ನಾ ಕಂಡ ನವಿಲು

4

ಇತ್ತಿಚೆಗೆ ಕೆಲಸದ ನಿಮಿತ್ತ ಮದುರೈಗೆ ಹೋಗಿದ್ದೆ. ಕೆಲಸ ಇದ್ದದ್ದು ಮದುರೈನಿಂದ ಮೂವತ್ತು ಕಿ.ಮೀ ದೂರದಲ್ಲಿ. ನಾನು ಮದುರೈನಲ್ಲಿ ತಂಗಿದ್ದು ಅಲ್ಲಿಂದ ದಿನಾಲು ಹೋಗಿ ಬರುತ್ತಿದ್ದೆ. ಮೊದಲನೇ ದಿನ ಮೂವತ್ತು ಕಿ.ಮೀ ಪ್ರಯಾಣದಲ್ಲಿ ಒಂದು ಪುಸ್ತಕ ಓದುತ್ತಾ ಕುಳಿತಿದ್ದೆ ಕಿಟಕಿಯ ಹೊರಗೆ ಅಷ್ಟೊಂದು ಕಣ್ಣಾಯಿಸಲಿಲ್ಲ. ಅಕಸ್ಮಾತಾಗಿ ಒಮ್ಮೆ ಕಣ್ಣಾಯಿಸಿದೆ  ನಾಲ್ಕೈದು ನವಿಲುಗಳ ಗುಂಪು ಕಾಳು ಹುಡುಕುತ್ತಾ ರಸ್ತೆಯ ಬದಿಯಲ್ಲಿ ಇದ್ದವು ಅದನ್ನು ಕಂಡು ನನಗೆ ಆಶ್ಚರ್ಯ ಒಂದು ಕಡೆ ಇನ್ನೊಂಡು ಕಡೆ ಖುಷಿಯೋ ಖುಷಿ ಏನಪ್ಪಾ ಇವು ರಸ್ತೆಯ ಬದಿಯಲ್ಲಿ ಒಳ್ಳೆ ಕೋಳಿಗಳ ಥರಾ ಕಾಗೆಗಳ ಥರಾ ಮೇಯ್ತಾ ಇದೆಯಲ್ಲ ಅಂತ. ಕ್ಯಾಮಾರ ಬ್ಯಾಗ್ನಲ್ಲಿ ಇತ್ತು ಹೊರ ತೆಗೆಯವಷ್ಟರಲ್ಲಿ ಬಸ್ ಮುಂದೆ ಹೋಗಿತ್ತು  :( 

 

ಅದೇ ಸಂತೋಷದಲ್ಲಿ ಸ್ಟುಡಿಯೋ ಹತ್ರ ಬಂದೆ ಎಲ್ಲರೂ ಸ್ವಾಗತ ಕೋರಿದರು ನಂತರ ಹಾಗೆ ಆಪೀಸಿನ ಸುತ್ತಲೂ ಒಮ್ಮೆ ಸುತ್ತಾಡಲು ಕ್ಯಾಮರ ಕತ್ತಿಗೆ ನೇತಾಡಿಸಿಕೊಂಡು ಹೊರಟೆ ಸುತ್ತಲೂ  ಗಿಡಮರಗಳಿಂದ ಹಚ್ಚ ಹಸರಾಗಿ ತುಂಬಿತ್ತು. ಹಾಗೆ ಎರಡು ಮೂರು ಪೋಟೋ ಕ್ಲಿಕ್ಕಿಸಿದೆ ಅಲ್ಲಿ ನನ್ನನ್ನೆ ಒಂದು ನವಿಲು ಗುರಾಯಿಸುತ್ತಾ ನಿಂತಿತ್ತು ಅದನ್ನು ನೋಡಿ ನನಗೆ ಇನ್ನಷ್ಟು ಖುಷಿಯಾಗಿ ಒಂದು ಪೋಟೋ ತೆಗೆಯುವಷ್ಟರಲ್ಲಿ ಓಡಿ ಹೋಗಿ ಪೊದೆ ಸೇರಿತು.

