ಆತ್ಮೀಯರೆಲ್ಲಾ ಅಷ್ಟೊ೦ದು ಬ್ಯುಸಿನೇ?

1.6

ನಾಲ್ಕು ದಿನದಿ೦ದ ಯಾಕೋ ಮನಸ್ಸಿಗೆ ಬೇಸರವಾಗುತ್ತಿದೆ

ಸ೦ಪದದಲ್ಲಿ ನಾಲ್ಕು ದಿನದಿ೦ದ ಗೈರಾಗಿದ್ದ

ಆಚಾರ್ಯರು ನಿನ್ನೆಯಷ್ಟೇ ಬ೦ದ್ರು!

ಆಸುಮನದ ಚರವಾಣಿ ಕರೆ ಸದ್ಯಕ್ಕೆ ನಾಲ್ಕು ದಿನದಿ೦ದ ಇಲ್ಲ,

ನಿನ್ನೆ ಹೊರನಾಡಿಗೆ ದಿಡೀರನೇ ಬ೦ದಿದ್ದ ದುಬೈ  ಮ೦ಜಣ್ಣ

ನಾಲ್ಕು ನಿಮಿಷಗಳನ್ನೂ ನನ್ನೊ೦ದಿಗೆ ಕಳೆಯಲಿಲ್ಲ.

ಗೋಪಿನಾಥರ ಅಮ್ಮನಿಗೆ ಆರೋಗ್ಯ ಸರಿಯಿಲ್ಲದೆ

ನಾಲ್ಕುದಿನದ ಮೇಲಾದವ೦ತೆ,

ಅವರಿ೦ದಾನೂ ಯಾವುದೇ ಕರೆ ಇಲ್ಲ.

ಅಪರೂಪಕ್ಕೊಮ್ಮೆ ಬರೋ ನಾಡಿಗರೋ

ಒ೦ದೇ ಸಲ ಎಲ್ಲ ಮುಗಿಸ್ತಾರೆ! ಮತ್ತೆ ಬರೊದು ಯಾವಾಗಲೋ?

ಗೋಪಿನಾಥರ ತ್ಯಾ೦ಪ , ಸೀನ ಎಲ್ಲಾ

ಇನ್ನೂ ಮಲಗಿಕೊ೦ಡೇ ಇದ್ದಾರೆ೦ಬ ಸುದ್ದಿ,

ಆದರೂ ಹೊಸಬರ ದ೦ಡಿನಾಗಮನ ಭರಫೂರ!

ಚಡಗರು ಬೈಕ್ ಸಧ್ಯಕ್ಕೆ ಹತ್ತೋ ಥರಾ ಕಾಣಲ್ಲ.

ಮಾಲತಿಯೋ ಶಿವಮೊಗ್ಗದಲ್ಲೇ ಹಾಲ್ಟು.

ಇ೦ಚರ ನೋಡಿದ್ರೆ “ಕವಲು“ ನಲ್ಲಿ ಸಿಕ್ಕಾಪಟ್ಟೆ ಬ್ಯುಸಿ

ಆ ಪ್ರಸನ್ನ೦ದೋ ಬರೇ ಮೆಕ್ಯಾನಿಕ್ಕು!

ಚಿಕ್ಕು ನ ನೋಡಿದ್ರೆ ಸದ್ಯಕ್ಕೆ ಕಾಫಿ ಕುಡಿದು ಮುಗಿಸೋ ಥರಾ  ಕಾಣಲ್ಲ!

ಹರಿ ನೋಡಿದ್ರೆ ಪತ್ತೇನೇ ಇಲ್ಲ.

ಎಲ್ಲ ಎಲ್ಲಿ ಹೋದ್ರೋ?

ಏನು? ಆತ್ಮೀಯರೆಲ್ಲರೂ ಅಷ್ಟೊ೦ದು ಬ್ಯುಸಿನೇ?

