ಕನಸು ಕರಗುವುದಿಲ್ಲ...

5

ಕನಸು ಕರಗುವುದಿಲ್ಲ...

ಮನಸು ಎಷ್ಟು  ಹಳೆಯದಾದರೇನು?

ದು:ಖ ದುಮ್ಮಾನಗಳಿ೦ದ ತು೦ಬಿದ್ದರೇನು

ವಯಸ್ಸು ಎಷ್ಟಾದರೇನು?

ಎಲ್ಲವನೂ ಅನುಭವಿಸಿ ಕುಳಿತಿದ್ದರೇನು?

ಕಾಣುವ ಕನಸುಗಳೆ೦ದಿಗೂ ನವನವೀನ!

ಉರಿದಷ್ಟೂ ಕರಗುವ ಕರ್ಪೂರದೊ೦ದಿಗೆ

ಹಠಕ್ಕೆ ಬಿದ್ದವರ೦ತೆ ದಹಿಸಿಕೊಳ್ಳುವ

ಜೀವನವಲ್ಲ ಇದು!ಕನಸುಗಳ ಸ೦ತೆ...

ಒಬ್ಬೊಬ್ಬರಿಗೂ ಒ೦ದೊ೦ದು ಕನಸು

ಎಲ್ಲರಿಗೂ ಪುಕ್ಕಟೆ ಸಿಗುವ ಸಿಹಿಯಾದ ತಿನಿಸು

ಅಣೆಕಟ್ಟಿನ ನೀರು ಒಮ್ಮೆಲೇ ಭೋರ್ಗರೆಯುವ೦ತೆ,

ಮನಸು ಕಾಣುವ ಕನಸಿಗೆ ಇದೆಯೇ ಅಣೆಕಟ್ಟು?

ಕನಸು ಕರಗುವುದಿಲ್ಲ, ಉರಿದು ಬೂದಿಯಾಗುವುದಿಲ್ಲ!

ಕ್ಷಣಕ್ಕೊ೦ದು,ದಿನಕ್ಕೊ೦ದು ಬದುಕಿನಲಿ

ಸದಾ ಕನಸುಗಳ ದ೦ಡು!ಕನಸು ಕರಗುವುದಿಲ್ಲ..

ಕನಸು ಕರಗುವುದಿಲ್ಲ... ಇದು ಹತಾಶೆಗಳ

ಮೆಟ್ಟಿ ನಿಲ್ಲಲು ಕಲಿಸುವ ಮಾರ್ಗದರ್ಶಿನಿ,

ಆಸೆಗಳ ಟಿಸಿಲೊಡೆಸುವ ಸ೦ಜೀವಿನಿ

ಕಾರ೦ಜಿಯ೦ತೆ ಎತ್ತರೆತ್ತರದ ಬದುಕ

ಬದುಕಲು ಕಲಿಸುವ ಇದು ನಿ೦ತ ನೀರಲ್ಲ..

ಒಮ್ಮೆ ನಗೆಯುಕ್ಕಿಸುವ.ಮಗದೊಮ್ಮೆ

ತಲೆ ಕೊಡವಿಸುವ,ಎ೦ದಾದರೂ ಒಮ್ಮೆ

ಗಗನದೊಳು ಬೆಳ್ಳಕ್ಕಿಯ೦ತೆ ಹಾರಿಸುವ  

ಕನಸು ಕರಗುವುದಿಲ್ಲ...ಕುಣಿಸಿ ದಣಿಸುವುದಿಲ್ಲ...

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಹೌದು ಕನಸುಗಳು ಜೀವನದಲಿ ನಿರಂತರ ಅವು ಎಂದೂ ನಿಲ್ಲುವುದಿಲ್ಲ ಕನಸುಗಳು ನಿಂತಂದು ಈ ಜೀವನದಲೇನೂ ಉಳಿದಿರುವುದಿಲ್ಲ :) ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಓಹ್ ಸೂಪರ್ ನಾವಡವ್ರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<< ಉರಿದಷ್ಟೂ ಕರಗುವ ಕರ್ಪೂರದೊ೦ದಿಗೆ ಹಠಕ್ಕೆ ಬಿದ್ದವರ೦ತೆ ದಹಿಸಿಕೊಳ್ಳುವ ಜೀವನವಲ್ಲ ಇದು!ಕನಸುಗಳ ಸ೦ತೆ... >> ನಾವಡರೆ ಕನಸುಗಳ ಕವನ ಚೆನ್ನಾಗಿದೆ..!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅರ್ಥ ಗರ್ಭಿತ ಸುಂದರ ಕವಿತೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸರ್, ಸುಂದರ ಕವಿತೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೇ, ಕನಸು ಕಾಣುತ್ತಲೇ ಇರಿ, ನನಸಾಗಿಸಲು ಪ್ರಯತ್ನವೂ ನಡೆಯುತ್ತಿರಲಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>>ಕನಸು ಕರಗುವುದಿಲ್ಲ, ಉರಿದು ಬೂದಿಯಾಗುವುದಿಲ್ಲ! ಕ್ಷಣಕ್ಕೊ೦ದು,ದಿನಕ್ಕೊ೦ದು ಬದುಕಿನಲಿ ಸದಾ ಕನಸುಗಳ ದ೦ಡು!ಕನಸು ಕರಗುವುದಿಲ್ಲ..>>> ಸುಂದರವಾದ ಸಾಲುಗಳ ಅರ್ಥಪೂರ್ಣ ಕವನ... ವಂದನೆಗಳೊಂದಿಗೆ ವಾಣಿ ಶೆಟ್ಟಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಉತ್ತಮ ಕವನ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೇ ಸರಳವಾದ ಬೞಕೆಗಳೊನ್ದಿಗೆ ಚೆನ್ನಾಗಿ ಮೂಡಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡ ಉವಾಚವನ್ನು ಮೆಚ್ಚಿಕೊ೦ಡು ಪ್ರತಿಕ್ರಿಯಿಸಿದ ಸರ್ವರಿಗೂ ನನ್ನ ಹೃದಯ ಪೂರ್ವಕ ನಮನಗಳು. ನಿಮ್ಮ ನಿರ೦ತರ ಪ್ರೋತ್ಸಾಹದ ನಿರೀಕ್ಷೆಯಲ್ಲಿ, ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.