ನಮಗೆ ಹೊಸ ರಾಷ್ಟ್ರಗೀತೆ ಬೇಕೆ?

0

ಭರತಭೂಮಿ ಛಪ್ಪನೈವತ್ತಾರು ದೇಶಗಳ ನಾಡು. ಬ್ರಿಟೀಷರ ತೊತ್ತುಗಳಾಗಿದ್ದಾಗ, ನಮ್ಮಲ್ಲಿ ಸ್ವಾತಂತ್ರ್ಯದ ಕಿಚ್ಚನ್ನು ಹೊತ್ತಿಸಿ, ಖಂಡ ಭಾರತವನ್ನು ಅಖಂಡವಾಗಿಸಿ, ಬ್ರಿಟೀಷರ ವಿರುದ್ಧ ಹೋರಾಟ ನಡೆಸಿ, ಸ್ವಾತಂತ್ರವನ್ನು ಪಡೆಯಲು ‘ವಂದೇ ಮಾತರಂ‘ ಗೀತೆ ನೆರವಾಗಿದೆ ಎಂಬುದು ಒಂದು ಐತಿಹಾಸಿಕ ಸತ್ಯ. ಇದನ್ನು ಯಾರು ಅಲ್ಲಗಳೆಯುವುದಿಲ್ಲ. ತಾಯಿನಾಡನ್ನು ತನ್ನ ತಾಯಿಯಂತೆ ಕಾಣುವ ಜಾಯಮಾನ ಇಲ್ಲಿನ ಸಂಸ್ಕೃತಿಗೆ ಅನುಗುಣವಾಗಿದೆ. ಇದರಲ್ಲಿ ಯಾವುದೇ ಆಶ್ಚರ್ಯವಿಲ್ಲ.

ಅರ್ಧಗಂಟೆ: ಬಂಕಿಮ ಚಂದ್ರ ಚಟರ್ಜಿ ಅವರು ಒಂದು ಪತ್ರಿಕೆಯನ್ನು ನಡೆಸುತ್ತಿದ್ದರು. ಪುಟ ವಿನ್ಯಾಸಕ ಬಂದು, ಒಂದಷ್ಟು ಸ್ಥಳ ಉಳಿದಿದೆ, ಅದನ್ನು ತುಂಬಲು ಏನನ್ನಾದರೊ ಬರೆದು ಕೊಡಿ ಎಂದು ಕೇಳಿದಾಗ, ಬಂಕಿಮರು ಅವನಿಗೆ ಅರ್ಧ ಗಂಟೆ ಬಿಟ್ಟು ಬರಲು ಹೇಳಿದರು. ಅರ್ಧ ಗಂಟೆಯ ನಂತರ ಬಂದಾಗ ಅವನಿಗೆ ಒಂದುಹಾಳೆಯನ್ನು ಕೊಟ್ಟರು. ಅದರಲ್ಲಿ ‘ವಂದೇ ಮಾತರಂ‘ ಎಂಬ ಗೀತೆಯಿತ್ತು. ಅದನ್ನು ಓದಿದ ಪುಟ ವಿನ್ಯಾಸಕ, ಅರ್ಧ ಸಂಸ್ಕೃತ ಹಾಗೂ ಅರ್ಧ ಬಂಗಾಳಿಯಲ್ಲಿರುವ ಈ ಗೀತೆಯನ್ನು ಯಾರು ತಾನೇ ಓದುತ್ತಾರೆ ಎಂದು ಅನುಮಾನವನ್ನು ವ್ಯಕ್ತಪಡಿಸಿದನು. ಆಗ ಬಂಕಿಮರು ನಗುತ್ತಾ ಇನ್ನು ೨೫ ವರ್ಷಗಳಲ್ಲಿ ಈ ಗೀತೆ ಎಲ್ಲ ಭಾರತೀಯರ ತುಟಿಗಳ ಮೇಲಿರುತ್ತದೆ ನೋಡು ಎಂದರು. ಇದು ನಡೆದದ್ದು ಸೆಪ್ಟೆಂಬರ್ ೭, ೧೯೭೬. ಬಂಕಿಮರು ೧೮೮೨ರಲ್ಲಿ ‘ಆನಂದಮಠ‘ ಎಂಬ ಕಾದಂಬರಿಯನ್ನು ಬರೆಯುತ್ತಿದ್ದರು. ಅದರಲ್ಲಿ ವಂದೇ ಮಾತರಂ ಹಾಡನ್ನು ಸೇರಿಸಿದರು. ಕಾದಂಬರಿಯ ಮೂಲಕ ಇದು ಬಂಗಾಳದಲ್ಲಿ ಎಲ್ಲರಿಗೂ ಒಮ್ಮೆಲೆ ಪರಿಚಯವಾಗಿಬಿಟ್ಟಿತು. ಮೊದಲ ಎರಡು ಪದ್ಯಗಳಲ್ಲಿ ಭಾರತ ದೇಶದ ಸುಂದರ ವರ್ಣನೆ. ಉಳಿದ ನಾಲ್ಕು ಪದ್ಯಗಳಲ್ಲಿ ಭಾರತವನ್ನು ದುರ್ಗೆ ಹೋಲಿಸಿ ವರ್ಣನೆ. ಅದ್ಭುತವಾಗಿತ್ತು ಪದ್ಯ! ಬಂಗಾಳಿ ಜನರು ದುರ್ಗೆಯನ್ನು ತಮ್ಮ ಮಗಳು, ಬಂಗಾಳವೇ ಆಕೆಯ ತಾಯಿ ಮನೆ ಎಂದು ಭಾವಿಸುತ್ತಾರೆ. ಹಾಗಾಗಿ ಈ ಗೀತೆ ಜನಪ್ರಿಯವಾಯಿತು. ಕ್ರಮೇಣ ಈ ಗೀತೆಯು ಭಾರತಾದ್ಯಂತ ಹರಡಿ ಸ್ವಾತಂತ್ರ್ಯಹೋರಾಟಗಾರರ ಉಸಿರಾಯಿತು.

“ರಾಷ್ಟ್ರಗೀತೆ“: ೧೮೯೬ ಕಲ್ಕತ್ತ ಕಾಂಗ್ರೆಸ್ ಅಧಿವೇಶನದಲ್ಲಿ ಶ್ರೀ ರವೀಂದ್ರನಾಥ ಠಾಕೂರ್ ಅವರು ಈ ಗೀತೆಯನ್ನು ಹಾಡಿದರು. ಕಾಂಗ್ರೆಸ್ಸಿಗರು ಈ ಗೀತೆಯ ಮೂಲಕ ಹೋರಾಟಗಾರರನ್ನು ಒಟ್ಟುಗೂಡಿಸಬಹುದು ಎಂಬ ವಿಷಯವನ್ನು ಮನಗಂಡರು. ೧೯೦೫ ರ ಬೆನಾರಸ್ ಕಾಂಗ್ರೆಸ್ ಅಧಿವೇಶನದಲ್ಲಿ, ಇದನ್ನು ‘ರಾಷ್ಟ್ರಗೀತೆ‘ ಎಂದು ಅಂಗೀಕರಿಸಿದರು. ಸರಳಾದೇವಿ ಚೌಧುರಾಣಿಯವರಿಂದ ಹಾಡಿಸಿದರು. ಈ ಅಧಿಕೃತ ಅಂಗೀಕಾರದಿಂದ ವಂದೇ ಮಾತರಂ ಅಪಾರ ಜನಪ್ರಿಯತೆಯನ್ನು ಪಡೆಯಿತು.

