ಮರಳಿ ಬ೦ದಿದೆ ಹಕ್ಕಿ ತನ್ನ ಗೂಡಿಗೆ.......

5

ಮರಳಿ ಬ೦ದಿದೆ ಹಕ್ಕಿ ತನ್ನ ಗೂಡಿಗೆ
ಅಲೆದಾಡಿ ಅಲ್ಲಿ ಇಲ್ಲಿ ಬಹು ದೂರ ದಾರಿ
ಹೊತ್ತು ತ೦ದಿದೆ ಕೊಕ್ಕಿನ ತು೦ಬ ರುಚಿ
 ರುಚಿಯ ಖಾದ್ಯ ತನ್ನ ಪುಟ್ಟ ಮರಿಗಳಿಗೆ

ಮರಳಿ ಬ೦ದಿದೆ ಹಕ್ಕಿ ತನ್ನ ಗೂಡಿಗೆ
ಪುಟ್ಟ ಮರಿಗಳೀಗ ದೊಡ್ಡವಾಗಿವೆ ಅವು
ಪರಪುಟ್ಟಗಳಲ್ಲ ತಮ್ಮದೇ ಲೋಕ ತಮ್ಮದೇ
ಹಾಡು ತಮ್ಮದೇ ಹಾರಾಟ ತಮ್ಮದೇ ಹೋರಾಟ

ಮರಳಿ ಬ೦ದಿದೆ ಹಕ್ಕಿ ತನ್ನ ಗೂಡಿಗೆ
ಹಾಗೇ ಉಳಿದಿದೆ ರುಚಿಯಾದ ಆಹಾರ
ತನ್ನ ಕೊಕ್ಕಿನಲಿ ಹಿ೦ದಿನ೦ತಿಲ್ಲ ಮರಿಗಳೀಗ
ಅವರ ಆಹಾರದ ರೀತಿ ನೀತಿ ಬದಲಾಗಿದೆಯೀಗ

ಮರಳಿ ಬ೦ದಿದೆ ಹಕ್ಕಿ ತನ್ನ ಗೂಡಿಗೆ
ಆದರೆ ಉಳಿದಿಹುದು ಮಡದಿ ಹಕ್ಕಿ ಹಾಗೆಯೇ
ಕಾಯುತಿಹುದದಿಲ್ಲಿ ತನ್ನಿನಿಯನ ಬರುವಿಕೆಗಾಗಿ
ಅದೇ ಪ್ರೀತಿ ಪ್ರಣಯ ಅದೇ ಕಕ್ಕುಲಾತಿಯೊಡನೆ

ಮರಳಿ ಬ೦ದಿದೆ ಹಕ್ಕಿ ತನ್ನ ಗೂಡಿಗೆ!!!!

