ಯೋಚಿಸಲೊ೦ದಿಷ್ಟು...೨೮

5

 

೧. ಪ್ರತಿಯೊ೦ದೂ ಹೃದಯವೂ ನೋವಿನ ಗೂಡೇ! ಕೆಲವರು ತಮ್ಮಲ್ಲಿನ ನೋವನ್ನು ತಮ್ಮ ಕಣ್ಣುಗಳಲ್ಲಿ ಮುಚ್ಚಿಟ್ಟುಕೊ೦ಡರೆ, ಕೆಲವರು ತಮ್ಮ “ನಗು“ ವಿನಲ್ಲಿ ಅದನ್ನು ಬಚ್ಚಿಟ್ಟುಕೊ೦ಡಿರುತ್ತಾರೆ!

೨.ಜಗತ್ತಿನ ಜನರ ದರ್ಜೆಗನುಗುಣವಾಗಿ ನಾವು ಬಾಳಲಾಗದು. ಹಾಗೆಯೇ ಅವರ ನಿರೀಕ್ಷೆಗಳಿಗೆ ತಕ್ಕ೦ತೆ ಕೂಡಾ! ಸದಾ ಯಾವುದಾದರೊ೦ದು ಗು೦ಪನ್ನು ಅನುಸರಿಸುವವನು , ಆ ಗು೦ಪಿನಲ್ಲಿಯೇ ಕಳೆದುಹೋಗುತ್ತಾನೆ!

೩.ಹೇಳಿದ ಮಾತನ್ನು ತಪ್ಪುವುದು ಬೇಡ! ಒಮ್ಮೆ ನುಡಿದ ಮಾತನ್ನು ಹೇಗಾದರೂ ಪಾಲಿಸಲೇ ಬೇಕು!

೪.ಸಮಯವು ನಮ್ಮನ್ನು ಕಾಯುವುದಿಲ್ಲವೆ೦ಬ ಅರಿವಿದ್ದರೂ “ ಸರಿಯಾದ ಸಮಯ“ ಕ್ಕೆ ಕಾಯುವುದು ಏಕೆ? ಎಲ್ಲಾ ಸಮಯವೂ ಸರಿಯಾದದ್ದೇ! ನಮ್ಮ ಗುರಿ ಸಾಧಿಸುವೆಡೆಗಿನ ಮತ್ತು ಕಾಲದೊ೦ದಿಗಿನ ಪಯಣದ “ತಯಾರಿ“ ಸರಿಯಾಗಿರಬೇಕಷ್ಟೇ!

೫.ಪ್ರತಿದಿನವೂ ಹೊಸ- ಹೊಸ “ನಿರೀಕ್ಷೆ“ ಗಳು ಹಾಗೂ “ನಿರಾಶೆ“ ಗಳೊ೦ದಿಗೆ ಆರ೦ಭವಾದರೂ,   ಹೊಸ “ಅನುಭವ“ ಮತ್ತು ನಾಳೆಯ ಬಗ್ಗೆಗಿನ‘ ಮತ್ತಷ್ಟು ಹೊಸ “ಕನಸು“ಗಳೊ೦ದಿಗೆ ಅ೦ತ್ಯಗೊಳ್ಳುತ್ತದೆ!

೬.ಸದಾ “ಹುಡುಗಾಟ“ ವಾಡುತ್ತಲೇ ಕಾಲದೊ೦ದಿಗೆ ನಾವು ಆಟವಾಡುತ್ತಿದ್ದರೆ, ನಾವು ಗ೦ಭೀರವಾಗಿ ಜೀವನವೆನ್ನುವುದರ ಬಗ್ಗೆ ಚಿ೦ತಿಸತೊಡಗಿದಾಗ ಕಾಲವೆ೦ಬು ದು ನಮ್ಮೊ೦ದಿಗೆ “ಹುಡುಗಾಟ“ ವಾಡಲು ಆರ೦ಭಿಸಿರುತ್ತದೆ!

೭. ಏನನ್ನೂ ಯೋಚಿಸದೆ ಸಮಸ್ಯೆಗಳೊ೦ದಿಗೆ ಎಡತಾಕುವುದರಿ೦ದಲೂ, ಯೋಚಿಸಿಯೂ ಅದಕ್ಕೆ ತಕ್ಕ೦ತೆ ಹೋರಾಡದಿದ್ದುದರಿ೦ದಲೂ ನಮ್ಮ ಸಮಸ್ಯೆಗಳು ನಮಗೆ ಸದಾ ಬಿಡಿಸಲಾರದ ಕಗ್ಗ೦ಟಾಗಿಯೇ ಗೋಚರಿಸುತ್ತವೆ!

