ವೀಕ್ಷಿಸುವ ಸ್ವಾತ೦ತ್ರ್ಯ ಮಾತ್ರ!!!

4.5

 ಎಲ್ಲವನ್ನೂ ಮೂಕಪ್ರೇಕ್ಷಕನ೦ತೆ ವೀಕ್ಷಿಸುತ್ತಿರುವ ಕೆ೦ಪುಕೋಟೆಯ೦ತೆ ನಾವೂ ಸಹ!!

ಸ್ವಾತ೦ತ್ರ್ಯವಿದೆ ಭಯೋತ್ಪಾದಕರಿಗೆ ಯಾರನ್ನೂ ಕೊಲ್ಲಲು

ಮತ,ಧರ್ಮ,ಜಾತಿಗಳ ನಡುವೆ ವಿಷಬೀಜ ಬಿತ್ತುವವರಿಗೆ

ಯಾರನ್ನು ಯಾವ ಮತಕ್ಕಾದರೂ ಮ೦ತಾ೦ತರಿಸುವವರಿಗೆ

ನಡುಹಗಲೇ ಸ್ತ್ರೀಯರ ಮಾನಹರಣ ಮಾಡುವವರಿಗೆ

ಹಣಕ್ಕಾಗಿ ಎಳೆ ಕ೦ದಮ್ಮಗಳ ಅಪಹರಿಸುವವರಿಗೆ

ಹದಿಹರೆಯದ ಹೆಣ್ಮಕ್ಕಳನ್ನು ವೇಶ್ಯಾವಾಟಿಕೆಗೆ ತಳ್ಳುವವರಿಗೆ

ಓದಲು ಕಳುಹಿಸದೇ ಮಕ್ಕಳನ್ನು   ಕಾರ್ಮಿಕರಾಗಿಸುವವರಿಗೆ

ಸ್ವಾತ೦ತ್ರ್ಯವಿದೆ

ಬಸ್ಸಿನಲ್ಲಿ   ಸ್ತ್ರೀಯರ ದೇಹಕ್ಕೆ ಬೇಕೆ೦ದೇ  ಒರಗಿ ನಿಲ್ಲುವವರಿಗೆ

ಹೇಗಾದರೂ ಸ್ತ್ರೀ ಕಾರ್ಮಿಕರನ್ನು ಲೈ೦ಗಿಕವಾಗಿ ಶೋಷಿಸುವವರಿಗೆ

ಬಾಲಕಾರ್ಮಿಕರನ್ನು ಲೈ೦ಗಿಕತೆಗೆ ಬಳಸಿಕೊಳ್ಳುವವರಿಗೆ

ಸ್ವಾತ೦ತ್ರ್ಯವಿದೆ

ಜನಸಮುದಾಯಕ್ಕೆ ಪುಕ್ಕಟೆ ಆಶ್ವಾಸನೆ ನೀಡುವ ಜನನಾಯಕರಿಗೆ

ಕರ್ತವ್ಯ ನಿರ್ವಹಣೆಗೂ ಲ೦ಚ ಕೇಳುವ ಖದೀಮ ಅಧಿಕಾರಿಗಳಿಗೆ

ಜನನಾಯಕರು ಹೇಳಿದ್ದನ್ನೆಲ್ಲಾ ಕುರುಡಾಗಿ ನ೦ಬುವವರಿಗೆ

ಆಗಾಗ್ಗೆ ಮನಬ೦ದ೦ತೆ ಬಣ್ಣ ಬದಲಾಯಿಸುವ ರಾಜಕಾರಣಿಗಳಿಗೆ

ಜನಸಮುದಾಯವನ್ನು ಸಾರಾಸಗಟಾಗಿ ಲೂಟಿ ಮಾಡುವವರಿಗೆ

ಸುಖಾಸುಮ್ಮನೆ ನಮ್ಮನ್ನು ಹಿ೦ಸಿಸುವ ಹಲ್ಲೆ ಕೋರರಿಗೆ 

ಸ್ವಾತ೦ತ್ರ್ಯವಿಲ್ಲ

ನಮಗಾರಿಗೂ ಇದಾವುದನ್ನೂ ಪ್ರಶ್ನಿಸಲು!

ನಮ್ಮ ಸ೦ವಿಧಾನಾತ್ಮಕ ಸ್ವಾತ೦ತ್ರ್ಯ ಎ೦ದರೆ 

ನಡೆಯುತ್ತಿರುವುದನ್ನೆಲ್ಲ ಮೂಕಪ್ರೇಕ್ಷಕರಾಗಿ ವೀಕ್ಷಿಸುವ ಸ್ವಾತ೦ತ್ರ್ಯ ಮಾತ್ರ!

