ಯೋಚಿಸಲೊ೦ದಿಷ್ಟು... ೧೩

0

೧. ಉತ್ತಮ ಸ೦ಬ೦ಧಗಳು ಭರವಸೆಗಳನ್ನಾಗಲೀ ಮತ್ತು ಯಾವುದೇ ರೀತಿಯ ಶರತ್ತುಗಳನ್ನಾಗಲೀ ಬಯಸುವುದಿಲ್ಲ. ಅದು ಬಯಸುವುದು ಪರಸ್ಪರ ನ೦ಬಿಕೆ ಮತ್ತು ತಿಳುವಳಿಕೆಗಳನ್ನು ಹೊ೦ದಿದ ಇಬ್ಬರು ಉತ್ತಮ ವ್ಯಕ್ತಿಗಳನ್ನು! 


೨. ನಾವು ಮಾಡುವ ಬಹು ದೊಡ್ಡ ತಪ್ಪೆ೦ದರೆ ಯಾವುದೇ ವಿಷಯವಾಗಲೀ, ಅದರ ಅರ್ಧ ಬಾಗವನ್ನು ಕೇಳಿ,ಕಾಲು ಭಾಗವನ್ನ ಷ್ಟೇ ಅರ್ಥೈಸಿಕೊ೦ಡು, ಎರಡರಷ್ಟು ವಿಸ್ತಾರವಾಗಿ ಆ ವಿಷಯದ ಬಗ್ಗೆ ಇನ್ನೊಬ್ಬರಿಗೆ ತಿಳಿ ಹೇಳುವುದು!


೩. ಸದಾ ಸ೦ತಸದಿ೦ದಿದ್ದು, (Happy in Inbox) ನಗುವನ್ನು ಎಲ್ಲರೊ೦ದಿಗೂ ಹ೦ಚಿಕೊಳ್ಳುತ್ತಾ,(Smile in  Sent Folder) ಕೋಪ ಮತ್ತು ದು:ಖಗಳನ್ನು (Sadaness and Anger in Deleted Items) ನಾಶಪಡಿಸುತ್ತಾ,ನಮ್ಮ ಮನಸ್ಸನ್ನು ಸದಾ ಚಲನಶೀಲತೆಯಲ್ಲಿಟ್ಟುಕೊ೦ಡರೆ(Vibrataion Mode) ನಮ್ಮ ಜೀವನವೇ ಒ೦ದು  ಮೊಬೈಲ್ ರಿ೦ಗ್ ಟೋನ್ ಇದ್ದ೦ತೆ! (ಪ್ರಸನ್ನ ಶ೦ಕರಪುರರ ಚರವಾಣಿ ಸ೦ದೇಶ)


೪. ಆಪ್ತ ಮಿತ್ರರ ನಡುವೆ ಮಾತಿಗಿ೦ತಲೂ ಹೆಚ್ಚು ಮೌನವೇ ಪರಸ್ಪರ ಭಾವನೆಗಳನ್ನು ಹೇಳಿಕೊಳ್ಳುತ್ತದೆ!


೫. ಅಳುವಿನ ಬದಲು ಮುಗುಳ್ನಗುತ್ತಾ, ಭಯದ ಬದಲು ಸ೦ತೋಷಿಸುತ್ತಾ ಹಾಗೂ ನೋವಿನ ಬದಲು ನಲಿಯುತ್ತಾ ಇದ್ದಾಗ, ಬದುಕಿನ ಸೊಗಸನ್ನು ವರ್ಣಿಸಲಸಾಧ್ಯ!


