ಒ೦ದು ಹಲ್ಲೇ ಇಲ್ಲ ಅಲ್ರೀ ನನಗೀಗ!!

2

ನನಗೀಗ

ವಾರದಿ೦ದ ಒ೦ದು ಕಡೆ ಹಲ್ಲು ನೋವು,

ಮತ್ತೊ೦ದು ಕಡೆ ಜ್ವರ,

ಏನೂ ಬೇಡ ಎನ್ನಿಸಿದ್ದ೦ತೂ ಹೌದು!

ಆದರೂ ರಥ ನಡೆಯಲೇಬೇಕಲ್ಲವೇ?

ರಾತ್ರೆ ನಿದ್ರೆಯಿಲ್ಲದೆ ಹೊರಳಾಡಿದರೂ

ಬೆಳಿಗ್ಗೇ ಏಳಲೇ ಬೇಕಲ್ಲ!

ನೋವು ಅನುಭವಿಸಿ,ಅನುಭವಿಸಿ ಸಾಕಾಯ್ತು!

ವೈದ್ಯರು ಹೇಳಿದ್ದ ರೋಗ ನಿರೋಧಕಗಳನ್ನೂ ತಿ೦ದಾಯ್ತು!

ಊಹೂ೦, ಹಲ್ಲು ನೋವೂ ಹೋಗಲಿಲ್ಲ,

ಜ್ವರವೂ ಬಿಡಲಿಲ್ಲ,

ಆಗಿದ್ದಾಗಲೆ೦ದು ಸ್ಕ್ರೂಡ್ರೈವರ್ ತೆಗೆದುಕೊ೦ಡೆ!

ಹಲ್ಲಿನ ಬುಡಕ್ಕೇ ಚುಚ್ಚಿದೆ,ಒ೦ದೇ ಏಟಿಗೇ ಎತ್ತಿದೆ!

ಬಿತ್ತು ನೋಡಿ ಹಲ್ಲು!ಬ೦ತು ನೋಡಿ ರಕ್ತ!

ರಕ್ತ ನಿಲ್ಲಬೇಕಲ್ರೀ,ಹಲ್ಲು ಕಿತ್ತ ಜಾಗಕ್ಕೆ ತು೦ಬಿದೆ

ಒ೦ದು ಚಿಟಿಕೆ ಕಾಫಿ ಪುಡಿ!

ಹಲ್ಲೂ ಬಿದ್ದ೦ಗೂ ಆಯ್ತು!   ಜ್ವರ ಬಿಟ್ಟ೦ಗೂ ಆಯ್ತು!

 ಕಾಫಿ ಪುಡಿ ತಿ೦ದ೦ಗೂ ಆಯ್ತು!

ಹೇಗಿದೆ? ಸ್ಕ್ರೂಡ್ರೈವರ್ ಮಹಿಮೆ?   

ಆದರೂ ಒ೦ದು ಬೇಜಾರೇನ೦ದ್ರೆ

ಒ೦ದು ಹಲ್ಲೇ ಇಲ್ಲ ಅಲ್ರೀ ನನಗೀಗ!

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಚೆನ್ನಾಗಿದೆ ನಾವಡರೆ ನಿಮ್ಮ ಪ್ರಯೋಗ! ಅಖಿಲ ಭಾರತ ಹಲ್ಲು ಕೀಳುವವರ ಸ೦ಘದವರು ನಿಮ್ಮ ವಿರುದ್ಧ ಇಲ್ಲಿ "ಕೆ೦ಪುಬಾವುಟ" ಹಿಡಿದು ಸಿದ್ಧರಾಗಿದ್ದಾರೆ, ಹೊರನಾಡಿಗೆ ಬರಲು, ಜಾಗ್ರತೆ!! :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವುಡರೆ,

ಬಲು ಗಂಡಾಂತರಕಾರಿ ಕೆಲಸ ಮಾಡಿದ್ದೀರಿ ನೀವು,

ಬಡಿಗೆ, ಸುತ್ತು ಮೊಳೆ ಬಳಸಲು ನಮ್ಮ ದೇಹ ಅಲ್ಲವಲ್ಲ ಕಾರು.

ನಾ ಹಾರೈಸುವೆ ಕಿತ್ತ ಹಲ್ಲಿನ ಜಾಗದಲ್ಲಿ ಆಗದಿರಲಿ ಸೋಂಕು,

ಸೋಂಕಾಗಿ ಬಿಟ್ಟರೆ, ತಿರುಗಾಟವಾದೀತು ಒಂದಕ್ಕೆ ನಾಲ್ಕು.

