ನಾವು ಯಾರು ಜಗದಲ್ಲಿ ಆಗುವುದನ್ನು ತಡೆಯಲು?

0

ನಾವು ಯಾರು ಜಗದಲ್ಲಿ ಆಗುವುದನ್ನು ತಡೆಯಲು?
ಅದೇ ನನಗೆ ಅರ್ಥವಾಗುವುದಿಲ್ಲ ಒಮ್ಮೊಮ್ಮೆ!

ಏನಾಗಬೇಕೋ ಅದು ಖ೦ಡಿತ ಆಗಿಯೇ  ಆಗುತ್ತದೆ
ಯಾರು ಏನೇ ಮಾಡಿದರೂ ಆಗುವುದನು ತಡೆಯಲಾಗದು!

ಆದರೂ ಭವ್ಯ ಪ್ರಕೃತಿಯ ಮು೦ದಿನ ಕುಬ್ಜ ಮಾನವ
ಏನೆಲ್ಲ ಮಾಡುವ ನಾ ಹಾಗೆ ಹೀಗೆ ಧಾ೦ ಧೋ೦ ಎ೦ದು!

ಆದರೆ ಯಾವುದನೂ ತಡೆಯಲಾಗದು ಶಕ್ತಿಹೀನನವನು
ಅರ್ಥವಾಗುವುದೇ ಇಲ್ಲ ದುರ೦ತ ಕಣ್ಣೆದುರು ಬರುವವರೆಗೂ!

ಎಷ್ಟು ಪರಿತಪಿಸಿದರೇನು ದುರ೦ತಕೆ ಬಲಿಯಾದ ಜೀವ
ಮತ್ತೆ ಬರುವುದೇ?  ಅರ್ಥವಿರುವುದೇ ಈ ಹಪಹಪಿತನಕೆ?

ನಾವು ಯಾರು ಜಗದಲ್ಲಿ ಆಗುವುದನ್ನು ತಡೆಯಲು?
ಅದೇ ನನಗೆ ಅರ್ಥವಾಗುವುದಿಲ್ಲ ಒಮ್ಮೊಮ್ಮೆ!

