ದೇವ್ರು... ನಂಬಿಕೆ ... ಹಾಗೂ ನಮ್ಮಪ್ಪ..

0

ಸಂಪದದಲ್ಲಿ ಬೇಸಿಗೆಯ ಬಿಸಿಯಲ್ಲಿ ದೇವ್ರು, ನಂಬಿಕೆಗಳ ಬಗ್ಗೆ ಚರ್ಚೆಗಳು ಬಿಸಿಬಿಸಿಯಾಗಿಯೇ ನಡೀತಾ ಇವೆ..
ದೇವ್ರು ಇದ್ದಾನೋ ಇಲ್ಲವೋ ನನ್ಗೆ ಗೊತ್ತಿಲ್ಲಾ... ಅದು ನನಗೆ ಬೇಕಿಲ್ಲಾ...
ಆದ್ರೆ ಅವ್ನೊಬ್ಬನಿದ್ದಾನೆ ಅನ್ನೋ ನಂಬಿಕೆ, ಆ concept ನನ್ನ ಒಂಟಿತನಕ್ಕೆ ತುಂಬಾನೆ ಆತ್ಮಸ್ಥೈರ್ಯ್ಯ ಕೊಟ್ಟಿದೆ...
ಇದು ನನ್ನ ಸ್ವ ಅನುಭವ
ಎರೆಡು ವರ್ಷಗಳ ಹಿಂದೆ ಆಗಿನ್ನೂ ನಾನು ಓದ್ತಾ ಇದ್ದೆ... ನಮ್ಮ ತಂದೆಗೆ ಹ್ರುದಯದ ತೊಂದರೆ ಇದ್ದು ಅದಾಗಲೇ ಜಯದೇವ ಹಾಸ್ಪಿಟಲ್ ನಲ್ಲಿ ಆಂಜಿಯೋಗ್ರಾಮ್ ಮಾಡಿಸಿ ನಂತರ ಆಂಜಿಯೋಪ್ಲಾಸ್ಟ್ ಮೂಲ್ಕ ರಕ್ತನಾಳಗಳಲ್ಲಿ ನೆಟ್ ಹಾಕಿತ್ತು.... ಅದಾಗ್ಯೂ ಅವ್ರಿಗೆ ಮತ್ತೆ ಮತ್ತೆ ಹ್ರುದಯದಲ್ಲಿ ರಕ್ತಪರಿಚಲನೆಗೆ ತೊಂದರೆಯಾಗಿ ತುಂಬಾ ತೊಂದರೆ ಅನುಭವಿಸುತ್ತಿದ್ದರು...
ಆಗ ಬೈಪಾಸ್ ಸರ್ಜರಿ ಮಾಡ್ಸೋದಿಕ್ಕೆ ನಾರಾಯಣ ಹೃದಯಾಲಯಕ್ಕೆ ಸೇರಿಸ್ದೆ... ಆಗ ನಂಜೊತೆ ಯಾರೂ ಇರ್ಲಿಲ್ಲ...ನಮ್ಮ ತಾಯಿ ಹಾಗು ಆಕ್ಕಂದಿರು ಮಾತ್ರ ಇದ್ದರು..
ಅವತ್ತು ೨೦೦೭ರ ದೀಪಾವಳಿ ಹಬ್ಬದ ದಿನ.. ಅಮ್ಮ ಅಕ್ಕಂದಿರೆಲ್ಲರನ್ನೂ ಊರಿಗೆ ನಾನೆ ಕಳಿಸಿದ್ದೆ.. ಆಸ್ಪತ್ರೆಯಲ್ಲಿ ಅಪ್ಪನ ಜೊತೆ ನಾನೊಬ್ಬನೇ ಇದ್ದೆ..ಅವ್ರು ತುಂಬಾ ಹೆದ್ರಕೊಂಡಿದ್ದರು...

"ಬಾಬು ಸತ್ತರೆ ನಿಮ್ಮನ್ನೆಲ್ಲಾ ನೋಡ್ತಾ ಸಾಯ್ತೀನಿ ಆದ್ರೆ ನಂಗೆ ಈ ಆಪ್ರೇಷನ್ ಎಲ್ಲಾ ಬೇಡ ಊರಿಗೆ ಕರ್ಕೊಂಡು ಹೋಗು..."