ವಿವಾದ: ಬಂಕಿಮಚಂದ್ರ ಚಟರ್ಜಿಯವರ ವಂದೇ ಮಾತರಂ ಗೀತೆಯಲ್ಲಿ ಆರು ಪದ್ಯಗಳಿವೆ. ಮೊದಲ ಎರಡು ಪದ್ಯದಲ್ಲಿ ಭರತಭೂಮಿಯ ಸುಂದರ ವರ್ಣನೆಯಿದೆ. ಮುಂದಿನ ನಾಲ್ಕು ಪದ್ಯಗಳಲ್ಲಿ ಭರತಭೂಮಿಯನ್ನು ದುರ್ಗೆಗೆ ಹೋಲಿಸಿ ಬರೆದ ಸುಂದರ ಚಿತ್ರವಿದೆ. ತಾಯಿಗೂ ತಾಯಿ ಭೂಮಿಗೂ ವ್ಯತ್ಯಾಸ ಕಾಣದ ಭಾರತೀಯರು ಈ ಗೀತಯನ್ನು ಮನಃಪೂರ್ವಕವಾಗಿ ಒಪ್ಪಿದರು. ಆದರೆ ‘ಅಲ್ಲಾನ ಹೊರತಾಗಿ ಮತ್ಯಾರಿಗೂ ತಲೆಬಾಗೆವು‘ ಎಂಬ ನಿಲುವಿನ ಮುಸ್ಲೀಮರು ಈ ಗೀತೆಯನ್ನು ವಿರೋಧಿಸಿದರು. ಅದಕ್ಕೆ ಪೂರಕವಾಗಿ ರವೀಂದ್ರನಾಥ ಠಾಕೂರ್ ಅವರು ಸುಭಾಶ್ ಚಂದ್ರ ಬೋಸರಿಗೆ ಪತ್ರ ಬರೆದು (೧೯೩೭) “ಹತ್ತು ತಲೆಗಳ ದುರ್ಗೆಯನ್ನು ಯಾವ ಮುಸಲ್ಮಾನನು ತಾಯಿನಾಡು ಎಂದು ಒಪ್ಪುವುದಕ್ಕೆ ಸಾಧ್ಯವಿಲ್ಲ‘ ಎಂದರು. ೧೯೩೭. ಇಂಡಿಯನ್ ನ್ಯಾಶನಲ್ ಕಾಂಗ್ರೆಸ್ ನೇತಾರರು ಈ ಬಗ್ಗೆ ವಿಚಾರ ಮಾಡಿದರು. ಮೊದಲು ಎರಡು ಪದ್ಯಗಳನ್ನು ಮಾತ್ರ ರಾಷ್ಟ್ರಗೀತೆಯೆಂದು ಅಂಗೀಕರಿಸಬೇಕೆಂದು ಉಳಿದ ನಾಲ್ಕನ್ನು ಬಿಟ್ಟುಬಿಡಬೇಕೆಂಬ ಅಂತಿಮ ತೀರ್ಮಾನಕ್ಕೆ ಬಂದರು. ಆ ನಂತರ ಎಲ್ಲ ಅಧಿವೇಶನದಲ್ಲಿ ಮೊದಲ ಎರಡು ಪದ್ಯಗಳನ್ನು ಮಾತ್ರ ಹಾಡಲಾರಂಭಿಸಿದರು.

ಯಾವುದು?  ಆಗಸ್ಟ್ ೧೫, ೧೯೪೭ ರಲ್ಲಿ ನಮಗೆ ಸ್ವಾತಂತ್ರ್ಯ ಬಂದಾಗ ನಮ್ಮ ರಾಷ್ಟ್ರಗೀತೆ ಯಾವುದಾಗಬೇಕು ಎಂಬ ಪ್ರಶ್ನೆ ಬಂದಿತು. ಅಂತಿಮವಾಗಿ ರವೀಂದ್ರನಾಥ ಠಾಕೂರ್ ಬರೆದ ಜನಗಣಮನ ಆಗಬೇಕೋ ಅಥವಾ ಬಂಕಿಮಚಂದ್ರ ಚಟರ್ಜಿ ಬರೆದ ವಂದೇ ಮಾತರಂ ಆಗಬೇಕೋ ಎಂಬ ಚರ್ಚೆ ಆರಂಭವಾಯಿತು. ೧೯೧೧ ರಲ್ಲಿ ಪಂಚಮ ಜಾರ್ಜನ ಸಿಂಹಾಸನಾರೋಹಣ ಸಮಾರಂಭ ನಡೆಯಿತು. ಅದರ ಅಂಗವಾಗಿ ರವೀಂದ್ರನಾಥ್ ಠಾಕೂರ್ ಅವರು ‘ಜನಗಣಮನ ಅಧಿನಾಯಕ ಜಯಹೇ‘ ಗೀತೆಯನ್ನು ಡಿಸೆಂಬರ್ ರಚಿಸಿದರು. ಡಿಸೆಂಬರ್ ೨೭, ೧೯೧೧ ರ ಕಲ್ಕತ್ತ ಅಧಿವೇಶನದಲ್ಲಿ, ಪಂಚಮ ಜಾರ್ಜನ ಭಾರತಯಾತ್ರೆಯ ಸ್ವಾಗತ ಗೀತೆಯನ್ನಾಗಿ ಇದನ್ನು ಹಾಡಲಾಯಿತು. “ಭಾರತೀಯ ಜನ-ಗಣ-ಮನಗಳ ಅಧಿನಾಯಕಾನಾಗಿರುವ ಹೇ ಪಂಚಮ ಜಾರ್ಜನೇ ನಿನಗೆ ಸ್ವಾಗತ“ ಎಂಬುದು ಈ ಹಾಡಿನ ಆಶಯವಾಗಿತ್ತು. ಇದಕ್ಕೆ ಸಾಕ್ಷಿಯಾಗಿ ಅಂದಿನ ಪತ್ರಿಕೆಗಳನ್ನು ಗಮನಿಸಬಹುದು. ಆದರೆ ಈ ಗೀತೆಯಲ್ಲಿ ಬರುವ ‘ಭಾಗ್ಯವಿಧಾತ‘ ಪಂಚಮಜಾರ್ಜ್ ಅಲ್ಲ, ಆತ “ಭಗವಂತ“ ಎಂಬ ವಿವರಣೆಯನ್ನು ಇಂದಿನ ದಿನಗಳಲ್ಲಿ ನೀಡಲಾಗುತ್ತಿದೆ. ಆದರೆ ಠಾಕೂರರು ಪಂಚಮ ಜಾರ್ಜನ ವಂದಿಮಾಗದರಾಗಿ ಬರೆದಿದ್ದಾರೆ ಎನ್ನುವುದು ಒಂದು ಐತಿಹಾಸಿಕ ಸತ್ಯವಾಗಿದೆ.