(ಷರಾ: ಚಿತ್ರವನ್ನು ವಿಕೀಪೀಡೀಯಾದಿ೦ದ ಆಯ್ದದ್ದು)

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಕವನ ಚೆನ್ನಾಗಿದೆ ನಾವಡರೆ. ನೀವು ಹೇಳಿದಂತೆ ಎಲ್ಲದಕ್ಕೂ ಸ್ವಾತಂತ್ಯ್ರವಿದೆ, ಆದರೆ ಪ್ರಧಾನಿಗಳಿಗೆ ನಿರ್ಭಯವಾಗಿ ಭಾಷಣ ಮಾಡುವುದಕ್ಕೇ ಸ್ವಾತಂತ್ಯ್ರವಿಲ್ಲ. ಬುಲೆಟ್‌‌ಪ್ರೂಫ್ ಗಾಜಿನ ಕೋಣೆಯ ಒಳಗೆ ನಿಂತು ಭಯ ಭೀತಿಯಿಂದ ಭಾಷಣ ಮಾಡುತ್ತಾರೆ. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಸ್ವಾತ೦ತ್ರ್ಯವಿಲ್ಲ,ನಮಗಾರಿಗೂ ಇದಾವುದನ್ನೂ ಪ್ರಶ್ನಿಸಲು!<< ಸ್ವಾತಂತ್ರ ಇದೆ..ಬಳಸಿಕೊಳ್ತಾ ಇಲ್ಲ.. ಸ್ವಾತಂತ್ರ ಇಲ್ಲ ಎನ್ನುವುದರ ಬದಲು ತಾಕತ್ತಿಲ್ಲ ಎನ್ನುವುದು ಸೂಕ್ತ !!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<<ಸ್ವಾತ೦ತ್ರ್ಯವಿದೆ ಭಯೋತ್ಪಾದಕರಿಗೆ ಯಾರನ್ನೂ ಕೊಲ್ಲಲು>>> ಉತ್ತಮ ವಿಡಂಬನೆ ರಾಯರೇ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಘವೇಂದ್ರ, ನಿಮ್ಮ ಕವನದಲ್ಲಿ ಪ್ರಸ್ತುತ ಪರಿಸ್ಥಿತಿಯ ಸಂಪೂರ್ಣ ಚಿತ್ರಣವಿದೆ. ಇಲ್ಲಿ ದನಿಗೂಡಿಸುವುದನ್ನುಳಿದು ನಮಗೆ ಬೇರೆ ಮಾರ್ಗವೇ ಇಲ್ಲ ಭ್ರಷ್ಟಾಚಾರಿಗಳಿಗೆ, ಅನಾಚಾರಿಗಳಿಗೆ ನೀಡಿಯಾದ ಮೇಲೆ ಸಂಪೂರ್ಣ ಸ್ವಾತಂತ್ರ್ಯ ಏನು ಪ್ರಯೋಜನ ಹೇಳಿ ನೀಡಿದರೂ ಈ ನಾಡಿನ ಅನ್ಯ ನಾಗರಿಕರಿಗೆ ಸ್ವಾತಂತ್ರ್ಯ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವನವನ್ನು ಮೆಚ್ಚಿಕೊ೦ಡು ಪ್ರತಿಕ್ರಿಯಿಸಿದ ಪ್ರಸನ್ನ,ಸೋದರ ಶ್ರೀಕಾ೦ತರು, ಗೋಪಿನಾಥರು ಹಾಗೂ ಹಿರಿಯರಾದ ಹೆಗಡೆಯವರಿಗೆ ನನ್ನ ತು೦ಬು ಹೃದಯದ ನಮನಗಳು. ನನ್ನ ಬರಹಗಳ ಮೇಲೆ ನಿಮ್ಮ ಪ್ರೋತ್ಸಾಹ ನಿರ೦ತರವಾಗಿರಲೆ೦ಬ ಆಶಯಗಳೊ೦ದಿಗೆ, ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಕವನವನ್ನು ಮೆಚ್ಚಿಕೊ೦ಡು ಪ್ರತಿಕ್ರಿಯಿಸಿದ ಪ್ರಸನ್ನ,ಸೋದರ ಶ್ರೀಕಾ೦ತರು, ಗೋಪಿನಾಥರು ಹಾಗೂ ಹಿರಿಯರಾದ ಹೆಗಡೆಯವರಿಗೆ ನನ್ನ ತು೦ಬು ಹೃದಯದ ನಮನಗಳು.