ಜೀವನ ದರ್ಶನ..

5

ಈ ದಿನ ಒಬ್ಬೊಬ್ಬರೇ ನನ್ನ ಮು೦ದೆ ಬೆತ್ತಲಾಗುತ್ತಿದ್ದಾರೆ,

ಹೇಳಿದ್ದೆಲ್ಲವನ್ನೂ ಮರೆತು, ನಾ ಅ೦ದುಕೊ೦ಡಿದ್ದೆಲ್ಲವನ್ನೂ

ಒಮ್ಮೆಲೇ ಸುಳ್ಳಾಗಿಸುವ೦ತೆ!

ಕ೦ಡೂ ಕಾಣದ೦ತೆ ಇರಬೇಕೆ೦ದಿದ್ದರೂ

 ಒಬ್ಬೊಬ್ಬರು ಒ೦ದೊ೦ದು ರೀತಿಯಲ್ಲಿ

ತಮ್ಮದೇ ಸರಿ ಎ೦ಬ೦ತೆ ಸಮರ್ಥಿಸಿಕೊಳ್ಳುವ

ರೀತಿಯೋ ನನ್ನನ್ನೇ ತಬ್ಬಿಬ್ಬುಗೊಳಿಸುತ್ತಿದೆ!

ಒಳ್ಳೆಯದಾಯಿತು! ಇದು ಮು೦ದೆ೦ದಾದರೂ

ಆಗಲೇ ಬೇಕಿತ್ತು, ಅದು ಈ ದಿನವೇ ಆಯಿತು!

ಒಬ್ಬೊಬ್ಬರಿ೦ದ ಒ೦ದೊ೦ದು ರೀತಿಯಲ್ಲಿ

ಜೀವನ ದರ್ಶನವಾಗುತ್ತಿದೆ.

ಜೀವನವೇ ಇಷ್ಟೇನೇ? ಇಲ್ಲ!

ಇನ್ನೂ ಏನೇನಿದೆ ಇಲ್ಲಿ!ನಾನು ಅರಿಯುವ೦ಥದ್ದು?

ಇದೆ. ಕೆಡುಕಿನ ಹಿ೦ದೆಯೇ ಕಾಣುತ್ತಿರುವ ಬೆಳ್ಳಿ ಬೆಳಕು

ನನ್ನದೇ ಎ೦ಬ ಸ೦ಪೂರ್ಣ ವಿಶ್ವಾಸವಿದ್ದರೂ

ಅಕಸ್ಮಾತ್ ಮು೦ದಿನ ಅನುಭವವೂ

ಹಿ೦ದಿನದೇ ಆದರೆ ಎ೦ಬ ಅಳುಕಿಲ್ಲದಿಲ್ಲ.

ಆದರೂ ಹೆಜ್ಜೆ ಹಾಕುತ್ತಿರುವೆ

ಮೊದಲ ಬಾರಿಗೆ ಬಾಲ್ಯದಲ್ಲಿ ಅ೦ಬೆಗಾಲಿಕ್ಕಿದ೦ತೆ,

ಹೊಸದಾಗಿ ನಡೆಯಲು ಕಲಿಯುತ್ತಿರುವ ಹಸುಗೂಸಿನ೦ತೆ,

ಇದಮಿತ್ಠ೦ ಎ೦ದು ಹೇಳಲು ನನ್ನ ಜೀವನವೇನು

ಭಯೋತ್ಪಾದಕರ ಹಿಡಿತದಲ್ಲಿರುವ ಮಾ೦ಸದ ಮುದ್ದೆಯೇನು?  

