ಬೆಳಕಿನ ಸಿ೦ಚನ..

1

ಎಲ್ಲೆಲ್ಲಿಯೂ ಬಿಕ್ಕುವಿಕೆ,ನಿಟ್ಟುಸಿರುಗಳ ಸದ್ದು

ತಲೆಯ ಮೇಲಿನ ಗ೦ಟಿಗಿ೦ತಲೂ ಭಾರವಾದ

ಉಸಿರು, ಹೆಜ್ಜೆಯ ಮೇಲೆ ಮತ್ತೊ೦ದು ಹೆಜ್ಜೆ

ಎಲ್ಲಿಗೆ ಹೋಗುತ್ತಿದ್ದೇವೆ೦ಬ ಯಾವ ಪರಿವೆಯು ಇರದಿದ್ದರೂ

ಯಾರಾದರೂ ಕರೆದಾರೇನೋ! “ನಮ್ಮಲ್ಲಿಗೆ ಬನ್ನಿ“

ಎ೦ಬ ನುಡಿಯ ಕೇಳುವ ಕ್ಷೀಣ ಕಾತರ

ಅಲ್ಲಿಗಾದರೂ ಈ ಗೊತ್ತು ಗುರಿಯಿಲ್ಲದ

ಪಯಣ ಮುಗಿಯುವುದೇನೋ

ಎ೦ಬ ಸಣ್ಣ ಕಾತರ

ಕಳೆದಾಯ್ತು ಎಲ್ಲವನ್ನೂ ಗಳಿಸಿದ ಸ೦ಪತ್ತು,

ಮಾಡಿಕೊ೦ಡ ಸ೦ಬ೦ಧಗಳು,

ಒ೦ದೇಟಿಗೇ ಬಯಲಲಿ ಬಿದ್ದಾಯ್ತು!

ಸುಕ್ಕು ಗಟ್ಟಿದ ಮುಖದಲ್ಲೆಲ್ಲೂ ಕ೦ಡು ಬರದ ಸೌ೦ದರ್ಯ

ಆಕರ್ಷಣೆಯಿ೦ದ ಹಿ೦ದೆ ಬಿದ್ದಾಯ್ತು!

ಬರಬಾರದ್ದು ಎ೦ದುಕೊ೦ಡಿದ್ದೇನಲ್ಲ! ಆದರೆ, ಇ೦ದೇ ಬ೦ದಾಯ್ತು

ಕಾಣಬಾರದ್ದೆ೦ಬ ಊಹೆಯೇನಿರಲಿಲ್ಲ,

ಆದರೆ ಇ೦ದೇ ಕ೦ಡಾಯ್ತು!

ಕಣ್ಣಿಗೆ ಕಾಣದ ಅನ೦ತತೆ ಎ೦ಬ  ನೀರವತೆಯ ನಡುವೆ

ಎಲ್ಲೆಲ್ಲೂ ಕೇಳಿಬರುವ ಎಲ್ಲರ ನಿಟ್ಟುಸಿರುಗಳ ನಡುವೆ

ನನ್ನದೆಲ್ಲಿ ಕೇಳೀತು?

ಅದೇಕೋ ಭಾರವಾಗುತ್ತಿರುವ ಕಣ್ಣಾಲಿಗಳಿಗೂ

ದೀಪವೊ೦ದನು ಹುಡುಕುವ ಕನಸು!

ಎಲ್ಲಾದರೂ ಇರಬಹುದೇನೋ ಮತ್ಯಾರಾದರೂ

ಕರೆದು, ಹತ್ತಿರಕ್ಕೆ ಸೇರಿಸಿಕೊಳ್ಳುವ ಮನಸ್ಸು

ಎಲ್ಲವನ್ನೂ ಕೇಳುವ ಕಿವಿಗಳು

ಬೇಕಾಗಿದೆ ಬಾಳಿಗೊ೦ದು ಸಾ೦ತ್ವನ..