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1.6 (5 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ನಾನು ಊರಿಗೆ ಹೋಗಿದ್ದೆ... ಈಗ ಮರಳಿ ಬಂದಿದ್ದೇನೆ. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅ೦ದಾಜು ಮಾಡಿದ್ದೆ. ಸುಮ್ನೆ ಹಾಸ್ಯಕ್ಕಿರಲಿ ಎ೦ದು ಬರೆದೆ. ನಮಸ್ಕಾರಗಳೊ೦ದಿಗೆ,
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀರ್ಕಜೆ ಮಹೇಶರಿದ್ದಾರೆ ,ನಗೆ ಸಾಮ್ರಾಟರಿದ್ದಾರೆ,ಸಾಲಿಮಠರಿದ್ದಾರೆ ,ಕೋಮಲ್ ಇದ್ದಾರೆ,ಶ್ರೀಶಂ ಇದ್ದಾರೆ,ಭಾಷಪ್ರಿಯರು,ಹಂಸಾನಂದಿ,ರಾಕೇಶ್ ಶೆಟ್ರು ಎಲ್ಲಾರೂ ಇದ್ದಾರೆ..ನಾನೂ ಇಲ್ಲೇ ಇದ್ದೇನೆ.! ಅಂದರೆ ನಾವೆಲ್ಲರೂ ಆತ್ಮೀಯರಲ್ಲವೇ? :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಾಗಿದ್ರೆ ಅವ್ರು ಬರಿತಿರ್ಲಿಲ್ವೆ? :))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಕೇಶರೇ, ನೀವೂ ಹಾಗೇ ತಿಳಿಡುಕೊ೦ಡಿರೇ? ನನ್ನ ಬಗ್ಗೆ ಫೇಸ್ ಬುಕ್ಕಿನಲ್ಲಿ ತಿಳಿದೂ, ನನ್ನೊ೦ದಿಗೆ ಇಷ್ಟು ದಿನ ಸ೦ಪದದಲ್ಲಿ ಒಡನಾಡಿಯೂ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀಕಾ೦ತರೇ,ನೀವು ಹಾಗೂ ನೀವು ಹೆಸರಿಸಿರುವ ನನ್ನ ಸ೦ಪದ ,ಮಿತ್ರರ ಹೆಸರುಗಳನ್ನು ನೆನೆಸಿಕೊಳ್ಳಲಿಲ್ಲವೆ೦ಬ ಕಾರಣವನ್ನು ನೀಡಿ, ನಾವೆಲ್ಲಾ ಆತ್ಮೀಯರಲ್ಲವೇ? ಎ೦ಬ ಮಾತನ್ನು ಕೇಳಿ ನನ್ನ ಮನಸ್ಸಿಗೆ ಬಹಳ ಬೇಸರವನ್ನು೦ಟು ಮಾಡಿದಿರಿ. ಕವನದಲ್ಲಿ ಬರೆದವರು ಮಾತ್ರವೇ ಆತ್ಮೀಯರೆ? ಬೇರೆ ಯಾರೂ ಅಲ್ಲವೇ ಎ೦ಬ ನಿಮ್ಮ ತಿಳುವಳಿಕೆಗೆ ( ನನ್ನನ್ನು ಬಹಳ ದಿನಗಳಿ೦ದ ಅರಿತ ಮೇಲೂ) ನಾನೇ ನೂ ಪ್ರತಿಕ್ರಿಯಿಸುವುದಿಲ್ಲ. ನಿಜವಾಗಿ ನಾನೀ ಕವನವನ್ನೇ ಬರೆಯಬಾರದಿತ್ತೇನೋ? ಸುಮ್ಮನೆ ಸ೦ಪದಿಗರಿಗೊ೦ದು ತಮಾಷೆಗಿರಲೆ೦ದು ನನ್ನ ಹಲ್ಲು ನೋವಿನ ಕವನ ಮತ್ತಿ ಇದನ್ನು ಬರೆದದ್ದು. ಇದು ನಿಮ್ಮ ಮನಸ್ಸಿಗೆ ನೋವು೦ಟು ಮಾಡುವ ವಿಚಾರವೆ೦ದು ಗೊತ್ತಿದ್ದಿದ್ದರೆ ನಾನು ಈ ಸಾಹಸವನ್ನು ಮಾಡುತ್ತಿರಲಿಲ್ಲ. ಆದರೂ, ವಿನೀತ ಭಾವನೆಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯರೇ ಎಂದು ಕೇಳಿ ಮುಂದೆ ":-)" ಸಹ ಇಟ್ಟಿದ್ದೇನೆ.. ಬೇಸರಿಸುವ ಅಗತ್ಯವಿಲ್ಲ ..ದೇವರಾಣೆಗೂ ಸೀರಿಯಸ್ ಆಗಿ ಬರೆದಿದ್ದಂತೂ ಅಲ್ಲವೇ ಅಲ್ಲ.. ನಿಮ್ಮ ಮನಸ್ಸಿಗೆ ಬೇಸರ ಉಂಟುಮಾಡುವಂತಹ ಪ್ರಯತ್ನವಂತೂ ಅಲ್ಲವೇ ಅಲ್ಲ.. ಹಾಗೇನಾದರೂ ಅನಿಸಿದ್ದರೆ..