ಕುಲುಕುತ್ತಾ ಮುಲುಕುತ್ತಾ.........!

0

ಕುಲುಕುತ್ತಾ ಮುಲುಕುತ್ತಾ ಹೊರಟಿತು ಭಾವನೆಗಳ ಮಹಾ ತೇರು
ಅದೆಷ್ಟು ಅಡ್ಡಿಗಳು ಆತ೦ಕಗಳು ಆದರೂ ಸಾಗುತಲಿದೆ ಈ  ಕಾರು

ಭೋರ್ಗರೆವ ಸಾಗರದ ಅಲೆಗಳು  ಗಢಚಿಕ್ಕುವ  ಸಿಡಿಲಿನ  ಅಬ್ಬರ
ಯಾವುದೂ ತಡೆಯಲಾಗಲೇ ಇಲ್ಲ ಈ ಯಾತ್ರೆ ಮಾತ್ರ ನಿರ೦ತರ

ಕನಸುಗಳ ಸುಮಧುರ ಮಿಲನ ಸಾಧನೆಗಳ ಸಿಹಿ ಹೂರಣ ಈ ಜೀವನ
ಆದರೂ ನಡೆಯಬೇಕಿದೆ ದೂರ ತಲುಪಬೇಕಿರುವ ದಾರಿಯದೇ  ಗಮನ

ತಲುಪಲಿದೆ ದೋಣಿ ಆ ದೂರ ತೀರ ಜೊತೆಗಿರಲು ಮನದ ಧೃಡ ನಿರ್ಧಾರ
ಏನಾದರೇನು ತಲುಪಿದರೆ ಆ ತೀರ ಸಿಗಲಿದೆಯಲ್ಲಾ ಮನವ ತಣಿಪ ಸಾರ!!

ಕುಲುಕುತ್ತಾ ಮುಲುಕುತ್ತಾ ಸಾಗುತ್ತಲೇ ಇರಲಿದೆ ಭಾವನೆಗಳ ಮಹಾ ತೇರು
ಎಷ್ಟೇ ಅಡ್ಡಿ ಆತ೦ಕ ಕಾತರ ಕಳವಳಗಳ ನಡುವೆಯೂ ಓಡಲಿದೆ ಈ ಕಾರು!!

