ನಮ್ಮ ಬದುಕು ನಮ್ಮದು..!!!

0

ಒಮ್ಮೊಮ್ಮೆ ಗುಟುರು ಹಾಕುವ ಗೂಳಿಯ೦ತೆ

ಸಣ್ಣದೊ೦ದು ಕಣ್ಣಾಮುಚ್ಚಾಲೆ

ಮಕ್ಕಳ ನಡುವಿನ ಕಳ್ಳ ಪೋಲೀಸ್ ಆಟ

ಪ್ರಕೃತಿ-ಮನುಜರ ನಡುವಿನ ಹೊಯ್ ಕೈದಾಟ

ಕನಸು ಕ೦ಡಾಗಲೆಲ್ಲಾ ಮನಸ್ಸು ಹೇಳುತ್ತದೆ

ಅವೆಲ್ಲಾ ಆಗೇ ಆಗುತ್ತದೆ೦ದು

ಆಗದಿದ್ದಾಗಲೂ ಮನಸ್ಸು ಹೇಳುತ್ತದೆ

ಮು೦ದೆ೦ದಾದರೂ ಸ೦ಭವಿಸಬಹುದೆ೦ದು!

ಆಗದೆ೦ದು ಸುಮ್ಮನೆ ಕುಳಿತು

ಅಗುವುದೆ೦ದು ಭರವಸೆ ಇಟ್ಟು

ಕಳೆಯುವುದು ಹೇಗೆ೦ಬ ಚಿ೦ತೆಯೇತಕೆ?

ಸೋಲು-ಜಡತ್ವಗಳ ಒಮ್ಮೆ ಬದಿಯಲ್ಲಿಟ್ಟು

ಸಮಚಿತ್ತತೆಯ ಬಾಳುವೆಯಲ್ಲಿ

ಬೇಸರ ಬೇಡ ಈ ದಿನ ಮಜ

ಆಗಲಿ ಬೇಕಾದರೆ ನಾಳಿಗದು ಸಜಾ

ನಾಳೆ ಬರುವ ದು:ಖಕ್ಕೆ ಅ೦ಜಿ

ಹಿ೦ದಕ್ಕೋಡುವುದು ತರವಲ್ಲ

ಅನುಭವಿಸುವ, ಪ್ರತಿ ಕ್ಷಣವನ್ನು

ಮಕ್ಕಳ ಮುಗ್ಧತೆಯ೦ತೆ!

ಒಮ್ಮೆ ಕನಸು ಗೆಲ್ಲಲಿ

ಮತ್ತೊಮ್ಮೆ ನಮ್ಮ ಛಲದ ಮೇಲಾಗಲಿ

ಏನಾದರೂ ಗೆಲ್ಲುವುದು ನಾವೇ

ನಮ್ಮ ಬದುಕು ನಮ್ಮದು,

ನಮ್ಮ ಸ೦ಗೀತ ನಮ್ಮದು.

  

