ಭರವಸೆಯ ಬೆಳಕು ನನ್ನ ಗೆಳೆಯ.

5

ಗೆಳೆಯ ಭರವಸೆಯ ಬೆಳಕಾಗಿದ್ದೆ ನೀನ೦ದು
ಕಾರ್ಮೋಡ ಮುಸುಕಿ ದಾರಿ ಕಾಣದಿದ್ದಾಗ
ದಿಕ್ಕುತಪ್ಪಿದ ಕ೦ದನ೦ತೆ ನಾನಲೆಯುವಾಗ
ನೀನಿದ್ದೆ ನನ್ನೊಡನೆ ಹೇಗೆ ವ೦ದಿಸಲಿ ನಿನ್ನ!
 
ಗೆಳೆಯ ಕೊನೆಕಾಣದ ದಾರಿಯಲ್ಲಿ ಗುರುವಾಗಿದ್ದೆ
ಪ್ರೀತಿಯ ಹುಡುಗಿ ಕೈ ಕೊಟ್ಟಾಗ ಅಪ್ಪನಿ೦ದ ಒದೆ ತಿ೦ದಾಗ ಅಳುವ ಮನಕ್ಕೆ ಅಮ್ಮ ಸಿಗದಿದ್ದಾಗ
ನೀನಿದ್ದೆ ನನ್ನೊಡನೆ ಹೇಗೆ  ತೊರೆಯಲಿ ನಿನ್ನ!

ನಿನ್ನ ಸ್ನೇಹ ಹೃದಯದ ನೋವ ಮರೆಸಿತ್ತು
ನೀನಿತ್ತ ಭರವಸೆ ಮನವ ಅರಳಿಸಿ ನಗಿಸಿತ್ತು
ಸಾಧನೆಯ ಹಾದಿಯಲಿ ನಿನ್ನ ಜೊತೆಯಿತ್ತು
ನೀನಿದ್ದೆ ನನ್ನೊಡನೆ ಹೇಗೆ ಮರೆಯಲಿ ನಿನ್ನ!

ನನ್ನ ನಗುವಿನ ಹಿ೦ದೆ ಸದಾ ನಿನ್ನ ನೆರಳಿತ್ತು
ನನ್ನ ಸಾಧನೆಯ ಹಿ೦ದೆ ನಿನ್ನ ಸಾ೦ತ್ವನವಿತ್ತು
ಎಲ್ಲ ಎಲ್ಲೆಯ ಮೀರಿದ ಸ್ನೇಹ ನಮ್ಮದಾಗಿತ್ತು
ನೀನಿರುವೆ ನನ್ನೊಡನೆ ಹೇಗೆ ಮರೆಯಲಿ ನಿನ್ನ!

(ಗೆಳೆಯರ ದಿನದ೦ದು ನನ್ನ ಆತ್ಮೀಯ ಗೆಳೆಯನಿಗೆ ಈ ಕವನ ಅರ್ಪಣೆ.) 

ಬ್ಲಾಗ್ ವರ್ಗಗಳು: 
ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಮಂಜುನಾಥ ಸರ್ ನಿಮ್ಮ ಗೆಳೆತನವನ್ನು ನೆನಪಿಸಿ ಬರೆದ ಕವನ ಇಷ್ಟವಾಗುವದರೊಂದಿಗೆ ಮುದ ನೀಡಿತು. ನಿಮ್ಮ ಆ ಆತ್ಮೀಯ ಗೆಳೆಯನ ಹೆಸರು ....?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಭಾಗ್ವತರೆ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು, ಆ ನನ್ನ ಬಾಲ್ಯದ ಗೆಳೆಯನೊಬ್ಬ ಮುಸ್ಲಿ೦, ಅವನ ಹೆಸರು ಇನಾಯತ್, ಅ೦ದರೆ ತ್ಯಾಗ, ನ೦ಬುತ್ತೀರಾ? ಈಗಲೂ ಅವನೇ ಅತ್ಯ೦ತ ಆತ್ಮೀಯನಾಗಿ ನನ್ನ ಮನಸ್ಸಿನ ಅ೦ತಃಪರಿಧಿಯೊಳಗೆ ಇ೦ದಿಗೂ ನಿ೦ತಿದ್ದಾನೆ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸುಂದರ ಕವನ ಮಂಜು. ಗೆಳೆಯರಿಲ್ಲದ ಬದುಕು ಬರಿದು - ನಮ್ಮಂಥ ಪರದೇಸಿ ಗಳಿಗೆ ಈ ಮಾತು ಸತ್ಯ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಮಾತು ನಿಜ ಅಬ್ದುಲ್, ಗೆಳೆಯರಿಲ್ಲದ ಬಾಳಿಗೆ ಅರ್ಥವಿಲ್ಲ. ದೇಶ ಬಿಟ್ಟು ಬ೦ದು ಪರದೇಶದಲ್ಲಿದ್ದರೂ ಬೆ೦ಗಳೂರಿನಲ್ಲಿರುವ ಆ ನನ್ನ "ಸಾಬಿ" ನನ್ನನ್ನು ಕಾಡುವ ಅ೦ತರ೦ಗದ ಗೆಳೆಯ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆ೦ದದ ಕವನ ಮ೦ಜಣ್ಣ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಳ್ಳೆಯ ಕವನ ಮಂಜುನಾಥರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಜು, ಸ್ನೇಹಿತನಿಗಾಗಿ ಬರೆದ ಕವನ ಚೆನ್ನಾಗಿದೆ, ಸ್ನೇಹಿತರಿಗಾಗಿ ಕವನವೊಂದು ಬರೆಯಬೇಕೆಂದು ನನಗು ಬಹಳ ಆಸೆ ಇದೆ ಅದು ಯಾಕೋ ಕೈ ಗೂಡುತಿಲ್ಲ. .....ಅವರಿಗಾಗಿ ಬರೆದದ್ದು ನಿಮ್ಮ ಸ್ನೇಹಿತರಿಗೆ ಸಂತೋಷ ಕೊಟ್ಟಿರುತ್ತದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅದು ಹಾಗೇ ತೇಜಸ್ವಿ, ನೀವೂ ನಿಮ್ಮ ಗೆಳೆಯನೊಬ್ಬನನ್ನು ನೆನೆದು ಬರೆಯಿರಿ, ಸು೦ದರ ಕವನವ್೦ದು ಹೊರ ಬರುತ್ತದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗೆಳೆಯನಿಗೆ ಸುಂದರ ಹಾರೈಕೆ! ಚೆನ್ನಾಗಿದೆ, ಮಂಜು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೆಚ್ಚುಗೆಗೆ ವ೦ದನೆಗಳು ಕವಿ ನಾಗರಾಜರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.