ವಿಜಯ: ಅಂತಿಮವಾಗಿ ಠಾಕೂರರ ಜನಗಣಮನವನ್ನು ರಾಷ್ಟ್ರಗೀತೆಯನ್ನಾಗಿ ಆಯ್ಕೆ ಮಾಡಲಾಯಿತು. ವಂದೇ ಮಾತರಂ ಗೀತೆಯನ್ನು ಪಾಶ್ಚಾತ್ಯ ವಾದ್ಯಸಂಗೀತದಲ್ಲಿ ನುಡಿಸುವುದು ಕಷ್ಟ, ಜನಗಣಮನವನ್ನು ನುಡಿಸುವುದು ಸುಲುಭ ಎಂಬ ಕಾರಣವನ್ನು ನೀಡಿ, ವಂದೇ ಮಾತರಮ್ಮನ್ನು ತಳ್ಳಿಹಾಕಿ ಜನಗಣಮನವನ್ನು ರಾಷ್ಟ್ರಗೀತೆಯನ್ನಾಗಿ ಸ್ವೀಕರಿಸಿದರು. ಮುಸ್ಲೀಮರನ್ನು ಸಂತೃಪ್ತಗೊಳಿಸಿದರು. ಆದರೆ ಬ್ವಹುಸಂಖ್ಯಾತ ಹಿಂದೂ ಕಣ್ಣೀರನ್ನು ಒರೆಸಲು ಡಾ.ರಾಜೇಂದ್ರಪ್ರಸಾದ್ ಅವರು ಜನವರಿ ೨೬, ೧೯೫೦ರಲ್ಲಿ ಲೋಕಸಭೆಯಲ್ಲಿ ‘ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಐತಿಹಾಸಿಕ ಸ್ಥಾನ ಪಡೆದಿರುವ ‘ವಂದೇ ಮಾತರಂ‘ ಗೀತೆಯನ್ನು ಜನಮನಗಣ ಗೀತೆಗೆ ಸರಿಸಮಾನವಾಗಿ ರಾಷ್ಟ್ರಗೀತೆಯೆಂದು ಪರಿಗಣಿಸತಕ್ಕದ್ದು‘ ಎಂದು ಘೋಷಿಸಿದರು.

ಸತ್ಯ: ಒಂದು ರಾಷ್ಟ್ರಕ್ಕೆ ಎರಡು ರಾಷ್ಟ್ರಗೀತೆಗಳು ಇರಲು ಸಾಧ್ಯವಿಲ್ಲ. ಆದರೆ ನಮ್ಮ ಸಂವಿಧಾನ ಜನಗಣಮನ ಹಾಗೂ ವಂದೇ ಮಾತರಂ ಎರಡನ್ನೂ ರಾಷ್ಟ್ರಗೀತೆಗಳೆಂದು ಘೋಷಿಸಿದೆ. ಆದರೆ ಅಧಿಕೃತವಾಗಿ ಎಲ್ಲಕಡೆ ಜನಗಣಮನವನ್ನೇ ಹಾಡಲಾಗುತ್ತದೆ. ವಂದೇ ಮಾತರಂ ಏನಿದ್ದರೂ ಆಕಾಶವಾಣಿ ಬೆಳಗಿನ ಪ್ರಸಾರದ ಆರಂಭಕ್ಕೆ ಮಾತ್ರ ಸೀಮಿತವಾಗಿದೆ. ಹಾಗಾಗಿ ವಂದೇ ಮಾತರಂ ಗೀತೆಯನ್ನೂ ಸಹಾ ರಾಷ್ಟ್ರಗೀತೆಯೆಂದು ಕರೆದಿರುವುದು ಒಂದು ರಾಜಕೀಯ ತಂತ್ರವಾಗಿ ಮಾತ್ರ ಕಾಣುತ್ತದೆ.

ಶತಮಾನ: ವಂದೇ ಮಾತರಂ ಗೀತೆಯ ರಚನೆಯಾದದ್ದು ಸೆಪ್ಟೆಂಬರ್ ೭, ೧೮೮೬ರಂದು. ಇದನ್ನು ರಾಷ್ಟ್ರಗೀತೆಯೆಂದು ಪರಿಗಣಿಸಿದ್ದು ೧೯೦೫ ರಲ್ಲಿ. ಹಾಗಾಗಿ ಈ ದಿನ ಈ ಗೀತೆ ರಚನೆಯಾಗಿ ೧೩೦ ವರ್ಷ ಹಾಗೂ ರಾಷ್ಟ್ರಗೀತೆಯಾಗಿ ಅಂಗೀಕಾರವಾಗಿ ೧೦೦ ವರ್ಷಗಳಾಗಿವೆ. ಈ ಒಂದು ಸಂದರ್ಭದಲ್ಲಿ, ಸೆಪ್ಟೆಂಬರ್ ೭, ೨೦೦೬ ರಂದು ಈ ಗೀತೆಯನ್ನು ರಾಷ್ಟ್ರಾದ್ಯಂತ ಹಾಡಬೇಕೋ ಅಥವಾ ಬೇಡವೋ ಎಂಬ ಪ್ರಶ್ನೆ ಹುಟ್ಟಿದೆ. ಬಿಜೆಪಿ ಆಡಳಿತ ರಾಜ್ಯಗಳು ಹಾಡಬೇಕು ಎಂದರೆ ಕಾಂಗ್ರೆಸ್ ಆಡಳಿತದ ರಾಜ್ಯಗಳು ನಿಮ್ಮಿಷ್ಟ ಎಂದುಬಿಟ್ಟಿವೆ. ಈ ಹಿನ್ನೆಲೆಯಲ್ಲಿ ದೇಶಪ್ರೇಮಕ್ಕಿಂತ ಕೊಳೆತ ರಾಜಕೀಯದ ಗಮಲು ಅಧಿಕವಾಗಿದೆ. ಅಲ್ಪಸಂಖ್ಯಾತ ಮುಸ್ಲೀಂ ಹಾಗೂ ಕ್ರಿಶ್ಚಿಯನ್ನರನ್ನು (ಕೆಲವು ಕ್ರಿಶ್ಚಿಯನ್ ಶಾಲೆಗಳಲ್ಲಿ ಜನಗಣಮನವನ್ನೂ ಹಾಡುವುದಿಲ್ಲ) ಮುಖ್ಯವಾಹಿನಿಯಲ್ಲಿ ಕರೆತರುವುದರ ಬದಲು ಅವರು ಪ್ರತ್ಯೇಕವಾಗಿ ಇರುವಂತೆಯೇ ನೋಡಿಕೊಳ್ಳಲಾಗುತ್ತದೆ. ರಾಷ್ಟ್ರಗೀತೆ ಎನ್ನುವುದು ಜಾತಿ ಮತ ಧರ್ಮಗಳನ್ನು ಮೀರಿ ಇರಬೇಕು ಎಂಬ ಕನಿಷ್ಠ ತಿಳುವಳಿಕೆ ಯಾರಿಗೂ ಇಲ್ಲವಾಗಿದೆ.

ಹೊಸ ಗೀತೆ?  ಜನಗಣಮನವು ಪಂಚಮ ಜಾರ್ಜನ ಭಟ್ಟಂಗಿ ಗೀತೆಯಾದರೆ, ವಂದೇ ಮಾತರಂ ಮುಸ್ಲೀಮರ ಮನಸ್ಸಿಗೆ ನೋವನ್ನುಂಟು ಮಾಡುತ್ತದೆ, ಅದನ್ನು ರಾಷ್ಟ್ರಗೀತೆಯನ್ನಾಗಿ ಮಾಡಲು ಸಾಧ್ಯವೇ ಇಲ್ಲ ಎಂದು ವೋಟ್ ಪ್ರಿಯ ರಾಜಕಾರಣಿಗಳ ನಿಲುವಾದರೆ, ಓರ್ವ ಸಾಮಾನ್ಯ ಭಾರತೀಯ ಹೆಮ್ಮೆ ಪಡಬಹುದಾದಂತಹ ಒಂದು ಹೊಸ ರಾಷ್ಟ್ರಗೀತೆಯನ್ನು ನಾವು ಇನ್ನಾದರೂ ರೂಪಿಸಿಕೊಳ್ಳಬಹುದಲ್ಲವೆ! ಭಾರತವು ಜಗತ್ತಿಗೆ ವೇದ, ಉಪನಿಷತ್ತು, ಗೀತೆ, ರಾಮಾಯಣ, ಮಹಾಭಾರತಗಳಂತಹ ಮಹಾನ್ ಕೃತಿಗಳನ್ನು ನೀಡಿದೆ. ಇಂತಹ ದೇಶವು ತನಗೆ ಸಮ್ಮತವಾಗುವಂತಹ ಒಂದು ಗೀತೆಯನ್ನು ರಚಿಸಿಕೊಳ್ಳಲು ಸಾಧ್ಯವಿಲ್ಲವೇ? ‘ಮಾನವೀಯತೆಯೇ ದೊಡ್ಡದು‘ ಎಂಬ ಆಶಯದ ಒಂದು ಹೊಸ ಗೀತೆಯನ್ನು ರಚಿಸಿ, ಅದನ್ನು ರಾಷ್ಟ್ರಗೀತೆಯನ್ನಾಗಿ ಮಾಡಬಹುದಲ್ಲವೆ?