ಅಲ್ಲಿಂದ ಬಂದು ಸ್ಟುಡಿಯೋ ಸೇರಿ ಕಲಸದಲ್ಲಿ ತಲ್ಲೀನನಾದೆ. ಮದ್ಯಾಹ್ನ  ಊಟ ಮಾಡಿ ಪುನಃ ಕ್ಯಾಮರಾ ಎತ್ತಿಕೊಂಡು ಹೊರಗೆ ಹೊಗಿ ನವಿಲುಗಳನ್ನು ಹುಡುಕುತ್ತಿದ್ದೆ ಅಲ್ಲೊಂದು ನವಿಲು ಪುನಃ ದರ್ಶನ ನೀಡಿತು.

ನಾನು ತೆಗೆದ ಪೋಟೋಗಳನ್ನು ಲ್ಯಾಪ್ ಟ್ಯಾಪ್ ಗೆ ಹಾಕಿ ಅಲ್ಲಿನ ಸಿಬ್ಬಂದಿಯನ್ನು  ನವಿಲುಗಳ ಬಗ್ಗೆ ಕೇಳಿದೆ ಅವರು ಸಾರ್ ಇಲ್ಲೆಲ್ಲಾ ಸಾಕಷ್ಟು ನವಿಲುಗಳು ಇವೆ ಬೆಳಿಗ್ಗೆ ಆಪೀಸಿನ ಮುಂದೆ ಹತ್ತಾರು ನವಿಲುಗಳು ಬಂದು ಮೇಯ್ತಾ ಇರ್ತಾವೆ ಬೆಳಿಗ್ಗೆ ಬಂದ್ರೆ ಸಾಕಷ್ಟು ನವಿಲುಗಳನ್ನು ನೋಡಬಹುದು ಅಂದ್ರು ಆಯ್ತು ನಾಳೆ ಬೆಳಿಗ್ಗೆ ಬೇಗ ಬರುವೆ ಅಂತ ಹೇಳಿ ಸಂಜೆ ಮದುರೈಗೆ ತೆರಳಿದೆ.

 

ಮಾರನೇ ದಿನ ಬೇಗ ಎದ್ದು ತಯಾರಾದೆ ಆದ್ರೆ ನನ್ನ ಜೊತೆಗಿದ್ದ ನನ್ನ ಸಹದ್ಯೋಗಿ ಏಳಲೇ ಇಲ್ಲ ರಾತ್ರಿ ಎರಡರ ತನಕ ಪ್ರೆಸೆಂಟೇಷನ್ ಮೇಲೆ ಕೆಲ್ಸ ಮಾಡ್ತ ಇದ್ದೆ ಈಗ ನಿದ್ದೆ ಬರ್ತಾ ಇದೆ ಇನ್ನೂ ಸ್ವಲ್ಪ ಸಮಯ ನಿದ್ದೆ ಮಾಡಲು ಬಿಡು ಎಂದು ಹೇಳಿ ಮತ್ತೆ ನಿದ್ದೆ ಮಾಡಿದ ನಾನು ಬೇಸರದಿಂದ  ಟಿವಿ ನೋಡುತ್ತಾ ಕೂತೆ  :(

 

ನಂತರ ಅಲ್ಲಿಂದ ಬಸ್ ನಲ್ಲಿ ಹೋಗಬೇಕಾದ್ರೆ ಕಿಟಕಿಯ ಹೋರಗೆ ನೋಡುತ್ತಾ ಹೋದೆ ಒಂದು ನವಿಲೂ ಸಹ ಕಣ್ಣಿಗೆ ಬಿದ್ದಿಲ್ಲ. ಆಪೀಸು ತಲುಪುವ ಹೊತ್ತಿಗೆ 11 ಗಂಟೆಯಾಗಿತ್ತು ಇನ್ನೆಲ್ಲಿ ನವಿಲುಗಳು ಅಂತ ಹೇಳಿ ಕೆಲ್ಸಕ್ಕೆ ಕೂತೆ.