ನಂಗೆ ಆದಿನ ಏನ್ ಮಾತಾಡೋಕ್ಕು ಗೊತ್ತಾಗ್ಲಿಲ್ಲಾ.. ನನಗೊತ್ತು ಅವ್ರು ಯಾಕೆ ಅಷ್ಟೆಲ್ಲಾ ತಲೆ ಕೆಡಿಸ್ಕೊಂಡಿದ್ದಾರೆ ಅಂತ
ಓದ್ತಾ ಇರೋ ಹುಡುಗ ದುಡ್ಡುಗೋಸ್ಕರ ಏನ್ ಮಾಡ್ತಾ ಇದ್ದಾನೊ.. ಅವ್ನಿಗೆ ಈ ವಯಸ್ಸಿಗೆ ಇಷ್ಟೆಲ್ಲಾ ಕಷ್ಟ ಕೊಡ್ತಾ ಇದ್ದೀನಲ್ಲಾ ಅಂತ ಪಕ್ಕದ ಬೇಡ್ ಮೇಲಿದ್ದ ಇನ್ನೊಬ್ಬ ಪೇಷೆಂಟ್ ಹತ್ರ ಹೇಳ್ಕೊಂಡ್ ಅತ್ತಿದ್ದರಂತೆ...
ಆಪ್ರೇಷನ್ಗೆ ಮೊದಲು ಪ್ರಿಪರೇಷನ್ಗೆ ಮಾಡೋದಿಕ್ಕೆ ಕರೆದುಕೊಂಡ್ ಹೋದಾಗ ಅವ್ರು ನನ್ ಹತ್ರ ಹೇಳಿದ್ರು..

ನಿಜ ನನ್ಹತ್ರ ಒಂದು ರೂಪಾಯಿನೂ ಇರ್ಲಿಲ್ಲಾ.. ಆದ್ರೆ ಹೇಗಾದ್ರೂ ಮಾಡಿ ಆಪರೇಷನ್ ಮಾಡಿಸ್ಬೇಕು ಅಂತ ಡಿಸೈಡ್ ಮಾಡಿಯಾಗಿತ್ತು... ನನ್ನ ಜೊತೆಗೆ ಇದ್ದದ್ದು ದೇವ್ರು ಎಂಬ ನಂಬಿಕೆಯ concept ಮಾತ್ರ... ಅದೇ ನನಗೆ ಹಣ ಸಿಗುವ ಮಾರ್ಗಗಳನ್ನು ತೋರಿಸಿಕೊಟ್ಟಿತು..
ಮದ್ಯಾನ್ನ ೧ ಘಂಟೆಗೆ ಆಪ್ರೇಶನ್ ಅಂತ ಹೇಳಿದ್ದರು .. ೧೦ ಘಂಟೆಗೆ ಹಣ ಪೂರ್ತಿ ಕಟ್ಟಿ ಎಲ್ಲಾ ರೆಡಿ ಮಾಡಿದ್ದೆ... ೧ ಘಂಟೆಗೆ ಸರಿಯಾಗಿ ಅವ್ರನ್ನು ಆಪ್ರೇಷನ್ ಥಿಯೇಟರ್ಗೆ ಕರ್ಕೋಂಡು ಹೋದ್ರು.. ಬಾಗಿಲವರೆಗೂ ಹೋಗಿ ಅಲ್ಲಿ ಎಲ್ಲಾ ಫಾರ್ಮಾಲ್ಟೀಸ್ನೂ ಪೂರ್ತಿ ಮಾಡಿದೆ...
ಅಲ್ಲ್ಗೆ ಕರೆದುಕೊಂಡು ಬರುವ ಮೊದಲೇ ಅವ್ರಿಗೆ ನಿದ್ದೆ ಮಾಡೋದಿಕ್ಕೆ ಇಂಜೆಕ್ಷನ್ ಮಾಡಿದ್ದರಾದ್ದರಿಂದ ನಾನು ಬೀಳ್ಕೊಡುವಾಗ ಅದಾಗಲೇ ಅರೆ ನಿದ್ರೆಯಲ್ಲಿದ್ದರು... ಆ ಅರೆ ನಿದ್ರೆಯಲ್ಲೂ ಅವ್ರ ಕಣ್ಣಿಂದ ಬಂದ ಕಣ್ಣೀರು ಒರೆಸೋದಿಕ್ಕೆ ನನ್ಗೆ ಆತ್ಮಸ್ಥೈರ್ಯ ಕೊಟ್ಟಿದ್ದು ಇದೇ ನಂಬಿಕೆ ಅನ್ನೋ concept...
ಸತತ ಎಂಟು ಘಂಟೆಗಳ ಆಪ್ರೆಷನ್... ಮೇಲ್ಮಹಡಿಯಲ್ಲಿ ಅವ್ರ ಆಪ್ರೇಷನ್ ಆಗ್ತಾ ಇದ್ರೆ ಕೆಳಗೆ ವಿಸಿಟರ್ಸ್ ಹಾಲ್ನಲ್ಲಿ ಒಬ್ಬನೇ ಕೂತಿದ್ದೆ...
ಆ ಎಂಟು ಘಂಟೆಗಳು ನಾನು ಕಳೆದ ನನ್ನ ಜೀವನದ ಅತಿ ಕಠಿಣ ಗಳಿಗೆಗಳು....

ಸಂಜೆ ಏಳಕ್ಕೆ ಅಲ್ಲಿದ್ದ ಜನರೆಲ್ಲಾ ಖಾಲಿಯಾಗಿದ್ದರು.. ಆ ಇಡೀ ಹಾಲ್ನಲ್ಲಿ ಕೂತಿದ್ದುದು ನಾನೊಬ್ಬನೆ.. ದಿಪಾವಳಿ ಹಬ್ಬದ ದಿನವಾದ್ದರಿಂದ ಆಸ್ಪತ್ರೆಯ ಸಿಬ್ಬಂದಿಯೂ ಕಡಿಮೆ ಇದ್ದರು.....
ಸಮಯ ಕಳೆದಷ್ಟೂ ನನ್ನ ತಾಳ್ಮೆ ಕಳೆದುಕೊಳ್ಳತೊಡಗಿತು...ಪ್ರತಿ ಹತ್ತು ನಿಮಿಷಕ್ಕೊಮ್ಮೆ ಅಲ್ಲಿಯ enquiry ಯಲ್ಲಿ ಕೇಳೋದು... ಅಲ್ಲಿಯೇ ಇದ್ದ ನಾರಯಣ ಮೂರ್ತಿಯ ಮುಂದೆ ಪ್ರಾರ್ಥನೆ ಮಾಡೋದು.. ಇದು ಸತತವಾಗಿ ಎರೆಡು ಘಂಟೆಗಳು ನಡೆಯಿತು... ಕೊನೆಗೆ ವಿಚಾರಣಾ ಕೇಂದ್ರದಿಂದ ಕರೆ ಬಂತು.. ಸೋಮಕೇಶವರೆಡ್ದಿ ಕಡೆಯವರು ಬನ್ನಿ ಅಂತ...