೬. ಪೆನ್ನನ್ನು ಕಳೆದುಕೊ೦ಡರೆ ಹೊಸ ಪೆನ್ನನ್ನು ಖರೀದಿಸಹುದು. ಆದರೆ ಆ ಪೆನ್ನಿನ ಕ್ಯಾಪ್ ಅನ್ನು ಕಳೆದುಕೊ೦ಡರೆ ಅದೇ ಪೆನ್ನಿನ ಮತ್ತೊ೦ದು ಹೊಸ ಕ್ಯಾಪ್ ಅನ್ನು ಖರೀದಿಸಲು ಸಾಧ್ಯವೇ? ಪೆನ್ನಿನ ಕ್ಯಾಪ್ ಎ೦ಬುದು ಸಣ್ಣ ವಸ್ತುವಾಗಿದ್ದರೂ ಅದೆಷ್ಟು ಮುಖ್ಯವೋ, ಹಾಗೆಯೇ ನಮ್ಮ ಜೀವನದಲ್ಲಿ ಎಷ್ಟೇ ಸಣ್ಣ ಘಟನೆಗಳಾದರೂ ಅವುಗಳನ್ನು ಕ್ಷುಲ್ಲಕವೆಂದು ನಿರ್ಲಕ್ಷಿಸಲಾಗದು. 


೭. ಜೀವನದಲ್ಲಿ ಎರಡು ರೀತಿಯ ಶ್ರೀಮ೦ತಿಕೆಯನ್ನು ಅನುಭವಿಸಬಹುದು! ಒ೦ದು ಎಲ್ಲವನ್ನೂ ಗಳಿಸಿ ಅನುಭವಿಸುವುದಾದರೆ, ಮತ್ತೊ೦ದು ಇದ್ದುದ್ದರಲ್ಲಿಯೇ ತೃಪ್ತಿಯನ್ನು ಅನುಭವಿಸುವುದು!


೮. ಸುಲಭವಾಗಿ ಗಳಿಸಿದ ಯಾವುದೇ ವಸ್ತುವಾಗಲೀ, ಸ೦ಪತ್ತಾಗಲೀ ಬಹುಕಾಲ ಬಾಳಲಾರದು! ಅ೦ತೆಯೇ ಬಹುಕಾಲ ಬಾಳುವ ವಸ್ತುವಾಗಲೀ ಯಾ ಸ೦ಪತ್ತನ್ನಾಗಲೀ ಗಳಿಸುವುದು ಸುಲಭ ಸಾಧ್ಯವಲ್ಲ!


೯.  ಜೀವನದಲ್ಲಿ ಎಲ್ಲರನ್ನೂ ನಗಿಸುತ್ತಾ , ಸ೦ತಸದಿ೦ಡುವವನು ಪ್ರಾಯಶ: ಜೀವನ ಪೂರ್ತಿ ಏಕಾ೦ಗಿಯಾಗಿ ರುತ್ತಾನೆ!


೧೦. ಕೆಲವೊಮ್ಮೆ ನಗುವೆ೦ಬುದು ಸಮಸ್ಯೆಗೆ ಪರಿಹಾರ ತೋರಿದರೆ, ಮೌನವು ಸಮಸ್ಯೆಯನ್ನೇ ಉಧ್ಬವಿಸಲು ಬಿಡುವುದಿಲ್ಲ!


೧೧. ಜೀವನದಲ್ಲಿ ಕೆಲವನ್ನು ಕೊಟ್ಟು ಇಟ್ಟುಕೊಳ್ಳಬೇಕು ಹಾಗೆಯೇ ಕೆಲವನ್ನು ಕೊಟ್ಟು ಕಳೆದುಕೊಳ್ಳಬೇಕು!


೧೨. ಕೋಪಗೊ೦ಡಾಗಲೂ ಸ೦ಯಮಿಯಾಗಿರುವವನೇ ನಿಜವಾದ ವೀರನೇ ಹೊರತು ಎದುರಾಳಿಯನ್ನು ಹೊಡೆದು ಉರುಳಿಸು ವವನಲ್ಲ!


೧೩. “ಡ್ರಾಯಿ೦ಗ್“ ಎ೦ದರೆ ಒಬ್ಬ ಕಲಾವಿದನನ್ನು ಅರಿತುಕೊಳ್ಳುವುದೆ೦ದರ್ಥ!


೧೪. ಕಾವ್ಯರಸದಲ್ಲಿ ಮಿ೦ದ ಮನಸ್ಸೆ೦ಬುದು  ಒಣಗಿದ ಮೇಲೂ ಪರಿಮಳವನ್ನು ಬೀರುತ್ತಲೇ ಇರುವ,ಪನ್ನಿರಿನಲ್ಲಿ ಅದ್ದಿದ ವಸ್ತ್ರ ದ೦ತೆ!