ಬ್ಲಾಗ್ ವರ್ಗಗಳು: 
ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಉತ್ತಮ ಕವನ ಸರ್ ನಿಜವಾಗಿಯೂ ಕೆಲವೊಂದು ವಿಷಯಗಳಲ್ಲಿ ನಾವು ಹುಲ್ಲು ಕಡ್ಡಿಗಿಂತಲೂ ಕಡೆಯೇ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನೀವು..........? ನಮ್ಮ ನಾವಡರು ತಾನೇ?? :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮ೦ಜಣ್ಣ, ನಿಮ್ಮ ಕವನವನ್ನು ಓದಿದ ನ೦ತರ, ನನ್ನ ಮನಸ್ಸಿಗೆ ಮೂಡಿದ ಪ್ರತಿಕ್ರಿಯೆ ಅದು. ಹೌದು ನಾವು ಯಾರು? ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸುಮ್ಮನೆ ತಮಾಷೆ ಮಾಡಿದೆ ನಾವಡರೆ, ಬೇಸರ ಬ್ಯಾಡ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸೂಪರ್ ಕವನ ಮಂಜು ಅವರೇ ನಿಜ ನಾವ್ಯಾರು ಆಗುವುದನ್ನು ತಡೆಯಲು? ಆದರೂ ನೀವು ಹೇಳಿದ ಹಾಗೆ ಒಮ್ಮೊಮ್ಮೇ ನಾವೇ ಅದರ ಕಾರಣೀ ಭೂತ ರೂ ಆಗುತ್ತೇವಲ್ಲ ಅದು ಇನ್ನೂ ಹೆಚ್ಚು ಬೇಸರ ತರಿಸುತ್ತದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ರಾಯರೆ, ಎಲ್ಲದಕ್ಕೂ ನಾವೇ ಕಾರಣೀಭೂತರು, ಕೊನೆಗೆ ಕಾಣದ ದೇವರನ್ನು ದೂರುವೆವು! ಅದೇ ಜೀವನದ ವಿರೋಧಾಭಾಸ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶಾಯಿರಿ ಮಾದರಿಯ, ಅರ್ಥಪೂರ್ಣ, ವಿಚಾರಪ್ರಚೋದಕ ಕವನ. ಮೆಚ್ಚುಗೆಯಾಯಿತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೆಚ್ಚುಗೆಗೆ ವ೦ದನೆಗಳು ಶಾಸ್ತ್ರಿಗಳೆ, ಹೀಗೇ ಮನದಲ್ಲಿ ಮೂಡಿ ಬ೦ದ ಭಾವ ಕವನವಾಯಿತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವನ ತುಂಬಾ ಅರ್ಥ ಪೂರ್ಣವಾಗಿದೆ ಮಂಜು ಸರ್. ತುಂಬಾ ಇಷ್ಟವಾಯಿತು ಧನ್ಯವಾದಗಳು. ವಸಂತ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<ನಾವು ಯಾರು ಜಗದಲ್ಲಿ ಆಗುವುದನ್ನು ತಡೆಯಲು?> <ಎಷ್ಟು ಪರಿತಪಿಸಿದರೇನು ದುರ೦ತಕೆ ಬಲಿಯಾದ ಜೀವ ಮತ್ತೆ ಬರುವುದೇ?> ಎಲ್ಲರೂ ಹೀಗೇ ಹೇಳಿದರೆ ಹೇಗೆ? ನಾವು ತಡೆಯದಿದ್ದರೆ ಇನ್ಯಾರು ತಡೆಯಬೇಕು...?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಆದರೆ ಯಾವುದನೂ ತಡೆಯಲಾಗದು ಶಕ್ತಿಹೀನನವನು ಅರ್ಥವಾಗುವುದೇ ಇಲ್ಲ ದುರ೦ತ ಕಣ್ಣೆದುರು ಬರುವವರೆಗೂ>> ಮಂಜಣ್ಣ ಅದ್ಭುತವಾದ ಸಾಲುಗಳು..
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೆಚ್ಚುಗೆಗೆ ವ೦ದನೆಗಳು ಜಯ೦ತ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<ಆದರೆ ಯಾವುದನೂ ತಡೆಯಲಾಗದು ಶಕ್ತಿಹೀನನವನು ಅರ್ಥವಾಗುವುದೇ ಇಲ್ಲ ದುರ೦ತ ಕಣ್ಣೆದುರು ಬರುವವರೆಗೂ>>,,,,,ಇದ್ನೂ ಒಸಿ ಓದಿ ಸಿವಾ!......:-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗುರುವೇ, ಅದ್ನೂ ಓದಿರುವೆ. ಆದರೆ ನಾವು ಬಹುತೇಕರು, ಇದನ್ನೆಲ್ಲ ತಡೆಯಲು ನಾವು ಯಾರು ಎನ್ನುತ್ತಾ ಸಂತೈಸಿಕೊಂಡು ಸುಮ್ಮನಾಗುತ್ತೇವೆ. ನಮ್ಮಲ್ಲೂ ಶಕ್ತಿ ಇದೆ ಎಂಬುದು ನಮಗೆ ಗೊತ್ತೇ ಇರುವುದಿಲ್ಲ!:-) :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅದ್ಕೇ ಅಲ್ವೇ ಮತ್ತೆ, ನಮ್ ದೇಸ ಇ೦ಗಿರೋದು!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆಗುವುದು ಆಗಿಯೇ ತೀರುತ್ತದೆ. ಆದರೆ ಕೊನೆವರೆಗೂ ಹೋರಾಡಿದರೆ ಯಾರಿಗ್ಗೊತ್ತು ಆಗುವುದನ್ನು ತಪ್ಪಿಸಿದರೂ ತಪ್ಪಿಸಬಹುದೇನೋ! ಮಾರ್ಕಾಂಡೇಯ ಇಲ್ಲವೇ, ಸಾವಿತ್ರಿ ಇಲ್ಲವೇ!!! You can always change the destiny until destiny is revealed to you!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಮಾರ್ಕಾಂಡೇಯ ಇಲ್ಲವೇ, ಸಾವಿತ್ರಿ ಇಲ್ಲವೇ!!!>>ಸಾವು ಗೆದ್ದವರ ಲೆಕ್ಕದಲ್ಲಿ ಸಿಕ್ಕುವುದು ಅವರಿಬ್ಬರೇ ಸ೦ತೋಷ್, ಅವರು ಸಾಧಿಸಿದ್ದನ್ನು ಮತ್ತೆ ಸಾಧಿಸಿದವರು ಬೇರೆ ಯಾರೂ ಇಲ್ಲ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಜು, ಚೆನ್ನಾದ ವಾಸ್ತವದ ಕವನ. ಎಷ್ಟೋ ವಿಷಯಗಳು ನಮ್ಮ ಕೈಯಲ್ಲಿ ಇರುವುದಿಲ್ಲ. ಆಗೋದು ಆಗ್ತಾ ಇರುತ್ತೆ. ಆಗೋದೆಲ್ಲ ಒಳ್ಳೆಯದಕ್ಕೆ ಅಂತ ನಂಬಿ ಮುಂದುವರಿಯ ಬೇಕು ಅಷ್ಟೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ತೇಜಸ್ವಿ, ನನ್ನ ಕವನದ ಆಶಯವೂ ಅದೇ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.