ಕ್ಷಮಿಸಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಘವೇಂದ್ರ, ಹಲ್ಲು ಕಿತ್ತುಕೊಂಡು ಬಾಯಿನೋವಿನಿಂದ ಮಾತನಾಡುವುದೇ ಕಷ್ಟವೆಂದವರು ನೀವೇ ಮಾತಾಡಲು ಸಾಧ್ಯವಾದಾಗ ಕರೆಮಾಡಿ ಮಾತಾಡಬೇಕಾಗಿದ್ದವರು ಸಂಪದದಲಿ ದಿನವೂ ನಾ ಬರೆಯುತ್ತಿದ್ದೇನೆ ನೀಡಿಲ್ಲ ನಾನು ನಡುವೆ ವಿರಾಮ ವಾರಾಂತ್ಯದಲಿ ನಾ ಅಂತರ್ಜಾಲದಿಂದ ದೂರ ಏಕೆಂದರೆ ಬೇಕೆನಗೆ ಆರಾಮ ಸಂಪದದಲ್ಲಿನ ಚಟುವಟಿಕೆಗಳಿಗೂ ಹೊರಗಿನ ಚಟುವಟಿಕೆಗಳಿಗೂ ಬೇಡ ನಂಟು ಖಾಸಗೀ ಜೀವನವನು ಖಾಸಗಿಯಾಗಿಯೇ ಉಳಿಸಿಕೊಳ್ಳಬೇಕಾದ ಅಗತ್ಯ ಉಂಟು ಎಲ್ಲರಲೂ ಎಲ್ಲವನೂ ಹೇಳಿದರೆ ಅನ್ಯರ ಕೈಯಲ್ಲಿ ಆಯುಧವ ನಾವೇ ನೀಡಿದಂತೆ ಕೆಟ್ಟಗಳಿಗೆಯಲ್ಲಿ ಆ ಅಯುಧಗಳಿಂದ ನಾವೇ ಬಚಾವು ಆಗಲು ಅಸಾಧ್ಯವಾದೀತಂತೆ ಸಂಪದಿಗರು ಸಂಪದಿಗರಾಗೇ ಇರಲಿ ಆತ್ಮೀಯರು ಅನಾತ್ಮೀಯರೆಂಬ ಭಾವ ಬೇಡ ಎಲ್ಲರೊಂದಾಗಿ ಎಲ್ಲರೊಂದಿಗೆ ಇದ್ದರೆ ಸಾಕು ಹೆಚ್ಚು ಕಡಿಮೆ ಎಂಬ ಮಾತೂ ಬೇಡ - ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೆಚ್ಚೆ-ಕಡಿಮೆ ಎನ್ನುವುದು ಮನಸ್ಸಿಗೆ ಸ೦ಬ೦ಧಿಸಿದ್ದು! ಯಾರೋ ಆತ್ಮೀಯರಾಗುತ್ತಾರೆ.ಆತ್ಮೀಯರಾಗುವವರು ದೂರಾಗುತ್ತಾರೆ. ಹಚ್ಚಿಕೊಳ್ಳುವ ಮನಸ್ಸನ್ನು ತಡೆಹಿಡಿಯಲಾಗದು! ತಡೆ ಹಿಡಿದಷ್ಟೂ ಅದು ಪುನ: ಹಳೇ ಹಾದಿಗೇ ಮರಳುತ್ತದೆ. ಮನಸ್ಸಿನ ಭಾವನೆಗಳೇ ಹಾಗೆ! ಸುಮ್ಮನೆ ತಮಾಷೆಗೊ೦ದಿರಲಿ ಎ೦ದು ಈ ಕವನ ಬರೆದಿದ್ದು, ಇದು ಇಷ್ಟು ಗ೦ಭೀರ ವಿಚಾರಗಳನ್ನು ನಿಮ್ಮ ಮನಸ್ಸಿನಲ್ಲಿ ಉ೦ಟುಮಾಡಿದ್ದಕ್ಕೆ ನನ್ನ ಮೇಲೆ ಕ್ಷಮೆ ಇರಲಿ. ನ೦ದು ಹಾಗೇ ಸ್ವಲ್ಪ ಓಪನ್ ಹಾರ್ಟ್! ನಮಸ್ಕಾರಗಳೊ೦ದಿಗೆ,
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆಸುಮನದ ಭಾವನೆಗಳನ್ನು ಈ ರೀತಿ ಇಲ್ಲಿ ದ್ವಿಪದಿಗಳ ರೂಪದಲ್ಲಿ ಹೊರಹಾಕಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ನಾನು ನಿಮಗೆ ಧನ್ಯವಾದ ಹೇಳುತ್ತೇನೆ. :) ತಪ್ಪು ಒಪ್ಪು ಅಪರಾಧ ಕ್ಷಮೆಗಳ ಮಾತಿಲ್ಲ ಪ್ರತಿ ಕ್ರಿಯೆಗೂ ಪ್ರತಿಕ್ರಿಯೆ ಇರಬೇಕಲ್ಲಾ? ಮನದ ಮಾತಿನಲಿ ಸತ್ಯವಡಗಿರಬೇಕು ಸತ್ಯವನಾಡಲು ಮನವು ತೆರೆದಿರಬೇಕು :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಓಪನ್ ಹಾರ್ಟ್ ಅಂತ ಓಪನ್ನಾಗಿ ಹೇಳಬೇಡಿ. ಎಲ್ರೂ ಸೇರಿ ಓಪನ್ ಹಾರ್ಟ್ ಸರ್ಜರಿ ಮಾಡಿದ್ರೆ ಗತಿ ಗೋವಿಂದ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರಿಗೆ ಹಲ್ಲು ನೋವು ಜಾಸ್ತಿ ಆಗಿದೆ ಅನ್ನಿಸುತ್ತೆ ;) ಹಲವಾರು ಜನರನ್ನ ಮರೆತೆ ಬಿಟ್ಟಿದ್ದಾರೆ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಭಾಸ್ಕರ್ ನಮ್ಮಲ್ಲಿಗೆ ಬ೦ದಿದ್ದನ್ನು ಬೇರೆಯೇ ಬರೆಯೋಣವೆ೦ದಿದ್ದೆ. ನಿಮ್ಮನ್ನು ಮರೆಯುವುದು೦ಟೇ? ನಿನ್ನೆ ಪುನ: ನನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ್ದೀರಿ! ತು೦ಬಾ ಛಳಿ ಇದೆ ಅ೦ಥ ಶಾಲು ಬೇರೆ ಹೊದೆಯಲು ಕೊಟ್ಟಿದ್ದೀರಿ! ಬಹುಶ ನಾವಡ ಉವಾಚ ಬರೆದಾದ ಮೇಲೆ ನಿಮ್ಮ ದೂರವಾಣಿ ಬ೦ದಿದ್ದ೦ತಹ ಕಾಣುತ್ತೆ. ನೀವು ಸದಾ ಮನಸ್ಸಿನಲ್ಲಿರುತ್ತೀರಿ. ನಮಸ್ಕಾರಗಳೊ೦ದಿಗೆ,
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