(ಟಿಪ್ಪಣಿ :- ಮೂಲಲೇಖನವನ್ನು ಯೂನಿಕೋಡ್ ಗೆ ಬದಲಾಯಿಸಿ ಹಾಕಲಾಗಿದೆ - ನಿರ್ವಾಹಕರು )

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಸರ್,
ನನಗೆ ನಿಮ್ಮ ಈ ಲೇಖನವನ್ನು ಓದಲಾಗುತ್ತಿಲ್ಲ ಏಕೆಂದು ತಿಳಿಸುವಿರಾ ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಂಬಿಕಾ ಅವರೆ

ನಾನು ಕಂಪ್ಯೂಟರ್ ಅನಕ್ಷರಸ್ಥ.
ಕನ್ನಡವನ್ನು ಬರಹ ೨೦೦೦ಎ ತಂತ್ರಾಂಶವನ್ನು ಬಳಸ್ಸುವುದರ ಮೂಲಕ ಕಲಿತೆ. ಅದೇ ತಂತ್ರಾಂಶದಲ್ಲಿ ಬರೆದ ಲೇಖನವನ್ನು ನಕಲು ಮಾಡಿ ಇಲ್ಲಿ ಲೇಪಿಸಿದೆ. ಅದು ಈ ರೂಪದಲ್ಲಿ ಉಳಿದುಬಿಟ್ಟಿದೆ. ಇದನ್ನು ಬರಹ ೭.೦ಕ್ಕೆ ಪರಿವರ್ತಿಸಿ, ಮರು ಲೇಪಿಸಿದರೆ ಚೆನ್ನಾಗಿರುತ್ತದೆ. ಅದು ನನಗೆ ತಿಳಿಯದ ಕಾರಣ ಹಾಗೆಯೇ ಉಳಿದುಬಿಟ್ಟಿದೆ. ಇದನ್ನು ಓದಬೇಕೆಂದರೆ, ಇದನ್ನು ನಕಲು ಮಾದಿ ವರ್ಡಿನಲ್ಲಿ ಲೇಪಿಸಿ, ಬರಹ ೨೦೦೦ಎ ಬಳಸಿ ಓದಬೇಕಾಗುತ್ತದೆ. ಇಲ್ಲವೇ ನಿಮಗೆ ಬರಹ ೭.೦ಕ್ಕೆ ಪರಿವರ್ತನೆ ಮಾಡುವುದು ಗೊತ್ತಿದ್ದರೆ, ದಯವಿಟ್ಟು ಪರಿವರ್ತಿಸಿ. ಪುಣ್ಯಕಟ್ಟಿಕೊಳ್ಳಿ.

-ನಾಸೋ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೂಲ ಪ್ರತಿ ಕಳುಹಿಸಿಕೊಡಿ (ಡಾಕ್ಯುಮೆಂಟ್ ರೂಪದಲ್ಲಿ), ಕನ್ವರ್ಟ್ ಮಾಡಿ ಹಾಕೋಣವಂತೆ :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸರ್
ಯುನಿಕೋಡ್ಗೆ ಬದಲಾಯಿಸಿ ಸಂಪದದ ಮಿಂಚಂಚೆಗೆ ಕಳಿಸಿದಿನಿ..
.
ನಿಮ್ಮ ಹಿಂದಿನ ಯಾವುದಾದರೂ ಬರಹಗಳನ್ನು ಬದಲಾಯಿಸಬೇಕಾದರೆ ಬರಹ 7.0 ಅನುಸ್ಥಾಪಿಸಿ ಮತ್ತೆ Font Converter ಬಳಸಿ.
ಹೆಚ್ಚಿನ ಮಾಹಿತಿಗೆ ಇಲ್ಲಿ ತಾಗಿ.. http://www.baraha.com/help/kb/converting_brh_files.htm

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನ ಪತ್ರಕ್ಕೆ ಪ್ರತಿಕ್ರಿಯಿಸಿದ್ದೀರಿ. ಧನ್ಯವಾದಗಳು ಸೋಮೇಶ್ವರ್ ಸರ್,
ನನಗೂ ಕಂಪ್ಯೂಟರ್ ತಿಳುವಳಿಕೆ ತುಂಬಾ ಕಡಿಮೆ. ವಿ.ಖ ಅವರು ಹಾಗೂ ಹರಿಪ್ರಸಾದ್ ನಾಡಿಗ್ ಅವರು ನಿಮ್ಮ ಲೇಖನವನ್ನು ಓದಲು ಅನುವು ಮಾಡಿಕೊಟ್ಟಿದ್ದಾರೆ. ಅವರಿಗೂ ನನ್ನ ವಂದನೆಗಳು.
ಧನ್ಯವಾದಗಳು ವಿ.ಖ ಅವರಿಗೆ ಹಾಗೂ ಹರಿಪ್ರಸಾದ್ ನಾಡಿಗ್ ಅವರಿಗೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹರಿಪ್ರಸಾದರಿಗೂ ಹಾಗೂ ಖ.ವಿ ಅವರಿಗೂ ಧನ್ಯವಾದಗಳು

-ನಾಸೋ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾಸೋರವರೆ,

ಟಾಗೋರರು 'ಜನಗಣಮನ' ವನ್ನು ೫ ನೆಯ ಜಾರ್ಜ್ ಗಾಗಿ ಬರೆದದ್ದೆನ್ನುವುದಕ್ಕೆ ಸಾಕ್ಷಿ ಏನು? ವಿಕಿ ಬೇರೇನನ್ನೋ ಹೇಳುತ್ತದಲ್ಲ. ಅಂತೆಯೇ ಬ್ರಿಟಿಷರ ಆಡಳಿತವನ್ನು ಅವರ ಶೈಕ್ಷಣಿಕ ಕ್ರಮವನ್ನು ಮೊದಲಿನಿಂದಲೂ ವಿರೋಧಿಸುತ್ತ ಬಂದಿದ್ದ ಟಾಗೋರರು ಹೀಗೆ ಭಟ್ಟ೦ಗಿಗಳಾಗಿ ಬರೆದಿದ್ದಾರೆನ್ನುವುದು ಹೆಚ್ಚಿನ ಸಾಕ್ಷಿಗಳನ್ನು ಕೇಳುತ್ತದೆಯಲ್ಲವೇ? ಈ ಗೀತೆ ಅವರ ಗೀತಾ೦ಜಲಿ ಕೃತಿಯಲ್ಲಿದೆಯೇ?