ಮದ್ಯಾಹ್ನ ಊಟದ ನಂತರ ಗ್ರಾಮವೊಂದರ ಬೇಟಿ ಇತ್ತು ನಾನು ಸಹ ಗ್ರಾಮಕ್ಕೆ ಹೊರಟೆ  ಸಿಕ್ಕಾಪಟ್ಟೆ ಬಿಸಿಲು ಆ ಬಿಸಿಲಲ್ಲೆ ತಲೆ ಮೇಲೆ ಕರವಸ್ತ್ರ ಹಾಕಿ  ಕೈಯಲ್ಲಿ ವಾಟರ್ ಬಾಟಲ್ ಹಿಡಿದು ನಡೆಯುತ್ತಾ ಗ್ರಾಮಕ್ಕೆ  ಮದ್ಯ ಭಾಗಕ್ಕೆ ಎಂಟ್ರಿ  ಆದ್ವಿ ಎಂಟ್ರಿ ಆದಂಗೆ  ನವಿಲಿನಂತ ಹುಡಗಿ ಕಣ್ಣಿಗೆ ಕಾಣಿಸಿದಳು ಬಿಸಿಲಿಗೆ ತಲೆ ಮೇಲೆ ಹಾಕಿದ್ದ ಕರವಸ್ತ್ರ ತೆಗೆದು ಮಡಚಿ ಜೇಬಿನಲ್ಲಿ ಇಟ್ಟು ಆ ನವಿಲನ್ನೇ (ಹುಡಗಿಯನ್ನು) ನೋಡುತ್ತಾ ಇದ್ದೆ. ನನ್ನ ಜೊತೆಗೆ ಬಂದಿದ್ದ ಅಲ್ಲಿನ ರೇಡಿಯೋ ಸ್ಟೇಷನ್ ನವರು ಮೀಟಿಂಗ್ ಗೆ ಎಲ್ಲರನ್ನೂ  ಒಂದು ಕಡೆ ಸೇರಿಸುತ್ತಿದ್ದರೆ ನಾನು ನವಿಲನ್ನು ನೋಡೋದ್ರಲ್ಲಿ ತಲ್ಲೀನನಾಗಿದ್ದೆ.

 

ಗುಂಪು ಸೇರಿಸಿ ನನ್ನ ಕರೆದರು ನಾನು ಅತ್ತ ಕಡೆ ಓಡಿ ಹೋದೆ ನನ್ನ ಮನಸ್ಸಿನಲ್ಲಿ ಈ ನವಿಲು ಸಹ ಮೀಟೀಂಗ್ ಗೆ ಬಂದ್ರೆ ಎಂಗೆ ಅಂತ ಆಲೋಚಿಸುತ್ತಾ ಇದ್ರೆ ಗುಂಪಿನಿಂದ ಒಬ್ರು ಆ ನವಿಲನ್ನ ಕರೆದರು ನನಗೂ ಮನಸ್ಸಿನಲ್ಲಿ ಸಂತೋಷ ಆಯ್ತು ಹತ್ರ ಬಂದು ನನ್ನ ಎದುರಿಗೆ ಕೂತಲು ಮನಸ್ಸಿನಲ್ಲಿ ಏನೋ ಒಂದು ಥರ ಖುಷಿ ಆಗ್ತಾ ಇತ್ತು. ಹಾಗೆ ನೋಡುತ್ತಾ ಕಾಲಿನ ಕಡೆ ನೋಡಿದ್ರೆ ಕಾಲಿಗೆ ಕಾಲುಂಗುರ ಹಾಕಿದ್ದಳು :(  ಮದುವೆ ಆಗಿ ಮೂರು ತಿಂಗಳಾಗಿದೆಯಂತ ನನ್ನ ತಂಡದಲ್ಲಿದ್ದ ಒಬ್ಬ ಹುಡುಗ ಹೇಳಿದ. ಅಲ್ಲಿಗೆ ನನ್ನ ಖುಷಿ ಕಮ್ಮಿ ಆಯ್ತು ಆದ್ರು ಈಗಲೂ ಆ ನವಿಲು ಜ್ಞಾಪಕ ಬರುತ್ತಾ ಇರತ್ತೆ.