ಬ್ಲಾಗ್ ವರ್ಗಗಳು: 
ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ದೂರ ತೀರದೆಡೆಗೆ ಪಯಣ... ಜೀವನ.. ಚೆನ್ನಾಗಿದೆ ನಿಮ್ಮ ಕವನ.. -ಪ್ರಸನ್ನ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೆಚ್ಚುಗೆಗೆ ವ೦ದನೆಗಳು ಪ್ರಸನ್ನ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕುಲುಕುತ್ತಾ.. ಮುಲುಕುತ್ತಾ ಸಾಗಿದೆ ಜೀವನ ಎತ್ತಿನ ಗಾಡಿ.. ಖುಷಿಕೊಟ್ಟಿತು. ಸುಲಭವಾಗಿ ಓದಿಸಿಕೊ೦ಡು ಹೋಯಿತು. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೆಚ್ಚುಗೆಗೆ ವ೦ದನೆಗಳು ನಾವಡರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅರ್ಥವತ್ತಾಗಿ ಚೆನ್ನಾಗಿದೆ ಸರ್ ನಿಮ್ಮ ಕವನ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಜಣ್ಣ ಚೆನ್ನಾಗಿದೆ. ಆದರೆ ಎಲ್ಲೋ ಒಂದು ಕಡೆ ನಮ್ಮ ಬ್ರಾಂಡ್ ಇಲ್ಲಾ ಅನಿಸಿತು. ಮಂಜಣ್ಣ, ಮುಂದುವರೆಯಲಿ ಗೌಡಪ್ಪನ ಲೇಖನಗಳು. ವಿತ್ ಬ್ಲಾಕ್ ಲೇಬಲ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗೌಡಪ್ಪನ ಬ್ರಾ೦ಡಿಗೆ ಕೋಮಲ್ ಇರುವಾಗ ನಾವೆಲ್ಲ ಹುಲು ಮಾನವರು ಕೋಮಲ್! ಯು ಕೆನ್ ಡು ಮ್ಯಾಜಿಕ್ಸ್ ವಿತೌಟ್ ಬ್ಲ್ಯಾಕ್ ಲೇಬಲ್!! :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೆಚ್ಚುಗೆಗೆ ವ೦ದನೆಗಳು, ಕ್ಷಮಿಸಿ, ನಿಮ್ಮ ಹೆಸರಿನಿ೦ದಾಗಿ ನೀವು ಯಾರೆ೦ದೇ ಗೊತ್ತಾಗ್ತಿಲ್ಲ,,..........ರೆ. :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ಹೌದು ಕಾರು ತುಂಬಾನೆ ಜೋರಾಗಿ ಓಡುತ್ತಲಿದೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಯರೆ ಈ ಕಾರು ಅನ್ನುವುದೇ ಈಗೀಗ ಬಲು ಬೋರು, ಮನೆಯಿ೦ದ ಮಲ್ಲೇಶ್ವರಕೆ ಬರಲು ಬೇಕು ಒ೦ದು ಅವರ್ರು ಮತ್ತೆ ನಿಲ್ಲಿಸಲು ಜಾಗ ಹುಡುಕಲು ಇನ್ನೊ೦ದು ಅವರ್ರು ಎಲ್ಲಾ ಮಾಡಿ ಇಳಿದಾಗ ಮರೆತೇ ಹೋಗಿರುತ್ತೆ ನಾನು ಯಾರು??
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಲ್ಲೇಶ್ವರದಿಂದ ನಮ್ಮಲ್ಲಿಗೆ ಬರಲು..?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎ೦ಟನೆ ಕ್ರಾಸಿನ ಚ೦ದೂಸ್ ಮು೦ದೆ ಬಿತ್ತು ಫೈನು ನೂರು! ನಿಮ್ಮಲ್ಲಿಗೆ ಬರುವ ಚಿ೦ತೆಯ ತಳ್ಳಿತ್ತು ದೂರ ಮಾರು!! :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೆಸರಲ್ಲೇನಿದೆ ಮಂಜುನಾಥ ಅವರೇ ನನ್ನ ಪರಿಚಯದಲ್ಲಿ ಸಂಪದಿಗಳೆಂದರೆ ಸಾಲದೇ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಹೆಸರು ಭಾವಚಿತ್ರ ಜರೂರಾಗಿ ಬೇಕಿದೆ ಕಣ್ರೀ ಇಲ್ಲಾ೦ದ್ರೆ ನೀವೂ "ಫೇಕ್ ಐಡಿ" ಅ೦ತಾರೆ ಕಣ್ರೀ!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಜು ಅವರೇ ಕವನ ಚೆನ್ನಾಗಿದೆ ಆದರೇ ನೀರಲ್ಲಿ ಓಡುವ ಕಾರು ಯಾವುದದು?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಎಷ್ಟೇ ಅಡ್ಡಿ ಆತ೦ಕ ಕಾತರ ಕಳವಳಗಳ ನಡುವೆಯೂ ಓಡಲಿದೆ ಈ ಕಾರು!!>>ಮೆಚ್ಚುಗೆಗೆ ವ೦ದನೆಗಳು ರಾಯರೆ, ಆದರೆ ನಮ್ಮದು ಓಡುವ ಕಾರು, ನೀರಲ್ಲಲ್ಲ, ಬಾಳ ಹಾದಿಯಲ್ಲಿ! :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಜಣ್ಣ ಚೆನ್ನಾಗಿದೆ ನಿಮ್ಮ ಕಾಮತ್ ಕುಂಬ್ಳೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೆಚ್ಚುಗೆಗೆ ವ೦ದನೆಗಳು ಕಾಮತರೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.