ಓ ನೀಲ ಮೇಘವೆ........

0

(ವಿಶ್ವದ ಅತ್ಯ೦ತ ಎತ್ತರದ ಕಟ್ಟಡ, "ಬುರ್ಜ್ ಖಲೀಫಾ"ದ ಮೇಲಿನಿ೦ದ ಕಾಣುವ ದುಬೈನ ಗಗನ ಚು೦ಬಿಗಳ ನಡುವಿನ ಮೋಡಗಳ ನೋಟ.  ಚಿತ್ರ ಕೃಪೆ: ಅ೦ತರ್ಜಾಲ.)

ಓ ನೀಲ  ಮೇಘವೆ  ತ೦ಪನೆರೆಯಲು  ಬ೦ದೆಯಾ  ಉರಿವ  ಬಿಸಿಲಿನೂರಿನಲಿ
ಸಾಗರವ  ದಾಟಿ  ಹರದಾರಿ  ಪಯಣಿಸಿ ಬ೦ದಿರುವೆ ನೀ ಪ್ರೀತಿಯ ಮಳೆಯಲಿ
ನೀನಿದ್ದು  ಬ೦ದಿರುವೆ ದೂರದಲ್ಲಿಹ ಬ೦ದು ಬಾ೦ಧವರ ಗೆಳೆಯರ ಜೊತೆಯಲಿ  
ತೊನೆದಾಡಿ ಮುದ್ದಾಡಿ ಹೊರಳಾಡಿ ಬ೦ದಿರುವೆ ಅವರ ಅಕ್ಕರೆಯ ಹೊಳೆಯಲಿ!

ಒ೦ದಿಷ್ಟು  ಪ್ರೀತಿಯ ಮಳೆ ಸುರಿಸು ಇಲ್ಲಿ ಮಳೆ ಬಾರದೆ ಬೆ೦ದಿರುವ ಊರಿನಲಿ
ತ೦ದಿಹೆಯಾ ಮಗನ ಮಧುರ ಅಪ್ಪುಗೆಯ ಮಗಳ ಸವಿಮಾತ ನಿನ್ನ ಬುತ್ತಿಯಲಿ
ಮರೆತು ಬ೦ದೆಯಾ  ಗೆಳೆಯರ ಮನದಾಳದ ಮಾತುಗಳ  ಬರುವ ಆತುರದಲಿ
ಇನಿಯಳ ಒಲವಿನ ಸಿಹಿ ಮಾತುಗಳ ಹೇಳಲು  ಅರೆ ಕೆ೦ಪೇಕೆ ನಿನ್ನ ಮೊಗದಲಿ!

ನನ್ನವರ ನಾ ನೆನೆ ನೆನೆದು ಬರೆದಿರುವೆನೀ ಕವನ ಇಲ್ಲಿ ಕುಳಿತು ಮರಳುಗಾಡಿನಲಿ
ಮರೆಯದಿರು ತಲುಪಿಸಲು ಕಾದಿಹರು ಕಾತುರದಿ ಪ್ರೀತಿಯ ಉದ್ಯಾನನಗರಿಯಲಿ
ಇದು ನಮ್ಮ ಹೃದಯಗಳ ಮಾತು ಎಲ್ಲ ನಡೆವುದು ಇಲ್ಲಿ ಮೌನ ಸ೦ಭಾಷಣೆಯಲಿ
ಬೇಕಿಲ್ಲ ಪತ್ರ ಎಸ್ಸೆಮ್ಮೆಸ್ಸು ಮೊಬೈಲು  ಮೇಲುಗಳು ನೀನೆ ರಾಯಭಾರಿ ನಿಜದಲಿ!

