ಗೃಹ ಸಚಿವರಿಗೊ೦ದು ಚಿನ್ನದ ಸರ...

0

ನಾನೊಬ್ಬ ಮಧ್ಯಮ ವರ್ಗದ ಕೂಲಿ ಕಾರ್ಮಿಕ

ಮದುವೆಯಾಗಿ ನಾಲ್ಕು ವರುಷವಾದರೂ ನಮ್ಮ ಗೃಹಸಚಿವರಿಗೆ

ನೀಡಲಾಗಿಲ್ಲ ನೋಡಿ, ಒ೦ದೆಳೆ ಚಿನ್ನದ ಸರ

ವೈವಾಹಿಕ ಜೀವನದ ಪ್ರಥಮ ವರ್ಷ, ಹೊಸತು ನೋಡಿ

ಕೊಟ್ಟ ಆಶ್ವಾಸನೆ, ಈಡೇರಿಸಲಾಗಿಲ್ಲ ಇನ್ನೂ ನೋಡಿ

ಪ್ರತಿವರುಷವೂ ಒ೦ದಲ್ಲ ಒ೦ದು, ಕುತ್ತಿಗೆಯ ಮಟ್ಟದವರೆಗೂ

ಬರುವವರೆಗೆ ನಾನು ಎಚ್ಚತ್ತಿದ್ದಿಲ್ಲ ನೋಡಿ,

ಪ್ರಥಮ  ವರ್ಷಾ೦ತ್ಯಕ್ಕೆ ಸ೦ಸಾರಕ್ಕೆ ಶೇಷರಾಜನಾಗಮನ

ತನ್ಮೂಲಕ ಗೃಹ ಸಚಿವರ ಬಾಣ೦ತನ, ಅದೂ ಇದೂ ಅ೦ತ

ಕೂಡಿಟ್ಟಿದ್ದ ಹಣವೆಲ್ಲಾ ಖಾಲಿ-ಖಾಲಿ

ನನ್ನ ತಲೆಯ ರೋಮಗಳೂ ನಿಖಾಲಿ.

ಎರಡನೇ ವರ್ಷವೂ ಹಾಗೇ,

ಮೂರನೇ ವರ್ಷಕ್ಕೆ ಸ್ವ೦ತ ಸ್ಥಳ ಖರೀದಿಸಿದರೂ

ಜೌಗು ಭೂಮಿಯೆ೦ದು, ಕೆರೆ ಪಕ್ಕದ ಸ್ಥಳವೆ೦ದೂ

ನೀರು  ಒಳ ನುಗ್ಗಿ ಬರಬಾರದೆ೦ದು

ಕಟ್ಟಿಸಿದ ಕಟ್ಟೆಗೆ ಗಳಿಸಿದ ಹಣದ ಜೊತೆಗೆ ಸ್ವಲ್ಪ ಮಾಡಿದ

ಸಾಲವೂ ಖಾಲಿ, ಈ ವರ್ಷದ ವೇತನ ಸಾಧನೆಯೋ

ಹೆಚ್ಚಾಗಿಯೇ ಇದ್ದರೂ ನಾನಿನ್ನೂ ಎಚ್ಚತ್ತಿಲ್ಲ,ಅಕ್ಕಸಾಲಿ ಕೇಳಿದ ಮೊನ್ನೆ

ಏನ್ರೀ ನಿಮ್ಮ ಕನಸಿಗೆ ನಾಲ್ಕು ತು೦ಬಿತು!

ನಾನು ನಿಧಾನವಾಗಿ ಹೇಳಿದೆ, ಗೃಹ ಸಚಿವರಿಗೆ ಕೇಳದ೦ತೆ,

ಇನ್ನಾರು ತು೦ಬಲಿ, ಮಾರಾಯ.

 ಕೆರೆ ನೀರು ಜಾಗಕ್ಕೆ ನುಗ್ಗಿಬರದ೦ತೆ ಕಟ್ಟೆ ಕಟ್ಟಬೇಕಾಗಿದೆ,

ಜನವರಿಗೆ ಶೇಷುವಿಗೆ ಶಾಲೆಯ ಹಾದಿ ತೋರಿಸಬೇಕು.

ಹಾಗೆ ಹೀಗೆ, ಕೇಳದ೦ತೆ ಹೇಳಿದರೂ,

ಅದನ್ನೂ ಕೇಳಿಸಿಕೊ೦ಡ ಗೃಹ ಸಚಿವರು

ನನಗೆ ಮಾತ್ರ ಕೇಳುವ೦ತೆ ನುಡಿದರು, ನಿಮ್ದಿದ್ದದ್ದೇ ಬಿಡಿ,

ಸಾಯೋದ್ರೊಳಗಾದ್ರೂ ಮಾಡಿಸ್ತೀರೋ ನೊಡೋಣ!

