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ದಾರಿಯನೂ ಮಾತನಾಡಿಸಿ ನೋಡಿ ಒಮ್ಮೆ... ಆ ಮೌನಿಯನೂ ಕೆಣಕಿ ನೋಡಿ ನೀವೊಮ್ಮೆ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವನವನ್ನು ಮೆಚ್ಚಿ ಪ್ರತಿಕ್ರಿಯಿಸಿದ ಆತ್ರೇಯರು,ಆಚಾರ್ಯರು, ಹೆಗಡೆಯವರಿಗೆ ನನ್ನ ಹೃದಯ ತು೦ಬಿದ ಪ್ರಣಾಮಗಳು. ನಿಮ್ಮ ಪ್ರೋತ್ಸಾಹ ನಿರ೦ತರವಾಗಿರಲಿ ಎ೦ಬ ಆಸಯಗಳೊ೦ದಿಗೆ, ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತಪ್ಪು: >>ನಿಮ್ಮ ಪ್ರೋತ್ಸಾಹ ನಿರ೦ತರವಾಗಿರಲಿ ಎ೦ಬ ಆಸಯಗಳೊ೦ದಿಗೆ,<< ಒಪ್ಪು: <<ನಿಮ್ಮ ಪ್ರೋತ್ಸಾಹ ನಿರ೦ತರವಾಗಿರಲಿ ಎ೦ಬ ಆಶಯಗಳೊ೦ದಿಗೆ,<<
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ, ಬಹುಶಃ ಇತ್ತೀಚೆಗೆ ಬ೦ದ ಅತ್ಯುತ್ತಮ ಕವನವಿದು ಅನ್ನಿಸುತ್ತಿದೆ. ದಾರಿ, ನಿಜಕ್ಕೂ ಒ೦ದು ಗ೦ಭೀರ ಚಿ೦ತನೆಗೆ ಹಚ್ಚುವ ಕವನ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ನಾವಡರೆ , ಒಳ್ಳೆಯ ಕವನ ಹಾಗೂ ಒಳ್ಳೆಯ ಚಿಂತನೆ .
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಯರೇ ಮಂಜು ಅವರು ಹೇಳುವುದು ಸರಿಯೆನ್ನುಸುತ್ತಿದೆ ನಿಮ್ಮ ಕವನಗಳಲ್ಲಿಯೇ ಉತ್ತಮ ಕವನವಿದು ಅನ್ನಿಸುತ್ತಿದೆ ನನಗೂ ದಾರಿ ಎಂದಿಗೂ ಎಲ್ಲಿಗೂ ಶಾಶ್ವತ, ಹಲವರು ನಡೆದದ್ದೇ ದಾರಿ, ಇನ್ನು ಕೆಲವರು ತಾವೇ ಮಾಡಿಕೊಂಡರು ಗಮ್ಯಕ್ಕೆ. ತುಂಬಾ ಗಂಭೀರ ಕವನ ಉಣಬಡಿಸಿದುದಕ್ಕೆ ಧನ್ಯವಾದಗಳು http://sampada.net/a...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ದುರ್ಗಮವೋ,ಸುಗಮವೋ,ತಪ್ಪೋ ಸರಿಯೋ,ಕುಂಟನೋ ಕುರುಡನೋ,ದುರುಳನೋ ಸಾತ್ವಿಕನೋ ಎಲ್ಲರ ಗುರಿ ಬೇರೆಯೇ ಆದರೆ ದಾರಿ ಎಂದಿಗೂ ತಟಸ್ಥ,ಅನಂತ,ನಿರಂತರ,ತನ್ನಷ್ಟಕ್ಕೆ ತಾನು ನಿರಮ್ಮಳ.ಆದರೆ ಅದು ನಿಗೂಢ ಕುತೂಹಲ ಎನ್ನುವುದು ಸತ್ಯ ಚಿಂತನಾರ್ಹ ಕವನ..ಚಿಂತನೆಗೆ ದಾರಿಗಳೂ ಹಲವು..ಕೆಲವೊಮ್ಮೆ ಅಂತ್ಯವಿಲ್ಲದ್ದು !
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವನವನ್ನು ಮೆಚ್ಚಿ ಪ್ರತಿಕ್ರಿಯಿಸಿದ ಮ೦ಜಣ್ಣ,ಗೋಪಿನಾಥರು, ಪ್ರವೀಣರು ಹಾಗೂ ಸೋದರ ಕಲ್ಕೋಟಿಯವರಿಗೆಲ್ಲಾ ನನ್ನ ಹೃದಯ ತು೦ಬಿದ ಪ್ರಣಾಮಗಳು. ನಿಮ್ಮ ಪ್ರೋತ್ಸಾಹ ನಿರ೦ತರವಾಗಿರಲಿ ಎ೦ಬ ಆಸಯಗಳೊ೦ದಿಗೆ, ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.