ಮರ ಹೇಳಿದ್ದು.....

0

   ಗೆಳೆಯರೇ.....!
 ಮಾನವೀಯತೆ ಮರೆತು
 
  ಹೊತ್ತೊಡಲ ಬಂಜೆಯಾಗಿಸುವ
   ಛಲವೇಕೆ ?

    ಶುದ್ಧುಸಿರು,ಹಸಿರು ಬೆಳೆ
    ನೀಡುವ ನನ್ನೊಡಲಿಗೆ
   ಕೊಡಲಿಯೇಟು  ಹಾಕುವ
   ಕಟುಕರಾದಿರೇಕೆ ?
    ಸಾಯದಿರಿ...ಸಾಯಿಸದಿರಿ !
   
    ತಾಯ್ ತಲೆಯ ಬೋಳಾಗಿಸಿ
    ವಿಧವೆಯ ಪಟ್ಟ ಕಟ್ಟುವ ಹಂಬಲ ಬಿಟ್ಟು
     ನಿಮ್ಮ ಹೊಲದ ಬದಿಯಲ್ಲಾದರೂ
     ಬೆಳೆಯುವ ಅವಕಾಶ ಕೊಡಿ ದಯವಿಟ್ಟು...
 
       (  ಸಂಪದದಲ್ಲಿ  ಮಹಿಳಾ ಸಾಹಿತಿ ಹಾಗೂ ಕವಿಗಳಿಗೆ ದೊರೆಯುತ್ತಿರುವ ಪ್ರೋತ್ಸಾಹಕ್ಕೆ  ಧನ್ಯವಾದ ಅರ್ಪಿಸುವೆ)

ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಮಧು ಅವರೆ ನಿಮ್ಮ ಕವನಗಳೆಲ್ಲವನ್ನೂ ಓದಿದೆ ಚೆನ್ನಾಗಿ ಬರೆಯುತ್ತಿರುವಿರಿ ಆದರೆ ಯಾಕೋ ಈ ಕವಿತೆ ಅಪೂರ್ಣ ಎನ್ನಿಸಿತು ಬರೆಯುತ್ತಿರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.

ಶ್ರೀ ಗೋಪಿನಾಥ ಸರ್ . ಸಂಪದದಲ್ಲಿ ನಿಮ್ಮ ಕವನಗಳನ್ನು ಓದುತ್ತೇನೆ.ಕಲಿಯ ಬೇಕು ಬರೆಯಬೇಕು ಎಂಬ ಹಂಬಲ. ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಧು, ನೀವು ಹೊರಗೆಡಹುತ್ತಿರುವ ಭಾವನೆಗಳಿಗೆ ನನ್ನ ನಮನ ಆದರೆ ನಡುವೆ ಅಡ್ಡಾಡಿಸುವಂತೆ ಇದೆ ನಿಮ್ಮ ಈ ಕವನ ಏಕ ವ್ಯಕ್ತಿಯನ್ನು ("ಗೆಳೆಯಾ") ಉದ್ದೇಶಿಸಿ ಆರಂಭವಾದ ಕವಿತೆ, ಮುಂದಕ್ಕೆ ಅನೇಕರನ್ನು ಉದ್ದೇಶಿಸುತ್ತಿದೆ ("ಕೊಡಲಿಯೇಟು ಹಾಕುವ ಕಟುಕರಾದಿರೇಕೆ?"). ಬರಹದಲ್ಲಿ ಏಕಸಾಮ್ಯತೆ ಇರಬೇಕಾದುದು ಅಗತ್ಯ ಎಂದು ನನ್ನ ಅನಿಸಿಕೆ. ಮತ್ತೊಂದು ಮಾತು: "ನಿಮ್ಮ ಹೊಲದ" ಈ ಎರಡು ಪದಗಳು ಒಟ್ಟು ಸೇರಿ "ನಿಮ್ಮೊಲದ" ಆಗುತ್ತವೆಯೇ, ಅನ್ನುವುದರ ಬಗ್ಗೆ ನನಗೆ ಅನುಮಾನ ಇದೆ. <<ಸಂಪದದಲ್ಲಿ ಮಹಿಳಾ ಸಾಹಿತಿ ಹಾಗೂ ಕವಿಗಳಿಗೆ ದೊರೆಯುತ್ತಿರುವ ಪ್ರೋತ್ಸಾಹಕ್ಕೆ ಧನ್ಯವಾದ ಅರ್ಪಿಸುವೆ>> ಸಂಪದದಂಗಳದಲ್ಲಿ ಪ್ರಕಟವಾಗುವ ಲೇಖನ, ಬರಹ, ಕವನ, ಕವಿತೆಗಳಿಗೆ ಸಮಾನ ರೀತಿಯ ಪ್ರೋತ್ಸಾಹ ಇದೆ. ಅವುಗಳನ್ನು ಬರೆದವರು ಪುರುಷರೋ ಮತ್ತು ಮಹಿಳೆಯರೋ ಎಂಬ ಮಾತೇ ಇಲ್ಲ. ಯಾವುದೇ ಭೇದ ಭಾವ ಇಲ್ಲದೇ ಇದ್ದರೇ ಚೆನ್ನ. ಎಲ್ಲರೂ ಸಂಪದಿಗರು, ಅಷ್ಟೇ. - ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೆಗ್ಡೆಯವ್ರೇ ಸಖತ್ತಾಗಿ ಬರಿತೀರಾ ಅದು ನಿಮ್ಮ ಲೇಖನ ಇರಬಹುದು ಅಥವಾ ಪ್ರತಿಕ್ರಿಯೆ.......
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆಸು ಹೆಗ್ಡೆಯವರಿಗೆ ನಮಸ್ಕಾರ. ನಿಮ್ಮ ಸಲಹೆಗಳನ್ನು ಗೌರವ ಪೂರ್ವಕವಾಗಿ ಸ್ವೀಕರಿಸುವೆನು. ಮುಂದಿನ ಕವನಗಳಲ್ಲಿ ಹೀಗಾಗದಿರಲು ಪ್ರಯತ್ನಿಸುವೆನು. ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಧು, ಸಾಧ್ಯ ಆದಷ್ಟೂ ನುಡಿಗಳಂತೆಯೇ ನಡೆಯಿರಲಿ ಕಷ್ಟವಾದರೆ ನುಡಿಗಳು ಆದಷ್ಟು ಕಡಿಮೆಯಿರಲಿ! :) ಶುಭವಾಗಲಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

+1
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿದೆ ವಿಕ್ರಮ್. ನಮಸ್ಕಾರಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಚೆನ್ನಾಗಿದೆ ವಿಕ್ರಮ್.>> ಇದ್ಯಾರು?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.