ಆದಾಗ್ಯೂ, ಬೇರೆಯಾರನ್ನೋ (ವಿಧಿ / ದೇವರು / ಜಾರ್ಜ್) ಹೊಗಳುವ ಗೀತೆಗಿ೦ತ ನಮ್ಮ ದೇಶವನ್ನು ಇನ್ನು ಚೆನ್ನಾಗಿ ಪರಿಚಯಿಸುವ , ದೇಶಭಕ್ತಿಯನ್ನು ಬಿ೦ಬಿಸುವ ಗೀತೆಯೊ೦ದರ ಅಗತ್ಯವಿದೆಯೆನಿಸುತ್ತದೆ.

ನಮ್ಮ ಭಾಷೆ ನಮಗೆಷ್ಟೇ ಅಪ್ಯಾಯಮಾನವಾಗಿದ್ದರು ಇನ್ನೊಂದು ಭಾಷೆಯನ್ನೂ ಬಡ ಭಾಷೆಯೆನ್ನುವುದು ಆ ಭಾಷೆಗೆ ಅಗೌರವ ತೋರಿಸಿದನ್ತಾಗುವುದಿಲ್ಲವೇ? ಇಡೀ ಭಾರತ ಒಪ್ಪುವ೦ತಹ ಭಾಷೆ ಇಲ್ಲದಿದ್ದರೂ ಹಿ೦ದಿಯನ್ನು ನಾವು ರಾಷ್ಟ್ರಭಾಶೆಯೆ೦ದು ಸ್ವೀಕರಿಸಿಲ್ಲವೇ? ಆ ಭಾಷೆಯಲ್ಲಿ ಗೀತೆಯೊ೦ದನ್ನು ಸ್ವೀಕರಿಸುವುದು ಕಷ್ಟವೇ ಅಥವಾ ತಪ್ಪೇ? ಈ ರೀತಿಯ ಪ್ರಾ೦ತೀಯ ಮನೋಭಾವವನ್ನು ಮೀರಿ ಬೆಳೆದು ನಿ೦ತಾಗ ಮಾತ್ರ ಅಲ್ಲವೇ ಭಾರತ ಒ೦ದು ರಾಷ್ಟ್ರವಾಗಿ ಬೆಳೆಯಲು ಸಾಧ್ಯ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿನುತಾ ಅವರೆ,

ರವೀಂದ್ರರು ‘ಭಾರತ ಭಾಗ್ಯ ವಿಧಾತ‘ ಎನ್ನುವ ಈ ಗೀತೆಯನ್ನು ೧೯೧೧ರಲ್ಲಿ ಬರೆದರು. ರವೀಂದ್ರರು ‘ತತ್ವ ಭೋದಿಕ ಪ್ರಕಾಶಿಕ‘ ಎಂಬ ಪತ್ರಿಕೆಯ ಸಂಪಾದಕರಾಗಿದ್ದರು. ಅದರಲ್ಲಿ ಇದು ಪ್ರಕಟವಾಯಿತು. ಇದು ಗೀತಾಂಜಲಿಯಲ್ಲಿಲ್ಲ. ಇದರಲ್ಲಿ ಬರುವ ಭಾಗ್ಯ ವಿಧಾತ ಎಂಬ ಮಾತು ಯಾರನ್ನು ಕುರಿತಾದದ್ದು ಎಂಬ ಪ್ರಶ್ನೆ ಗೀತೆ ಪ್ರಸ್ತುತವಾದ ದಿನದಿಂದ ಜನರನ್ನು ಕಾಡುತ್ತಿದೆ. ಇದರ ಇಂಗ್ಲೀಷ್ ಅನುವಾದದಲ್ಲಿಯೂ
O! Dispenser of India's destiny, "thou art the ruler of the minds of all people"
Thy name rouses the hearts of Punjab, Sindh, Gujarat, the Maratha country,

ಎಂದಿದೆ. ಯಾರು ಈ ರೂಲರ್ ?

The song was first sung in a session of the Congress in 1911. This session had decided to felicitate George V since he had announced the abrogation of the partition of Bengal, thereby conceding the success of the Swadeshi agitation, the first modern anti-colonial movement that had started in 1905. The day after the session the nationalist Indian papers normally -- and accurately -- reported that a Tagore composition had been sung. The Bengalee -- along with other Indian newspapers as well as the report of the Indian National Congress - reported that it was a "patriotic song". The following year the song was published as "Bharat -- Vidatha".
http://www.sacw.net/DC/CommunalismCollection/ArticlesArchive/pkDatta0920...

ಕಾಂಗ್ರೆಸ್ ಪಂಚಮ ಜಾರ್ಜನನ್ನು ಅಭಿನಂದಿಸುವ ಉದ್ದೇಶದಿಂದ ಈ ಹಾಡನ್ನು ಹಾಡಲಾಯಿತು ಎಂದು ಅಂದಿನ ಪತ್ರಿಕೆಗಳು ಹೇಳುತ್ತವೆ.

"The Bengali poet Babu Rabindranath Tagore sang a song composed by him specially to welcome the Emperor." (Statesman, Dec. 28, 1911)
"The proceedings began with the singing by Babu Rabindranath Tagore of a song specially composed by him in honour of the Emperor." (Englishman, Dec. 28, 1911)
"When the proceedings of the Indian National Congress began on Wednesday 27th December 1911, a Bengali song in welcome of the Emperor was sung. A resolution welcoming the Emperor and Empress was also adopted unanimously." (Indian, Dec. 29, 1911)

೧೯೧೧ರ ವೇಳೆಯಲ್ಲಿ ರವೀಂದ್ರರು ಬ್ರಿಟೀಷರನ್ನು ದ್ವೇಷಿಸುತ್ತಿದ್ದರು, ನಮ್ಮ ಸ್ವಾತಂತ್ರ್ಯ ಹೋರಾಟವನ್ನು ಮನಃಪೂರ್ವಕವಾಗಿ ಪ್ರೀತಿಸುತ್ತಿದ್ದರು ಎನ್ನುವುದಕ್ಕೆ ನನಗೆ ಆಧಾರ ದೊರೆತಿಲ್ಲ.

However, he also lampooned the Swadeshi movement, denouncing it in "The Cult of the Charka", an acrid 1925 essay.[83] Instead, he emphasized self-help and intellectual uplift of the masses, stating that British imperialism was a "political symptom of our social disease", urging Indians to accept that "there can be no question of blind revolution, but of steady and purposeful education".[84][85]

ರವೀಂದ್ರರು ಪಂಚಮ ಜಾರ್ಜನ್ನು ಅಧಿನಾಯಕ ಎಂದು ಕರೆದಿರುವರು ಎನ್ನುವುದು ನನ್ನ ನಂಬಿಕೆ. ಅಧಿನಾಯಕ ಎಂದರೆ ಎಂದರೆ ಭಗವಂತ ಎನ್ನುವ ಹೇಳಿಕೆಯು ನಮಗೆ ಕೇಳಿಬರುವುದು ೧೯೬೮ರ ನಂತರ. ಭಗವಂತನನ್ನು ಕರುಣಾಳು ಎಂದು ಕರೆಯುವ ರವೀಂದ್ರರು, ಅವನನ್ನು ರಾಜಕೀಯ ನಾಯಕನೇನೋ ಎಂಬಂತೆ ಜಯಕಾರ ಹಾಕಿ ಹೊಗಳುವುದು ಕೃತಕವೆನಿಸುತ್ತದೆ. ಅದು ಅವರ ಮಟ್ಟದ ವ್ಯಕ್ತಿತ್ವಕ್ಕೆ ಅಸಹಜವೆನಿಸುತ್ತದೆ.

-ನಾಸೋ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಾಯ್ಸರವರೆ...