ಸೀದಾ ICO ಗೆ ಹೋಗಿ ಬೆಡ್ ಮೇಲಿದ್ದ ನಮ್ ತಂದೇನ ನೋಡ್ದೆ...ತಡಿಯಕ್ಕೆ ಆಗ್ಲಿಲ್ಲಾ.. ಕಣ್ಣಿನಿಂದ ಒಂದೇ ಸಮನೆ ಸುರಿಯತೊಡಗಿತು.. ಆಪ ನಿದ್ದೆ ಮಾಡ್ತಾ ಇದ್ರು... ಕಾಲಿಗೆ ಎದೆಗೆ ಪ್ಲಾಸ್ಟರ್ ಹಾಕಿದ್ದರು... ಕತ್ತಿನ ಪಕ್ಕದಲ್ಲಿ ಪೈಪ್ ಮೂಲಕ ದೇಹಕ್ಕೆ ಇಂಜೆಕ್ಟ್ ಮಾಡಿದ್ದರು... .. ಮಾತು ಹೊರಡದಂತಾಗಿತ್ತು. ಸುಮ್ಮನೆ ಹಾಗೇನೋಡುತ್ತಾ ನಿಂತೆ.. ಡಾಕ್ಟ್ರ ಬಂದು ಎಚ್ಚರಗೊಳಿಸೋವರೆಗೂ.. ಡಾಕ್ಟ್ರು ಬಂದು.. ಆಪ್ರೇಷನ್ ಸಕ್ಸಸ್ ಆಗಿದೆ ಎನೂ ಚಿಂತೆಯಿಲ್ಲಾ ಅಂತ ಹೇಳಿದಾಗ್ಲೇ ನನಗೆ ಮಾಮುಲು ಸ್ಥಿತಿಗೆ ಬಂದಿದ್ದು.. ಡಾಕ್ಟ್ರಿಗೆ ಅದೆಷ್ಟು ಥ್ಯಾಂಕ್ಸ್ ಹೇಳಿದ್ನೋ ಗೊತ್ತಿಲ್ಲಾ..
ಹಾಗೇ ಆ ಗೊತ್ತಿಲ್ಲದ ನೋಡದ ದೇವರಿಗೆ...

ಇದಾದ ಮೂರು ತಿಂಗಳಿಗೆ ಮತ್ತೊಂದು ಸರ್ಜರಿ ನಡೆದು ಅವ್ರಿಗೆ permanent pace maker ಅಳವಡಿಸಲಾಯಿತು...
ಈಗ ಅವ್ರು ಆರಾಮಾಗಿದ್ದಾರೆ... ನನ್ ಬೈಕಲ್ಲಿ ಹಿಂದೆ ಕೂತ್ಕೊಂಡ್ mp3 ಪ್ಲೇಯರ್ ಹಾಕ್ಕೊಂಡು ಜಂ ಅಂತಾ ಊರೆಲ್ಲಾ ಸುತ್ತುತ್ತಾರೆ... ಅದಕ್ಕಿಂತ ಖುಷಿ ಮತ್ತೊಂದು ನನಗೆ ಕೋಡೋದಿಲ್ಲಾ...

ಅಂತಹ ಕ್ಲಿಷ್ಟ ಗಳಿಗೆಗಳಲ್ಲಿ ನಮಗೆ ಆತ್ಮ ಸ್ಥೈರ್ಯ ತುಂಬೋ ದೇವ್ರು ಅನ್ನೋ concept ಬಗ್ಗೆ ಇದ್ದಾನೊ ಇಲ್ಲವೋ ಅಂತ ತಲೆ ಕೆಡಿಸ್ಕೊಳ್ಳೊ ಅವಶ್ಯಕತೆ ಇದೆ ಅಂತ ನನಗೆ ಅನಿಸೋದಿಲ್ಲಾ...

ಈ ಬ್ಲಾಗ್ ಬರೆಯಲು ಪರೋಕ್ಷವಾಗಿ ಉತ್ತೇಜಿಸಿದ ಆಸು ಹೆಗ್ಡೆ ಮತ್ತು ಶ್ಯಾಮಲಜನಾರ್ಧನ್ ರವರಿಗೆ.. ನನ್ನಿ..

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಮಂಸೋರೆ ರವೆರೆ,

ನಿಮ್ಮ ಇ ದೇವರ ಬಗೆಗಿನ ಕಾನ್ಸೆಪ್ಟ್ ನನಗೆ ಬಹಳ ಹಿಡಿಸ್ತು...ನಮಗೆ(ಮಾನವರಿಗೆ) ತಿಳಿಯದ ಅಥವ ನಮ್ಮ ಬುದ್ದಿಶಕ್ತಿಗೆ ಮಿರಿದ ಅನೇಕ ವಿಶಯಗಳು ಇ ಬೂಮಿಯ ಮೇಲೆ(ಹೊರಗೆ ಕೂಡಾ) ಎಷ್ಟೋ ಇವೆ....ನಮ್ಗೆ ಕಾಣದ ಹಾಗೆ ಯವುದೊ ಒಂದು ಶಕ್ತಿ ಇದೆ..ಅದಕ್ಕೆ ನಾವೂ ದೇವರು ಅಂತ ಹೆಸರು ಕೊಟ್ಟಿದ್ದೇವೆ ಅಷ್ಟೆ......