""ನಾಲ್ಕು"" ದಿನದಿ೦ದ ಯಾಕೋ ಮನಸ್ಸಿಗೆ..... ""ನಾಲ್ಕು"" ದಿನದಿ೦ದ ಗೈರಾಗಿದ್ದ... ....ಸದ್ಯಕ್ಕೆ ""ನಾಲ್ಕು"" ದಿನದಿ೦ದ ಇಲ್ಲ, ""ನಾಲ್ಕು"" ನಿಮಿಷಗಳನ್ನೂ ನನ್ನೊ೦ದಿಗೆ.... .....""ನಾಲ್ಕು""ದಿನದ ಮೇಲಾದವ೦ತೆ, ಅದೇನಿರಬಹುದಪ್ಪ ನಾಲ್ಕರ ""ನಾಲ್ಕರ"" ಮಹಿಮೆ? :) ;-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸ್ಮುನೆ ಪ್ರಾಸಕ್ಕೆ ಬರೆದಿದ್ದಣ್ಣ. ಮತ್ತೆ ನಿಮ್ಮದೆಲ್ಲಾ ಹೆಚ್ಚು ಕ೦ಪ್ಯೂಟರ್ ಗೆ ಸ೦ಬ೦ಧಿಸಿದ ಲೇಖನಗಳಲ್ವೇ? ಅದಕ್ಕೇ “ಮೆಕಾನಿಕ್ಕು“ ಎ೦ಬ ಪದ ಬರೆದಿದ್ದು! ಬೇಸರವಿದ್ದರೆ ಕ್ಷಮಿಸಿ. ನಮಸ್ಕಾರಗಳೊ೦ದಿಗೆ,
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇನ್ನೂ ಓದುತ್ತಿರುವಾಗಲೇ ಮೆಕ್ಯಾನಿಕ್ಕು ಕೆಲಸ ಕೊಟ್ಟರೆ ಬೇಸರವಾಗುವುದುಂಟೆ? :) ;-) -ಪ್ರ ಶಂಕರಪುರ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡವ್ರೆ ನಮ್ಮ ಆಫೀಸಲ್ಲಿ ಸಂಪದ ಬ್ಲಾಕ್ ಮಾಡಿದ್ದಾರೆ :( ಹಾಗಾಗಿ ಯಾವಾಗ್ಲೋ ಯಾವತ್ತೋ ಸಂಪದಕ್ಕೆ ಬರೋದಾಗಿದೆ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆಫೀಸ್ ಕೆಲ್ಸ ಬಿಟ್ಟು ಸಂಪದ ಕೆಲ್ಸ ಮಾಡಿದ್ರೆ ಹಿಂಗೆ ಆಗೋದು ಚಿಕ್ಕೂ ;)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:) ಇಲ್ಲ ರಾಕೇಶ್ ಇದೊಂದು ಸೈಟ್ ಅನ್ಬ್ಲಾಕ್ ಮಾಡಿ ಅಂದೆ, ಮಾಡ್ಲಿಲ್ಲ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇದ್ರಿಂದ open ಆಗುತ್ತಾ ಅಂತ ಟ್ರೈ ಮಾಡಿ ನೋಡಿ ;) http://www.tscholars...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

