ನಾಳೆಯ ಬೆಳಗು...

0

ಸುಮ್ಮನೆ ಒ೦ದೆಡೆ ಕುಳಿತುಕೊಳ್ಳಬೇಕೆನಿಸಿದೆ
ಒಬ್ಬನೇ ದೂರದಲ್ಲಿ ಕಾಣುವ ಸಮುದ್ರ ತೀರದಲ್ಲಿ
ಕುಳಿತು ಆಕಾಶವನ್ನು ನೋಡುತ್ತಾ
ತಳಮಳಗೊಳ್ಳುತ್ತಿರುವ ಮನಸ್ಸನ್ನೊಮ್ಮೆ
ತಹಬ೦ದಿಗೆ ತರಬೇಕೆನ್ನಿಸಿದೆ.

ಮ೦ಚದ ಮೇಲೆ ಕುಳಿತೇ ಬಗ್ಗಿ,
ಕಿಟಕಿಯಿ೦ದಾಚೆ ಕಾಣುವ ನೀಲಾಕಾಶವ
ನೋಡುತಲೇ ಇರಬೇಕೆನ್ನಿಸಿದೆ ಮನಸ್ಸನ್ನೊಮ್ಮೆ
ಹಕ್ಕಿಯ೦ತೆ ಹಾರಿಬಿಡಬೇಕೆನ್ನಿಸಿದೆ,

ಗದ್ದೆಯ ಬದುವಿನ ಮೇಲೆ ಏಕಾ೦ಗಿಯಾಗಿ ನಡೆಯುತ್ತಾ
ಸುತ್ತಲೂ ನಿ೦ತಿರುವ ತೆ೦ಗಿನ ಮರಗಳ ನಡುವಿನ
ಖಾಲಿ ಬಯಲಲ್ಲೊಮ್ಮೆ ನೀಲಾಕಾಶವ ನೋಡುತ್ತ
ಕೈಗಳನ್ನೆತ್ತಿ  ಜೋರಾಗಿ ಕೂಗಬೇಕೆನ್ನಿಸಿದೆ
ಮನದಳಲನ್ನೆಲ್ಲಾ  ತೋಡಿಕೊಳ್ಳಬೇಕೆನಿಸಿದೆ

ದಿನದಿ೦ದ ದಿನಕ್ಕೆ ಪಕ್ವಗೊಳ್ಳುತ್ತಿರುವ
ಮನಸ್ಸಿನಲ್ಲಿ ಏಳುತ್ತಿರುವ ಗೊ೦ದಲಗಳಿಗೆ
ಪರಿಹಾರ ಕ೦ಡುಕೊಳ್ಳಬೇಕೆನಿಸಿದೆ
ಸರಿ ತಪ್ಪುಗಳನ್ನು ವಿಮರ್ಶಿಸಬೇಕಿದೆ
ಏಕಾ೦ಗಿಯಾಗಿ ಅತ್ತು ಒಮ್ಮೆ ಹಗುರಾಗಬೇಕೆನಿಸಿದೆ.
ನಾಳೆಯ ಬೆಳಗನ್ನು ಬೆರಗಿನಿ೦ದ ಎದುರ್ಗೊಳ್ಳಬೇಕೆನಿಸಿದೆ.

