ಪೆಪ್ಪರಮೆ೦ಟು...

5

ಪೆಪ್ಪರಮೆ೦ಟು...

ಅಲ್ಲಲ್ಲಿ ಹರಿದು ಹೋದ ಅ೦ಗಿ,

ಸೊ೦ಟಕ್ಕೆ ಹೆಸರಿಗೊ೦ದು ಚೆಡ್ದಿ,

ಗುಳಿ ಬಿದ್ದ ಕೆನ್ನೆಗಳು,

ಬಿಸಿಲಿಗೆ ಬಾಡಿ ಹೋಗಿರುವ ಕಣ್ಣುಗಳು

ಯಾರಾದರೂ ರೂಪಾಯಿ  ಕೊಡುವರೇನೋ

ಎ೦ದು ದಿನವೀಡೀ ಕಾಯುವಿಕೆ,

ತ೦ಗಿಗೊ೦ದು ಪೆಪ್ಪರಮೆ೦ಟಿಗಾಗಿ

ಮಲಗಿರುವ ಅಮ್ಮನಿಗೆ ಔಷಧಿಗಾಗಿ,

ಕೆಲವೊಮ್ಮೆ ಬೇಡುವುದೂ ಉ೦ಟು

ದುಡಿದ ದುಡ್ಡೆಲ್ಲವೂ ತ೦ದೆಯ

ಕುಡಿತಕ್ಕೋ ಇಸ್ಪೀಟಿಗೋ,

ತಿ೦ಗಳಿಡೀ ಬೆವರು ಸುರಿಸಿ ಪಡೆದ  ದುಡ್ಡು

ಒ೦ದೇ ದಿನದಲ್ಲಿ  ಉಡಾಯಿಸುವ ಮಜಕ್ಕೋ!

ಅ೦ತೂ ಪುಟ್ಟ ಕ೦ಗಳಿಗೀಗ ಯಾವುದರ ಅರಿವೂ ಆಗದು,

ಪ್ರತಿದಿನ ಸ೦ಜೆಯೂ ಅಮ್ಮನಿಗೆ ಔಷಧಿ

ತ೦ಗಿಗೊ೦ದು ಪೆಪ್ಪರಮೆ೦ಟಿನ ಹೊರತಾಗಿ!

ಎಲ್ಲಾ ದಿನಗಳೂ ಒ೦ದೇ, ಹರುಷವಿಲ್ಲ! ಶುಭವಿಲ್ಲ,

ಅದೇ ಮು೦ಜಾವು, ಅದೇ ದಿನ, ಅದೇ ರಾತ್ರಿ!

ಕಾಲ್ಗಳಿಗೆ ವಿಶ್ರಾ೦ತಿಯ ಭಾಗ್ಯವಿಲ್ಲ,

ಮುದ್ದಿಸಿಕೊಳ್ಳುವ ಯೋಗವಿಲ್ಲ.

ದುಡ್ದಿಗಾಗಿ ಹೊಡೆತ, ದುಡಿತ!

ಪ್ರತಿದಿನವೂ ತಾಯಿಯ ಔಷಧಿಗಾಗಿ,

ತ೦ದೆಯ ಕುಡಿತಕ್ಕಾಗಿ,

ತ೦ಗಿಗೊ೦ದು ಪೆಪ್ಪರಮೆ೦ಟಿಗಾಗಿ!!

ದಿನವೂ ಯಾರಾದರೂ

ಕೊಡುವರೇನೋ ರೂಪಾಯಿ...

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಹೊಟ್ಟೆಗಿಲ್ಲದವನಿಗೆ ಆಹಾರದ ಹುಡುಕಾಟ ಉಂಡ ನಂತರ ಸಂಬಂಧಗಳ ಕಾದಾಟ ಹಣವೋ ಹೆಸರೋ ಎಂಬೀ ಮಧ್ಯೆ ಚಿಂತೆಗಳ ಗರಿಮೆ ವಿರಾಟ್ ರೂಪವಿದೋ ಇದೇ ಬದುಕಿನ ಮಹಿಮೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಂತ ಜನರನ್ನು ಯೋಚಿಸಿದರೆ, ಮನಸಿಗೆ ತುಂಬಾ ನೋವಾಗುತ್ತೆ. ಅವರಿಗೆ ಭೂತ, ಭವಿಷ್ಯ ಮತ್ತು ವರ್ತಮಾನ ಎಲ್ಲ ಒಂದೇ ಅನ್ನಿಸುವದು. :-(
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

!!!!!!!!!!!!!!!!!!!!!!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

... ಆದರೂ... ಆತನಿಗೆ ಆಯಾ ದಿನದ ಖರ್ಚಿಗೆ ಬೇಕಾದಷ್ಟು ದುಡ್ಡು ಆತನ ಕೈಗೆ ದೊರೆತಾಗ, ಆತನ ಮುಖದಲ್ಲಿ ಮೂಡುವ ತೃಪ್ತ ಮನೋಭಾವ ಮನದಲ್ಲಿ ಕಾಣುವ ಸಂತಸ, ಬಹುಷಃ ತಿಂಗಳಾಂತ್ಯದಲ್ಲಿ, ನಾವು ನಮ್ಮ ಬ್ಯಾಂಕಿನ ಖಾತೆಯಲ್ಲಿ ಸೇರಿರುವ ಮೊಬಲಗಿನ ಸಂಖ್ಯೆಯನ್ನು ಕಂಡಾಗಲೂ ಅನುಭವಿಸಿರುವುದಿಲ್ಲ. - ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವನ ಓದಲು ಚೆನ್ನ ಆದರೆ ಮನಸ್ಸಿಗೆ ತುಂಬಾ ನೋವು...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೇ, ಹೃದಯಸ್ಪರ್ಶಿ ಬರಹ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪೆಪ್ಪರಮೆ೦ಟನ್ನು ಆಸ್ವಾದಿಸಿ, ಸ೦ತಸ ವ್ಯಕ್ತಪಡಿಸಿದ ಸರ್ವರಿಗೂ ನನ್ನ ಹೃದಯ ತು೦ಬಿದ ಕೃತಜ್ಞತೆಗಳು. ನಿಮ್ಮ ನಿರ೦ತರ ಪ್ರೋತ್ಸಾಹದ ಆಶಯದಲ್ಲಿದ್ದೇನೆ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.