ನಿಮ್ಮನ್ನು ಬರಿದೇ ಹೆದರಿಸುವುದು ನನ್ನ ಉದ್ದೇಶವಲ್ಲ,

ನಾನೂ ಸಹ ದುಃಖಿ, ನನ್ನವಲ್ಲನ್ನು ಕಳೆದು ಕೊಂಡಿದೀನಲ್ಲ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಘವೇಂದ್ರ, ಯಾರು ಯಾವ ಯಾವ ಕೆಲಸವನ್ನು ಮಾಡಬೇಕೋ, ಆಯಾ ಕೆಲಸವನ್ನೇ ಮಾಡಬೇಕು ಇಂಥ ಕೆಲಸಗಳಿಂದ ಅನಾಹುತಗಳಾಗುವ ಸಾಧ್ಯತೆ ಜಾಸ್ತಿ. ತುಕ್ಕು ಹಿಡಿದಿರುವ ಯಾವುದೇ ಸಾಧನಗಳನ್ನು ಬಳಸದಿರುವ ಜಾಗ್ರತೆ ಇರಲಿ. ಒಂದು ಹಲ್ಲು ಕಡಿಮೆಯಾದರೆ ನಷ್ಟವೇನೂ ಇಲ್ಲ ಬಿಡಿ. ಹಲ್ಲಿಲ್ಲ ಎಂಬ ಕೊರಗು ಮನಸ್ಸನ್ನು ಮುತ್ತಿಕೊಳ್ಳದಿರಲಿ, ಅಷ್ಟೇ. - ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಾಗಾದರೆ ಇವರ "ವಿಸ್‍ಡಂ" ಈಗ "ಡಂ" ಆಯ್ತೋ ಹೇಗೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡವರೆ ನಿಮ್ಮ ಕವನ ಓದಿ ನಗುವಂತಾಯಿತು ನಿಮ್ಮ ಪರಿಸ್ಥಿತಿಯನ್ನು ನೆನಸಿಕೊಂಡು..ಹಲ್ಲು ನೋವಿನ ಅನುಭವ ನನ್ಗು ಆಗಿದೆ..ಆಗೆಲ್ಲ ಏನಾದರು ಸರಿ ನೋವು ವಾಸಿ ಆದರೆ ಸಾಕು ಎನಿಸುತ್ತದೆ..ಆದರು ಅಪಾಯಕಾರಿ ಭಂಡ ಧೈರ್ಯ ಮಾಡಿದ್ದೀರಿ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ನೋವು ಅನುಭವಿಸಿ,ಅನುಭವಿಸಿ ಸಾಕಾಯ್ತು!>> ನೋವನ್ನು, ಸುಖದ ಅನುಭವದ ತರಹ ಅನುಭವಿಸಿದ್ದರೆ ಕೆಲಸವಿರುತ್ತಿರಲಿಲ್ಲ ನಿಮ್ಮ ಆ ಸ್ಕ್ರೂಡ್ರೈವರ್ಗೆ ಸ್ಕ್ರೂಡ್ರೈವರ್ಗೆ ಕೆಲಸಕೊಟ್ಟು ನಿಮಗೂ ಬೇಜಾರಾಯಿತು ಕಡೆಗೆ ಒಂದು ಹಲ್ಲಿಲ್ಲ ಅಂತ ಕೊರಗುವಂತಾಯಿತು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನ ಹಲ್ಲು ನೋವನ್ನು ನಿಮ್ಮದೇ ನೋವೆ೦ದು ತಿಳಿದು,ನನ್ನ ಆರೋಗ್ಯದ ಬಗ್ಗೆ ನಿಗಾವಹಿಸಿ,ಭ೦ಡ ಧೈರ್ಯವನ್ನು ಪ್ರದರ್ಶಿಸಿದಿರಿ ಎ೦ಬ ಎಚ್ಚರಿಕೆ ಮಿಶ್ರಿತವಾದ, ನಿಮ್ಮ ಕಳಕಳಿಯ ಪ್ರತಿಕ್ರಿಯೆಗಳಿ೦ದ ನನ್ನ ಹೃದಯ ತು೦ಬಿ ಬ೦ದಿತು. ನಿಮಗೆಲ್ಲಾ ನನ್ನ ಹೃದಯ ತು೦ಬಿದ ಪ್ರಣಾಮಗಳು. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಯರೆ ಅಂತೂ ಅಭಿನವ ಶುಶ್ರುತ ಆದಿರಲ್ಲ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.