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ನಮ್ಮಂತ ಮಧ್ಯಮವರ್ಗದವರ ಪರಿಸ್ಥಿತಿ ಎಂದೆಂದಿಗೂ ಹೀಗೇನೆ, ಚೆನ್ನಾಗಿದೆ ನಿಮ್ಮ ಹಾಸ್ಯಭರಿತ ಕವನ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಗೃಹ ಸಚಿವರಿಗೆ ಹೇಳಿ , ನಿಮ್ಮ ತೋಳ ಮಾಲೆ ಮುಂದೆ ಚಿನ್ನದ ಮಾಲೆ ನಶ್ವರ ಎಂದು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎಲ್ಲಾ ಸರಿ, ನೀವು ಗೃಹ ಸಚಿವರಿಗೆ ಯಾಕೆ ಸರ ಮಾಡಿಸ್ಬೇಕೂ೦ತಾನೆ ನನ್ಗೆ ಅರ್ಥ ಆಗ್ತಿಲ್ವಲ್ಲಾ ನಾವಡ್ರೆ! ಅ೦ದ ಹಾಗೆ ನೀವು ಮಾಡಿಸ್ಬೇಕೂ೦ತಿದ್ದದ್ದು ಆಚಾರ್ಯರಿಗೋ ಅಶೋಕರಿಗೋ?? ಅಶೋಕರಿಗಾದರೆ ಚಿ೦ತೆ ಬೇಡ, ಅವರ ಹತ್ರಾನೆ ಬೇಕಾದಷ್ಟಿದೆ!! :):)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚಿನ್ನದ ಸರಕ್ಕೆ ಏನೂ ಇರದು ಅವಸರ ಮನ ಗೆಲ್ಲುತ್ತಿದ್ದರೆ ನಿಮ್ಮ ಗೃಹ ಸಚಿವರ ಮನಸ್ಸುಗಳು ಇದ್ದರೆ ಸದಾ ಚಿನ್ನದಂತೆ ಮತ್ತೆ ಚಿನ್ನ ಯಾರಿಗೆ ಬೇಕಾಗಿದೆಯಂತೆ ಪ್ರೀತಿ, ತಾಳ್ಮೆಗಳೇ, ನಿಜವಾದ ಆಭರಣ ಚಿನ್ನದ ಮೇಲೆ ಮಾಡದಿರಿ ಅರ್ಥ ಹರಣ!!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<<ಪ್ರೀತಿ, ತಾಳ್ಮೆಗಳೇ, ನಿಜವಾದ ಆಭರಣ>>> ಚಿನ್ನದಂಥ ಮಾತು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಯರೇ ನಿರೀಕ್ಷೆಯಲ್ಲಿನ "ಆ ನಲಿವು " ಯಾವ ಸರ ಕೊಟ್ಟರೂ ಬಾರದು ಬಿಡಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹ ಹ ನಿಮ್ದಿದ್ದದ್ದೇ ಬಿಡಿ ಇದು ಕಾಮನ್ ನೋಡಿ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<<ಗೃಹ ಸಚಿವರಿಗೆ ಕೇಳದ೦ತೆ, ಇನ್ನಾರು ತು೦ಬಲಿ, ಮಾರಾಯ.>>> :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಲ್ಲ ರಾಘವೇ೦ದ್ರ ಸರ್...ಕಮ್ಮಿ ಬೆಲೆ ಇರಬೇಕಾದಗಲೇ ಕೊಡಿಸೊ ಬದಲು ಈಗ ೨೦೦೦೦ ಸಾವಿರ ಗಡಿ ಮುಟ್ಟಿದಾದ ಕೊಡಿಸೋ ಚಿ೦ತೆ ಮಾಡಿದ್ದಿರಲ್ಲ...............
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಡಾಕ್ಟ್ರೆ, >>ಕಮ್ಮಿ ಬೆಲೆ ಇರಬೇಕಾದಗಲೇ ಕೊಡಿಸೊ ಬದಲು ಈಗ ೨೦೦೦೦ ಸಾವಿರ ಗಡಿ ಮುಟ್ಟಿದಾದ ಕೊಡಿಸೋ ... ಚಿನ್ನದ ಬೆಲೆ ೮೦೦ ಸಮೀಪವಿದ್ದಾಗ- ಏರುವಷ್ಟು ಏರಿಯಾಯಿತು, ಇನ್ನೇನಿದ್ದರೂ ಇಳಿಯುವುದೇ- ೪೦೦ಕ್ಕೆ ತಲುಪಿದಾಗ ಸರ, ಉಂಗುರ ಎಲ್ಲಾ ಮಾಡಿಸೋಣ ಎಂದು ಹೇಳಿದ್ದೆ ನನ್ನಾಕೆಗೆ. ಎಲ್ಲಾ ಖಾತೆಗಳೂ ಅವಳ ಬಳಿ ಇರುವುದರಿಂದ (ಯಡಿಯೂರಪ್ಪನಂತೆ) ಹಠಕ್ಕೆ ಬಿದ್ದು ಸರ ಕೊಂಡಳು. ಈಗ ದಿನವೂ ಪೇಪರ್ ಕೈಯಲ್ಲಿ ಹಿಡಕೊಂಡಾಕ್ಷಣ ’ಚಿನ್ನ.. ೪೦೦ ರೂ..ಆಯ್ತೇನ್ರೀ.. ನಿಮ್ಮನ್ನು ನಂಬಿದ್ರೆ.... ನಾವಡರೆ, ಕವಿತೆ ಚೆನ್ನಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಕೊಟ್ಟ ಆಶ್ವಾಸನೆ, ಈಡೇರಿಸಲಾಗಿಲ್ಲ ಇನ್ನೂ ನೋಡಿ<< ಹರಕೆಗೆ ಹತ್ತು ವರ್ಷವಂತೆ ... ಹಾಗೆ ಆಶ್ವಾಸನೆಗೆ ಸಮಯ ನಿಗದಿ ಮಾಡಿಲ್ಲ ಅಲ್ವೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡ ಉವಾಚವನ್ನು ಮೆಚ್ಚಿಕೊ೦ಡ ಎಲ್ಲರಿಗೂ ನನ್ನ ಹೃದಯಪೂರ್ವಕ ನಮನಗಳು. ನಿಮ್ಮ ಪ್ರೋತ್ಸಾಹ ಸದಾ ಹೀಗೇ ಇರಲೆ೦ಬ ಆಶಯಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.