ಮುಳುಗುತಿಹನಲ್ಲಿ ಮುನಿದ ಬಾನ ರವಿ ತೇಜ!

4

ನೋಡು ಗೆಳತಿ ಮುಳುಗುತಿಹನಲ್ಲಿ ಮುನಿದ ಬಾನ ರವಿ ತೇಜ
ದುಡಿದು  ದಣಿದಿಹನು ದಿನವಿಡೀ  ಬೇಕವನಿಗೀಗ  ನಿಜದಿ ರಜ!

ಅಗಾಧ ಕಡಲ ತಿಳಿನೀರನೆ ಕೆ೦ಪಾಗಿಸಿರುವ ಅವ ಕೋಪದಿ
ಮುಳುಗುವ ಅವನ ಕಣ್ಣಲಿ ಕ೦ಡೆಯಾ ಆ ರೋಷ  ಬೇಗುದಿ!

ರೋಸಿ ಹೋಗಿರುವನೇನೋ ಕ೦ಡು ಈ ಜನರ ಮೋಸ ದಗಾ
ನೆತ್ತರ ಕಾರುತಲೇ  ಈ  ಲೋಕಕೆ  ಧಿಕ್ಕಾರ ಎನ್ನುತಿರುವನೀಗ!

ನೆನಪಿದೆಯೇ  ಅ೦ದು ನಾ  ಓಡುತಲಿದ್ದೆ ಇವನ೦ತೆಯೇ
ಕಾರ್ಯ  ನಿಮಿತ್ತ  ಧಾವ೦ತದ  ನಗರ  ಜೀವನದಲ್ಲಿಯೇ!

ಎಷ್ಟೆಲ್ಲ ಕಷ್ಟಗಳು ಏನೆಲ್ಲ ಕೋಟಲೆಗಳು ಅದೆಷ್ಟು ನಷ್ಟಗಳು
ದಾಟಿ ಬ೦ದಾಯಿತು ಆದರೆ ಇನ್ನು ಉಳಿದಿವೆ ನಮ್ಮಿಷ್ಟಗಳು!

ಸೋತು ಕುಸಿದಿವೆ ನನ್ನ ಕಾಲುಗಳು ಉಳಿದಿಲ್ಲ ಇನ್ನು ಶಕ್ತಿಯಲ್ಲಿ
ಬೇಕಿರುವುದು ನಿನ್ನ ಜೊತೆ ಮಾತ್ರ ಉಳಿದಿಹ ಬಾಳ ಹಾದಿಯಲ್ಲಿ!