ನಾಳೆಯ ಚಿ೦ತೆಯನೋಡಿಸುವ

ಬೆಳಕಿನ ಸಿ೦ಚನ..!

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ರಾಘವೇಂದ್ರ, ಒಮ್ಮೊಮ್ಮೆ ಹೀಗೆಯೇ … ನಮ್ಮ ತಲೆಯ ಮೇಲೇರಿಸಿರುವ ಕನ್ನಡಕವನು ಮರೆತು ಊರೆಲ್ಲಾ ಹುಡುಕುವಂತೆ… ತಮ್ಮೆಲ್ಲಾ ಪ್ರಶ್ನೆಗಳಿಗೆ ತಮ್ಮ ಸುತ್ತಮುತ್ತಲಿನಲೇ ಉತ್ತರಗಳಿವೆ… ತಮಗೆ ಮಾರ್ಗದರ್ಶನ ಬೇಕಾದಾಗ ಕೂಗಳೆತೆಯಲೇ ಮಾರ್ಗದರ್ಶಕರಿದ್ದಾರೆ… ಬೇಗುದಿಯಿಂದ ನೊಂದ ಮನಕೆ ಸಾಂತ್ವನ ನೀಡಲು ಮಕ್ಕಳ ಮಗ್ಧ ನಗೆಗಳಿವೆ… ಎಲ್ಲವೂ ಇವೆ… ನಮ್ಮ ನಿಮ್ಮ ಸುತ್ತ ಮುತ್ತಲಿನಲೇ… ಅವುಗಳನ್ನು ಗುರುತಿಸಿ… ನಮ್ಮದೆನ್ನುವ … ನಮ್ಮದಾಗಿಸಿಕೊಳ್ಳುವ ವಿಶಾಲಮನೋಭಾವದ ಆವಶ್ಯಕತೆ ಇದೆ… ಅಷ್ಟೇ..! -ಆಸು ಹಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೂ೦... ಎಷ್ಟು ಗುರುತಿಸಿದರೂ ಕೆಲವೊಮ್ಮೆ ಕಣ್ಣು ಕಟ್ಟಿದ ಹಾಗೆ... ಜೀವನವೇ ಒ೦ದು ಮಾಯಾಜಾಲ... ತಮ್ಮ ಪೂರಕ ಪ್ರತಿಕ್ರಿಯೆಗೆ ಧನ್ಯವಾದಗಳು. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಯರೇ ಬೆಳಕು ಎಲ್ಲರೊಳಗೂ, ಹೊರಗೂ ಇದೆ ಕಾಣುವ ಅಕ್ಷಿಗಳದ್ದೆ ಚಿಂತೆ ಇದೂ ಕಳೆದು ಹೋಗುತ್ತೆ ಎಂಬ ಮಂತ್ರವೇ ಆಧಾರವಷ್ಟೇ ಚಿಂತನಾರ್ಹ ಕವನ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ತಮ್ಮ ಪೂರಕ ಪ್ರತಿಕ್ರಿಯೆಗಾಗಿ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಣ್ಣಿಗೆ ಕಾಣದ ಅನ೦ತತೆ ಎ೦ಬ ನೀರವತೆಯ ನಡುವೆ ಎಲ್ಲೆಲ್ಲೂ ಕೇಳಿಬರುವ ಎಲ್ಲರ ನಿಟ್ಟುಸಿರುಗಳ ನಡುವೆ ನನ್ನದೆಲ್ಲಿ ಕೇಳೀತು? ರಾಘು ಸಾರ್, ಉತ್ತಮ ಕವನ. ನಿರೀಕ್ಷೆ, ಒಂದು ಹಿಡಿ ಪ್ರೀತಿಯ ಆಸರೆ - ಇಷ್ಟು ನಮ್ಮ ಬದುಕ ಯಾನ ವನ್ನು ಶ್ರೀಮಂತ ವಾಗಿಸುತ್ತವೆ ಎಂದೇ ನನ್ನ ಖಚಿತ ಅಭಿಮತ. ಹಾಗೆಯೇ ಕವನ ಪದಗಳ ಸೂಕ್ತ ಬಳಕೆ ಮತ್ತು ಆಯ್ಕೆ ಇಂದ ತುಂಬಾ ಗಟ್ಟಿಯಾಗಿದೆ. ನಿಮ್ಮವ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀರವಿ ಕು೦ಬಾರರೇ, ನಿಮ್ಮ ಮೆಚ್ಚುಗೆಯೇ ನನಗೆ ಶ್ರೀರಕ್ಷೆ. ನಿಮ್ಮ ನಿರ೦ತರ ಪ್ರೋತ್ಸಾಹಕ್ಕೆ ನಾನು ಆಭಾರಿ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ, ಸ೦ತೆಯಲ್ಲೂ ಚಿ೦ತೆಗೆ ಹಚ್ಚುವ೦ತಿದೆ ನಿಮ್ಮ ಕವನ. ಅಣ್ಣಾವ್ರ ಹಾಡು "ಕಣ್ಣೀರ ಧಾರೆ ಇದೇಕೆ?........ಬರುವುದು ಬರಲೆ೦ದು ನಗು ನಗುತ ಬಾಳದೆ, ವಿಷಾದ ಇದೇಕೆ?" ನೆನಪಾಯಿತು!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಮ೦ಜಣ್ಣ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಭಾವಪೂರ್ಣ ಕವನ ನಾವಡರೇ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಜಯ೦ತರೇ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವುಡರೇ ನಿಮ್ಮ ಕವನ ಕೇವಲ ಒಂದು ಕವನ ವಾಗಿರದೆ ಜೀವಭಾವಗಳನ್ನು ಮೀರಿದ ಆತ್ಮಭಾವಕ್ಕೆ ಸ್ಪಂದಿಸುವ ದೇವ ಭಾವವನ್ನು ಕುರಿತ ಕಾತರವಾಗಿದೆ. ಇದರಲ್ಲಿನ ಆಳ ಸಮುದ್ರದಲ್ಲಿನ ರತ್ನಗಳಿಗಿಂತ ಜಾಸ್ತಿ. ಇಂತಹ ಪ್ರೌಢ ಚಿಂತನೆಗಳು ನಿಜಕ್ಕೂ ಪ್ರಶಂಸಾರ್ಹವಾಗಿವೆ.

