Madhu Appekere ರವರ ಬ್ಲಾಗ್

ತಾಯಿ ಕೌಸಲ್ಯೆಯ......ಸ್ವಗತ

 

  ಪ್ರಿಯ ತನುಜ ರಾಮಾ..

  ಪಿತೃವಾಕ್ಯ ಪರಿಪಾಲಕನಾಗಿ

  ಅಮ್ಮನ ಹೃದಯದ ಮಾತು ಕೇಳದೇ

  ನೀನಂದು ಹೊರಟು ಬಿಟ್ಟೆ...

 

  ನಿನಗಲ್ಲಿ  ವನವಾಸ

  ಸೀತೆಯು ಓಲೈಸುವಳೆ ನಿನಗೆ ನನ್ನಂತೆ..?

  ನನಗದೇ ಇಲ್ಲಿ ಚಿಂತೆ

 

  ಇಲ್ಲಿ ಅರಮನೆ,  ಸೆರೆಮನೆಯಾಗಿಹುದು ನನಗೆ

  ಹೆಜ್ಜೆ ಹೆಜ್ಜೆಗೆ ಇದ್ದರೂ ಆಳುಕಾಳು

 ಪ್ರತಿದಿನವ ಕಳೆಯುತಿಹೆ  ನಿನ್ನ ನೆನಪಿನಲ್ಲೆ

 

  ಉಳಿದ ಸೊಸೆಯಂದಿರು....

  ಇಲ್ಲಿ ಚಡಪಡಿಸುವ ನನ್ನ ಕಂಡು

  ಒಳಗೊಳಗೆ  ನಸುನಗುವರು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ನನ್ನ ತಂದೆಯ ಮಾತು......

 

  ನನ್ನ  ತಂದೆಯ  ಮಾತೆಂದರೆ

 ಕೆಲವೊಮ್ಮೆ.....

 ಕ್ವಿನೈನ್  ಗುಳಿಗೆ.

 ಮತ್ತೆ ಕೆಲವು ಸಲ

 ಮದುವೆ ಮನೆ ಜಿಲೇಬಿ

 ಖುಷಿ ತುಂಬಿದ ಬಟ್ಟಲು

 

  ಎದೆಯೊಳಗೆ  ಕೊಡದಷ್ಟು ಪ್ರೀತಿ

 ಹೊರಗಡೆ ಮುಖ ಮಾತ್ರ ಚಿಕ್ಕ ತಟ್ಟೆ

 ತುಂಬಾ  ಸೀರಿಯಸ್...

 ಅಪ್ಪನಿಗೆ

 ಅದು ಬದುಕು ಕಲಿಸಿಕೊಟ್ಟ ಪಾಠ..

 

  ಆಗಾಗ  ಎಚ್ಚರಿಸುತ್ತಾನೆ..

 

  ಮಗಳೆ, ಬದುಕು ಕೆಲವೊಮ್ಮೆ  ಬಿರುಗಾಳಿ

  ಮತ್ತೊಮ್ಮೆ  ಬೇಸಿಗೆಗೆ  ತಂಪು !

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ಅಪ್ಪಾ .....ಈಗಾದರೂ ದಾರಿ ಬಿಡುವೆಯಾ ?

 ಅಪ್ಪಾ.....

 

  'ಹೋಗದಿರು ಅಲ್ಲಿ ನೋಡದಿರು ಇಲ್ಲಿ"

  ಎಂಬುದೇ......

  ಇದುವರೆಗೆ ನೀನನಗಿತ್ತ ಸ್ವಾತಂತ್ರ್ಯ ಪರಿಧಿ !

 

   'ಬೆಳೆದ ಮಕ್ಕಳ ನೀನು ಗೆಳೆಯನಂತೆ ಕಾಣು"

    ನೀನೇ  ಇನ್ನಾರಿಗೋ ಹೇಳಿದ ಮಾತು

 

   ನಿನ್ನ ಕಂದಾಚಾರದ ಬೇಲಿಯೊಳಗೆ

   ನಾನು ಮಾತ್ರ ಮುಕ್ತತೆಯ ಕಾಣಬೇಕೆಂಬ

   ಅಹಮ್ಮು....ನಿನ್ನದೇ ?

 

   ನೆನಪಿದೆಯೇ ನಿನಗೆ...

   ಈ ವಯದ  ಆಸೆ ಆಕಾಂಕ್ಷೆ, ಕನಸು

   ನೀನೇ ಎಡವುತ್ತ  ದಾಟಿ ಬಂದಿಹೆ ಎಂದು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಅಪ್ಪಾ....ದಾರಿ ಬಿಡು

 

    ಅಪ್ಪಾ..ಈ ಕತ್ತಲಿನೊಳಗೆ

    ನನ್ನನ್ನೇಕೆ  ಬಂಧಿಸಿಟ್ಟೆ ?

 

     ಭವಿಷ್ಯದ ಬೆಳಕೆಡೆಗೆ

     ಹೆಜ್ಜೆಯಿಡುವ ಕನಸು

     ಹೊಸಕಿ ಹಾಕಿ ನನ್ನ

     ಮುಗ್ಧತೆಗೆ ಕಾವಲಿನ ಬೇಲಿ

 

     ಹಿಂದಿನ  ಎಂಜಲು ಉಳಿಸಿ

     ಅಮೃತವೆಂದು ಕೈಯಲ್ಲಿ ಹಿಡಿಸಿ

     ನಿನಗಿಷ್ಟವೋ ಕಷ್ಟವೋ  ಎಂದು

     ಎಂದೂ  ಕೇಳದ  ಕಿವುಡನಾದೆಯೇಕೆ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

ಮಳೆ ಬಂದರೆ........!

   ಮಳೆ ಬಂದರೆ....!

 

    ಧರಣಿಯ ಹಸಿರು ನಗೆ

   ಒಣಗಿದ್ದ ಗಿಡಮರಗಳಿಗೆ

   ಸಾಂತ್ವನದ ತಂಪಿನೂಟ

 

   ಪುಟ್ಟ ಮಕ್ಕಳ ಬಣ್ಣದ ಛತ್ರಿ

   ಅರಳಿ....ಕೆಂಪು ನೀರಿನ ಮೇಲೆ

   ಕಾಗದದ ದೋಣಿಯ ತೇಲಾಟ !

 

   ಬೀಜ ಬಿತ್ತಿ ಬಂಗಾರ ಬೆಳೆಯ

   ನಿರೀಕ್ಷೆಯ ಹೊತ್ತ  ರೈತನ

   ಮೊಗದಲ್ಲೊಂದಿಷ್ಟು  ಸಂತಸದ ತೊನೆದಾಟ !

 

    ಮಳೆ  ಬಂದರೆ...........!!!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

Pages

Subscribe to RSS - Madhu Appekere ರವರ ಬ್ಲಾಗ್