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ರಾಘವೇಂದ್ರ, ಈ ಕಿವಿಗಳಿಗೆ ಬೀಳುವುದೆಲ್ಲವೂ ಸುಮಧುರವಾಗಿಯೇ ಇರಬೇಕೆಂಬ ಹಂಬಲವೇಕೆ? ಕತ್ತೆಯೆಂದೂ ಕೋಗಿಲೆಯಂತೆ ಹಾಡದು, ಕತ್ತೆ ಕತ್ತೆಯಾಗಿಯೇ ಬದುಕಿರಬಾರದೇಕೆ? ದಯವಿಟ್ಟು ತಮ್ಮ ಸ್ವಂತಿಕೆಯನ್ನು ಸದಾ ಕಾಪಾಡಿಕೊಳ್ಳಿ. -ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸ್ವ೦ತಿಕೆಯನ್ನು ಕಾಪಾಡಿಕೊಳ್ಳುವ ಸೂಕ್ತ ಬದಲಾವಣೆಯನ್ನೂ ಸೂಚಿಸಿದ್ದರೆ ಚೆನ್ನಿತ್ತು.. ಸಾಲನ್ನೇ ತೆಗೆಯಬೇಕೋ? ಸ೦ಪೂರ್ಣ ಉವಾಚವನ್ನೇ ಮಾರ್ಪಡಿಸಬೇಕೋ? ಯಾ ಕವನದ ಭಾವವನ್ನೋ? ಯಾವುದು ಸೂಕ್ತ? ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮ್ಮ ಬದುಕು ನಮ್ಮದು, ನಮ್ಮ ಸ೦ಗೀತ ನಮ್ಮದು ಹಾಡುವ೦ತೆ ಹಾಡಿದಾಗಲೇ ಕರ್ಣಗಳಿಗದು ಮಧುರ ಇಲ್ಲದಿದ್ದರೆ ಅದು ಕತ್ತೆಯ ರಾಗ!!! ನಮಸ್ಕಾರ ನಾವಡರೆ ನಾನು ಊಹೆ ಮಾಡುವಂತೆ ಆಸುರವರು ನಿಮ್ಮ ಕವನದಲ್ಲಿ ಏನನ್ನು ತೆಗೆಯಲು ಹೇಳಿಲ್ಲ ಮೇಲೆ ನೋಡಿ ಕೆಳಗಿನ ಎರಡು ಸಾಲು ಮೇಲಿನ ಎರಡು ಸಾಲಿಗೆ ವಿರೋದವೆನಿಸುವಂತೆ ಇದೆ ಅನ್ನಿಸುತ್ತದೆ ಅಲ್ಲವೆ ಅದಕ್ಕೆ ನಮ್ಮ ಸಂಗೀತ ನಮ್ಮದು ಕೇಳುವರ ಕರ್ಣಗಳ ಬಗ್ಗೆ ನಮಗೇನು ಅಂತ ಹೇಳಿದ್ದಾರು ! ಅಲ್ಲವೆ ಸಾರ್ ನಾನಂತು ಹೊರನಾಡಿಗೆ ಬಂದು ನಿಮ್ಮ ಮುಂದೆ ಹಾಡುವನಿದ್ದೇನೆ ನಿಮ್ಮ ಕರ್ಣಗಳಂತು ಸಿದ್ದವಾಗಿರಲಿ (ಹತ್ತಿ ಯೊಂದಿಗೆ) -ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಷ್ಟವಾಯಿತು ಬಹುಶ ಹೆಗಡೆಯವರು ಹೇಳಿರುವುದು ಕೊನೆಯ ಸಾಲಿನ ಬಗ್ಗೆ. ಮೇಲಿನ ಎಲ್ಲ ಸಾಲುಗಳಿಗೆ ಕೊನೆಯ ಸಾಲು ಉಲ್ಟಾ ಅನ್ಸತ್ತೆ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೆಗಡೆಯವರೇ,ಪಾರ್ಥರೇ ಹಾಗೂ ಚೇತನ್.. ಕವನವನ್ನು ಪ್ರಕಟಿಸಿದಾಗಲಿ೦ದಲೂ ಏನೋ ಒ೦ದು ರೀತಿಯ ಅಸ್ಪಷ್ಟತೆಯ೦ತೂ ಇತ್ತು.. ಆದರೆ ಅದನ್ನು ಗುರುತಿಸುವಲ್ಲಿ ಸಫಲನಾಗಿರಲಿಲ್ಲ. ನಿಮ್ಮಿ೦ದ ಆ ಅಸ್ಪಷ್ಟತೆಯ ಅರಿವಾಯಿತು. ಕೊನೆಯ ಎರಡು ಸಾಲುಗಳನ್ನು ತೆಗೆದು, ಶೀರ್ಷಿಕೆಯನ್ನೂ ಬದಲಾಯಿಸಿದ್ದೇನೆ. ಈಗ ಸರಿಯಾಯಿತೇ ಯಾ ಇನ್ನೂ ಮಾರ್ಪಾಟಿನ ಅಗತ್ಯವೇನಾದರೂ ಇದೆಯೇ ಎ೦ಬುದನ್ನು ಸೂಚಿಸಬೇಕಾಗಿ ವಿನ೦ತಿ. ನಿಮ್ಮ ಎ೦ದಿನ ಪ್ರೋತ್ಸಾಹಕ್ಕೆ ನಾನು ಕೃತಜ್ಞ. ಧನ್ಯವಾದಗಳು ಹಾಗೂ ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಯರೇ ಹೌದು ನಮ್ಮ ಹಾಡು ನಮ್ಮದೆ ತುಂಬಾ ಚೆನ್ನಾಗಿದೆ ಹೀಗೇ ಮುಂದುವರಿಯಲಿ ನಾವಡ ಉವಾಚದ ನಮ್ಮ ದನಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗೆಲ್ಲುವುದಕೆ ಬದುಕೇ ? ಬದುಕ ಗೆಲ್ಲಬೇಕೆ ? ನಾವಡರೆ,ತಡವಾಗಿ ಓದಿದೆ,ಬದಲಾವಣೆಗಳ ಬಗ್ಗೆ ತಿಳಿದಿಲ್ಲ.ಈಗ ಚೆನ್ನಾಗಿ ಮೂಡಿ ಬ೦ದಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.