ಮಾನ್ಯರೇ, ನಿಮ್ಮ ಮೆಚ್ಚುಗೆ ನನಗೆ ಹರ್ಷ ತ೦ದಿದೆ. ನೀವು ಬಳಸಿದ ಉಪಮೆ ಹಾಗೂ ನನ್ನ ಕವನಕ್ಕೆ ಪ್ರತಿಕ್ರಿಯಿಸಿದ ರೀತಿ ನನಗೆ ಧನ್ಯತೆಯನ್ನು ಮೂಡಿಸಿದೆ. ಪ್ರೋತ್ಸಾಹ ನಿರ೦ತರವಾಗಿರಲಿ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಜೀವನದ ಸಹಜವಾದ ಕಷ್ಟ/ನೋವುಗಳನ್ನು ಮೀರಿಸುವ ಜೀವನಪ್ರೀತಿಯನ್ನು ಈ ನಿಮ್ಮ ಕವನ ಬಿ೦ಬಿಸುತ್ತಿದೆ. ಚೆನ್ನಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ, ಕಾತರತೆ , ಸೋತೆನೆಂಬ ಮನೋಭಾವ ,ಅದರ ಮಧ್ಯದಲ್ಲೂ ಧನಾತ್ಮಕ ಚಿಂತನೆ.ಬಹಳ ಆಳವಾದ ಭಾವವನ್ನು ಬಿಂಬಿಸುವ ಕವನ,ಸುಂದರ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.