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇರಬಹುದು... ಕಂಡವರ್ಯಾರು.... ನಮ್ಮ ನಂಬಿಕೆನೆ ನಮ್ಗೆ ನಮ್ಮ ಹತ್ರಾನೆ ಇರೋ ಆ ಕಾಣದ ಶಕ್ತಿ... ಅದೇ ನಮಗೆ ಸೆಕ್ಯುರಿಟಿ ಗಾರ್ಡ್ (ಗಾಡ್).... ಪ್ರತಿಕ್ರಿಯೆಗೆ ನನ್ನಿ ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬರಹ ತುಂಬಾ ಮನಮುಟ್ಟುವಂತಿದೆ.

>>ಈಗ ಅವ್ರು ಆರಾಮಾಗಿದ್ದಾರೆ.
ಬಹಳ ಸಂತೋಷ್ವಾಯ್ತು ... :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಿಯ ಮಂಜುನಾಥ್ ಅವರೇ,
ತಮ್ಮ ಬರಹ ಮನಮುಟ್ಟುವಂತಿದೆ. ತಂದೆಯ ಮೇಲಿನ ನಿಮ್ಮ ಪ್ರೀತಿ, ‘ನಮ್ಮ ಕೈ ಮೀರಿದಾಗ ನಮಗೆ ಆತ್ಮಬಲವನ್ನು ನೀಡುವ ಕಾಣದ ದೈವೀ ಶಕ್ತಿ’ಯ ಬಗ್ಗೆ ನಿಮ್ಮ ನಂಬಿಕೆ, ಇಂದು ನಿಮ್ಮ ತಂದೆ ನಿಮ್ಮ ಜೊತೆ ಸಂತೋಷವಾಗಿ ಬೈಕ್‍ನಲ್ಲಿ ನಿಮ್ಮ ಹಿಂದೆ ಕುಳಿತು mp3 ಪ್ಲೇಯರ್‍ನಲ್ಲಿ ಹಾಡು ಕೇಳುತ್ತಾ ಬರುವ ವಿಚಾರ ಎಲ್ಲ ಮನಸ್ಸಿಗೆ ಹಿತ ನೀಡುವಂತಿವೆ. ದೇವರು ಅನ್ನೋ ಕಾನ್ಸೆಪ್ಟ್ ಅವರವರ ಭಾವಕ್ಕೆ, ಅವರವರ ಭಕುತಿಗೆ ಸಂಬಂಧಪಟ್ಟದ್ದು. ನೀವು ನಂಬಿದ ದೇವರು ನಿಮ್ಮನ್ನು ಕೈಬಿಟ್ಟಿಲ್ಲ. ಅದೇ ಸಂತೋಷ.
ಶೈಲಾಸ್ವಾಮಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ಶೈಲಾ ಮೇಡಮ್..
ನಮ್ ತಂದೆ ನಂಜೊತೆ ಬೈಕಲ್ಲಿ ಬರೋವಾಗ ಸಿಗೋ ಖುಷಿ ಅಷ್ಟಿಷ್ಟಲ್ಲಾ... ದೇವ್ರ ಬಗ್ಗೆ ನಾನು ಯಾವತ್ತೂ ಅಷ್ಟು ತಲೆ ಕೆಡಿಸ್ಕೊಂಡಿಲ್ಲಾ... ನನಗೆ ತೀರಾ ಸಂದಿಗ್ದ ಪರಿಸ್ಥಿತಿಗಳು ಎದುರಾದಾಗ.. ಆ ಕಾಣದ ದೇವ್ರ ಮೇಲೆ ಬಾರ ಹಾಕಿ ನಾನು ಮಾಡಬೇಕಾದ ಕೆಲಸ ಮಾಡಿಮುಗಿಸುತ್ತೇನೆ... ಕಾರ್ಯ ನಮ್ದು.. ಅದರ result ಆಮೇಲೆ ನೋಡೋದು...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಮಗೆ ಯಾರೂ ಇಲ್ಲ ನಾವು ಅಸಹಾಯಕರು ಅಂದುಕೊಂಡಾಗ ನಮ್ಮೊಡನೆ ದೇವರಿದ್ದಾನೆ ಅಂದುಕೊಂಡರೆ ಎಷ್ಟೋ ಸಮಾಧಾನ ಸಿಗುತ್ತದೆ,
ಅನುಭವ ಚೆನ್ನಾಗಿ ಬರೆದಿದ್ದೀರಿ.