ನಿಮ್ಮ ಪಾಂಡಿತ್ಯ ಪೂರ್ಣ ಪ್ರತಿಕ್ರಿಯೆಗೆ ಧನ್ಯವಾದಗಳು.

- ನಾನೂ ಭೂಗರ್ಭಶಾಸ್ತ್ರ ವಿದ್ಯಾರ್ಥಿಯಾಗಿ ಈ ಲೆಮೂರಿಯ. ಪಾಂಜಿಯ ಇತ್ಯಾದಿಗಳ ಬಗ್ಗೆ, ಶಾಸ್ತ್ರೀಯವಾಗಿ ಒದಿದ್ದೇನೆ. ಬಿಜಿಎಲ್ ಸ್ವಾಮಿಯವರ ತಮಿಳು ತಲೆಗಳ ನಡುವೆ ಕೃತಿಯಲ್ಲಿ ಸ್ವಾಮಿಗಳು ಅವರು ತಮಿಳರ ಮುಳುಗಿ ಹೋದ ನಾಡಿನ ಬಗ್ಗೆಯೂ ಬರೆದಿರುವುದನ್ನೂ ಅರ್ಥ ಮಾಡಿಕೊಂಡಿದ್ದೇನೆ.

- ಭಾರತ ಉಪಖಂಡದಲ್ಲಿ ಮಾನವ ಉಗಮ ಸ್ವತಂತ್ರವಾದುದರ ಬಗ್ಗೆ ಎಲ್ಲಿಯೂ ಉಲ್ಲೇಖವಿಲ್ಲ. ಮಾನವ ಜನಾಂಗವನ್ನು ನೆಗ್ರಾಯ್ಡ್, ಮಂಗೋಲಾಯ್ಡ್, ಕಕೇಶಿಯನ್, ಆಸ್ಟ್ರಲಾಯ್ಡ್ ಎಂದು ವಿಭಜಿಸುವುದುಂಟು. ಎಲ್ಲಿಯೂ ಭಾರತ / ದ್ರಾವಿಡ / ಕನ್ನಡಿಗರ ಪ್ರಸ್ತಾಪ ಬರುವುದಿಲ್ಲ. ಭಾರತ ಉಪಖಂಡಕ್ಕೆ ಕ್ರಮೇಣ ಜನರು ಬೇರೆ ಬೇರೆ ಕಾಲಮಾನದಲ್ಲಿ, ಬೇರೆ ಬೇರೆ ಕಡೆಗಳಿಂದ ಬಂದು ನೆಲೆಸಿದರು. ಮನುಷ್ಯನ ತಲೆ ಉದ್ದ-ಅಳತೆಗಳನ್ನು ಆಧಾರವಾಗಿಟ್ಟುಕೊಂಡು, ಬ್ರಾಕಿಸೆಫಾಲಿಕ್ (ಹ್ರಸ್ವಶೀರ್ಷಿಗಳು-ಲಲಾಟಾಸ್ಥಿಯಿಂದ ಶಿರಪೃಷ್ಥಾಸ್ಥಿಯವರೆಗಿನ ಲೆಕ್ಕ) ಆದ ದ್ರಾವಿಡರು ಸುಮಾರು ಕ್ರಿ.ಪೂ.೪ ನೆಯ ಸಹಸ್ರಮಾನದಲ್ಲಿ ವಾಯುವ್ಯ ದಿಕ್ಕಿನಿಂದ ಭಾರತವನ್ನು ಪ್ರವೇಶಿಸಿದರು ಎನ್ನಲಾಗಿದೆ.
The circumstances of the advent of Dravidian speakers in India are shrouded in mystery. There are vague linguistic and cultural ties with the Urals, with the Mediterranean area, and with Iran. It is possible that a Dravidian-speaking people that can be described as dolichocephalic (longheaded from front to back) Mediterraneans mixed with brachycephalic (short-headed from front to back) Armenoids and established themselves in northwestern India during the 4th millennium BC. Along their route, these immigrants may have possibly come into an intimate, prolonged contact with the Ural-Altaic speakers, thus explaining the striking affinities between the Dravidian and Ural-Altaic language groups. Between 2000 and 1500 BC, there was a fairly constant movement of Dravidian speakers from the northwest to the southeast of India, and about 1500 BC three distinct dialect groups probably existed: Proto-North Dravidian, Proto-Central Dravidian, and Proto-South Dravidian. The Dravidian people are generally a caucasoid group like their Indo-Aryan counterpart but the Dravidian are shown to have austroloid like features. This fact suggests that Mediterranean people who were the ancestors of the Dravidian, mixed with the native negrito groups to form a "somewhat hybrid" ethnicity. Although they resemble the Indo-Aryan in some ways, the Dravidians can be separated by culture, languages and aforementioned, certain facial traits. [16]

http://en.wikipedia.org/wiki/Dravidian_people

-ಹೀಗೆ ದ್ರಾವಿಡರು ಹೊರಗಿನಿಂದ ಬಂದು ಈ ಉಪಖಂಡದಲ್ಲಿ ನೆಲೆಸಿದರು. ಆಗ ಕಂದಮಿಳ್ ಇದ್ದಿರಬಹುದು. ನಂತರ ಕನ್ನಡ-ತಮಿಳು ಬೇರೆ ಬೇರೆಯಾಗಿರಬಹುದು. ಇದಕ್ಕೆ ಬೇಕಾದ ಆಧಾರ ಉತ್ಖನನದಲ್ಲಿ ಸಿಕ್ಕಿರಬಹುದು. ಇದೆಲ್ಲವೂ ಸರಿಯೇ! ಆದರೆ ದ್ರಾವಿಡರು (ಕನ್ನಡಿಗರು) ಮೂಲತಃ ದಕ್ಶಿಣಭಾರತದಲ್ಲಿ ಜನಿಸಲಿಲ್ಲ ಎಂದಷ್ಟೇ ನನ್ನ ಅಭಿಪ್ರಾಯ.

-ನನಗೆ ನಿಜಕ್ಕೂ ಕನ್ನಡ ಗೊತ್ತಿಲ್ಲ. ನಾನು ಶಂಕರಭಟ್ಟರ ಕೃತಿಗಳನ್ನು ಓದಿಲ್ಲ. ಹಾಗಾಗಿ ಶಂಕರಭಟ್ಟರ ಕೃತಿಗಳನ್ನು ಓದಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ.

- ನಾವು, ಹೊಸ ರಾಷ್ಟ್ರಗೀತೆ ನಮಗೆ ಬೇಕೆ ಎಂಬ ಪ್ರಶ್ನೆಯನ್ನು ಬಿಟ್ಟು ಸ್ವಲ್ಪ ದೂರ ಬಂದೆವು. ಪ್ರಸ್ತುತ ಭಾರತದಲ್ಲಿರುವ ಎಲ್ಲ ರಾಜ್ಯಗಳು ತಮ್ಮದೇ ಆದ ಭಾಷೆಯನ್ನು ಹೊಂದಿವೆ. ಅಧಿಕೃತವಾಗಿ ತಮ್ಮದೇ ಆದ ಪ್ರಾಣಿ, ಹಕ್ಕಿ, ಹೂವು/ವೃಕ್ಷಗಳನ್ನು ಲಾಂಛನವಾಗಿ ಹೊಂದಿವೆ. ಹಾಗೆಯೇ ಧ್ವಜ ಮತ್ತು ರಾಜ್ಯಗೀತೆಗಳನ್ನು ಹೊಂದುವಂತಿದ್ದರೆ ನಿಜಕ್ಕೂ ಚೆನ್ನಾಗಿರುತ್ತದೆ. ಕನ್ನಡದಲ್ಲಿ ರಾಷ್ಟ್ರಗೀತೆಯನ್ನು ಹಾಡುವಂತಾದರೆ, ಅದನ್ನು ನಾನು ಸ್ವಾಗತಿಸುತ್ತೇನೆ.