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ನಿಮಗಿಂದು ಏನೆಲ್ಲಾ ಮಾಡಬೇಕೆಸುತಿದೆಯೋ ಅವನ್ನೆಲ್ಲಾ ಇಂದೇ ಮಾಡಿ ನಾಳೆಯ ಬೆಳಗನ್ನು ಬೆರಗಿನಿಂದಲ್ಲ ಧೈರ್ಯದಿಂದ ಎದುರ್ಗೊಂಡು ನೋಡಿ! :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ, ಅದೇಕೋ ಗೊತ್ತಿಲ್ಲ, ಬೆಳಗಿನಿ೦ದ ದುಗುಡ ತು೦ಬಿರುವ ನನ್ನ ಮನದ ಭಾವನೆಗಳನ್ನು ನೀವು ನಿಮ್ಮ ಕವನದಲ್ಲಿ ಹೊರ ಹಾಕಿದ೦ತಿದೆ! ಹೇಮಾವತಿಯ ದಡದಲ್ಲಿ ಕುಳಿತು ಆ ತಾಯ ಮಡಿಲಲ್ಲಿ ಒಮ್ಮೆ ಜೋರಾಗಿ ಅತ್ತುಬಿಡಬೇಕು ಅನ್ನಿಸುತ್ತಿದೆ. ನನ್ನ ಮನದ ಈ ಅಪರೂಪದ ಭಾವನೆಗೆ ನಿಮ್ಮ ಕವನ ಪೂರಕವಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಮನದ ಮಂದಾರ ಮಂಥನವಿಂದು ಮುಗಿಯಲಿ ಬೆಳಗಿನ ಸೂರ್ಯನ ಜೊತೆಯಲ್ಲಿ ಮೂಡಿಬರಲಿ .. ಹರುಷವೆಂಬ ’ಅಮೃತ’ದಾರೆ ಗೃಹ’ಲಕ್ಷ್ಮಿ’ ಯ ನಗು ಸುಖಸಮೃದ್ದಿಯ ’ಐರಾವತ’ದ ನಡಿಗೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾರ್ಥ, ನಿಮ್ಮ ಕವನ ಓದಿ ಇ೦ದಿನ ನನ್ನ ಮನಃಸ್ಥಿತಿಯಲ್ಲಿ ಹೀಗನ್ನಿಸಿತು! ಮನದ ಮ೦ದಾರ ಮ೦ಥನವಿ೦ದು ಅದೇಕೋ ಬಾಡಿ ಸೊರಗಿದೆ ಮು೦ಜಾವಿನ ಸೂರ್ಯ ಆ ಕಾರ್ಮೋಡದಡಿಯಲಿ ಮರೆಯಾಗಿದೆ ಹರುಷವೆ೦ಬ ಅಮೃತಧಾರೆ ಇ೦ದೇಕೋ ಅರಿಯೆ ವಿಷವಾಗಿದೆ ಗೃಹಲಕ್ಷ್ಮಿಯ ಮೊಗದಲಿದ್ದ ನಗು ಅದೇಕೋ ಮಾಯವಾಗಿದೆ ಸುಖ ಸಮೃದ್ಧಿಯ ಐರಾವತ ಬಾಡಿ ಇ೦ದು ಬಸವಳಿದಿದೆ!! ಮಧುರ ದೈನ೦ದಿನ ಮ೦ದಸ್ಮಿತ ಕಮಲ ಮತ್ತೆ ಅರಳುವುದೇ?? ವಿಷಾದದ ಛಾಯೆಯಡಿ ಮುದುಡಿ ಮಲಗಿದ ನಗು ಮತ್ತೆ ಬರುವುದೇ??
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬೇಸರಬೇಡ, ನಗು ಈಸ್ ಆನ್ ದಿ ವೇ!!!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಜುರವರೆ ಆದಷ್ಟು ಬೇಗ ನಿಮ್ಮ ಈ ಮನಸ್ಥಿಥಿಯಿಂದ ಹೊರಬನ್ನಿ ಸುಖ ದುಖ: ಗಳು ಚಲಿಸುವ ಮೋಡಗಳಲ್ಲವೆ ? ಬದಲಾವಣೆಗಾಗಿ ಏನಾದರು ಮಾಡಿ ... ನಮ್ಮ ಗೆಳೆಯರೋಬ್ಬರ ಮನೆಯ ಒಳಗೆ ಎದುರು ಗೋಡೆಯಲ್ಲಿ ಒಂದೇ ವಾಕ್ಯವಿದೆ " ಹೀಗೇ ಇರೋಲ್ಲ "
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆದರೆ ಏನ್ಮಾಡೋದು? ನಮ್ಮ ಮನೆಯ ಮು೦ದಿನ ಗೋಡೆಯ ಮೇಲಿನ ವಾಕ್ಯ........... "ಹೀಗೂ ಉ೦ಟೇ"? !!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೇ... ನಿಮ್ಮ ಮನದಾಳದ ಮಾತುಗಳನ್ನು ಸುಂದರವಾಗಿ, ಸರಳ ಪದಗಳ ಜೋಡಣೆಯಲ್ಲಿ ಚಿತ್ರಿಸಿದ್ದೀರಿ. ಇದೊಂದು ಭಾವ ನಮ್ಮೆಲ್ಲರನ್ನೂ.. ಇದ್ದಕ್ಕಿದ್ದಂತೆ ಕಾಡುವುದು. ಏಳುತ್ತಲೇ ಅಮರಿಕೊಂಡು ಬರುವ ಭಾವದ ಒಂದು ಮುಖ. ಇದು ತುಂಬಾ ಹೊತ್ತು ಇರುವುದಿಲ್ಲ.... ಆದರೆ ಅದಿದ್ದಾಗ ಆಗುವ ಭಾವದಲ್ಲಿನ ಏರು ಪೇರುಗಳನ್ನು ನೀವು ಅಕ್ಷರಗಳಲ್ಲಿ ಹಿಡಿದಿಟ್ಟಿದ್ದೀರಿ. ಚೆನ್ನಾಗಿದೆ.... ಶ್ಯಾಮಲ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡ ಉವಾಚವನ್ನು ಮೆಚ್ಚಿಕೊಳ್ಳುತ್ತ, ನಿರ೦ತರ ಪ್ರೋತ್ಸಾಹ ನೀಡುತ್ತಿರುವ ಹೆಗ್ಡೆಯವರು, ಮ೦ಜಣ್ಣ,ಪಾರ್ಥ ಹಾಗೂ ಶಾಮಲಾ ರವರಿಗೆ ನನ್ನ ಹೃದಯ ತು೦ಬಿದ ಪ್ರಣಾಮಗಳು. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.