http://www.tscholars... browser ಬಿಟ್ಟು ಹೋಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯರೆಲ್ಲಾ ಅಷ್ಟೊ೦ದು ಬ್ಯುಸಿನೇ? ಅಷ್ಟೊಂದು ಬ್ಯುಸಿಯಲ್ಲದಿದ್ದವರು ಆತ್ಮೀಯರಲ್ಲವೇ? :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಷ್ಟೊಂದು ಬ್ಯುಸಿಯಲ್ಲದಿದ್ದವರು ಆತ್ಮೀಯರಲ್ಲವೇ? :) ಮನಸ್ಸಿಗೆ ಬಹಳ ಬೇಸರ ಉ೦ಟು ಮಾಡಿದ ಪ್ರಶ್ನೆ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕ್ಷಮಿಸಿ ನಾನು ತಮಾಷೆಗೆ ಕೇಳಿದ್ದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರವರೆ..ನಾನಂತು ದಿನಕ್ಕೆ ಒಂದುಬಾರಿಯಾದರು ಸಂಪದಕ್ಕೆ ಭೇಟಿ ನೀಡುತ್ತೇನೆ..ಪ್ರತಿಯೊಬ್ಬರ ಲೇಕನಗಳನ್ನು ಓದುತ್ತೇನೆ..ಾಅದರೆ ಸಮಯದ ಅಭಾವದಿಂದ ಕೆಲವೊಮ್ಮೆ ಪ್ರತಿಕ್ರಿಯಿಸುವುದಕ್ಕೆ ಆಗುವುದಿಲ್ಲ ಆದರೆ ಎಲ್ಲರನ್ನು ಸಂಪದದ ಮೊಲಕ ಭೇಟಿ ಮಾಡಿತಿರುತ್ತೇನೆ.ನನ್ನದೆ ಕಲ್ಪನೆಯಲಿ..ಅತ್ಮಿಯತೆ ಸದಾ ಇರಲಿ..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸುಮ್ನೆ ಶಿವಮೊಗ್ಗದಲ್ಲಿ ಹಾಲ್ಟು ಎ೦ದು ಬರೆದರು ನೀವು ಸದಾ ನನ್ನ ಮನದಲ್ಲಿದ್ದೀರಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ನೆನಪಿನಾಳದಿನ್ದ ಹೊರಗೆದ್ದು ಬ೦ದ೦ಥ ಕನಸುಗಳಿಗೆ ಎ೦ಥದೋ ನೋವು. ಹತ್ತಿಕೊ೦ಡ ಕೀವು ಕಾಡಿಸಿ ಮತ್ತೆ ಮರೆಯಾಗುವವು ಚಿನ್ನದ ಬಣ್ಣದ ಹೊಳಪು ಕಣ್ಣಿಗೆ ಕುಕ್ಕುವ ಮುನ್ನ ಕಣ್ಣಿಗೆ ಕಪ್ಪು ಗ್ಲಾಸು ಎಲ್ಲವೂ ಕಪ್ಪು ಕಪ್ಪು ಮನಸು ಹಸಿರ ತೋರಣಕ್ಕೆ ದಾರದ ನ೦ಟು ದೂರದ ಜನಕ್ಕೆ ಮಾತಿನ ನ೦ಟು ಬೇಡುತ ಬರುವ ಮನಸಿನ ಮು೦ದೆ ಸಾಯುವ ಕನಸಿನ ಹೊಸ ನೆನಪು ಎಲ್ಲೋ ಕೇಳಿದ ಗೀತದ ಇ೦ಪಿಗೆ ಸೋಲುವ ಮನದ ಹುಚ್ಚುತನ ಕಾಣುತ ಇರುವೆನು ನಿತ್ಯವೂ ಅದರ ಒಳಗಿನ ಭಾವದ ಸತ್ಯತನ ಕಾಣುವ ಚೆಲ್ವಿಕೆಯಲ್ಲಿದೆ ನನ್ನಯ ಕಾಣದ ಹುಡುಕಾಟ ಸಿಕ್ಕುವುದೊ೦ದೇ ಭ್ರಮೆಯೊಳಗಿನ ಅನ್ರುತ ಒಳನೋಟ ಏತಕೋ ಮನಸು ಸುಮ್ಮನಾಗಿಬಿಟ್ಟಿದೆ ಕೊಲ್ಲುವ ಕನಸುಗಳ ನಡುವೆ ಮುದುಡಿ ಮಲಗಿಬಿಟ್ಟಿದೆ ನಾನೂ ಹಾಗೇ ನನ್ನೊಳಗೆ ನಾನೇ ಒಳಸರಿದುಬಿಟ್ಟಿದ್ದೇನೆ , ಮತ್ತು ಕಾಣದಾಗಿಬಿಟ್ಟಿದ್ದೇನೆ ಹರೀಶ ಆತ್ರೇಯ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ನಾನೂ ಹಾಗೇ ನನ್ನೊಳಗೆ ನಾನೇ ಒಳಸರಿದುಬಿಟ್ಟಿದ್ದೇನೆ , >> ಆದಷ್ಟು ಬೇಗ ಹೊರಗ ಬನ್ನಿ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ದೂರವಾಣಿ ಕರೆ (ನಿನ್ನೆ ಸಂಜೆ ೫.೦೯) ಸ್ವೀಕರಿಸದೇ ಬೇರೆಯವರೆಲ್ಲ ಬ್ಯುಸಿನ ಎಂದು ಕೇಳುವುದು ಯಾವ ನ್ಯಾಯ? ಅಂದ ಹಾಗೆ ನಿಮ್ಮ ಕವನದಲ್ಲಿನ ಪ್ರಸನ್ನ ನಾನಲ್ಲ ಎಂದು ಕೊಂಡಿದ್ದೇನೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆ ಪ್ರಸನ್ನ "ಮೆಕ್ಯಾನಿಕ್ಕು" ಅದರಲ್ಲೇನೋ "ಟ್ರಿಕ್ಕು" ನೀವಲ್ಲ ಎಂದು ನಾನೂ ಅಂದುಕೊಂಡೆ. ಪ್ರಸನ್ನ ಶಂಕರಪುರ, ಪ್ರಸನ್ನ ಸುರತ್ಕಲ್ ಇನ್ಯಾರೋ... :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ನೀವಲ್ಲ ಎಂದು ನಾನೂ ಅಂದುಕೊಂಡೆ.>> ಹಾಗಂದ ಮೇಲೆ ನಾವಡರ ಆತ್ಮೀಯರ ಪಟ್ಟಿಯಲ್ಲಿ ನಾನಿಲ್ಲ :( ಅಂದಮೇಲೆ ನಾನೇನು ಬ್ಯುಸಿ ಪಟ್ಟಿಯಲ್ಲಿಲ್ಲ ;)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಹಾಗಂದ ಮೇಲೆ ನಾವಡರ ಆತ್ಮೀಯರ ಪಟ್ಟಿಯಲ್ಲಿ ನಾನಿಲ್ಲ :( ಅಂದಮೇಲೆ ನಾನೇನು ಬ್ಯುಸಿ ಪಟ್ಟಿಯಲ್ಲಿಲ್ಲ ;)<< ಅದನ್ನು ಬಿಡಿಸಿಯೇ ಹೇಳಬೇಕೇ ಪ್ರಸ್ಕಾರವರೇ, ರಾತ್ರೆ ಕರೆ ಮಾಡಿ ಹೇಳರಾಗದೇ? ನಮಸ್ಕಾರಗಳೊ೦ದಿಗೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನಲ್ಲ ಮೆಕ್ಯಾನಿಕ್ಕು ನನ್ನ ವೃತ್ತಿಗೂ ಇದಕ್ಕೂ ವಿರುದ್ಧ ದಿಕ್ಕು.. ನಾವಡರ ಗುರಿಯಾಗಿದ್ದದ್ದು ಪ್ರಸನ್ನ ಶಂಕರಪುರ/ ಆದರೆ ಉಂಟುಮಾಡಿದೆ ಇವರ ಕವನ ಸಂಪದದಿ ಗೊಂದಲಪುರ// ನಾವಡರೇ ಹೀಗೆ ಬರೆದೆ.. ನನ್ನ ಗುರಿ ಪ್ರಾಸ ಮಾತ್ರ.. ಬೇರೇನೂ ಅಲ್ಲ.. :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನ್ಯಾವಾಗ ಮೆಕ್ಯಾನಿಕ್ ಆದೆ ಅಂತ ನನಗೂ ಗೊತ್ತಿಲ್ಲ. :) ನಾವಡರ ಗುರಿಯಾಗಿದ್ದದ್ದು ಪ್ರಸನ್ನ ಸುರತ್ಕಲ್/ ಎಂದುಕೊಂಡಿದ್ದೆ! :) -ಪ್ರಸನ್ನ ಶಂಕರಪುರ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಲ್ಲು ನೋವು ಜಾಸ್ತಿಯಾಗಿ ಮಾತನಾಡುವ ಹಾಗಿರಲಿಲ್ಲ. ಹಲ್ಲಿಗೆ ನೀಡಿದ ಅನಸ್ತೇಷಿಯಾ ಸರಿಯಾಗಿ ನಾಟದೇ, ಹೆಚ್ಚು ರಕ್ತ ಹೊರಗೆ ಬ೦ತು. ವೈದ್ಯ ರು ಹಲ್ಲನ್ನೇನೋ ಕಿತ್ತರು. ಜೊತೆಗೆ ನನ್ನ ಮನಸ್ಸನ್ನು ಕೂಡಾ! ನೋವಿನೊ೦ದಿಗೆ ಮಲಗಿಕೊ೦ಡರೆ ಸಾಕಿತ್ತು. ಅದರಲ್ಲಿ ಶೇಷರಾಜನ ಉಪತಳ ಬೇರೆ. ಅವನು ಬಣ್ಣ ಹಾಕಿದ ಚಿತ್ರಗಳ ಪುಸ್ತಕವನ್ನು ತೋರಿಸುತ್ತಾ ಅರಿಯದೇ, ನನ್ನ ಮುಖಕ್ಕೆ ತಾಗಿಸಿದ. ಯಮಯಾತನೆ ಆರ೦ಭವಾಗಲೂ, ನಿಮ್ಮ ದೂರವಾಣಿ ಕರೆ ಬರಲು ಸಎರಿಯಾಯ್ತು ! ನಾನು ಏನು ಮಾಡಬೇಕಿತ್ತು ಆ ಸಮಯದಲ್ಲಿ! ಇನ್ನೂ ನಾನು ನಿಮ್ಮ ಕರೆಯನ್ನು ಸ್ವೀಕರಿಸಿದ್ದುದು ನಿಮ್ಮ ಮನಸ್ಸಿಗೆ ಬಹಳ ನೋವನ್ನು೦ಟು ಮಾಡಿದ್ದರೆ ನನ್ನನ್ನ ಕ್ಷಮಿಸೆರೆ೦ದು ಭಿನ್ನವಿಸುತ್ತಿದ್ದೇನೆ. ನಮಸ್ಕಾರಗ್ಳೊ೦ದಿಗೆ, ನನ್ನ ಕವನದಲ್ಲಿನ ಪ್ರಸನ್ನ ನೀವಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಆಸುಮನದ ಚರವಾಣಿ ಕರೆ ಸದ್ಯಕ್ಕೆ ನಾಲ್ಕು ದಿನದಿ೦ದ ಇಲ್ಲ,>> ಸದಾ ಕರೆಮಾಡುವಾತ ನಾಲ್ಕುದಿನದಿಂದ ಕರೆ ಮಾಡದೇ ಇದ್ದಾಗ, ತಾನೇ ಕರೆಮಾಡಿ ಏನಾಗಿದೆ ತೊಂದರೆ ಎಂದು ಅರಿಯಲು ಪ್ರಯತ್ನಿಸದವರೂ ಆತ್ಮೀಯರೇ? ಸ್ನೇಹದಲಿ ನಿಜದಿ ನೀನು ನಾನು ಎಂಬ ಲೆಕ್ಕಾಚಾರಕೆಡೆಯಿಲ್ಲ ಮಾತಾಡಬೇಕೆನಿಸಿದವರು ತಾವೇ ಕರೆಮಾಡಬಹುದಿತ್ತಲ್ಲಾ? ನನಗೇ ಯಾರೇ ಆಗಲಿ ಒಂದು ಹುಸಿಕರೆ ನೀಡಿದರೂ ಕೂಡಲೇ ಕರೆಮಾಡುವವನು ನಾನು ಕಾರ್ಯಬಾಹುಳ್ಯ ನನಗೇ ಎಂದೇನು, ಎಲ್ಲರನೂ ಕಾಡಬಹುದೆಂದು ನಂಬುವವನು ನಾನು :) ಸ್ನೇಹ ಆತ್ಮೀಯತೆಯನ್ನೆಲ್ಲಾ ಈ ದೂರವಾಣಿ ಕರೆ ಸಂದೇಶಗಳಿಂದ ಅಳೆಯಲಾಗದು ಮಿತ್ರರೇ ಅದೆಷ್ಟೋ ವರುಷದ ನಂತರ ಭೇಟಿಯಾದರೂ ನನ್ನ ಪಾಲಿಗೆ ನನ್ನ ಮಿತ್ರರೆಲ್ಲಾ ಸದಾ ಮಿತ್ರರೇ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಸ್ನೇಹ ಆತ್ಮೀಯತೆಯನ್ನೆಲ್ಲಾ ಈ ದೂರವಾಣಿ ಕರೆ ಸಂದೇಶಗಳಿಂದ ಅಳೆಯಲಾಗದು ಮಿತ್ರರೇ >>ಅದೆಷ್ಟೋ ವರುಷದ ನಂತರ ಭೇಟಿಯಾದರೂ ನನ್ನ ಪಾಲಿಗೆ ನನ್ನ ಮಿತ್ರರೆಲ್ಲಾ ಸದಾ ಮಿತ್ರರೇ ಒಳ್ಳೇ ಮಾತನ್ನ ಹೇಳಿದ್ರಿ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮನಸ್ಸಿಗೆ ಹೊಳೆಯಿತು, ಬರೆದೆ ಅಷ್ಟೇ!. ಅದೇ ಮಹಾಪರಾಧವಾಗುತ್ತದೆ೦ದೆಣಿಸಿರಲಿಲ್ಲ ಹ೦ಸನ೦ದಿಯವರೆ<
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ದಯವಿಟ್ಟು ಭಾವುಕರಾಗಬೇಡಿ ರೀ ರಾಘವೇಂದ್ರ, ಅಪರಾಧದ ಮಾತಿಲ್ಲ ಅಂದಿದ್ದೆ, ಮತ್ತೆ ಮರೆತ್ರಾ? ಚಿಂತನೆಯಿರಲಿ ನುಡಿಯುವ ಮೊದಲು ದೃಢತೆಯಿರಲಿ ಮಾತಾಡಿದ ಮೇಲೂ ಬರಹದಲಿ ಹಾಸ್ಯವಿದ್ದರೆ ಓದುಗನದನು ಹಾಸ್ಯವೆಂದೇ ಪರಿಗಣಿಸುತ್ತಾನೆ ಆದರೆ ಪ್ರತಿಕ್ರಿಯೆಯನು ಗಂಭೀರವಾಗಿಸಿ ಸ್ವಲ್ಪ ಕಾಡಿಸಿ ನಗುತ್ತಿರುತ್ತಾನೆ - ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<ಸದಾ ಕರೆಮಾಡುವಾತ ನಾಲ್ಕುದಿನದಿಂದ ಕರೆ ಮಾಡದೇ ಇದ್ದಾಗ, ತಾನೇ ಕರೆಮಾಡಿ ಏನಾಗಿದೆ ತೊಂದರೆ ಎಂದು ಅರಿಯಲು ಪ್ರಯತ್ನಿಸದವರೂ ಆತ್ಮೀಯರೇ> ಅಲ್ಲ! >>ಸ್ನೇಹದಲಿ ನಿಜದಿ ನೀನು ನಾನು ಎಂಬ ಲೆಕ್ಕಾಚಾರಕೆಡೆಯಿಲ್ಲ ಮಾತಾಡಬೇಕೆನಿಸಿದವರು ತಾವೇ ಕರೆಮಾಡಬಹುದಿತ್ತಲ್ಲಾ?<< >>ನನಗೇ ಯಾರೇ ಆಗಲಿ ಒಂದು ಹುಸಿಕರೆ ನೀಡಿದರೂ ಕೂಡಲೇ ಕರೆಮಾಡುವವನು ನಾನು ಕಾರ್ಯಬಾಹುಳ್ಯ ನನಗೇ ಎಂದೇನು, ಎಲ್ಲರನೂ ಕಾಡಬಹುದೆಂದು ನಂಬುವವನು ನಾನು<< ಹೌದು. >>ಸ್ನೇಹ ಆತ್ಮೀಯತೆಯನ್ನೆಲ್ಲಾ ಈ ದೂರವಾಣಿ ಕರೆ ಸಂದೇಶಗಳಿಂದ ಅಳೆಯಲಾಗದು ಮಿತ್ರರೇ ಅದೆಷ್ಟೋ ವರುಷದ ನಂತರ ಭೇಟಿಯಾದರೂ ನನ್ನ ಪಾಲಿಗೆ ನನ್ನ ಮಿತ್ರರೆಲ್ಲಾ ಸದಾ ಮಿತ್ರರೇ<< ನಿಮ್ಮ ಬಗ್ಗೆ ಚೆನ್ನಾಗಿಯೇ ಈ ಮನಸ್ಸು ಅರಿತಿದೆ. ನಿಮ್ಮ ಅಭಿಪ್ರಾಯಗಳನ್ನು ಒಪ್ಪಿಕೊ೦ಡ ಮೇಲೆ ತಪ್ಪು ನನ್ನದು. ಅರಿಯದೇ ನಾವಡ ಉವಾಚದಲ್ಲಿ ಆಸುಮನದ ಚರವಾಣಿಯ ಬಗ್ಗೆ ಉಲ್ಲೇಖಿಸಿದುದ್ದಕ್ಕೆ ಯಾ ಪ್ರಸ್ತಾಪಿಸಿದುದ್ದಕ್ಕಾಗಿ ತಮ್ಮ ಕ್ಷಮೆಯಾಚಿಸುತ್ತೇನೆ. ನಮಸ್ಕಾರಗಳೊ೦ದಿಗೆ, ಅತ್ಮೀಯರೆ೦ದು, ಯಾರನ್ನೂ, ಯಾರ ಹೆಸರನ್ನೂ ಬಳಸಿಕೊಳ್ಳುವುದು ವಿದ್ಯಾವ೦ತರ ಲಕ್ಷಣವಲ್ಲ ಎ೦ದು ನನ್ನ ತ೦ದೆ ಯಾವಾಗಲೂ ಹೇಳುತ್ತಿದ್ದ ಮಾತನ್ನೂ ಈ ನಾವಡ ಉವಾಚ ಬರೆದಾಗ ಒ೦ದೇ ಒ೦ದು ಕ್ಷಣ ಮರೆತಿದ್ದು, ಈ ಎಲ್ಲಾ ಅಭಾಸಗಳಿಗೆ ನಾ೦ದಿಯಾಯಿತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ನಾವಡರೆ, ಜೀವನದ ಹಾದಿಯಲಿ ಧುತ್ತೆ೦ದು ಬರುವ ಅನಿರೀಕ್ಷಿತ ತಿರುವುಗಳು ನಮ್ಮ ದೈನ೦ದಿನ ಚಟುವಟಿಕೆಗಳನ್ನು ಏರುಪೇರು ಮಾಡುತ್ತವೆ. ಆಗ ಆತ್ಮೀಯ, ಅನಾತ್ಮೀಯರೆಲ್ಲರೂ ತಾತ್ಕಾಲಿಕವಾಗಿ ಸ್ಮೃತಿಪಟಲದಿ೦ದ ಮರೆಯಾಗಿರುತ್ತಾರೆ. ಕಣ್ಣೆದುರು ಕುಣಿಯುವ ಸಮಸ್ಯೆಯನ್ನು ಬಗೆಹರಿಸುವುದೇ ಮುಖ್ಯವಾಗಿರುತ್ತದೆ. ಹಾಗಾದಾಗ ಒಮ್ಮೊಮ್ಮೆ, ಹಲ್ಲುನೋವಿನಿ೦ದ ನರಳುವ ಆತ್ಮೀಯರೊಡನೆ ಹೆಚ್ಚು ಸಮಯ ಕಳೆಯಲು ಅಸಾಧ್ಯವಾಗುತ್ತದೆ. ಇದುವೇ ಜೀವನ! ಆದರೂ ಸ೦ಜೆ ೫ ಘ೦ಟೆಗೆ ನಿಮ್ಮ ದೂರವಾಣಿಯಿ೦ದ ಬ೦ದ ಶುಭಸ೦ದೇಶ ಮನಸ್ಸಿಗೆ ಆಹ್ಲಾದವನ್ನು ಕೊಟ್ಟಿದ್ದ೦ತೂ ನಿಜ. ಅದಕ್ಕಾಗಿ ವ೦ದನೆಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಏನ್ ಮಾಡೋದು ನಾವಡರೇ, ಒಬ್ಬೊಬ್ಬರಿಗೆ ಒಂದೊಂದು ಅರ್ಜೆನ್ಸಿ. ಪ್ರತಿಕ್ರಿಯೆ ಬರೆಯದಿದ್ದರೂ ಪ್ರತಿದಿನ ಸಂಪದದ ಓದೋರು ಬಹಳ ಮಂದಿ ಇದ್ದಾರಲ್ವಾ? ಸುರೇಶ್ ಹೆಗ್ಗಡೆಯವರನ್ನು ಕೇಳಿ, ಅದೆಷ್ಟು ಜನ ಸಂಪದಿಗರು ಕಾಣ್ತಾಇಲ್ಲಾ ಅನ್ನೋ ವಿಚಾರ ಗೊತ್ತಾಗುತ್ತೆ!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆಯ್ತು, ಮಾತನಾಡುವ ಪರಿಸ್ಥಿತಿ ಒದಗಿ ಬ೦ದಲ್ಲಿ ( ಹಲ್ಲು ನೋವು ಸರಿಯಾಗಿ) ಖ೦ಡಿತಾ ಅವರನ್ನೇ ಕೇಳುವೆ ಶ್ರೀಧರರೇ, ನಮಸ್ಕಾರಗಳೊ೦ದಿಗೆ,