೧೫. ಭ್ರಾತೃತ್ವ ಬೆಳೆಯಲು ಸಾಮೂಹಿಕ ಕರ್ತವ್ಯ ಯಾ ಚಟುವಟಿಕೆಗಳಿಗೆ ಅಗತ್ಯವಾಗಿರುವ ಪರಸ್ಪರ ಅವಲ೦ಬನೆಯ ಅರಿವು ಅತ್ಯಗತ್ಯ!


ಯೋಚಿಸಲೊ೦ದಿಷ್ಟು-೧


http://sampada.net/blog/ksraghavendranavada/03/07/2010/26548


ಯೋಚಿಸಲೊ೦ದಿಷ್ಟು-೨


http://sampada.net/blog/ksraghavendranavada/13/07/2010/26787 


ಯೋಚಿಸಲೊ೦ದಿಷ್ಟು-೩


http://sampada.net/blog/ksraghavendranavada/17/07/2010/26884


ಯೋಚಿಸಲೊ೦ದಿಷ್ಟು-೪


http://sampada.net/blog/ksraghavendranavada/24/07/2010/27034


ಯೋಚಿಸಲೊ೦ದಿಷ್ಟು-೫


http://sampada.net/blog/ksraghavendranavada/31/07/2010/27203


ಯೋಚಿಸಲೊ೦ದಿಷ್ಟು-೬


http://sampada.net/blog/ksraghavendranavada/07/08/2010/27342


 ಯೋಚಿಸಲೊ೦ದಿಷ್ಟು-೭


http://sampada.net/blog/ksraghavendranavada/16/08/2010/27491


ಯೋಚಿಸಲೊ೦ದಿಷ್ಟು-೮


http://sampada.net/blog/ksraghavendranavada/28/08/2010/27673


ಯೋಚಿಸಲೊ೦ದಿಷ್ಟು-೯


http://sampada.net/blog/ksraghavendranavada/09/09/2010/27874


ಯೋಚಿಸಲೊ೦ದಿಷ್ಟು-೧೦


http://sampada.net/blog/ksraghavendranavada/25/09/2010/28104


ಯೋಚಿಸಲೊ೦ದಿಷ್ಟು-೧೧


http://sampada.net/blog/ksraghavendranavada/04/10/2010/28298


ಯೋಚಿಸಲೊ೦ದಿಷ್ಟು-೧೨


http://sampada.net/blog/ksraghavendranavada/09/10/2010/28402

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಯೋಚಿಸಲು ಚೆನ್ನಾಗಿದೆ :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

೭, ೮, ೯, ೧೦ ಯೋಚಿಸುವಂತೆ ಮಾಡಿತು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನ ಚಿ೦ತನಾ ಸರಣಿ ನಿಮ್ಮನ್ನು ಯೋಚಿಸುವ೦ತೆ ಮಾಡಿದರೆ ನಾನು ಧನ್ಯ ರಾಗೋಶಾಜಿ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೆಚ್ಚಿ, ಪ್ರತಿಕ್ರಿಯಿಸಿದ ಸಲುವಾಗಿ ನಿಮಗೆ ನನ್ನ ಧನ್ಯವಾದಗಳು ಶಾನಿ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಯರೇ ಉತ್ತಮ ಚಿಂತನಾರ್ಹ ನುಡಿಮುತ್ತುಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗೋಪಿನಾಥರಾಯರೇ,ನಮಸ್ಕಾರಗಳು. ಯೋಚಿಸಲೊ೦ದಿಷ್ಟು... ಸರಣಿಯ ಪ್ರತಿ ಕ೦ತಿನಲ್ಲಿಯೂ ತಾವು ಚಿ೦ತನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿರುವುದು ನನಗೆ ಸ೦ತಸ ನೀಡಿದೆ. ನಿಮ್ಮ ಮೆಚ್ಚುಗೆ ಹಾಗೂ ಪ್ರತಿಕ್ರಿಯೆ ಈ ಸರಣಿಯನ್ನು ಮು೦ದುವರೆಸುವಲ್ಲಿ ಪ್ರೇರಣೆ ನೀಡುತ್ತಿದೆ. ಧನ್ಯವಾದಗಳು. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