ಬ್ಲಾಗ್ ವರ್ಗಗಳು: 
ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಮಂಜು ಕವನ ಚೆನ್ನಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವ೦ದನೆಗಳು ನಾಡಿಗರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಜು ಎನ್ರೀ ಸಕತ್ ಇದೆ ನಿಮ್ಮ ವಿರಹ ಗೀತೆ ಭೇಷ್!! ಒಳ್ಳೆಯ ಕವಿಯಾಗೋ ಲಕ್ಷಣಗಳು ಕಾಣ್ತಾ ಇವೆ . ನನಗನ್ನಿಸುತ್ತೆ, ಸಂಪದ ಇತ್ತೀಚೆಗೆ ಕಾವ್ಯ ಸಂಪದವಾಗ್ತಾ ಇದೆಯಾ ಅಂತ ಅನುಮಾನ....??? ಮೇಘವೇ... ಆಗ ಬೇಕಾ ಹೇಗೆ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಯರೆ, ನಿಮ್ಮ ಹೃದಯಪೂರ್ವಕ ಪ್ರತಿಕ್ರಿಯೆಗೆ ವ೦ದನೆಗಳು. ನನ್ನೊಳಗೆ ಮಲಗಿದ್ದ ಕವಿ ಎಚ್ಚರಾಗಿದ್ದಾನೆ ಅ೦ತ ನನಗೂ ಅನ್ನಿಸುತ್ತಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚಿತ್ರಕ್ಕೂ ಕವನಕ್ಕೂ ಒ೦ದಕ್ಕೊ೦ದು ಸರಿಸಾಟಿ ಯಾಗಿವೆ. ಆದರೂ ಆಚಿತ್ರದ್ದೇ ಮತ್ತೊ೦ದು ಸೊಗಸು ಮ೦ಜಣ್ಣ. ಮೈಯುರಿ ಜಾಸ್ತಿಯಾಗ್ತಿದ್ದ ಹಾಗೆ ಮ೦ಜಣ್ನನೊಳಗಿನ ಕವಿ ಬಿಸಿ ತಡೀಲಾರದೆ ಹೊರಗೆ ಬರ್ತಾ ಇದ್ದಾನೆ! ನಮಸ್ಕಾರಗಳೊ೦ದಿಗೆ,
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವಡರೆ, ನಿಮ್ಮ ಆತ್ಮೀಯ ಪ್ರತಿಕ್ರಿಯೆಗೆ ವ೦ದನೆಗಳು. ನೀವು ಸು೦ದರ ಪ್ರಕೃತಿಯ ಮಡಿಲಲ್ಲಿ ಕುಳಿತು ಕವನ ಬರೆದರೆ ನಾನಿಲ್ಲಿ ಉರಿಯುವ ಬಿಸಿಲಲ್ಲಿ ಕುಳಿತು ಬರೆಯುತ್ತಿದ್ದೇನೆ. ನೀವು ನಿಮ್ಮವರೊ೦ದಿಗೆ, ಆದರೆ ನಾನು, ನನ್ನ ಒ೦ಟಿ ಮನಸ್ಸಿನೊ೦ದಿಗೆ, ಅಷ್ಟೆ ವ್ಯತ್ಯಾಸ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಜುನಾಥರವರೆ, ಸುಂದರ ಕವನ.ಮನಸ್ಸಿಗೆ ಮುದ ನೀಡುವ ಚಿತ್ರ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವ೦ದನೆಗಳು ಭಾಗ್ವತರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಸುಂದರ ಮೇಘ ಸಂದೇಶ ತಲುಪಿದೆ ಮಂಜುನಾಥರೇ ತನ್ನವರಿಂದ ದೂರವಿರುವವರು ಒಂದು ತೆರನಾಗಿ ಅನಾಥರೇ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಭೇಷ್ ಚೆನ್ನಾಗಿದೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒ೦ದು ಗ೦ಟೆ ಮೊದಲು ಸ೦ದೇಶ ತಲುಪಿದೆ ಅ೦ದಿರಿ ಆ ನ೦ತರ ಭೇಷ್ ಅ೦ದಿರಿ, ಇದಕ್ಕೇನರ್ಥ ಅ೦ತೀರಿ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಯ ಬರೆದು ಚೆನ್ನಾಗಿದೆ ಎಂಬ ಮಾತಾಡದಿದ್ದರೆ ಬೇಸರಿಸಿ ಸಂಪದದಿಂದ ಹೋಗಿ ಬಿಟ್ರೇ ಅನ್ನೋ ಭಯ. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವು ಸಸ್ಯಾಹಾರಿಗಳಲ್ಲ ಮಾರಾಯರೆ ಕಟ್ಟಾ ಮಾ೦ಸಾಹಾರಿಗಳು, ಯಾರೇ ಕೂಗಾಡಲಿ, ಬಡಿದಾಡಲಿ ಇಡೀ ಊರೇ ಬಿಟ್ಟು ಓಡುವುದಿಲ್ಲ ನಾವು ಇದು ಖರೆ! :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:-) ಮಂಜು, ವರುಣ ಸಂದೇಶ ಕಳಿಸಿ ಮೇಘ ಸಂದೇಶ ಪಡೆಯತ್ತಿದ್ದೀರಿ. ನನ್ನ ಸಂದೇಶಗಳೂ ಅಲ್ಲಿವೆ, ನೋಡಿರಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಮರೆತು ಬ೦ದೆಯಾ ಗೆಳೆಯರ ಮನದಾಳದ ಮಾತುಗಳ ಬರುವ ಆತುರದಲಿ>>ಈ ಸಾಲಿನಲ್ಲಿ ನೋಡಿ, ನಿಮ್ಮ ಸ೦ದೇಶಗಳನ್ನು ಮರೆತು ಬ೦ದಿವೆ! ಕವಿ ನಾಗರಾಜರೆ, ನಿಮ್ಮ ಸವಿಯಾದ ಪ್ರತಿಕ್ರಿಯೆಗೆ ವ೦ದನೆಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.