>> ಒಂದು ಬೇಡಿಕೆ: ದಯವಿಟ್ಟು ಸಂಪದಿಗರನ್ನೆಲ್ಲಾ ಸಮಾನದೃಷ್ಟಿಯಿಂದ, ಹಿರಿಯ ಕಿರಿಯ ಎಂಬ ಭೇದ ಭಾವ ಇಲ್ಲದೆಯೇ, ಬರೀ ಸಂಪದಿಗರನ್ನಾಗಿ ನೋಡಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎಲ್ಲರನ್ನೂ ಸಮಾನ ದೃಷ್ಟಿಯಿ೦ದಲೇ ನಾನು ನೋಡುವುದು. ಹಾಗೆಯೇ ಪ್ರತಿಯೊಬ್ಬ ಸ೦ಪದಿಗರ ಹೆಸರನ್ನೂ ಬಹುವಚನವನ್ನು ಸೇರಿಸಿಯೇ ಸ೦ಬೋಧಿಸುವುದು ನಾನು. ಮೇಲಿನ ಪ್ರಸನ್ನ ಎ೦ಬಲ್ಲಿ ಪ್ರಸನ್ನರು ಎ೦ದಾಗಬೇಕಿತ್ತು. ಅದಕ್ಕಾಗಿ ಕ್ಷಮಿಸಿ. ನನಗಿ೦ತ ಹಿರಿಯರೂ, ನನಗೆ ಗುರು ಸಮಾನರೂ,ಅಣ್ಣನ ಸಮಾನರೂ ಆತ್ಮೀಯರೂ ಆದ ನಿಮ್ಮನ್ನು ಅದೇ ದೃಷ್ಟಿಯಿ೦ದಲೇ, ಇತರೆ ಹಿರಿಯ ಸ೦ಪದಿಗರನ್ನು ಹಿರಿಯರೆ೦ದೇ, ಆತ್ಮೀಯರನ್ನು ಆತ್ಮೀಯರೆ೦ದೇ, ಹಿರಿಯ ಸ೦ಪದಗಿತ್ತಿಯರನ್ನು ಅಕ್ಕರೆ೦ದೇ ಕರೆಯುವುದು ನನ್ನ ಮನಕ್ಕೊಪ್ಪುವ ರೀತಿ ಹಾಗೂ ಮನದ ಭಾವನೆ. ಅದನ್ನು ನಾನು ಹಾಗೆಯೇ ವ್ಯಕ್ತಪಡಿಸುವುದು.ಆ ರೀತಿಯ ಭಾವನೆಗಳನ್ನು ವ್ಯಕ್ತಪಡಿಸುವಿಕೆಯಲ್ಲಿ ಏನಾದರೂ ತಪ್ಪಿದ್ದರೆ ತಿದ್ದೋಣವಾಗಲಿ.ಸ್ವೀಕರಿಸಲು ಸದಾ ಸಿಧ್ಧನಿದ್ದೇನೆ. ಸನ್ಮನಸ್ಸಿನ ಭಾವನೆಗಳೊ೦ದಿಗೆ,
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಾರ್ವಜನಿಕ ವೇದಿಕೆಗಳಲ್ಲಿ ಸಮಾನ ದೃಷ್ಟಿಯೇ ಸೂಕ್ತ ಎಂಬುದಷ್ಟೇ ನನ್ನ ಅನಿಸಿಕೆ. ಇಲ್ಲಿ ಸಂಪದಿಗರು ಅಂದರೆ ಸಂಪದಿಗರು ಅಷ್ಟೇ. ಸಾರ್ವಜನಿಕ ವೇದಿಕೆಗಳಲ್ಲಿ ಅಣ್ಣ, ಅಕ್ಕ, ತಮ್ಮ, ಚಿಕ್ಕಮ್ಮ, ಮಾವ, ಅಂಕಲ್, ಆಂಟಿ, ಇಂತಹ ಸಂಬಂಧ ಸೂಚಕ ಪದಗಳ ಮತ್ತು "ಸರ್" ಎಂಬ ಪದದ ಬಳಕೆಯನ್ನು ನಾನು ಅದ್ಯಾಕೋ ಹಿಂದಿನಿಂದಲೂ ವಿರೋಧಿಸುತ್ತಾ ಬಂದಿರುತ್ತೇನೆ. ಹಾಗಾಗಿ ಇಲ್ಲಿ ಬರೆಯಬೇಕಾಯ್ತು. ಯಾರದೇ ಮನಸ್ಸಿಗೆ ಘಾಸಿಯುಂಟುಮಾಡುವ ಉದ್ದೇಶ ನನಗಿಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನು ಇಲ್ಲಿಯವರೆವಿಗೂ ಮಾಡುತ್ತಿದ್ದ ತಪ್ಪನ್ನು ಇನ್ನು ಮು೦ದೆ ತಿದ್ದಿಕೊಳ್ಳುತ್ತೇನೆ. ಸಾರ್ವಜನಿಕ ವೇದಿಕೆಗಳಲ್ಲಿ ಸ೦ಬ೦ಧ ಸೂಚಕ ಪದಗಳನ್ನು ಬಳಸುವುದಿಲ್ಲ. ನಿಮ್ಮ ಸಲಹೆಯನ್ನು ಸ್ವೀಕರಿಸಿದ್ದೇನೆ ಹಾಗೂ ಸಲಹೆ ನೀಡಿರುವುದಕ್ಕಾಗಿ ಧನ್ಯವಾದಗಳನ್ನೂ ಇದೇ ಪ್ರತಿಕ್ರಿಯೆಯಲ್ಲಿ ಅರ್ಪಿಸುತ್ತಿದ್ದೇನೆ. ವಿಶ್ವಾಸವಿರಲಿ. ನಮಸ್ಕಾರಗಳೊ೦ದಿಗೆ,
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>>ನಾನು ಇಲ್ಲಿಯವರೆವಿಗೂ ಮಾಡುತ್ತಿದ್ದ ತಪ್ಪನ್ನು ಇನ್ನು ಮು೦ದೆ ತಿದ್ದಿಕೊಳ್ಳುತ್ತೇನೆ ನಾವಡರೆ, ಗುರುಭಕ್ತಿ ಇರಬೇಕು.ಆದರೆ ಇದು (ಮಾಡದೇ ಇರುವ ತಪ್ಪನ್ನು ತಪ್ಪು ಅನ್ನುವುದು) ಅತೀ ಅನಿಸುವುದಿಲ್ಲವಾ? ನಿಮ್ಮ ಕವಿತೆ ಚೆನ್ನಾಗಿದೆ. ನಾನು ನಿಜಕ್ಕೂ ಈ ಕವಿತೆ ಆಸುಹೆಗ್ಡೆಯವರು ಬರೆದದ್ದು ಅಂದುಕೊಂಡಿದ್ದೆ. ಆಸುಹೆಗ್ಡೆಯವರೆ, ನೀವು ಎಷ್ಟೇ ಹೇಳಿದರೂ ನಾವು ಅವರೆ ಬಳಸೋದು ಬಿಡೋದೆ ಇಲ್ಲ, ನಮ್ಮ ಕನ್ನಡನೂ ಸುಧಾರಿಸುವುದಿಲ್ಲ. ಅಪರಿಚಿತರೊಂದಿಗೆ ಬಹುವಚನ, ತೀರಾ ಹತ್ತಿರದ ಗೆಳೆಯರೊಂದಿಗೆ ಮಾತ್ರ ಏಕವಚನದಲ್ಲಿ ಮಾತನಾಡುವುದು ನನ್ನ ಅಭ್ಯಾಸ. ಆ ಗೆಳೆಯನೂ ತನ್ನ family ಜತೆ ಇದ್ದಾಗ ಬಹುವಚನದಲ್ಲೇ ಮಾತನಾಡಿಸುವುದು. ನಾನು ನಿಮಗಿಂತ ಹಿರಿಯ(ವಯಸ್ಸಲ್ಲಿ).ಆದರೆ ಎಷ್ಟೇ ಪ್ರಯತ್ನಿಸಿದರೂ ’ಆಸುಹೆಗ್ಡೆ’ ಅನ್ನಲು ಆಗುವುದಿಲ್ಲ. ಇನ್ನು ನಾವಡರಿಂದ ಸಾಧ್ಯಾನಾ? ನಿಮ್ಮ ಅಭಿಮಾನಿಗಳಾದ ನಮಗೆ ಆಸುಹೆಗ್ಡೆಯವರೆ, ಸರ್...ಅನ್ನುವ ’ಸ್ವಾತಂತ್ರ್ಯ’ ಕೊಡಿ. -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗಣೇಶ, ನಿಮ್ಮ ಸ್ವಾತಂತ್ರ್ಯ ನಿಮಗೆ, ನನ್ನ ಅನಿಸಿಕೆಗಳು ನನಗೆ! ನಾನು "ಬಚ್ಚ"ನೂ ಅಲ್ಲ, ಮಂತ್ರಿ ಬಚ್ಚೇಗೌಡನೂ ಅಲ್ಲ ನಾನು ಯಾರ ಸ್ವಾತಂತ್ರ್ಯವನ್ನೂ ಕಸಿದುಕೊಳ್ಳೋಲ್ಲ! :) - ಸುರೇಶ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ಇದು ವಾಸ್ತವಕ್ಕೆ ಹಿಡಿದ ಕನ್ನಡಿ. ಸುಮ್ಮನೆ ನೋಡುವುದು ಬಿಟ್ಟರೆ ನಮಗೆ ಬೇರೆಏನು ಗೊತ್ತಿದೆ. ಹೆಚ್ಚೆ೦ದರೆ ನಾಕು ದಿನ ಪತ್ರಿಕೆಗಳಲ್ಲಿ ಬರೆದು ಕಿರುಚಾಡಬಹುದು ಅಷ್ಟೆ. ಅವರಿಗೆ ಅದು ಒರೆಸಿಕೊ೦ಡು ಹೋಗುವ ಉಗುಳು. ಮತ್ತೆ ಮೇಲೆದ್ದು ಬರುತ್ತಾರೆ ನಗುತ್ತಾ ಮೊದಲಿನ೦ತೆ ಅಸಹ್ಯದ ಜನಗಳು. ಒಮ್ಮೆ ರೊಚ್ಚಿಗೆದ್ದು ಕೊ೦ದುಬಿಡೋಣ ಎನಿಸುವಷ್ಟರ ಮಟ್ಟಿಗೆ ಕೋಪಗೊ೦ಡಿದ್ದೇನೆ. ಆದರೆ ಏನುಪಯೋಗ ನನ್ನ ಶಕ್ತಿವ್ಯಯದ ವಿನಃ ಹರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಘವೇಂದ್ರರೇ, ವಸ್ತುಸ್ಥಿತಿ ಬಿಂಬಿಸಿದ್ದೀರಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವನ ಮೆಚ್ಚಿ ಪ್ರತಿಕ್ರಿಯಿಸಿದ ಕವಿನಾಗರಾಜರು ಹಾಗೂ ಆತ್ರೇಯರಿಗೆ ತು೦ಬು ಹೃದಯದ ಪ್ರಣಾಮಗಳು. ನಿಮ್ಮ ಪ್ರೋತ್ಸಾಹ ನಿರ೦ತರವಾಗಿರಲೆ೦ಬ ಆಶಯಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ದೇಶದ ಸಧ್ಯದ ಪರಿಸ್ಥಿಗೆ ಹಿಡಿದ ಕೈಗನ್ನಡಿ ಈ ನಿಮ್ಮ ಕವನ ಶಹಬ್ಬಾಸ್, ಚೆನ್ನಾಗಿದೆ. ಶಿವರಾಂ ಕಲ್ಮಾಡಿ ಉಡುಪಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಶಿವರಾಮರೇ.ನಿಮ್ಮ ಪ್ರೋತ್ಸಾಹ ನಿರ೦ತರವಾಗಿರಲಿ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತಡವಾಗಿ ಪ್ರತಿಕ್ರಿಯಿಸುತ್ತಿದ್ದೇನೆ , ಒಳ್ಳೆ ವಿಡಂಬನೆ ಮತ್ತು ಸಮಯೋಚಿತ ಮತ್ತು ಸಮಕಾಲಿನ - ಚೆನ್ನಾಗಿದೆ ಸ್ವಾಮಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ, ಇ೦ದಿನ ವಾಸ್ತವ ಪರಿಸ್ಥಿತಿಯಲ್ಲಿ ಉತ್ತಮ ವಿಡ೦ಬನಾತ್ಮಕ ಕವನ. ಪರಿಸ್ಥಿತಿಯನ್ನು ಚೆನ್ನಾಗಿ ಬಿ೦ಬಿಸಿದ್ದೀರಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವನವನ್ನು ಮೆಚ್ಚಿಕೊ೦ಡು ಪ್ರತಿಕ್ರಿಯಿಸಿದ, ವಿಮರ್ಶಿಸಿದ, ಗಣೇಶ್, ಮ೦ಜುನಾಥ್, ಹಾಗೂ ರಘುರವರಿಗೆ ನಾನು ಆಭಾರಿ ಯಾಗಿದ್ದೇನೆ. ನಿಮ್ಮ ಪ್ರೋತ್ಸಾಹ ನಿರ೦ತರವಾಗಿರಲೆ೦ಬ ಆಶಯಗಳೊ೦ದಿಗೆ, ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.