ಸೀತ ಆರ್. ಮೊರಬ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಆಗಿನ ಸ್ಥಿತಿ ಎಣಿಸಿದಾಗ ನನಗೂ ಭಯವಾಯಿತು. ಈಗ ನಿಮ್ಮ ತಂದೆ ಆರಾಮಾಗಿದ್ದರೆಂದು ತಿಳಿದು ಸಂತೋಷವಾಯಿತು. ಶೈಲಸ್ವಾಮಿಯವರು ಹೇಳಿದಂತೆ ದೇವರನ್ನು ನಂಬುವುದು ಬಿಡುವುದು ಅವರವರಿಗೆ ಬಿಟ್ಟಿದ್ದು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನ ಅಬಿಪ್ರಾಯವೂ ಅದೇ..
ಪ್ರತಿಕ್ರಿಯೆಗೆ ನನ್ನಿ ನಂದಕುಮಾರ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಂತಹ ಪರಿಸ್ಥಿತಿಯನ್ನು ನೀವು ನಿಭಾಯಿಸಿದ ರೀತಿ ಅದ್ಭುತ.

ನಿಜಕ್ಕೂ ನಿಮ್ಮ ಸ್ಥೈರ್ಯವನ್ನು ಮೆಚ್ಚುತ್ತೇನೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಅಂದಿನ ಪರಿಸ್ತಿತಿ ನೆನೆದರೆ ಭಯವಾಗುತ್ತಲ್ರೀ, ದೇವರು ದೊಡ್ಡವನು ಜೊತೆಗೆ ಆ ಡಾಕ್ಟರ್ಗಳು ಕೂಡ ಹಬ್ಬದ ದಿನ ನಿಮ್ಮ ತಂದೆ ಉಳಿಸಿಕೊಟ್ಟಿದಾರೆ ಅವರಿಗೂ ಒಳ್ಳೆಯದಾಗಲಿ :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ನರೇಂದ್ರ...
ಡಾ.ಕಣ್ಣನ್ ಅಂತ ಅವ್ರ ಹೆಸರು...
ನಿಮ್ಮ ಪ್ರತಿಕ್ರಿಯೆಗೆ ನನ್ನಿ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೊದಲನೇ ನಾಲ್ಕೈದು ಸಾಲು ಓದಿ, ಆಮೇಲೆ ಕೊನೆ ಓದಿ, (ಸಮಾಧಾನ ಆಯ್ತು) ನಂತರವೇ ಮಧ್ಯದ ಬಿಟ್ಟಿದ್ದ ಸಾಲುಗಳನ್ನು ಓದಿದ್ದು. ನಿಜ. ನ೦ಬಿಕೆ ಮುಖ್ಯ. ದೇವರು ಅನ್ನೋದು ಕೇವಲ ಹೆಸರಷ್ಟೇ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಅಪ್ಪನನ್ನ ಉಳಿಸಿಕೊಂಡ ನೀವು ನಿಜಕ್ಕೂ ಪುಣ್ಯವಂತರು.. ದೇವರು ನಮಗೆ ಅಪ್ಪನ್ನ ಉಳಿಸಿಕೊಳ್ಳೊ ಅವಕಾಶನೇ ಕೊಡ್ಲಿಲ್ಲ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕ್ಷಮಿಸಿ.. ಇದಕ್ಕೆ ನನಗೆ ಏನು ಹೇಳಲು ತೋಚುತ್ತಿಲ್ಲಾ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.