ಬ್ಲಾಗ್ ವರ್ಗಗಳು: 
ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

’ಸಮಯ’ ಹೇಗೆ ಅರಿವಿಲ್ಲದಂತೆ ಕಳೆದು ಹೋಗುತ್ತದೆಯೋ ತಿಳಿದುಕೊಳ್ಳುವಷ್ಟರಲ್ಲಿ...ಕಾಲ ಬದಲಾಗಿರುತ್ತದೆ. ಕಾಲ ಬದಲಾದರೂ ಬದಲಾಗದ ಕೆಲವು ಸಂಭಂದಗಳು..ಕಾಲ ಕಳೆದುಹೋಗಿಲ್ಲ ಎಂಬಂತೆ ಭಾಸ ಮೂಡಿಸುತ್ತವೆ... ಚೆನ್ನಾದ ಕವನ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ವಿಜಿ, ಕಳೆದು ಹೋಗುವುದು ಈ ಕಾಲ, ಸವೆದು ಹೋಗುವುದು ಈ ಜೀವ, ಬದಲಾಗದು ಇನಿಯಳ ಈ ಭಾವ, ಮರಳಿ ಬ೦ದಿದೆ ಹಕ್ಕಿ ತನ್ನ ಗೂಡಿಗೆ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತುಂಬಾ ಸಂತೋಷ ಚೆನ್ನಾದ ಕವನ ಸಂತಸವಿರುವುದೇ ತನ್ನವರೊಂದಿಗೆ ಕಾಲ ಕಳೆಯುವಾಗ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗೆ ತು೦ಬಾ ಸ೦ತೋಷ ರಾಯರೆ, ನಿಮ್ಮ ಭಾವನೆಯೇ ನನ್ನೆದೆಯಲ್ಲೂ ತು೦ಬಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈ ಕಾಯುವಿಕೆಗೆ ಮದ್ದಿಲ್ಲವೇ ಗುರುಗಳೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇನ್ನೆಲ್ಲಿಯ ಕಾಯುವಿಕೆ ನಾವಡರೆ, ಇನ್ನೇನಿದ್ದರೂ ಎಲ್ಲವೂ ಸುಮಧುರ ಸಮ್ಮಿಲನ! -:)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸ್ವಾಗತ ಸುಸ್ವಾಗತ ಕರುನಾಡಿಗೆ, ಆದರೆ ಈ ಹಕ್ಕಿ ವರ್ಸದಾಗೆ ಏಟು ಕಿತಾ ಬತ್ತದೆ ಅಂತ ಮಾತ್ರ ತೀಲಿಯಕ್ಕಿಲ್ಲ. ಬ್ಲಾಕ್ ಲೇಬಲ್ ಇದ್ದರೆ ಕಂಪೆನಿಗೆ ನಾವು ಸದಾ ಸಿದ್ದ. ನಿಮ್ಮ ಸೇವೆಗೆ. ಸ್ವಾಮಿ ಕಾರ್ಯ ಸ್ವ ಕಾರ್ಯ ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಲೆಲೆ, ಬಾರಪ್ಪಾ ಕೋಮಲ್ಲೂ, ಇನ್ ಮ್ಯಾಕೆ ನಾವು ಇಲ್ಲೆ ಇರ್ತೀವಿ, ಬ್ಲ್ಯಾಕೋ ವೈಟೋ ಯಾವ್ದಾನ ಒ೦ದು ಲೇಬಲ್ ಗ್ಯಾರ೦ಟಿ ಹಾಕುಸ್ತೀನಿ ಬಾ ಗುರುವೆ! ನೀ ಬರೋದ್ ಎಚ್ಚಾ, ನಾ ಹಾಕ್ಸೋದ್ ಎಚ್ಚಾ?? -:)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಳ್ಳೆಯ ಸುದ್ದಿ, ಮಂಜು! ಶುಭವಾಗಲಿ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವ೦ದನೆಗಳು ಕವಿ ನಾಗರಾಜರೆ, ಕೆಳದಿಯ ದರ್ಶನ ಮಾಡುವಾಸೆ ನಿಮ್ಮೊಡನೆ! :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<... ಉಳಿದಿಹುದು ಮಡದಿ ಹಕ್ಕಿ ಹಾಗೆಯೇ>> ಉಳಿದಿಹುದೇ ಮರಳಿದ ಹಕ್ಕಿಯೂ ನಿಜದಿ ಹಾಗೆಯೇ? :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಉಳಿದಿಹುದೇ ಮರಳಿದ ಹಕ್ಕಿಯೂ ನಿಜದಿ ಹಾಗೆಯೇ?>>ಖ೦ಡಿತ, ಏಕೀ ಅನುಮಾನ?? :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<ಹಾಗೇ ಉಳಿದಿದೆ ರುಚಿಯಾದ ಆಹಾರ ತನ್ನ ಕೊಕ್ಕಿನಲಿ ಹಿ೦ದಿನ೦ತಿಲ್ಲ ಮರಿಗಳೀಗ ಅವರ ಆಹಾರದ ರೀತಿ ನೀತಿ ಬದಲಾಗಿದೆಯೀಗ> ಬದಲಾಗಿವೆ ನಿರೀಕ್ಷೆಗಳು ಬದಲಾಗಿವೆ ಅವರ ಆಕರ್ಷಣೆಗಳು ಎಲ್ಲವನ್ನು ಮೀರಿ ನಿಲ್ಲುವುದು ತಂದೆಯ ಪ್ರೀತಿ , ಯಾಕೆಂದರೆ ಅದು ಏಕ ರೀತಿ ಬರಲಿವೆ ಮರಿಗಳು ಗೂಡಿಗೆ, ಕೊಕ್ಕಿನ ತಿಂಡಿಯ ನೆನೆದು ಕೊಕ್ಕಿನ ತಿಂಡಿಗೆ ಬೇರಾವುದು ಸಮನಲ್ಲ. ಗೂಡಿಗೆ ಮರಳಿದ ಹಕ್ಕಿಗೆ ಶುಭವಾಗಲಿ. ನಮ್ಮ ತಮ್ಮವರೊಂದಿಗೆ ಬೆರೆತು ಕಳೆದು ಹೋದ ಕ್ಷಣಗಳನ್ನು ಮರೆಲಿ ಪಡೆಯಲಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:):) <ಮರಳಿ ಬ೦ದಿದೆ ಹಕ್ಕಿ ತನ್ನ ಗೂಡಿಗೆ!!!!> ತುಂಬಾ ಸಂತೋಷದ ವಿಷಯ ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ದುಬೈನಲ್ಲಿ ಆ ಬ್ರಹ್ಮಚಾರಿ ಬದುಕಿನ "ನಳಪಾಕ" ತಿ೦ದು ತಿ೦ದು ಜನ್ಮ ಸಾಕಾಯ್ತು ಗೋಪಾಲ್! :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸ್ವಾಗತ.. ಸುಸ್ವಾಗತ..ತಾಯ್ನಾಡಿಗೆ... :-):):).
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎರಡು ದಿನದ ಹಿಂದೆಯೇ ಓದಿದ್ದರೂ ವಿಷಯ ಹಿಂಗೆ ಅಂತ ಗೊತ್ತೇ ಆಗ್ಲಿಲ್ಲ ನೋಡಿ, ಸಂತೋಷದ ಸಂಗತಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಸನ್ನ, ಕೆಲವು ವಿಚಾರಗಳು ನಿಧಾನವಾಗಿ ಅರ್ಥವಾಗುತ್ತವೆ, ಚಿರಕಾಲ ನೆನಪಿನಲ್ಲುಳಿಯುತ್ತವೆ, ಬೇಗನೆ ಅರ್ಥವಾದವುಗಳು ಫಕ್ಕನೆ ಮರೆಯಾಗುತ್ತವೆ. ಯಾವುದು ಒಳ್ಳೆಯದು ನೀವೇ ಹೇಳಿ! :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೊದಲನೆಯದೇ ಒಳ್ಳೆಯದು. ಹೈಸ್ಕೂಲಲ್ಲಿ ಓದುವಾಗ ಇದೇ ರೀತಿ ಸ್ನೇಹದ ಬಗೆಗೆ ಒಂದು ಸಂಸ್ಕೃತ ಸುಭಾಷಿತ ಇತ್ತು. (ಈಗ ಹಾಗೆಯೇ ಬರೆದಿದ್ದೇನೆ. ಮತ್ತೊಮ್ಮೆ ಅನುವಾದಿಸಿ ಹಾಕುವೆ.) आरम्भगुर्वी क्षयिणी क्रमेण लघ्वी पुरा वृध्धिमती च पश्चात् | दिनस्य पूर्वार्धपरार्धभिन्ना छायेव मैत्री खलसज्जनानाम् ||
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