 

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ನವಿಲ ಬೇಟೆ-ಭೇಟಿಗೆ ಹೊರಟ ನಿಮಗೆ ಯಶಸ್ಸು ಸಿಗಲಿ. ಮರೆಯಬೇಕಾದ ಚೋದ್ಯ: "ಹೆಣ್ಣುನವಿಲು ಚಂದವಿಲ್ಲ ಗರಿಯ ಸೊಗಸು ಅಂದವಿಲ್ಲ ಕುಣಿವಾ ನವಿಲು ಗಂಡು ಕೇಳೆಲೇ.. ' ಅಂಥ ಅಣ್ಣಾವರು ಹಾಡಿರೋದು ನಿಜ ಅಲ್ಲವಾ ? ಅಥವಾ ಆರ್ಟಿಕಲ್ ೩೭೭ ..:P ;)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>>>ನವಿಲ ಬೇಟೆ-ಭೇಟಿಗೆ ಹೊರಟ ನಿಮಗೆ ಯಶಸ್ಸು ಸಿಗಲಿ. <<<< ಅಂದಾಗೆ ನಾನು ನವಿಲ ಬೇಟೆಗೆ ಹೊಗಲಿಲ್ಲ ಅಕಸ್ಮಾತಾಗಿ ನನ್ನ ಕಣ್ಣಿಗೆ ಬಿತ್ತು ನವಿಲು ಅಷ್ಟೆ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ ಮಂಜುನಾಥರವರೇ..... ನಾಗರಾಜ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಛೆ!!!!!!!!!!!!! ನಾಗರಾಜ್ ಇಲ್ಲೂ ನಸೀಬ್ ಕ್ಯೆ ಕೊಡ್ತಲ್ಲಾ ನಿಂಗೆ. :( :( -- ಅರವಿಂದ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಏನ್ ಮಾಡೋದು ಅರವಿಂದ್ ಸಸೀಬ್ ಸರಿ ಇಲ್ಲ ಬಿಡು ;) ಆದ್ರೆ ನವಿಲಂತು ಸೂಪರ್.......... :) ನಾಗರಾಜ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