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಹ್ಞೂ ....ಜೀವನದಲ್ಲಿ ಅನೀರಿಕ್ಷಿತಗಳನ್ನು ನಿರೀಕ್ಷಿಸಿ ನಾವಡರೆ. ಆದರೆ ಎಷ್ಟೇ ಅನಿಶ್ಚಿತತೆಗಳು ಇದ್ದರೂ ಮುಕ್ಕಾಲು ಪಾಲು ಒಳ್ಳೆಯದೇ ಆಗುತ್ತದೆ. ನಿಮಗೂ ಒಳ್ಳೆಯದೇ ಆಗುತ್ತದೆ. ನಮಸ್ಕಾರ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿದೆ ನಾವಡರೆ ನಿಮ್ಮ ಭಯದ ಭಯಾನಕ ಕವಿತೆ, ಬದುಕು ಹೀಗೆಯೇ, ನಮ್ಮ ಮು೦ದೆ ಬಣ್ಣ ಕಳಚಿದವರ ನಿಜ ರೂಪಗಳೇ ನಮಗೆ ಬಾಳಿನ ನಿಜವಾದ ರೂಪವನ್ನು ತೋರಿಸುವುದು. <<ಭಯೋತ್ಪಾದಕರ ಹಿಡಿತದಲ್ಲಿರುವ ಮಾ೦ಸದ ಮುದ್ದೆಯೇನು? >>" ಭಯೋತ್ಪಾದಕರ ಭಯದಲ್ಲಿ ಬೆಚ್ಚುತ್ತಿರುವ ಬಡ ಭಾರತವೇನು"? ಎ೦ದಿದ್ದರೆ ಇನ್ನೂ ಅರ್ಥಪೂರ್ಣವಾಗಿರುತ್ತಿತ್ತು!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬಹಳ ಚೆನ್ನಾಗಿ ಬರೆದಿದ್ದೀರಿ. ನನ್ನ ಇವತ್ತಿನ ದಿವಸದ ಭಾವ / ನೋವು ಹೀಗೆ ಇದೆ :(
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚಲ್ತೀ ಹೈ ದುನಿಯಾ ಚಲ್ತೀ ರಹೆ ನಮ್ಮದೇನಿದೆ ಇಲ್ಲಿ ಎಲ್ಲಾ ಅವಂದೇಯಾ...!!!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಕ್ವವಾದ ಚಿಂತನೆ ರಾಘವೇಂದ್ರರೇ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಜೀವನ ದರ್ಶನದ ಭಾಗ್ಯ ಲಭಿಸುವುದಿಲ್ಲ ಎಲ್ಲರಿಗೂ ಬಲುಬೇಗ ಜೀವನದಲ್ಲಿ ಲಭಿಸಿದವನೇ ಪುಣ್ಯವಂತ ಒದ್ದೆಯಾಗದೇ ಬಾಳುವ ಈ ಜೀವನ ಸಾಗರದಲ್ಲಿ ಕ್ಷಣ ಕ್ಷಣದ ನಮ್ಮ ಅನುಭವಗಳೇ ನಮಗೆ ನಿಜಾವಾದ ದಾರಿದೀಪಗಳು ಇಲ್ಲಿ ಅನುಭವಗಳಿಂದೆಮ್ಮ ದಾರಿಯನೇ ಬೆಳಗಿ ಕೊಳ್ಳಬೇಕಾದವಶ್ಯಕತೆ ಇಹುದಿಲ್ಲಿ ವೈರಾಗ್ಯ ಆದಷ್ಟು ಬೇಗ ಬಂದವಗೆ ದುರ್ಗಮ ಜೀವನದ ಹಾದಿಯೂ ಸುಗಮ ಅರಿಯದ ಹಾದಿಯ ಪಯಣಿಗನಿಗಿಂತ ಅರಿತು ಪಯಣಿಸುವವನಿಲ್ಲಿ ಉತ್ತಮ! - ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತಪ್ಪೊಪ್ಪು: <<ಅನುಭವಗಳಿಂದೆಮ್ಮ ದಾರಿಯನೇ ಬೆಳಗಿ ಕೊಳ್ಳಬೇಕಾದವಶ್ಯಕತೆ ಇಹುದಿಲ್ಲಿ>> ಅನುಭವಗಳಿಂದೆಮ್ಮ ದಾರಿಯನೇ ಬೆಳಗಿಸಿಕೊಳ್ಳಬೇಕಾದ ಅವಶ್ಯಕತೆ ಇಹುದಿಲ್ಲಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬದುಕು ಜಟಕಾ ಬಂಡಿ ವಿಧಿ ಅದರ ಸಾಹೇಬ ಕುದುರೆ ನೀನ್, ಅವ ಪೇಳ್ದಂತೆ ಪಯಣಿಗನು ಮದುವೆಗೋ ಮಸಣಕೋ ಹೋಗೆಂದ ಕಡೆಗೋಡು ಪದಕುಸಿಯೇ ನೆಲವಿಹುದು ಮಂಕುತಿಮ್ಮ ಬದುಕು ನಾವೆಣಿಸಿದ ಹಾಗೆ ನಡೆಯುವ ಹಾಗಿದ್ದರೆ ಬದುಕಿಗೆ ಅರ್ಥವೇ ಇರುವುದಿಲ್ಲ ನಿನ್ನೆ ಮಂಜುನಾಥರಿಗೆ ಕೊಟ್ಟ ಪ್ರತಿಕ್ರಿಯೆಯನ್ನೇ ಪುನಃ ಹಾಕಿದ್ದೇನೆ. ಇದಕ್ಕಿಂತ ಹೆಚ್ಚಿಗೆ ಇನ್ನೇನೂ ಹೇಳಲಾರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿದೆ ನಾವಡವ್ರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸೂಪರ್.. ತುಂಬಾ ಚೆನ್ನಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

“ಜೀವನ ದರ್ಶನ“ವನ್ನು ಮೆಚ್ಚಿ ಪ್ರತಿಕ್ರಿಯಿಸಿದ ತೇಜಸ್ವಿ, ಗೋಪಿನಾಥರು, ಇ೦ಚರ, ಮ೦ಜುನಾಥ್,ಹೆಗಡೆಯವರು, ಹರಿಹರಪುರ ಶ್ರೀಧರರು,ಆಚಾರ್ಯರು, ಚಿಕ್ಕು, ಗೋಪಾಲ ಕುಲಕರ್ಣಿಯವರಿಗೆ ನನ್ನ ಅನ೦ತ ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ಹೇಗೇ ನಿರ೦ತರವಾಗಿರಲೆ೦ಬ ಆಶಯಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈ ಜೀವನವೇ ಹಾಗೆ, ನಾವಡರೇ. ಪದ ಕುಸಿಯೆ ನೆಲವಿಹುದು, ಆದರೆ ನೆಲವೇ ಕುಸಿದರೆ? ಉಸಿರು ನಿಲ್ಲುವವರೆಗೂ ಅನುಭವಗಳು ನಿರಂತರ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.