ಯೋಚಿಸುತ್ತಲೇ ಇರುತ್ತೇನೆ!

5

ನಾನೆಷ್ಟು ಯೋಚಿಸಿದರೂ
ಅದೇ ನನಗೆ ಅರ್ಥವಾಗದ್ದು!

ನಾನು
ಯೋಚಿಸುತ್ತಲೇ ಇರುತ್ತೇನೆ!
...ಒಮ್ಮೊಮ್ಮೆ
ಗ೦ಟೆಗಟ್ಟಲೆ ಯೋಚಿಸುತ್ತೇನೆ!

ಯೋಚಿಸುತ್ತೇನೆ...
ಪಕ್ಕದೂರಿನಲ್ಲಿನ ಅ೦ಗವಿಕಲ ಮಕ್ಕಳ ಬಗ್ಗೆ,
ಅಕ್ಕಿಯ ಬೆಲೆ ೨೫ ರೂ ಕಿಲೋ ಆದ ಬಗ್ಗೆ
ಗೇರು ಬೆಳೆಯ ಉದ್ಧಾರಕ್ಕೆಂದು ಬಾನಿನಿಂದ
ಬೀಳಿಸುವ ಎ೦ಡೋ ಸಲ್ಫಾನಿನ ಬಗ್ಗೆ

ಯೋಚಿಸುತ್ತೇನೆ...
ಕಾಯುವವನೇ ಕಟುಕನಾದರೆ
ಅಮಾಯಕರ ಗತಿಯೇನು ಎ೦ಬುದರ ಬಗ್ಗೆ,
ನಾವೇ ಮೇಲು, ಸೃಷ್ಟಿ ನಮ್ಮ ಹಿಂದೆ
ಎ೦ದವರ ಹಿ೦ದೆಯೇ ಬ೦ದ ಸಮುದ್ರದಲೆಗಳ ಬಗ್ಗೆ

ಯೋಚಿಸುತ್ತೇನೆ...
ಕಣ್ನೆವೆಯಿಯಿಕ್ಕುವಷ್ಟರಲ್ಲಿಯೇ
ನಡೆದು ಹೋದ ಅನಾಹುತಗಳ ಬಗ್ಗೆ
ಈಗಲೂ ಆಗುತ್ತಿರುವ ಮಾನವ –ಪ್ರಕೃತಿ
ನಡುವಣ ಸತತ ಸ೦ಘರ್ಷಗಳ ಬಗ್ಗೆ

ಯೋಚಿಸುತ್ತೇನೆ...
ಬೆಳವಣಿಗೆಯೆ೦ಬ ಭೂತ ಮನದೊಳಗೆ
ಹೊಕ್ಕು ನರ್ತನವಾಡುತ್ತಿರುವ ಬಗ್ಗೆ
ದಿಢೀರ್ ಕೃಷಿಯೆ೦ದು ಹೊಲವೆಲ್ಲಾ
ಶು೦ಠಿ ಬೆಳೆಯುವ ರೈತರ ಬಗ್ಗೆ...

ಯೋಚಿಸುತ್ತೇನೆ...
ಕೃಷಿಯ ಸಾಲವನ್ನು ಮಕ್ಕಳ
ಮದುವೆಗೆ ಸುರಿಯುವವರ ಬಗ್ಗೆ
ಬೊಬ್ಬೆ ಹೊಡೆದು ಹೇಳಿದರೂ
ಕೇಳದೇ ಉಳಿವ ಕಿವುಡರ ಬಗ್ಗೆ

ಯೋಚಿಸುತ್ತೇನೆ...
ಒಮ್ಮೊಮ್ಮೆ ಕೇಳಿಯೂ ಕೇಳದ೦ತೆ
ನಟಿಸುವ ರಾಜಕಾರಣಿಗಳ ಬಗ್ಗೆ..
ನಾನು ಬರೆಯುತ್ತಿರುವ
ನನ್ನದೇ ಈ ಬರಹದ ಬಗ್ಗೆ...!

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ವಾಹ್ ತುಂಬಾ ಚೆನ್ನಾಗಿದೆ ರಾಯರೇ ಮನಸ್ಸಿನ ಚಿಂತನೆಯೇ .... ಸುಂದರ ಕವನ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಯೋಚಿಸುತ್ತಲೇ ಇರಬೇಕಾಗಬಹುದು ಎಂದು ಬದಲಾಗದ ಈ ರಾಜಕಾರಣಿಗಳ ಬಗ್ಗೆ ಪ್ರಕೃತಿ ವಿಕೋಪಗಳ ಪ್ರಲಾಪಗಳ ಬಗ್ಗೆ ಎರಡೂ ಊಹಿಸಲು ಸಾಧ್ಯವಾಗದ ಪ್ರಕ್ರಿಯೆಗಳು...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡ ರವರೆ ಈಗಲೂ ಆಗುತ್ತಿರುವ ಮಾನವ –ಪ್ರಕೃತಿ ನಡುವಣ ಸತತ ಸ೦ಘರ್ಷಗಳ ಬಗ್ಗೆ ನಿಮ್ಮ ಮೇಲಿನ ಸಾಲುಗಳು ನನ್ನನು ಯೋಚಿಸುವ೦ತೆ ಮಾಡುವಲ್ಲಿ ಯಶಸ್ವಿಯಾಗಿವೆ. ಒಟ್ಟಾರೆ ಕವನ ಚೆನ್ನಾಗಿದೆ, ಅಭಿನ೦ದನೆಗಳು. ನಿಮ್ಮ ಉತ್ತಮ ಕವಿತೆಗಳ ನೀರಿಕ್ಷಿಸವವ ದಯಾ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ, ಯೋಚನೆಗೆ ಮಿತಿಯಿಲ್ಲ ಆದರೆ ನಿಮ್ಮ ಚಿಂತನೆಗಳು ಸಮಾಜಮುಖಿ.ಸುಂದರ ಬರಹಕ್ಕಾಗಿ ಅಭಿನಂದನೆಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಯೋಚಿಸುತ್ತಲೇ ಇರೋಣ ಯೋಜಿಸುತ್ತಲೇ ಇರೋಣ ಯೋಚಿಸಿದರೇ... ಯೋಜಿಸಲೂಬಹುದು! :) -ಆಸು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪುನಃ ಯೋಜಿಸಿದರೆ ಸೃಜಿಸಲೂಬಹುದು| ಇಂದಿನ ಚಿಂತನೆ ನಾಳಿನ ಕಾರ್ಯಕ್ಕೆ ಬೀಜವಲ್ಲವೆ ? ಇಂದಿನ ಯೋಜನೆ ನಾಳಿನ ಸೃಜನೆಯಲ್ಲವೆ? ನಾವಡರಿಗೆ ಹಾಗು ಆಸುರಿಗೆ -ನಮಸ್ಕಾರಗಳೊಡನೆ -ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡ ಉವಾಚವನ್ನು ಮೆಚ್ಚಿಕೊ೦ಡ ಸರ್ವರಿಗೂ ನನ್ನ ಧನ್ಯವಾದಗಳು. ನಿಮ್ಮ ನಿರ೦ತರ ಪ್ರೋತ್ಸಾಹದ ನಿರೀಕ್ಷೆಯಲ್ಲಿ, ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಬ್ಬರೇ ಯೋಚಿಸದೆ ಇತರರನ್ನೂ ಯೋಚಿಸುವಂತೆ ಮಾಡುವಿರಲ್ಲಾ, ನಾವಡರೇ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.