navilu namma kade saha erutte.Hecchagi malegaladalli.nivu gari bicchi dance madiddannu tegilikke try madabekittu.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈ ಸರಿ ಹೋದಾಗ ಕಂಡಿತ ಟ್ರೈ ಮಾಡ್ತೀನಿ ತಮ್ಮ ಪ್ರತಿಕ್ರಿಯೆ ಕನ್ನಡದಲ್ಲಿ ಇದ್ದಿದ್ರೆ ಚೆನ್ನಾಗಿರ್ತಾ ಇತ್ತು ವತ್ಸಲಾ ಶೇಷಾದ್ರಿಯವರೇ...... ನಾಗರಾಜ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ನಾಗರಾಜ್ ವತ್ಸಲಾರವರು ಹೇಳಿದಂತೆ ನೀವು ಗರಿ ಬಿಚ್ಚಿ ಡಾನ್ಸ್ ಮಾಡೋದನ್ನ ತೆಗಿಬೇಕಿತ್ತು :) :) -- ಅರವಿಂದ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬೆಂಗಳೂರ ಕಡೆನೆ ಎಲ್ಲಾದ್ರು ನೋಡ್ತೀನಿ ಅರವಿಂದ್ ಮತ್ತೆ ಮದುರೈ ಕಡೆ ಹೋಗಿ ನೋಡೋದಕ್ಕೆ ಆಗಲ್ಲ ;) ನಾಗರಾಜ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾಗರಾಜ್ ನವಿಲ ಭೇಟೆ ಜೋರಾಗೆ ಇದ್ದಂಗಿದೆ... ಬೆಂಗಳೂರಲ್ಲಿ ನವಿಲು ನೋಡಬೇಕೆಂದರೆ ಅಭಿಮಾನ್ ಸ್ಟುಡಿಯೋ ಬಳಿ ಹೋದರೆ ಬೆಳ್ಳಂಬೆಳಗೆ ಕಾಣಿಸುತ್ತವೆ...ಅದು ಮುತ್ತತ್ತಿ ಅರಣ್ಯದವಲಯಕ್ಕೆ ಬರುತ್ತದ್ದಾದ್ದರಿದ ಅಲ್ಲಿ ಕಾಣಬಹುದು... ಅದರಲ್ಲು ಈಗಿನ ಚಳಿಗಾಲದಲ್ಲಿ ಪ್ರತಿದಿನ ನೋಡಬಹುದು....
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:) ರೆಡ್ಡಿ ನವಿಲು ಬೇಟೆ ಆಕಸ್ಮಾತ್ ಆಗಿ ಆದದ್ದು, >>>ಬೆಂಗಳೂರಲ್ಲಿ ನವಿಲು ನೋಡಬೇಕೆಂದರೆ ಅಭಿಮಾನ್ ಸ್ಟುಡಿಯೋ ಬಳಿ ಹೋದರೆ ಬೆಳ್ಳಂಬೆಳಗೆ ಕಾಣಿಸುತ್ತವೆ...ಅದು ಮುತ್ತತ್ತಿ ಅರಣ್ಯದವಲಯಕ್ಕೆ ಬರುತ್ತದ್ದಾದ್ದರಿದ ಅಲ್ಲಿ ಕಾಣಬಹುದು... ಅದರಲ್ಲು ಈಗಿನ ಚಳಿಗಾಲದಲ್ಲಿ ಪ್ರತಿದಿನ ನೋಡಬಹುದು....<<< ಈ ಚಳಿಗಾಲದಲ್ಲಿ ಬೆಳ್ಳಂಬೆಳಗೆ ಹೋಗಿ ಕಾಣಲು ಸಾಧ್ಯನಾ ;) ನಾಗರಾಜ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆಗಾಗ ನವಿಲುಗಳನ್ನು ನೋಡುವ ಭಾಗ್ಯ ನಿಮ್ಮದಾಗಲಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದ ಇಂಚರಾರವರೇ. ನಿಮ್ಮಂತವರ ದಯೆ ನಮ್ಮ ಮೇಲೆ ಇದ್ದರೆ ಆಗಾಗ ನವಿಲುಗಳನ್ನು ಕಾಣಬಹುದು ;) ನಾಗರಾಜ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ನಿರೀಕ್ಷೆಯಂತೆ ಅಂದಿನ ಆ ಸಭೆಗೆ ಹಾಜರಾಗಿದ್ದ ಆ ನವಿಲಿನ ಭಾವಚಿತ್ರ ಎಲ್ಲಿದೆ ನಾಗರಾಜ್? ಕತೆ ನಮಗೆ, ಕತೆಯ ಜೊತೆಗೆ ರೆಕ್ಕೆ ಬಿಚ್ಚದ ನವಿಲಿನ ಚಿತ್ರ ನಮಗೆ; ಆದರೆ, ನಿಮ್ಮ ಮನದ ರೆಕ್ಕೆ ಬಿಚ್ಚಿಸಿದ ಆ ನವಿಲನ್ನು ನೋಡುವ ಭಾಗ್ಯ ಏಕಿಲ್ಲ ನಮಗೆ?!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೆಗ್ಡೆ ಸಾರ್ ನವಿಲಿನ ಭಾವಚಿತ್ರ ನಮ್ಮ ಕ್ಯಾಮರದಲ್ಲಿ ಸೆರೆ ಹಿಡಿಯಲಿಲ್ಲ ಬದಲಾಗಿ ನನ್ನ ಕಣ್ಣಲ್ಲಿ ಸೆರೆಹಿಡಿದೆ. ಅದ್ಯಾಕೋ ಕ್ಯಾಮರ ಇದ್ದರೂ ಸೆರೆಹಿಡಿಯಲು ಮನಸ್ಸು ಬರಲಿಲ್ಲ ಸಾರ್ :( ನಾಗರಾಜ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.