-ನಾಸೋ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾ ಸೋ ರವರೆ,
ನಿಮ್ಮ ಚಿಂತನೆ ಚೆನ್ನಾಗಿದೆ.

ವಂದೇ ಮಾತರಂಗಿಂತ ಬೇರೆ ರಾಷ್ಟ್ರಗೀತೆ ಬೇಕೇ? ನಮ್ಮ ಕನ್ನಡ ಭಾಷೆಯಲ್ಲದಿದ್ದರೂ, ಆಂಗ್ಲ ಭಾಷೆಯಲ್ಲವಷ್ಟೇ? ನಮ್ಮ ದೇಶದಲ್ಲೇ ಬೆಳೆದು ಬಂದ ಸೋದರ ಭಾಷೆ ತಾನೇ? ಅಥವಾ ಅದನ್ನೇ ಕನ್ನಡಿಸಿ ಹಾಡಬಹುದಷ್ಟೇ (ಭಾವ ಒಂದೇ ಆಗಿದ್ದರೆ, ಭಾಷೆ ಬೇರೆಯಾದರೇನು? )

ಆದರೆ ನಮ್ಮ ದೇಶದಲ್ಲೀಗ ಒಗ್ಗಟ್ಟು, ದೇಶಪ್ರೇಮಗಳು ಮಾಯವಾಗಿವೆ, ಮೊದಲು ಅವುಗಳ ಮರುಹುಟ್ಟು ಆಗಬೇಕು. ನಾವು , ನೀವು ಬೇರೆ ಬೇರೆ ಅಂತ ನಾವು ತಮಿಳರ ಮೇಲೆ, ತೆಲುಗರ ಮೇಲೆ, ಅಥವಾ ಇನ್ಯಾರ ಮೇಲೆ ಹರಿ ಹಾಯ್ದರೂ, ಅವರು ನಮ್ಮ ಜೊತೆ ಕಿತ್ತಾಡಿದರೂ ಹೊರಗಿನ ಶತ್ರುವಿಗೆ ನಾವೆಲ್ಲಾ ಒಂದೇ. ನಮ್ಮೆಲ್ಲರ ಮೇಲೂ ದಾಳಿ ಮಾಡುವುದೇ ಅವರ ಉದ್ದೇಶ. ಹೊರಗಿನ ವೈರಿಗಳನ್ನು ಎದುರಿಸಲು ಪಾಂಡವರು ಕೌರವರು ಸೇರಬೇಕು ಎಂದು ಧರ್ಮರಾಜ ಹೇಳಿದಂತೆ, ಕನ್ನಡಿಗರು, ಬಿಹಾರಿಗಳು, ತಮಿಳರು, ತೆಲುಗರು ಇನ್ನಿತರರೂ ಒಂದಾಗಿ ಹೊರ ಮಾರಿಗಳನ್ನು ಹೊಡೆದೋಡಿಸಿದ ಮೇಲೆ ಬೇಕಾದರೆ ರಾಜ್ಯಕ್ಕೊಂದು, ಜಿಲ್ಲೆಗೊಂದು ರಾಷ್ಟ್ರಗೀತೆಗಳನ್ನು ಬರೆದಿಡಬಹುದು, ರಾಜ್ಯಗಳನ್ನು ದೇಶಗಳನ್ನಾಗಿ ವಿಭಜಿಸಬಹುದು. ಸಣ್ಣ ದೇಶಗಳ ಕಲ್ಪನೆ ತಪ್ಪೇನಲ್ಲ. ಆಡಳಿತ ನಡೆಸಲು ಚಿಕ್ಕ ಚೊಕ್ಕ ರಾಜ್ಯಗಳೇ ಸರಿ. ಗಣಸಂಸ್ಥೆಗಳು ನಮ್ಮ ದೇಶದಲ್ಲೂ ಬಂದರೆ ಚೆನ್ನಾಗಿರತ್ತೆ.

ಶಾಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶಾಮಲ ಅವರೆ ನಿಮ್ಮ ಅನಿಸಿಕೆಯಲ್ಲಿ ಸತ್ಯವಿದೆ.

ಗಣರಾಜ್ಯ ಪ್ರಕಲ್ಪನೆಯನ್ನು ಮೊದಲು ಜಾರಿಗೆ ತಂದವರು ನಾವು. ನಮ್ಮಲ್ಲಿದ್ದ ಎಲ್ಲ ಗಣರಾಜ್ಯಗಳನ್ನು ನಾಶಪಡಿಸಿ ಮೌರ್ಯ ಸಾಮ್ರಾಜ್ಯವನ್ನು ಚಾಣಕ್ಯ ಹಾಗೂ ಚಂದ್ರಗುಪ್ತ ಮೌರ್ಯ ಕಟ್ಟಿದುದನ್ನು ನಾವು ಇತಿಹಾಸದಲ್ಲಿ ಓದಿದ್ದೇವೆ.

ಧನ್ಯವಾದಗಳು

-ನಾಸೋ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಆಗ ಬಂಕಿಮರು ನಗುತ್ತಾ ಇನ್ನು ೨೫ ವರ್ಷಗಳಲ್ಲಿ ಈ ಗೀತೆ ಎಲ್ಲ ಭಾರತೀಯರ ತುಟಿಗಳ ಮೇಲಿರುತ್ತದೆ ನೋಡು ಎಂದರು. ಇದು ನಡೆದದ್ದು ಸೆಪ್ಟೆಂಬರ್ ೭, ೧೯೭೬.<<

ಸೆಪ್ಟೆಂಬರ್ 7, 1976...?

ಜನ ಗಣ ಮನ ಮತ್ತು ವಂದೇ ಮಾತರಂ ಇವು ಅನುಕ್ರಮವಾಗಿ ರಾಷ್ಟ್ರಗೀತೆ (National Anthem) ಮತ್ತು ರಾಷ್ಟ್ರಗಾನ (National Song)ಎಂದು ಭಿನ್ನವಾಗಿ ಗುರುತಿಸಿಕೊಳ್ಳುತವೆ ಎಂದು ನಾನು ಇದುವರೆಗೆ, ನನ್ನ ಅಜ್ಞಾನದಿಂದಾಗಿ, ತಿಳಿದಿದ್ದೆ.
ವಿವರವಾದ ಮತ್ತು ಭಿನ್ನವಾದ ಮಾಹಿತಿಗಳಿಗಾಗಿ ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ವಂದೇ ಮಾತರಂ ಮತ್ತು ಜನ ಗಣ ಮನ ಕ್ರಮವಾಗಿ ರಾಷ್ಟ್ರಗಾನ (National Song) ಮತ್ತು ರಾಷ್ಟ್ರಗೀತೆ (National Anthem)ಎಂದು ಭಿನ್ನವಾಗಿ ಗುರುತಿಸಿಕೊಳ್ಳುತವೆ ...

http://india.gov.in/knowindia/national_symbols.php

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕ್ಷಮಿಸಿ. ಟೈಪಾರಾಕ್ಷಸನ ಹಾವಳಿ! ನೂರು ವರ್ಷ ಮುಂದಕ್ಕೆ ಕರೆದುಕೊಂಡು ಬಂದುಬಿಟ್ಟಿದ್ದಾನೆ!

