ವಿರೋಧಾಭಾಸ!

5

ಏನೆಲ್ಲ  ಭಾವನೆಗಳು  ಮನದಲ್ಲಿ  ಹಸಿರು  ಸಿರಿಯ   ಕ೦ಡೊಡನೆ
ಕಣ್ಣು ಹರಿದತ್ತ ಹಸಿರು ಹಕ್ಕಿಗಳ ಕಲರವ ಎನಿತು ಸು೦ದರ ಆ ದೃಶ್ಯ
ಸುತ್ತೆಲ್ಲ ಕಾಣುವ ಹರುಷ ಸ೦ತಸ ಕಿಲಕಿಲ ನಗು ಸು೦ದರ ಕ್ಷಣಗಳು!

ಆದರೆ ಏನೆಲ್ಲ ವಿರೋಧಾಭಾಸಗಳು ಸುಡು ಬೇಸಿಗೆಯ ಬಿರು ಬಿಸಿಲಲ್ಲಿ
ಒಣಗಿ ಉದುರಿದ ಎಲೆಗಳು ಬೋಳುಬೋಳಾದ ವಿಕೃತಿ ಬಿಕೋ ಎನ್ನುವ
ಪ್ರಕೃತಿ ಇದಲ್ಲವೆ ವಿಸ್ಮಯ ನಮ್ಮ  ಅರಿವಿಗೆಟುಕದ್ದು  ತಿಳಿವಿಗೆ ಬಾರದ್ದು!

ಬ್ಲಾಗ್ ವರ್ಗಗಳು: 
ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಮಲೆನಾಡನ್ನು ಮರುಭೂಮಿಯೊ೦ದಿಗೆ ಹೊಲಿಸುತ್ತಿದ್ದೀರಾ? ಮರುಭೂಮಿಯನ್ನೂ ನ೦ದನವನವನ್ನಾಗಿಸುವ ಪ್ರಯತ್ನ ನಡೆದಿದೆಯಲ್ಲಾ ? ತಾಯ್ನಾಡಿನ ಹಸಿರು ಉಸಿರು ನಿಮ್ಮಲ್ಲಿ ಏನೂ ಕಳೆದುಕೊಂಡ ಭಾವನೆ ಮೂಡಿಸಿದರೆ ಅಚ್ಚರಿಯೇನಿಲ್ಲ. ನಮಸ್ಕಾರ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಮಾತು ನಿಜ, ತಾಯ್ನಾಡಿನ ಹಸಿರಿಗೆ ಅದೇ ಸಾಟಿ! ಬಿರುಬೇಸಿಗೆಯ ನಡುವಿನ ಬಟಾಬಯಲಿನಲ್ಲಿ ಎಲ್ಲಿ ಬರಬೇಕು ಆ ಹಸಿರ ಸಿರಿ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ನಿಜ ಎರಡೂ ಪ್ರಕೃತಿಯೇ, ಪ್ರಕೃತಿಯ ವೈಚಿತ್ರ್ಯವೇ. ಸು೦ದರ ಹಸಿರು ಒ೦ದೆಡೆ ಪಾಳುಬಿದ್ದ ಬೋಳು ಪ್ರಕೃತಿ ಒ೦ದೆಡೆ. ಎರಡೂ ಅವಳದೇ ರೂಪ. ಅವಳು ಸಾರುವುದು ಏನನ್ನು? ಮಾಯಾವಿಯ೦ತೆ ಅವಳು ಕಾಣುತ್ತಾಳಲ್ಲವೇ? ಹರಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಕೃತಿ ದೇವತೆ ನಿಜಕ್ಕೂ ಮಾಯಾವಿಯೇ, ಆ ಪ್ರಕೃತಿಯ ಮು೦ದೆ ಮಾನವ ನಿಜಕ್ಕೂ ಕುಬ್ಜ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಕೃತಿಯ ಮಹಿಮೆಯ ಅರಿತು ನಡೆವವನ ಬಾಳಲ್ಲಿ ಸುಸಂಸ್ಕೃತಿ ಅರಿಯದಲೇ, ತಾನೇ ಮೇಲೆಂದು ಬಾಳಿದಾತನ ಬಾಳೇ ವಿಕೃತಿ :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆದರೆ ಇ೦ದಿನ ಮಾನವ ಮರೆತಿರುವನಲ್ಲ ಸ೦ಸ್ಕೃತಿ!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:) :) :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:):):)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿರೋಧಾಭಾಸಗಳಿಲ್ಲ ಪ್ರಕೃತಿಯ ಪ್ರಕ್ರಿಯೆಗಳಲ್ಲಿ ಬೇಸಿಗೆಯ ಬೆಸುಗೆಯಿರದಿರೆ ಇಲ್ಲ ಆನಂದ ಮಳೆಯ ಹನಿಗಳಲ್ಲಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಕೃತಿಯ ವಿರೋಧಾಭಾಸಗಳೇ ಹಲವಾರು ವಿಕೃತಿಗಳಿಗೂ ಕಾರಣವಾಗುವುದು ವಿಚಿತ್ರ, ಆದರೂ ಸತ್ಯ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಷ್ಟವಿರುವುದರಿಂದಲೇ ಸುಖಕ್ಕೆ ಬೆಲೆ, ಕತ್ತಲೆಯಿಂದಲೇ ಬೆಳಕಿಗೆ ಮಹತ್ವ. ಹಾಗೆಯೇ ಹಸಿರು ಸಿರಿಗೆ ಬೆಲೆ ಬರುವುದೇ ಬಿರುಬಿಸಿಲಿನಿಂದ. ಚೆನ್ನಾಗಿದೆ, ಮಂಜುರವರೇ.