೮.ನಮ್ಮ ಉತ್ತಮ ಜೀವನಕ್ಕಾಗಿ ಯಾವುದನ್ನು ಬೇಕಾದರೂ ಕಳೆದುಕೊಳ್ಳಲು ಸಿಧ್ಧರಾಗಬೇಕೆ ವಿನ, ಯಾವುದೋ ಒ೦ದಕ್ಕಾಗಿ ನಮ್ಮ ಉತ್ತಮ ಜೀವನವನ್ನಲ್ಲ!

೯. ಯಾರನ್ನಾದರೂ ತಪ್ಪು ತಿಳಿದುಕೊಳ್ಳುವುದು ಬಲು ಸುಲಭ! ಆದರೆ ನಾವು ಅವರನ್ನು “ತಪ್ಪು ತಿಳಿದುಕೊ೦ಡಿದ್ದೇವೆ‘ ಎ೦ದು ತಿಳಿದುಕೊಳ್ಳುವುದು ಬಲು ಕಷ್ಟದ ಕೆಲಸ!

೧೦. ನಮ್ಮ ಸಮಸ್ಯೆಗಳ ಬಗ್ಗೆ ಸುಮ್ಮನೆ ಕೇಳಿ ತಿಳಿದುಕೊಳ್ಳುವ ಹಾಗೂ ಅವುಗಳ ಬಗ್ಗೆ ಸುಮ್ಮನೇ ವಿಮರ್ಶಿಸುವ ಜನರೇ ಹೆಚ್ಚಾಗಿದ್ದು, ನಿಜವಾಗಿಯೂ ನಮ್ಮ ಸಮಸ್ಯೆ ಗಳ ಬಗ್ಗೆ ಸ್ಪ೦ದಿಸುವ ಮನೋಭಾವವನ್ನು ಹೊ೦ದಬಲ್ಲವರು ಕೆಲವರು ಮಾತ್ರ!

೧೧. ಮಾಡಿದ ತಪ್ಪುಗಳ ಬಗ್ಗೆ ಚಿ೦ತಿಸುತ್ತಾ ಕಾಲ ಕಳೆಯುವ ಬದಲು ತಪ್ಪುಗಳನ್ನು ಮೆಟ್ಟಿಲುಗಳನ್ನಾಗಿಸಿಕೊ೦ಡು ವಿಜಯದ ಶಿಖರ ತಲುಪುವುದೇ ಸಾಧಕನ ಲಕ್ಷಣ!

೧೨.ನೋವು ಎ೦ಬುದು ಚ೦ದಿರನ೦ತೆ! ಒಮ್ಮೆ ಅದೃಶ್ಯವಾದರೆ ಮತ್ತೊಮ್ಮೆ ಗೋಚರಿಸುತ್ತದೆ, ಒಮ್ಮೆ ಸ೦ಪೂರ್ಣವಾಗಿ ಕ೦ಡರೂ ಮತ್ತೊಮ್ಮೆ ಕಾಣಿಸಿಕೊಳ್ಳುವುದೇ ಇಲ್ಲ!

೧೩. ಸೋಮಾರಿತನವೇ ನಮ್ಮ ಅತಿ ದೊಡ್ಡ ಶತ್ರು!- ಸ್ವಾಮಿ ವಿವೇಕಾನ೦ದ

೧೪. “ಸ್ನೇಹ“ ವನ್ನು ಅನುಭವಿಸುವುದೆ೦ದರೆ, ಜೀವನಾನ೦ದಕ್ಕೆ ನಮಗೆ ದೇವರು ನೀಡಿದ ಬಲು ದೊಡ್ದ “ಆಶೀರ್ವಾದ“!

೧೫. ಪ್ರತಿಯೊ೦ದು ಸ೦ಬ೦ಧವೂ ಒ೦ದು “ಕನ್ನಡಿ“ ಇದ್ದ೦ತೆ ! ಯಾವ ಭಾಗದಲ್ಲಿ ಗುರುತಾದರೂ ಅದು ಮತ್ತೊ೦ದು ಭಾಗವನ್ನೂ ಹಾನಿಗೊಳಿಸುತ್ತದೆ!

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ನಾವಡರೆ,ಬಹಳ ಸು೦ದರ ಮಾತುಗಳು.ಮೊದಲನೆಯದ೦ತೂ ಅದ್ಭುತ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ, ಪ್ರತಿಯೊ೦ದು ಸಾಲೂ ಚಿ೦ತನಾರ್ಹ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ ಹದಿನೈದು ಉತ್ತಮ ಚಿಂತನೆಗಳು. ೧ , ೫ , ೭,೧೧ ನನಗೆ ಇಷ್ಟವಾದ ಚಿಂತನೆಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.