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಘವೇಂದ್ರರೇ, ನಿಮ್ಮ ಹಲ್ಲಿನ ಮೇಲೆ ಹಲ್ಲೆ ಮಾಡಿದವರಾರು?!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸುಮ್ನೇ ತಮಾಷೆಗೆ ಬರ್ದಿದ್ದು ಮ೦ಜಣ್ಣ, ಸುಮ್ನೆ ಸ೦ಪದಿಗರನ್ನು ನಗಿಸೋಣವೆ೦ದು ಬರೆದದ್ದು ನಾವಡ ಉವಾಚ. ಆದ್ರೆ, ಇದು ಸು೦ಟರಗಾಳಿಯಾಗಿ ಬೀಸುತ್ತೆ ಅ೦ಥ ಗೊತ್ತಿರಲಿಲ್ಲ. ಧರ್ಮಸ್ಥಳದಲ್ಲೆಲ್ಲಾ ದರ್ಶನ, ಪೂಜೆ, ಪ್ರಸಾ ಸೇವನೆ ಸರಿ ಆಯ್ತಾ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ರಾಯರೇ ನಾನು ತುಂಬಾನೇ ಬಿಸಿಯಾಗಿದ್ದೆ ಈಗೀಗ ಮನೆ ಕೆಲಸ ಮನದ ಕೆಲಸ, ಹತ್ತಿರದವರದ್ದು, ಗೊತ್ತಿರೋ ಅವರದ್ದು, ಕಳೆದ ವಾರ ತುಂಬಾನೇ ಜಾಸ್ತಿಯಾಯ್ತು. ಸೀನ ತ್ಯಾಂಪ ಅವರು ರಜೆಯಲ್ಲಿದ್ದರು ಈ ವಾರ ಎಲ್ಲರೂ ಬರ್ತಾರೆ ಬಿಡಿ ನಿಮ್ಮ ಕಾಳಜಿಗೆ ತುಂಬಾ ತುಂಬಾ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸುಮ್ನೇ ತಮಾಷೆಗೆ ಬರ್ದಿದ್ದು ಗೋಪಿನಾಥರೇ, ಆದ್ರೆ, ಅದು ಇಷ್ಟೊ೦ದು ಸೀರಿಯಸ್ ಆಗುತ್ತೆ ಅ೦ಥಾ ಗೊತ್ತಿರಲಿಲ್ಲ. ನಮಸ್ಕಾರಗಳೊ೦ದಿಗೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸ೦ಪದಿಗರಿಗೆ ನೆನಪಿರಬಹುದು. ಹಿ೦ದೊಮ್ಮೆ ಕೆಲವು ಸ೦ಪದಿಗರ ಹೆಸರನ್ನು ಬಳಸಿ, ನಾನು “ಕವನ ಬರೆಯುಬ ಕನಸು“ ಎ೦ಬ ಕವನ ಬರೆದಿದ್ದೆ. ಈ ನಾವಡ ಉವಾಚವನ್ನೂ ಹಾಗೇ ಸುಮ್ಮನೇ ಹಾಸ್ಯಕ್ಕಾಗಿ ಎ೦ದು ಬರೆದೆ. ಕವನದಲ್ಲಿರುವ ಹೆಸರಿನವರು ಮಾತ್ರವೇ ಆತ್ಮೀಯರು, ಬೆರಯವರು ಆತ್ಮೀಯರಲ್ಲ ಎ೦ಬ ತಪ್ಪು ಕಲ್ಪನೆ ಬೇಡ. ನನಗೆ ಸ೦ಪದವೊ೦ದು ಮನೆಯಿದ್ದ ಹಾಗೆ. ಇಲ್ಲಿ ಎಲ್ಲರೂ ನನ್ನ ಆತ್ಮೀಯರೇ. ಯಾರೊಬ್ಬರು ಸ೦ಪದದಲ್ಲಿ ಕಾಣಿಸದಿದ್ದರೂ “ಏಕೆ ಬಹಳ ದಿನಗಳಿ೦ದ ಕಾಣಲಿಲ್ಲ?“ ಎ೦ದು ಎಲ್ಲರಿಗೂ ಕೇಳುತ್ತೇನೆ. ಆಗಾಗ ನನ್ನ ಚರವಾಣಿಯಿ೦ದ ಕರೆ ಮಾಡುತ್ತಲೂ ಇರುತ್ತೇನೆ. (ಚರವಾಣಿಯ ಸ೦ಖ್ಯೆ ಗೊತ್ತಿದ್ದವರೊ೦ದಿಗೆ) ಇನ್ನು ಕೆಲವೊಮ್ಮೆ ಗೂಗಲ್ ಟಾಕ್ ಹಾಗೂ ಫೇಸ್ ಬುಕ್ ನಲ್ಲೂ ಸ೦ಪರ್ಕಿಸುತ್ತಿರುತ್ತೇನೆ.ಮತ್ತೊಮ್ಮೆ ತಮ್ಮಲ್ಲಿ ವಿಜ್ಞಾಪಿಸುತ್ತಿದ್ದೇನೆ- ಇದು ತಮಾಷೆಗೆ೦ದು ಬರೆದ ನಾವಡ ಉವಾಚ. ಇದು ಇಷ್ಟೊ೦ದು ಗ೦ಭೀರತೆಯನ್ನು ಉ೦ಟು ಮಾಡುತ್ತೆ ( ಶ್ರೀಕಾ೦ತರಿಗೆ, ಹೆಗಡೆಯವರಿಗೆ, ಶೆಟ್ಟರಿಗೆ) ಎ೦ಬುದು ಖ೦ಡಿತಾ ಅರಿವಿರಲಿಲ್ಲ. ಮತ್ತೊ೦ದು ವಿಚಾರ ಏನೆ೦ದರೆ, ಎಲ್ಲರ ಹೆಸರನ್ನೂ ಸೇರಿಸಿ. ಅದಕ್ಕೆ ಸರಿಯಾದ ಪದಗಳನ್ನೂ ಜೋಡಿಸುತ್ತಾ ಹೋದರೆ ನಾವಡ ಉವಾಚವು ಮೊಯ್ಲಿಯವರ ರಾಮಾಯಣ ಸ೦ಪುಟದ೦ತಾದೀತೆ೦ಬ ಹೆದರಿಕೆಯೂ ಆಯಿತು. ಎಲ್ಲಾ ಸ೦ಪದಿಗರನ್ನು ನಾನು ನನ್ನ ಸೋದರರೆ೦ದು, ಹಿರಿಯರೆ೦ದು, ಸ೦ಪದಗಿತ್ತಿಯರನ್ನು ಸೋದರಿಯರೆ೦ದೇ ತಿಳಿದವನು ನಾನೂ. ನಾನು ಬೆಳೆದಿದ್ದು ಆ ವಾತಾವರಣವರಣದಲ್ಲಿಯೇ. ಆದ್ದರಿ೦ದ ಈ ನಾವಡ ಉವಾಚದಿ೦ದ ಯಾರ ಮನಸ್ಸಿಗಾದರು ನೋವಾಗಿದ್ದರೆ ದಯವಿಟ್ಟು ಕ್ಷಮಿಸೆರೆ೦ಬ ಭಿನ್ನವಿಕೆಗಳೊ೦ದಿಗೆ, ಇನ್ನೆ೦ದೂ ಇ೦ಥ ಸಾಹಸಕ್ಕೆ ಕೈಹಾಕಲಾರೆ ಎ೦ಬ ಭರವಸೆಯನ್ನೂ ನೀಡುತ್ತಿದ್ದೇನೆ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ, ನಿಮ್ಮ ಹಲ್ಲು ನೋವಿನ ಜೊತೆಗೆ ಸುಮ್ನೆ ಯಾಕೆ ತಮಾಷೆಗೆ ಬರೆದಿದ್ದನ್ನು ಸಿರಿಯಸ್ ಆಗಿ ತಗೊಂಡು ಮನಸಿಗೂ ನೋವು ಮಾಡ್ಕೊತ ಇದ್ದೀರಾ :) .. ನಿಮಗೆ ಏನ್ ಅನ್ನಿಸುತ್ತೆ ಅದನ್ನ ಬರಿತಾ ಇರಿ ಜಾಸ್ತಿ ತಲೆ ಕೆಡಿಸ್ಕೋಬೇಡಿ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Pages