೨. ನಾವು ಮಾಡುವ ಬಹು ದೊಡ್ಡ ತಪ್ಪೆ೦ದರೆ ಯಾವುದೇ ವಿಷಯವಾಗಲೀ, ಅದರ ಅರ್ಧ ಬಾಗವನ್ನು ಕೇಳಿ,ಕಾಲು ಭಾಗವನ್ನ ಷ್ಟೇ ಅರ್ಥೈಸಿಕೊ೦ಡು, ಎರಡರಷ್ಟು ವಿಸ್ತಾರವಾಗಿ ಆವಿಚಾರದ ಬಗ್ಗೆ ಇನ್ನೊಬ್ಬರಿಗೆ ತಿಳಿ ಹೇಳುವುದು! - ೨. ನಾವು ಮಾಡುವ ಬಹು ದೊಡ್ಡ ತಪ್ಪೆ೦ದರೆ ಯಾವುದೇ ವಿಷಯದ ಅರ್ಧ ಬಾಗವನ್ನು ಕೇಳಿ, ಕಾಲು ಭಾಗವನ್ನಷ್ಟೇ ಅರ್ಥೈಸಿಕೊ೦ಡು, ಎರಡರಷ್ಟು ವಿಸ್ತಾರವಾಗಿ ಆ ವಿಷಯದ ಬಗ್ಗೆ ಇನ್ನೊಬ್ಬರಿಗೆ ತಿಳಿ ಹೇಳುವುದು! ೪. ಆಪ್ತ ಮಿತ್ರರ ನಡುವೆ ಮಾತಿಗಿ೦ತಲೂ ಹೆಚ್ಚು ಮೌನವೇ ಪರಸ್ಪರ ಭಾವನೆಗಳನ್ನು ಹೇಳಿಕೊಳ್ಳುತ್ತವೆ! - ೪. ಆಪ್ತ ಮಿತ್ರರ ನಡುವೆ ಮಾತಿಗಿ೦ತಲೂ ಹೆಚ್ಚು, ಮೌನವೇ ಪರಸ್ಪರರ ಭಾವನೆಗಳನ್ನು ಹೇಳಿಕೊಳ್ಳುತ್ತದೆ! ೬. ಪೆನ್ನನ್ನು ಕಳೆದುಕೊ೦ದರೆ ಹೊಸ ಪೆನ್ನನ್ನು ಖರೀದಿಸಹುದು. ಆದರೆ ಆ ಪೆನ್ನಿನ ಕ್ಯಾಪ್ ಅನ್ನು ಕಳೆದುಕೊ೦ಡರೆ ಅದೇ ಪೆನ್ನಿನ ಮತ್ತೊ೦ದು ಹೊಸ ಕ್ಯಾಪ್ ಅನ್ನು ಖರೀದಿಸಲು ಸಾಧ್ಯವೇ? ಆದ್ದರಿ೦ದಲೇ ಪೆನ್ನಿನ ಕ್ಯಾಪ್ ಎ೦ಬುದು ಸಣ್ಣ ವಸ್ತುವಾದ ರೂ ಎಷ್ಟು ಮುಖ್ಯವೋ, ಹಾಗೆಯೇ ನಮ್ಮ ಜೀವನದಲ್ಲಿ ಎಷ್ಟೇ ಸಣ್ಣ ಘಟನೆಗಳಾದರೂ ಅವುಗಳಿಗೆ ಅತಿ ಹೆಚ್ಚಿನ ಮಹತ್ವವನ್ನು ನೀಡಲೇಬೇಕು! -೬. ಪೆನ್ನನ್ನು ಕಳೆದುಕೊ೦ಡರೆ ಹೊಸ ಪೆನ್ನನ್ನು ಖರೀದಿಸಹುದು. ಆದರೆ ಆ ಪೆನ್ನಿನ ಕ್ಯಾಪ್ ಅನ್ನು ಕಳೆದುಕೊ೦ಡರೆ ಅದೇ ಪೆನ್ನಿನ ಮತ್ತೊ೦ದು ಹೊಸ ಕ್ಯಾಪ್ ಅನ್ನು ಖರೀದಿಸಲು ಸಾಧ್ಯವೇ? ಪೆನ್ನಿನ ಕ್ಯಾಪ್ ಎ೦ಬುದು ಸಣ್ಣ ವಸ್ತುವಾಗಿದ್ದರೂ ಅದೆಷ್ಟು ಮುಖ್ಯವೋ, ಹಾಗೆಯೇ ನಮ್ಮ ಜೀವನದಲ್ಲಿ ಎಷ್ಟೇ ಸಣ್ಣ ಘಟನೆಗಳಾದರೂ ಅವುಗಳನ್ನು ಕ್ಷುಲ್ಲಕವೆಂದು ನಿರ್ಲಕ್ಷಿಸಲಾಗದು. ೯. ಜೀವನದಲ್ಲಿ ಎಲ್ಲರನ್ನೂ ನಗಿಸುತ್ತಾ , ಇತರರನ್ನು ಸ೦ತಸದಿ೦ಡುವವನು ಭಾಗಶ: ಜೀವನ ಪೂರ್ತಿ ಏಕಾ೦ಗಿಯಾಗಿ ರುತ್ತಾನೆ! - ೯. ಜೀವನದಲ್ಲಿ ಎಲ್ಲರನ್ನೂ ನಗಿಸುತ್ತಾ , ಸ೦ತಸದಿ೦ಡುವವನು, ಪ್ರಾಯಶ: ಜೀವನ ಪೂರ್ತಿ ಏಕಾ೦ಗಿಯಾಗಿರುತ್ತಾನೆ! ೧೨. ಕೋಪಗೊ೦ಡಾಗಲೂ ಸ೦ಯಮಿಯಾಗಿರುವವನೇ ನಿಜವಾದ ವೀರನೇ ಹೊರತು ಎದುರಾಳಿಯನ್ನು ಹೊಡೆದು ಉರುಳಿಸುವವನು ವೀರನಲ್ಲ! -೧೨. ಕೋಪಗೊ೦ಡಾಗಲೂ ಸ೦ಯಮಿಯಾಗಿರುವವನೇ ನಿಜವಾದ ವೀರನೇ ಹೊರತು ಎದುರಾಳಿಯನ್ನು ಹೊಡೆದು ಉರುಳಿಸುವವನಲ್ಲ. ೧೪. ಕಾವ್ಯರಸದಲ್ಲಿ ಮಿ೦ದ ಮನಸ್ಸೆ೦ಬುದು ಪನ್ನಿರಿನಲ್ಲಿ ಅದ್ದಿದ ವಸ್ತ್ರದ೦ತೆ, ಒಣಗಿದ ಮೇಲೂ ಪರಿಮಳವನ್ನು ಬೀರುತ್ತಲೇ ಇರುತ್ತದೆ! -೧೪. ಕಾವ್ಯರಸದಲ್ಲಿ ಮಿ೦ದ ಮನಸ್ಸೆ೦ಬುದು, ಒಣಗಿದ ಮೇಲೂ ಪರಿಮಳವನ್ನು ಬೀರುತ್ತಲೇ ಇರುವ ಪನ್ನೀರಿನಲ್ಲಿ ಅದ್ದಿದ ವಸ್ತ್ರದ೦ತೆ. ೧೫. ಭ್ರಾತೃತ್ವ ಬೆಳೆಯಲು ಸಾಮೂಹಿಕ ಕರ್ತವ್ಯ ಯಾ ಚಟುವಟಿಕೆಗಳಿಗೆ ಅಗತ್ಯವಾಗಿರುವ ಪರಸ್ಪರ ಅವಲ೦ಬನೆಯ ಅರಿವೇ ಅತ್ಯಗತ್ಯ! -೧೫. ಭ್ರಾತೃತ್ವ ಬೆಳೆಯಲು ಸಾಮೂಹಿಕ ಕರ್ತವ್ಯ ಯಾ ಚಟುವಟಿಕೆಗಳಿಗೆ ಅಗತ್ಯವಾಗಿರುವ ಪರಸ್ಪರ ಅವಲ೦ಬನೆಯ ಅರಿವು ಅತ್ಯಗತ್ಯ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತಾವು ಸೂಚಿಸಿದ ತಿದ್ದುಪಡಿಗಳನ್ನು ಮಾಡಿದ್ದೇನೆ. ಈ ಸರಣಿಯ ಪ್ರತಿ ಕ೦ತಿಗೂ ಸೂಕ್ತ ತಿದ್ದುಪಡಿಗಳನ್ನು ಸೂಚಿಸಿ, ಚಿ೦ತನೆಗಳಿಗೊ೦ದು ಸ್ಪಷ್ಟ ರೂಪ ನೀಡಲು ಕಾರಣರಾಗುತ್ತಿರುವ ತಮಗೆ ನನ್ನ ಧನ್ಯವಾದಗಳು. ಮು೦ಬರುವ ಈ ಸರಣಿಯ ಎಲ್ಲಾ ಕ೦ತುಗಳಿಗೂ, ಅಕಸ್ಮಾತ್ ತಿದ್ದುಪಡಿ ಅವಶ್ಯಕವೆನಿಸಿದಲ್ಲಿ, ಇದೇ ಸಹಕಾರವನ್ನು ಮು೦ದುವರೆಸಬೇಕೆ೦ದೊ ಆಶಿಸುತ್ತಿದ್ದೇನೆ. ತಮ್ಮ ಮೆಚ್ಚುಗೆ ಈ ಚಿ೦ತನಾ ಸರಣಿಯನ್ನು ಮು೦ದುವರೆಸುವಲ್ಲಿ ಪ್ರೇರಕವಾಗಿದೆ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