ಬ್ಲಾಗ್ ವರ್ಗಗಳು: 
ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಮಂಜಣ್ಣ ದುಗುಡ ತುಂಬಿದ ಮನಸ್ಸಿನಿಂದ ಬರಿದ ಹಾಗಿದೆ..ಮರಳಿ ತಮ್ಮ ಬರಹವನ್ನು ಕಂಡು ಖುಷಿಯಾಯಿತು.. ರೋಷ ತುಂಬಿದ ಸೂರ್ಯನು ಮುಳುಗುತಿರಲು.. ತಂಪನೀಯಲು ಚಂದ್ರಮನು ಮೂಡಿ ಬರುವನು.. ತುಂಬುವನು ನವ ಚೈತನ್ಯವ ಜೀವನದಿ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗೆ ಧನ್ಯವಾದಗಳು ಜಯ೦ತ್, ಕಡಲತೀರದಲ್ಲಿ ಕುಳಿತಿದ್ದ ಹಿರಿಯ ಜೋಡಿಯನ್ನು ಕ೦ಡಾಗ ಮನದಲ್ಲಿ ಮೂಡಿದ ಸಾಲುಗಳಿವು!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಜಣ್ಣ ಸೂರ್ಯಾಸ್ತದ ವರ್ಣನೆಯೊಂದಿಗೆ ಕಳೆದ ಜೀವನದ ಬೇಗುದಿಯ ವರ್ಣನೆ ಸುಂದರ !!!! ನಿಮ್ಮ ಕಾಮತ್ ಕುಂಬ್ಳೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗೆ ಧನ್ಯವಾದಗಳು ಕಾಮತ್, ಕಡಲತೀರದಲ್ಲಿ ಕುಳಿತಿದ್ದ ಹಿರಿಯ ಜೋಡಿಯನ್ನು ಕ೦ಡಾಗ ಮನದಲ್ಲಿ ಮೂಡಿದ ಸಾಲುಗಳಿವು!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎರಡನೇ ಚಿತ್ರ ತು೦ಬ ಚೆನ್ನಾಗಿದೆ. ಕವನದ ಕೊನೆಯ ನಾಕು ಸಾಲುಗಳು ಚಿತ್ರಗಳಿಗೆ ಪೂರಕವಾಗಿವೆ. ಅಭಿನಂದನೆಗಳು!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೆಚ್ಚುಗೆಯ ನುಡಿಗಳಿಗೆ ವ೦ದನೆಗಳು ಪ್ರಭುಕುಮಾರ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಜಣ್ಣ, ಸೊಪರ್ ಕಂಡ್ರಿ, ಎರಡೊ, ಚಿತ್ರ ಮತ್ತೆ ಕವನ. >>>>ರೋಸಿ ಹೋಗಿರುವನೇನೋ ಕ೦ಡು ಈ ಜನರ ಮೋಸ ದಗಾ ನೆತ್ತರ ಕಾರುತಲೇ ಈ ಲೋಕಕೆ ಧಿಕ್ಕಾರ ಎನ್ನುತಿರುವನೀಗ!<<<< ಏನಾದರೂ ಮತ್ತೆ ಮತ್ತೆ ಉದಯಿಸುವನೀತ, ಸೋಲದೆ, ಮನ ಕವಿಯದೆ, ನಮ್ಮ ಬಾಳು ಬೆಳಕಾಗಿಸಲು, ಬೆಳಗಳು >>>>ನೆನಪಿದೆಯೇ ಅ೦ದು ನಾ ಓಡುತಲಿದ್ದೆ ಇವನ೦ತೆಯೇ ಕಾರ್ಯ ನಿಮಿತ್ತ ಧಾವ೦ತದ ನಗರ ಜೀವನದಲ್ಲಿಯೇ!<<< ಓಡುವನು ಈತನೀಗ ನಿರಂತರ, ಮೂಡಣ, ಪಡುವಣ, ಕಾರ್ಯ ನಿಮಿತ್ತ, ದಾವಂತವಿಲ್ಲ, ಇವನ ಜೀವನದಲ್ಲಿ ನಿರಂತರ >>>ಎಷ್ಟೆಲ್ಲ ಕಷ್ಟಗಳು ಏನೆಲ್ಲ ಕೋಟಲೆಗಳು ಅದೆಷ್ಟು ನಷ್ಟಗಳು ದಾಟಿ ಬ೦ದಾಯಿತು ಆದರೆ ಇನ್ನು ಉಳಿದಿವೆ ನಮ್ಮಿಷ್ಟಗಳು!<<< ಎಷ್ಟೆಲ್ಲ, ನಗರಗಳು, ಕಾನನಗಳು, ನದಿ, ಕಡಲುಗಳು, ದಾಟಿ ಬಂದು ಬೆಳಗುವನು ಕೋಟಿ ಜೀವರಾಶಿಗಳ., ಆದರೆ ಇನ್ನು ಉಳಿದಿವೆ ಬೆಳಗುವ ವ್ಯೆಶಿಷ್ಟ್ಯಗಳು >>>ಸೋತು ಕುಸಿದಿವೆ ನನ್ನ ಕಾಲುಗಳು ಉಳಿದಿಲ್ಲ ಇನ್ನು ಶಕ್ತಿಯಲ್ಲಿ ಬೇಕಿರುವುದು ನಿನ್ನ ಜೊತೆ ಮಾತ್ರ ಉಳಿದಿಹ ಬಾಳ ಹಾದಿಯಲ್ಲಿ!<<< ಸೋಲಬಾರದು ಕಾಲನ ಚಕ್ರದಲಿ, ಕುಂದಹದು ಅವನ ಅ ಶಕ್ತಿಯಲಿ ಬೇಕಿರುವುದು ನ್ಯೆಜ ಬಾಂಧವ್ಯ, ಸಾಂಘತ್ಯ ಮಾತ್ರ, ಉಳಿದುದು ಮಿತ್ಯ ಬಾಳ ಹಾದಿಯಲಿ. ವಂದನೆಗಳು/ಮಧ್ವೇಶ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೆಚ್ಚುಗೆಗೆ ಹಾಗೂ ಕವನ ಸಹಿತ ಪ್ರತಿಕ್ರಿಯಗೆ ಧನ್ಯವಾದಗಳು ಮಧ್ವೇಶರೆ. :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಜು, ಕವನ ಚೆನ್ನಾಗಿದೆ. ಕವನ ಸಹಿತ ಪ್ರತಿಕ್ರಿಯೆ ನನ್ನಿಂದ ಸಾಧ್ಯವಿಲ್ಲ. ಆದರೆ ಒಂದು ಚಿತ್ರ, ರವಿ(ಮುನಿದ ಅಲ್ಲ) ಬಗ್ಗೆ ಇನ್ನೊಂದು ಕವನ ಬರೆಯಲು- (ಇದು ಜೆ.ಪಿ.ಪಾರ್ಕ್‌ನಲ್ಲಿ ಕಳೆದ ರವಿವಾರ ತೆಗೆದ ಮೊಬೈಲ್ ಫೋಟೋ) -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚಿತ್ರಸಹಿತ ಪ್ರತಿಕ್ರಿಯೆಗಾಗಿ ಧನ್ಯವಾದಗಳು ಗಣೇಶ್. ಈ ಕವನ ಮೂಡಿ ಬ೦ದಿದ್ದು ಅ೦ದು, ಕಾರವಾರದ ಕಡಲ ತೀರದಲ್ಲಿ, ಪ್ರೇರಣೆ ಆ ಹಿರಿಯ ಜೋಡಿ ಮತ್ತು ಅಸ್ತ೦ಗತನಾಗುತ್ತಿದ್ದ ರವಿ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.