-ನಾಸೋ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:-)
ಆಶ್ಚರ್ಯಕರ ಸಂಗತಿ ಅಂದರೆ ನಿಮ್ಮ ಈ ಲೇಖನ ಪ್ರಕಟವಾಗಿ ಸರಿ ಸುಮಾರು ಎರಡೂವರೆ ವರುಷಗಳ ನಂತರ ಅಂಬಿಕರವರು ಪ್ರತಿಕ್ರಿಯೆ ನೀಡಿ ಈ ವಿಷಯವನ್ನು ಪುನರುಜ್ಜೀವನಗೊಳಿಸಿದರು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಭರತಭೂಮಿ ಛಪ್ಪನೈವತ್ತಾರು ದೇಶಗಳ ನಾಡು<<

ಛಪ್ಪನ್ ಅಂದರೆ ಐವತ್ತಾರು. ಹಾಗಿರುವಾಗ, ಛಪ್ಪನೈವತ್ತಾರು ದೇಶಗಳೆಂದರೆ ಅಂದರೆ ನೂರ ಹನ್ನೆರಡು ದೇಶಗಳಾಗುತ್ತವೆಯೇ?

ಅಥವಾ ಅದು ಹೀಗಿರಬೇಕೆ?

"ಭರತಭೂಮಿ ಛಪ್ಪನ್ ಅಂದರೆ ಐವತ್ತಾರು ದೇಶಗಳ ನಾಡು"

ಒಂದು ಕುತೂಹಲ..ಅಷ್ಟೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಛಪ್ಪನೈವತ್ತಾರು ಎಂಬಲ್ಲಿ ದ್ವಿರುಕ್ತಿಯಿದೆ. ಛಪ್ಪನ್ ಎಂಬ ಹಿಂದೀ ಶಬ್ಧದ ಕನ್ನಡ ಅರ್ಥವನ್ನೂ ಸೇರಿಸಿ ರೂಪಿಸಿರುವ ಶಬ್ಧ. ಈ ಪ್ರಯೋಗ ಜನಪ್ರಿಯವಾದದ್ದು. ಇಲ್ಲಿ ಸ್ವಲ್ಪ ವ್ಯಂಗ್ಯಾರ್ಥದಲ್ಲಿ ಪ್ರಯೋಗಿಸಿದ್ದೇನೆ.
-ನಾಸೋ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಡಾಕ್ತ್ರೇ,
ಯಕ್ಷಗಾನ ಪ್ರಸಂಗಗಳಲ್ಲಿ ಇದನ್ನು ಕೇಳಿದ ನೆನಪಿದೆ.
ಅಲ್ಲೂ ಹಾಗೇ ಅನ್ನುತ್ತಾರೆ "ಛಪ್ಪನ್ನೈವತ್ತಾರು"
:-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸೋಮೇಶ್ವರ ಅವರೇ

ಒಳ್ಳೆಯ ಬರಹ , 'ವಂದೇ ಮಾತರಂ' ಇರಬೇಕಾದರೆ ನಮಗ್ಯಾಕೆ ಮತ್ತೊಂದು 'ರಾಷ್ಟ್ರ ಗೀತೆ' ಬೇಕು ಅನ್ನೋದು ನನ್ನ ಅನಿಸಿಕೆ.ಸ್ವಾತಂತ್ರ್ಯದ ಕಿಚ್ಚನ್ನು ಜನಮಾನಸದಲ್ಲಿ ಹೊತ್ತಿಸಿದ ಗೀತೆಯನ್ನು , ಧರ್ಮ, ಭಾಷೆಗಳ ನಡುವೆ ಸಿಕ್ಕಿಸಿರುವುದು ನಮ್ಮ ಕೆಟ್ಟ ವ್ಯವಸ್ಥೆ.
'ಪರಕೀಯರ ಆಂಗ್ಲ ಭಾಷೆ' ಮಾತಾಡಲು ನಮಗ್ಯಾವ ತೊಂದರೆಯೂ ಇಲ್ಲ, ಆದರೆ ನಮ್ಮ ದೇಶದ ಭಾಷೆ ಕಂಡರೆ ಸಿಟ್ಟು ಬರುತ್ತೆ... ಇದಕ್ಕೆಲ್ಲ ಅಂತ್ಯ ಹೇಗೋ ತಿಳಿದಿಲ್ಲ...

ರಾಕೇಶ್ ಶೆಟ್ಟಿ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರಾಷ್ಟ್ರಗೀತೆಗಳು ಎಷ್ಟಿದ್ದರೂ ಚಿಂತಿಲ್ಲ ನಮ್ಮ ದೇಶದಲ್ಲಿ
ಆದರೆ ರಾಜಕೀಯ ಪಕ್ಷಗಳೆರಡೇ ಇರಲಿ ಈ ನಾಡಿನಲ್ಲಿ

ಗೀತೆಗಳ ಸಮಸ್ಯೆ ಗಂಭೀರವಲ್ಲ ಸದ್ಯಕ್ಕೆ ದೇಶದಲ್ಲಿ
ಗಹನವಾದ ಚರ್ಚೆ ಬೇಕು ಈ ಪಕ್ಷಗಳ ವಿಚಾರದಲ್ಲಿ

:-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>> 'ಪರಕೀಯರ ಆಂಗ್ಲ ಭಾಷೆ' ಮಾತಾಡಲು ನಮಗ್ಯಾವ ತೊಂದರೆಯೂ ಇಲ್ಲ, ಆದರೆ ನಮ್ಮ ದೇಶದ ಭಾಷೆ ಕಂಡರೆ ಸಿಟ್ಟು ಬರುತ್ತೆ.. <<

ಒಬ್ಬ ಕನ್ನಡಿಗನಿಗೆ ಇಂಗ್ಲಿಷ್, ಹಿಂದಿ ( ಬೇರಾವುದೇ ರಾಜ್ಯದ ಭಾಷೆ) ಎರಡು ಪರಕೀಯವೇ, ಈ ನೆಲದಲ್ಲ. Kannada is equidistant from both English and Hindi.

ಆದ್ರೆ ಇಂಗ್ಲಿಷ್ ಅನ್ನು ಅಪ್ಪಿರೋದಕ್ಕೆ ಕಾರಣಗಳಿವೆ. English has bread attached to it, while hindi has stinking imposition attached to it. ಈ ದೇಶದ ಯಾವ ಭಾಷೆಗೂ ಜನರಿಗೆ ಅನ್ನ ಹುಟ್ಟಿಸುವ ಸಾಮರ್ಥ್ಯವಿಲ್ಲ ಅನ್ನುವುದು ಎಷ್ಟು ಕ್ರೂರ ವಿಡಂಬನೆ ನೋಡಿ. ಇಂಗ್ಲಿಷ್ ನಂತೆ ಕನ್ನಡವು ಕರ್ನಾಟಕದಲ್ಲಿ ಅನ್ನ ಹುಟ್ಟಿಸುವ, ಏಳಿಗೆ ನೀಡುವ ಭಾಷೆಯಾಗಬೇಕು, ಬೆಂಗಾಳಿಗಳಿಗೆ ಬಂಗಾಳದಲ್ಲಿ ಬೆಂಗಾಳಿಯಿಂದ ಅನ್ನ ಹುಟ್ಟಬೇಕು, ಹಾಗೇ, ತಮಿಳರಿಗೆ ತಮಿಳಿನಿಂದ, ತೆಲುಗರಿಗ ತೆಲುಗಿನಿಂದ,, ಇಂತಹದೊಂದು ವ್ಯವಸ್ಥೆ ಬಂದಾಗಲೇ ಇಂಗ್ಲಿಷ್ ಮೇಲಿನ ವ್ಯಾಮೋಹ ಕಮ್ಮಿ ಆಗಬಹುದು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.