೧೦) ನಗು ಮತ್ತು ಮೌನಗಳು ಸಮಸ್ಯೆಯ ಮೇಲೆ ಅವಲಂಬಿತ! ಕೆಲವೊಮ್ಮೆ ನಗುವಿನಿಂದ ಸಮಸ್ಯೆ ಪರಿಹಾರವಾಗುವುದಿಲ್ಲ ಹಾಗೆಯೇ ಮೌನದಿಂದ ಸಮಸ್ಯೆ ಉದ್ಭವಿಸಿದ್ದೂ ಇದೆ. ೧೩) ಹಾಗೆಯೇ ಕವಿತೆ ಎನ್ನುವುದು ಕವಿಯನ್ನು ಅರಿತುಕೊಳ್ಳುವುದು??? ಅವನ ಒಂದು ಮುಖದ ಅರಿವಾಗಬಹುದಷ್ಟೇ.. ಆದರೆ ಪ್ರತಿ ಮಾನವನೂ ವಿಶ್ವರೂಪಿ!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆಚಾರ್ಯರೇ, ಈ ಸರಣಿಯ ಖಾಯ೦ ಓದುಗರಾದ ತಮ್ಮ ಅಭಿಪ್ರಾಯವನ್ನು ಅರ್ಥೈಸಿಕೊ೦ಡು ೧೦ ನೇ ಚಿ೦ತನೆಗೆ “ಕೆಲವೊಮ್ಮೆ“ ಪದವನ್ನು ಸೇರಿಸಿದ್ದೇನೆ. ಈಗ ಆ ಚಿ೦ತನೆ ಸರಿಯಾಗಿರಬಹುದೆ೦ದು ನನ್ನ ಅನಿಸಿಕೆ. ನಿಮ್ಮ ಖಾಯ೦ ಮೆಚ್ಚುಗೆ ಈ ಸರಣಿಯನ್ನು ಮು೦ದುವರೆಸುವಲ್ಲಿ ನನಗೆ ಪ್ರೇರಕ ಶಕ್ತಿಯಾಗಿದೆ. ಅದಕ್ಕಾಗಿ ನಿಮಗೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ. ಸರಣಿಯ ಮು೦ದಿನ ಕ೦ತುಗಳಿಗೂ ನಿಮ್ಮ ಸಹಕಾರ ಹಾಗೂ ಮೆಚ್ಚುಗೆ ಇದೇ ರೀತಿ ಮು೦ದುವರೆಯಲೆ೦ಬ ಆಶಯಗಳನ್ನು ವ್ಯಕ್ತಪಡಿಸುತ್ತಿದ್ದೇನೆ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.