[ಮರಳಿ ಬ೦ದಿದೆ ಹಕ್ಕಿ ತನ್ನ ಗೂಡಿಗೆ...] ಬೆಚ್ಚನಾ ಮನೆಯಿರಲು, ವೆಚ್ಚಕ್ಕೆ ಹೊನ್ನಿರಲು ...:-) ತಾಯ್ನಾಡಿಗೆ ಸುಸ್ವಾಗತ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಚ್ಚೆಯರಿತು ನಡೆವ ಸತಿಯೂ ಜೊತೆಗಿರಲು...............! ವ೦ದನೆಗಳು ಕಣ್ರೀ ಶಿ.ಶಾ.! :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗೂಡಿನಲ್ಲಿ ಹಕ್ಕಿಯೊ೦ದು ಕಾಯುತಿಹುದು ನಮಗಾಗಿ ಅನ್ನೋ ಅನಿಸಿಕೆಯೇ ದೂರದಲ್ಲಿರೋ ಹಕ್ಕಿಗೆ ಜೀವನಾದಾರ ಅಲ್ಲವೇ? ತಾಯ್ನಾಡಿಗೆ ಸುಸ್ವಾಗತ. ಗೂಡಿನಲ್ಲಿ ಸುಖ ಶಾ೦ತಿ ಎ೦ದಿಗೂ ನೆಲೆಸಿರಲಿ ..... ಶ್ರೀ...:-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.