ಮೌನ ಗೀತೆ.....

0

ಕಾಣದ ಕೈಗಳಿಗೆ ಬೇಡಿಯ ತೊಡಿಸಿ,

ಹಾರುವ ಪಕ್ಷಿಯ ಕುತ್ತಿಗೆ ಹಿಚುಕಿ,

ಬೆಳೆಯುವ ಪರಿ ನೋಡು ! ಅಬ್ಬಾ....!

ಎಲ್ಲವೂ ಬೇಕು- ಬೇಡವಾಗಿದ್ದು ಯಾವುದು?

ಎಲ್ಲೆಲ್ಲಿಯೂ ಒ೦ದೊ೦ದು ತೆರನಾದ ಶಿಕಾರಿ.

ಸೃಷ್ಟಿ-ಸ್ಥಿತಿ-ಲಯಗಳಿಗೆಲ್ಲಾ ಕಾರಣನೆ೦ಬ ಹೆಮ್ಮೆ.

ದಿನಕ್ಕೊ೦ದು ಸ೦ಶೋಧನೆಯ ಗರಿಮೆ!

ಅಲ್ಪನಿಗೂ ಅಷ್ಟೈಶ್ವರ್ಯದ ಕನಸು!

ಕನಸು ಕಾಣಲಡ್ಡಿಯಿಲ್ಲ.

ಸಾಧನೆಗೆ ಮತ್ಸರವಿಲ್ಲ!

ಎಲ್ಲವೂ ನಿನದೇ ಎ೦ಬ ಹಪಾಹಪಿ ಏಕೆ?

ಅರಿತು ಬಾಳಲಾಗದೇ?

ಮೂಕ ಹಕ್ಕಿಯ ಹಾಡಿಗೆ..,

ಮೌನ ಗೀತೆಯ ರಾಗ.....!

ಹುಟ್ಟಿಸು, ಪೋಷಿಸು..

ನೀನೇ ಸಾಯಿಸಬೇಡ...

ಕೊನೆಗೊಮ್ಮೆ ನಿನ್ನ ಶವಕೂ

ವಾರಸುದಾರರ ಹುಡುಕಬೇಕಾದೀತು!!!

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ತುಂಬಾ ಚೆನ್ನಾಗಿದೆ ksraghavendranavada ಸರ್. ಧನ್ಯವಾದಗಳು. ವಸಂತ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ, ಸ್ವಾರ್ಥವೇ ತು೦ಬಿರುವ ಮನುಜನಿಗೆ ಭಯ೦ಕರ ಎಚ್ಚರಿಕೆಯನ್ನೇ ಕೊಟ್ಟಿದ್ದೀರಿ!

ಕವನವನ್ನು ಮೆಚ್ಚಿಕೊ೦ಡಿದ್ದಕ್ಕೆ ಧನ್ಯವಾದಗಳು ಮ೦ಜು. ನಮಸ್ಕಾರಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿದೆ ನಾವಡವ್ರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿದೆ ನಾವಡರೇ. ಕಾಣದ ಕೈಗಳಿಗೆ ಬೇಡಿ ತೊಡಿಸುವುದು ಕಷ್ಟ. "ಅರಿಯದ ಕೈಗಳಿಗೆ" ಸುಲಭ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹುಟ್ಟಿಸಿ ಪೋಷಿಸುವುದರ ಹಿಂದೆ, ತಾನಳಿದ ಮೇಲೆ ತನ್ನ ಶವಕ್ಕೆ ವಾರಸುದಾರರನ್ನು ಉಳಿಸಿಹೋಗುವುದಕ್ಕೆ ಎಂಬ ಸ್ವಾರ್ಥ ಭಾವ ಇದೆಯೆನ್ನುವುದು, ಸರಿಯೇ ರಾಘವೇಂದ್ರ? ಬಾಳಿನ ದಿನಗಳ ಸಾರ್ಥಕತೆ, ಪಾರಮಾರ್ಥಿಕತೆಯತ್ತಣ ಪಯಣದಲಿ ದೃಢತೆ ಇರಬೇಕೇ ವಿನಃ ಮರಣಾನಂತರದ ದಿನಗಳಲ್ಲಿ ಶವದ ವ್ಯವಸ್ಥೆಯ ಬಗ್ಗೆ ಕಾಳಜಿ ಸೂಕ್ತವೇ? - ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೆಗಡೆಯವರೇ, ನಿಮ್ಮ ಎರಡೂ ಪ್ರಶ್ಗೆಗಳ ಉತ್ತರ ಇಲ್ಲವೆ೦ದೇ ಕವಿ ಹೇಳುತ್ತಿದ್ದಾನೆ. ಆದರೆ ಎಲ್ಲವನ್ನೂ ತಿಳಿಸಿ ಹೇಳಿದರೂ ಕೇಳದಿದ್ದಾಗ, ತನ್ನ ಕೊನೆಯ ಅಸ್ತ್ರವಾಗಿ ಸ್ವಾರ್ಥ ಎನ್ನುವ ಪದವನ್ನು ಕವಿ ಉಪಯೋಗಿಸುತ್ತಿದ್ದಾನೆ. ತನ್ನ ಬುಡಕ್ಕೆ ಬ೦ದಾಗಲಾದರೂ ಎಚ್ಚೆತ್ತುಕೊಳ್ಳುವನೇ ಎ೦ಬ ನಿರೀಕ್ಷೆ ಇಲ್ಲಿ ಕವಿಯದ್ದು! ನಮಸ್ಕಾರಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವನವನ್ನು ಮೆಚ್ಚಿ ಪ್ರತಿಕ್ರಿಯಿಸಿದ ವಸ೦ತ್, ಚಿಕ್ಕು ಹಾಗೂ ಕವಿನಾಗರಾಜರಿಗೆ ನನ್ನ ನಮನಗಳು. ನಮಸ್ಕಾರಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿದೆ. ಅರ್ಥ ತುಂಬಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರಿಗೆ ವಂದನೆಗಳು. ನಿಮ್ಮ ಮೌನ ಕವನ ತುಂಬಾ ಖುಷಿ ನೀಡಿತು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವನವನ್ನು ಮೆಚ್ಚಿಕೊ೦ಡ ದೀಪಕ್ ಹಾಗೂ ಭಾಗವತರಿಗೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.