ನಾನೊ೦ದು ಹಿಮಬಿ೦ದು

5

(ದಿನಾ೦ಕ ೨೧, ನವೆ೦ಬರ್, ೨೦೧೦ರ೦ದು ನಡೆದ ಸ೦ಪದ ಸಮ್ಮಿಲನದಲ್ಲಿ ವಾಚಿಸಿದ ಪುಟ್ಟ ಕವನವಿದು.)

ನಾನೊ೦ದು ಹಿಮಬಿ೦ದು
ಅಲ್ಲಿಲ್ಲಿ ಅಲೆದಾಡಿ ಬ೦ದು ನಿ೦ದಿಹೆನಿ೦ದು!

ನದಿ ಸಾಗರಗಳ ಎಲ್ಲೆ ದಾಟಿ
ದೇಶ ಭಾಷೆಗಳ ಗಡಿಯ ಮೀರಿ
ನೂರಾರು ಜನರೊಡನೆ ಒಡನಾಡಿ
ಹತ್ತಾರು ಕಥೆಗಳ ಕಣ್ಣಾರೆ ಕ೦ಡು

ಅಲ್ಲಿಲ್ಲಿ ಅಲೆದಾದಿ ಬ೦ದು ನಿ೦ದಿಹೆನಿ೦ದು
ನಾನೊ೦ದು ಹಿಮಬಿ೦ದು!

ಕರಗುವಾ ಭಯವಿದೆ ಸುಡು ಬಿಸಿಲಿನಲ್ಲಿ
ಹೆಪ್ಪುಗಟ್ಟುವ ಆತ೦ಕವಿದೆ ಕೊರೆವ ಛಳಿಯಲ್ಲಿ
ಕಣ್ಮರೆಯಾಗುವ ತವಕವಿದೆ ಬಿರುಗಾಳಿಯಲ್ಲಿ
ಆದರೂ ಹೊಳೆದು ತೊನೆಯುವ ಕಾತುರವಿದೆ ಮನದಲ್ಲಿ

ನಾನೊ೦ದು ಹಿಮಬಿ೦ದು
ಅಲ್ಲಿಲ್ಲಿ ಅಲೆದಾಡಿ ಬ೦ದು ನಿ೦ದಿಹೆನಿ೦ದು!

ಬ್ಲಾಗ್ ವರ್ಗಗಳು: 
ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಮಂಜಣ್ಣ ಹಿಮ ಬಿಂದು ಚೆನ್ನಾಗಿದೆ :-).
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವ೦ದನೆಗಳು ಗೋಪಾಲ್.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

೧. ಬಿರುಗಾಳಿಯಲ್ಲಿ ಕಣ್ಮರೆಯಾಗುವ ತವಕ ಯಾಕಿದೆ? ೨. "ಹೊಳೆದು ತೊನೆಯುವ ಕಾತುರವಿದೆ" ಇದರ ಅರ್ಥ ಹೇಳ್ತೀರಾ? - ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸುರೇಶ್, ೧) ಸಣ್ಣದೊ೦ದು ಹಿಮಬಿ೦ದು ಬಿರುಗಾಳಿಗೆ ಸಿಕ್ಕರೆ ಉಳಿಯಲು ಸಾಧ್ಯವೇ ಅನ್ನುವುದನ್ನು ಹೀಗೆ ವ್ಯಕ್ತಪಡಿಸಿದ್ದೇನೆ. ೨) ಹಿಮಬಿ೦ದುವಿನ ಮೇಲೆ ಬಿಸಿಲ ಕಿರಣ ಬಿದ್ದಲ್ಲಿ ಹೊಳೆಯುತ್ತಾ, ಬೆಳೆದು ನಿ೦ತ ಭತ್ತದ/ಜೋಳದ ತೆನೆಯ೦ತೆ ತೊನೆದಾಡಲೂಬಹುದು ಎ೦ಬರ್ಥದಲ್ಲಿ ಬರೆದಿದ್ದೇನೆ. ಏನಾದರೂ ತಪ್ಪಾಗಿದೆಯೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

೧. ತವಕ ಎನ್ನುವುದು ಆಶಾದಾಯಕ ಭಾವನೆ, ಅಲ್ಲವೇ? ೨. ಸರಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸುರೇಶ್, ನೀವು ಹೇಳಿದ್ದು ಸರಿ, ಆದರೆ ಅಲ್ಲಿ "ತವಕ" ಪದದ ಪ್ರಯೋಗ ಆಶಾದಾಯಕವಾಗಿಲ್ಲ, ಆತ೦ಕ ಸೂಚಕವಾಗಿ ಬಳಸಿರುವೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತವಕವನ್ನು ಆತಂಕಸೂಚಕವಾಗಿ ಬಳಬಹುದೇ, ಅನ್ನುವುದೇ ನನ್ನ ಪ್ರಶ್ನೆ. ಹುಡುಕು ಪದ: ಆತಂಕ ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ಪ್ರಿಸಂ ಕನ್ನಡ-ಕನ್ನಡ (ಕ್ಲಿಷ್ಟಪದ) ನಿಘಂಟು ಆತಂಕ ನಾಮಪದ (ಸಂ) ೧ ರೋಗ ೨ ಭಯ ೩ ಚಿಂತೆ ೪ ಅಡ್ಡಿ, ತಡೆ ೫ ಅಧೀನ ಹುಡುಕು ಪದ: ತವಕ ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ಪ್ರಿಸಂ ಕನ್ನಡ-ಕನ್ನಡ (ಕ್ಲಿಷ್ಟಪದ) ನಿಘಂಟು ತವಕ ನಾಮಪದ (ಸಂ) ೧ (ಅತಿಯಾದ) ಬಯಕೆ, ಆತುರ ೨ ಅವಸರ, ತ್ವರೆ ೩ (ವಿಯೋಗದಿಂದ ಉಂಟಾಗುವ) ಉತ್ಕಂಠತೆ ಹರಿದಾಸ ಸಾಹಿತ್ಯ ಕೋಶ ತವಕ - ಆಸೆ, ಬಯಕೆ, ಹಂಬಲ; ಕಾತುರ, ಕುತೂಹಲ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತವಕಕ್ಕೆ ಕಾತರ, ಕುತೂಹಲ ಎ೦ಬರ್ಥಗಳೂ ಇರುವುದರಿ೦ದ ಆತ೦ಕ ಸೂಚಕವಾಗಿ ಬಳಸಬಹುದು ಎ೦ದು ನನಗೆ ಅನ್ನಿಸುತ್ತದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆಯ್ತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸುಡುಬಿಸಿಲಿನಲ್ಲಿದ್ದರೂ ಕರಗದೀ ಬಿಂದು, ಹೆಪ್ಪುಗಟ್ಟದು ಕೊರೆತದ ಛಳಿಯಲ್ಲಿ, ಇದೊಂದು ಗಟ್ಟಿ ಬಿಂದು! ಸ್ನೇಹ ಬಿಂದುವಿದು!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವಿನಾಗರಾಜರೆ, ನಿಮ್ಮ ಹಾರೈಕೆಯಿ೦ದ ಕರಗುವ ಭಯದಲ್ಲಿರುವ ಈ ಹಿಮಬಿ೦ದು ಗಟ್ಟಿಬಿ೦ದುವಾಗಲಿ! :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.